ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಳೂರು ವಾರ್ಡಿನಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಹಕ್ಕುಪತ್ರ ವಿತರಿಸಿದರು.
ಬಳಿಕ ಮಾತನಾಡಿದ ಶಾಸಕ ಕಾಮತ್, ಬಹಳ ವರ್ಷದಿಂದ ನಡೆಯುವ ಹಕ್ಕು ಪತ್ರದ ಹೋರಾಟಕ್ಕೆ ನ್ಯಾಯ ಒದಗಿಸಿದ ಸಂತೋಷವಿದೆ.
ಕಳೆದ 45 ವರ್ಷಗಳಿಂದ ಬೋಳೂರು ಸ್ಮಶಾನ ಪರಿಸರ ಹಾಗೂ ಉರ್ವ ಕೊರಗಜ್ಜ ಗುಡಿ ಪರಿಸರದಲ್ಲಿ ವಾಸಿಸುವ ಅನೇಕ ಕುಟುಂಬಗಳು,
ತಮ್ಮ ಹಕ್ಕುಪತ್ರಕ್ಕಾಗಿ ಅಲೆದಾಡಿ ಕೊನೆಗೆ ನಾನು ಶಾಸಕನಾಗಿ ಆಯ್ಕೆಯಾದ ಪ್ರಾರಂಭದಲ್ಲಿ ನನ್ನನ್ನು ಭೇಟಿ ಮಾಡಿ ಈ ವಿಚಾರದ ಕುರಿತು ಮಾತನಾಡಿದ್ದರು.
ಆ ಸಂದರ್ಭದಲ್ಲಿ ನ್ಯಾಯ ಒದಗಿಸುವ ಭರವಸೆ ನೀಡಿದ್ದೆ. ಅದರಂತೆ ಇದೀಗ ಕೊಟ್ಟ ಮಾತಿನಂತೆ ಜನರಿಗೆ ನೀಡಿದ್ದ ಭರವಸೆ ಈಡೇರಿಸಿದ ತೃಪ್ತಿ ಇದೆ ಎಂದಿದ್ದಾರೆ.
ಶಾಸಕನಾಗಿ ಆಯ್ಕೆಯಾದ ಮೊದಲಲ್ಲಿ ಬೋಳೂರಿನ ಜನರಿಗೆ ಈ ಕುರಿತು ವಾಗ್ದಾನ ನೀಡಿದ್ದೆ.
ಅಧಿಕಾರಿಗಳ ಜೊತೆ ಚರ್ಚಿಸಿ ತಾಂತ್ರಿಕ ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದೇವೆ.
ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡಕ್ಕೆ ಸೇರಿದ 52 ಕುಟುಂಬಗಳು ಉರ್ವ ಕೊಗರಜ್ಜ ಗುಡಿ ಹಾಗೂ ಬೋಳೂರು ಸ್ಮಶಾನ ಪರಿಸರದಲ್ಲಿ ವಾಸವಾಗಿವೆ.
ಆದರೆ ಈ ಜಾಗಕ್ಕೆ ಸರ್ವೆ ನಂಬರ್ ಇಲ್ಲದೆ ತಾಂತ್ರಿಕ ತೊಡಕು ಉಂಟಾಗಿತ್ತು. ಹಾಗಾಗಿ ಸರ್ವೇ ಇಲಾಖೆ, ಸರ್ವೆ ನಡೆಸಿ ಹೊಸ ಸರ್ವೆ ನಂಬರ್ ನೀಡಿ ಆಮೇಲೆ ಎಲ್ಲಾ ಕುಟುಂಬಗಳಿಗೂ ಹಕ್ಕು ಪತ್ರ ಮಂಜೂರು ಮಾಡಲಾಯಿತು ಎಂದು ತಿಳಿಸಿದ್ದಾರೆ.
ಸ್ಥಳೀಯ ಪಾಲಿಕೆ ಸದಸ್ಯರಾದ ಜಗದೀಶ್ ಶೆಟ್ಟಿ ಬೋಳೂರು ಮಾತನಾಡಿ, ಶಾಸಕ ವೇದವ್ಯಾಸ್ ಕಾಮತ್ ಅವರು ಹೊಸದಾಗಿ ಶಾಸಕರಾಗಿ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಈ ಸಮಸ್ಯೆಯನ್ನು ಅವರಲ್ಲಿ ತೋಡಿಕೊಂಡಿದ್ದೆವು.
ಬೋಳೂರಿನ ಜನತೆಗೆ ನ್ಯಾಯ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು. ನಮಗೆ ನೀಡಿದ ವಾಗ್ದಾನದಂತೆ ಬೋಳೂರಿನ ಜನತೆಯ ಬಹುಕಾಲದ ಬೇಡಿಕೆ ಈಡೇರಿಸಿದ್ದಾರೆ ಎಂದರು.
ಬೋಳೂರಿನ ಮಾಧವ ಅವರು ಮಾತನಾಡಿ, ಕಳೆದ 45 ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ಜನಪ್ರತಿನಿಧಿಗಳ ಬಳಿಗೆ,
ಅಧಿಕಾರಿಗಳ ಬಳಿ ಹಾಗೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಿದ್ದೆವು.
ಆದರೆ ಯಾವುದೂ ಕೂಡ ಫಲ ನೀಡಿರಲಿಲ್ಲ. ಕೊನೆಗೆ ಶಾಸಕ ವೇದವ್ಯಾಸ್ ಕಾಮತ್ ಅವರ ಬಳಿ ನಮ್ಮ ಸಂಕಷ್ಟ ಹೇಳಿಕೊಂಡಾಗ ಹಕ್ಕುಪತ್ರ ನೀಡುವ ಭರವಸೆ ನೀಡಿದ್ದರು.
ಕೊಟ್ಟ ಮಾತಿನಂತೆ ನಮ್ಮ ಶಾಸಕರು ನಡೆದುಕೊಂಡಿದ್ದಾರೆ. ಅವರಿಗೆ ಬೋಳೂರು ಜನತೆಯ ಪರವಾಗಿ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ.
ಸಭಾ ವೇದಿಕೆಯಲ್ಲಿ ತಹಶೀಲ್ದಾರ್ ಗುರುಪ್ರಸಾದ್, ಕಂದಾಯ ಅಧಿಕಾರಿ ಪ್ರಸನ್ನ, ವಿ.ಎ ಪೂರ್ಣಚಂದ್ರ,
ಸ್ಥಳೀಯ ಮುಖಂಡರಾದ ರಾಹುಲ್ ಶೆಟ್ಟಿ, ತುಕರಾಮ್ ಬಂಗೇರ, ಯೋಗೀಶ್ ಸಾಲ್ಯಾನ್ ಹಾಗೂ ರಾಜೇಶ್ ಉರ್ವ ಉಪಸ್ಥಿತರಿದ್ದರು.
ಮಂಗಳೂರು/ಟೆಹ್ರಾನ್ : ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳನ್ನು ಗುಂಡಿಕ್ಕಿ ಹ*ತ್ಯೆ ಮಾಡಿರುವ ಘಟನೆ ಟೆಹ್ರಾನ್‌ನಲ್ಲಿ ಇಂದು (ಶನಿವಾರ) ನಡೆದಿದೆ.
ಈ ಘಟನೆಯಲ್ಲಿ ಮತ್ತೋರ್ವ ನ್ಯಾಯಮೂರ್ತಿ ಗಾಯಗೊಂಡಿದ್ದಾರೆ ಎಂದು ನ್ಯಾಯಾಂಗದ ‘ಮಿಜಾನ್’ ಸುದ್ದಿ ವೆಬ್‌ಸೈಟ್ ವರದಿ ಮಾಡಿದೆ. ಆಯತುಲ್ಲಾ ಮೊಹಮ್ಮದ್ ಮೊಘಿಶೆ ಹಾಗೂ ಅಲಿ ರಝನಿ ಹ*ತ್ಯೆಗೀಡಾದ ನ್ಯಾಯಮೂರ್ತಿಗಳು.
ಸುಪ್ರೀಂ ಕೋರ್ಟ್‌ನ ಹೊರಗೆ ನ್ಯಾಯಮೂರ್ತಿಗಳ ಮೇಲೆ ಗುಂಡಿನ ದಾಳಿ ನಡೆಸಿದ ದಾಳಿಕೋರ ಬಳಿಕ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಘಟನೆಯಲ್ಲಿ ನ್ಯಾಯಮೂರ್ತಿಯೊಬ್ಬರ ಅಂಗರಕ್ಷಕ ಕೂಡ ಗಾಯಗೊಂಡಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಹ*ತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಮಂಗಳೂರು/ಕೊಲ್ಕತ್ತಾ : ಆರ್.ಜಿ.ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾ*ಚಾರ ಹಾಗೂ ಕೊ*ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಜಯ್ ರಾಯ್ ತಪ್ಪಿತಸ್ಥ ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಿಯಾಲ್ದಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅನಿರ್ಬನ್ ದಾಸ್ ಶನಿವಾರ(ಜ.18)ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಸೋಮವಾರ(ಜ.20) ಪ್ರಕಟಿಸಲಿದ್ದಾರೆ.
2024ರ ಆಗಸ್ಟ್ 9 ರಂದು ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ ನಡೆಸಿ, ಹ*ತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಇಡೀ ದೇಶದಾದ್ಯಂತ ಭಾರಿ ಆಕ್ರೋಶ ಕೇಳಿ ಬಂದಿತ್ತು. ದೇಶದ ಬಹುತೇಕ ಭಾಗಗಳಲ್ಲಿ ವೈದ್ಯರು ಮುಷ್ಕರ ನಡೆಸಿದ್ದರು. ಆಗಸ್ಟ್ 10 ರಂದು ಸಂಜಯ್ ರಾಯ್‌ನನ್ನು ಬಂಧಿಸಲಾಯಿತು.
ಕೊಲ್ಕತ್ತಾ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಆರೋಪಿಗೆ ಗ*ಲ್ಲು ಶಿಕ್ಷೆ ಆಗಬೇಕು ಎಂದು ಸಿಬಿಐ ವಾದಿಸಿದೆ. ಪ್ರಕರಣದ ವಿಚಾರಣೆ ನವೆಂಬರ್ 12 ರಂದು ಆರಂಭವಾಗಿತ್ತು. ಒಟ್ಟು 50 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿದೆ. ಆರೋಪಿಯ ವಿಚಾರಣೆ ಜ.9ರಂದು ಕೊನೆಗೊಂಡಿತ್ತು.
ಮಂಗಳೂರು/ಮುಂಬೈ : ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿರುವ ಭಾರತದ 15 ಸದಸ್ಯರ ಕ್ರಿಕೆಟ್ ತಂಡವನ್ನು ಬಿಸಿಸಿಐ ಶನಿವಾರ ಪ್ರಕಟಿಸಿದೆ.
ಚಾಂಪಿಯನ್ಸ್ ಟ್ರೋಫಿ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ, 15 ಸದಸ್ಯರ ಈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಉಪನಾಯಕರಾಗಿ ಶುಭ್‌ಮನ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ದದ ಕೊನೆಯ ಟೆಸ್ಟ್ ಪಂದ್ಯದ ವೇಳೆ ಫಿಟ್‌ನೆಸ್ ಸಮಸ್ಯಗೆ ಒಳಗಾಗಿದ್ದ ಜಸ್‌ಪ್ರೀತ್ ಬುಮ್ರಾ ಅವರನ್ನು ಚಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆ ಮಾಡಲಾಗಿದೆ.