Home ಕರ್ನಾಟಕ ವಾರ್ತೆ ಎಲ್ಲವನ್ನೂ ತೆರೆದು.. ಇದ್ಯಾವ ಸೀಮೆ ಲಾಕ್ ಡೌನ್: ಖಾದರ್ ಲೇವಡಿ

ಎಲ್ಲವನ್ನೂ ತೆರೆದು.. ಇದ್ಯಾವ ಸೀಮೆ ಲಾಕ್ ಡೌನ್: ಖಾದರ್ ಲೇವಡಿ

ಎಲ್ಲವನ್ನೂ ತೆರೆದು.. ಇದ್ಯಾವ ಸೀಮೆ ಲಾಕ್ ಡೌನ್: ಖಾದರ್ ಲೇವಡಿ

ಬೆಂಗಳೂರು: ರಾಜ್ಯದಾದ್ಯಂತ ಮೇ 24 ರಂದು ಮಾಡಿರುವ ಲಾಕ್ ಡೌನ್ ಅನ್ನು ಮಾಜಿ ಸಚಿವ ಹಾಗೂ ಶಾಸಕ ಯುಟಿ ಖಾದರ್ ತೀವ್ರವಾಗಿ ವಿರೋಧಿಸಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಅವರು ಅಸಮಾಧಾನ ಹೊರಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

”ನಿನ್ನೆ ಸಂಜೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ವಿಜಯ್ ಭಾಸ್ಕರ್ ಅವರ ಜೊತೆ ಲಾಕ್ ಡೌನ್ ವಿಚಾರವಾಗಿ ಮಾತನಾಡ್ತಾ ಇದ್ದೆ.

ಸಂಡೇ ಲಾಕ್ ಡೌನ್ ಪರಿಕಲ್ಪನೆಯೇ ನನಗೆ ಅರ್ಥವಾಗುತ್ತಿಲ್ಲ. ದಿನಸಿ ಅಂಗಡಿ ಓಪನ್, ಮಾರುಕಟ್ಟೆ ಓಪನ್‌, ಹಾಲು ತರಕಾರಿ ಓಪನ್, ಎಲ್ಲಾ ಓಪನ್ ಮಾಡಿ ಜನ‌ರನ್ನ ಮಾತ್ರ ಓಡಾಡಬೇಡಿ ಅಂದ್ರೆ ಹೇಗೆ.?? ಎಂದು ಯುಟಿ ಖಾದರ್ ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ.

 

”ಒಂದೆಡೆ ಕರ್ಫ್ಯೂ ಇದೆ ಹೊರ ಬರಬೇಡಿ ಅಂತಾ ಹೇಳ್ತಾ ಇರೋ ಪೋಲಿಸರು ಸೆಕ್ಷನ್ 144 ಕೂಡ ಜಾರಿಯಲ್ಲಿದೆ ಅಂತಾರೆ.

ಹೀಗಾಗಿ ಸಂಡೇ ಲಾಕ್ ಡೌನ್‌ನ ವೈಜ್ಙಾನಿಕತೆಯೇ ಅರ್ಥವಾಗ್ತಾ ಇಲ್ಲ.” ಎಂದು ಅಸಮಾಧಾನ ಹೊರ ಹಾಕಿದ್ದಾರೆ.

”ಸಿಂಪಲ್ ಆಗಿ ಹೇಳಬೇಕು ಅಂದ್ರೆ ಇದೊಂದು ಬೇಕಾಬಿಟ್ಟಿ ಲಾಕ್ ಡೌನ್. ಎನಿವೇ ಈ ಯುಟರ್ನ್ ಸರ್ಕಾರ ತಜ್ಞರ ಜೊತೆ ಕುಳಿತು ತೀರ್ಮಾನಿಸೋದು ಒಳಿತು.” ಎಂದು ಖಾದರ್ ಸರಣಿ ಟ್ವೀಟ್ ಮಾಡಿದ್ದಾರೆ.

ಲಾಕ್‌ ಡೌನ್‌ನಲ್ಲಿ ಬಹುತೇಕ ಸಡಿಲಿಕೆ ನೀಡಿದ್ದ ಸರ್ಕಾರ, ಬೆಳಗ್ಗೆ ಏಳರಿಂದ ಸಂಜೆ ಏಳರವರೆಗೆ ಜನರ ಓಡಾಟಕ್ಕೆ ಅವಕಾಶ ನೀಡಿದೆ.

ಆದರೆ, ಭಾನುವಾರ ಮಾತ್ರ ಸಂಪೂರ್ಣ ಲಾಕ್‌ ಡೌನ್ ಮಾಡಿದ್ದು, ದಿನಸಿ, ಹಾಲು, ಮಾರುಕಟ್ಟೆ ತೆರೆಯಲು ಸಮ್ಮತಿ ನೀಡಿದೆ.

ಆದ್ರೆ ಈ ನಿಮಯವನ್ನು ಉಳ್ಳಾಲ ಶಾಸಕ ಖಾದರ್‌ ಮಾತ್ರ ತೀವ್ರವಾಗಿ ವಿರೋಧ ಮಾಡಿದ್ದಾರೆ.

- Advertisment -

RECENT NEWS

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ..

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ.. ಗುವಾಹಟಿ: ದಕ್ಷಿಣ ಅಸ್ಸಾಂನ ಬರಾಕ್​ ಕಣಿವೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಮಹಿಳೆಯರು, ಮಕ್ಕಳು ಸೇರಿ 20ಕ್ಕೂ ಹೆಚ್ಚು ಜನ...

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ..

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ.. ಉಡುಪಿ: ಕೋವಿಡ್- 19 ಲಾಕ್ ಡೌನ್ ನಿಯಮ ಉಲ್ಲಂಘಿಸಿ, ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಮೇ 9ರಂದು...

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ ಬೆಳ್ತಂಗಡಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟುವಿನಲ್ಲಿ ನಿರ್ಮಿಸಲಾದ ಮನೆಯ ಕೀಲಿ ಕೈ ಹಸ್ತಾಂತರ...

ದಿಟ್ಟ ಕ್ರಮಗಳಿಂದ ಸರಕಾರವನ್ನು ತಟ್ಟಿ ಕೇಳಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ

ದಿಟ್ಟ ಕ್ರಮಗಳಿಂದ ಸರಕಾರವನ್ನು ತಟ್ಟಿ ಕೇಳಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ ಬೆಂಗಳೂರು: ಹಲವಾರು ದಿಟ್ಟ ಕ್ರಮಗಳಿಂದ ಸರಕಾರವನ್ನು ಹಲವು ಬಾರಿ ಎದುರು ಹಾಕಿಕೊಂಡಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು...