Home ಪ್ರಮುಖ ಸುದ್ದಿ ದೇಶದಲ್ಲಿನ ಆಡಳಿತ ಸಂಪೂರ್ಣ ವೈಫಲ್ಯ: ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟ ಶಾಸಕ ಯುಟಿ ಖಾದರ್….

ದೇಶದಲ್ಲಿನ ಆಡಳಿತ ಸಂಪೂರ್ಣ ವೈಫಲ್ಯ: ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟ ಶಾಸಕ ಯುಟಿ ಖಾದರ್….

ದೇಶದಲ್ಲಿನ ಆಡಳಿತ ಸಂಪೂರ್ಣ ವೈಫಲ್ಯ: ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟ ಶಾಸಕ ಯುಟಿ ಖಾದರ್….

ಮಂಗಳೂರು: ಸಾಮಾನ್ಯ ಜನರನ್ನು ಬಿಟ್ಟು ದೇಶ ಇದೆಯಾ..? ಚೀನಾ ಸಮಸ್ಯೆಗೆ ಸಂಬಂಧಿಸಿ ಭಾರತದ ಪ್ರಧಾನಿ ಮೋದಿ ಗೊಂದಲ ಸೃಷ್ಟಿಸುತ್ತಿದ್ದಾರೆ.

ಇದು ಸರಿಯೇ ಎಂದು ಮಂಗಳೂರು ಶಾಸಕ ಯು ಟಿ ಖಾದರ್ ಹೇಳಿದ್ದಾರೆ. ದೇಶದ ಪ್ರಧಾನಿ ಹೇಳಿಕೆ ಮಾಡುವ ಮುನ್ನ ಯೋಚನೆ ಮಾಡಬೇಕು.

ದೇಶದಲ್ಲಿನ ಆಡಳಿತ ಸಂಪೂರ್ಣ ವೈಫಲ್ಯಕ್ಕೀಡಾಗುತ್ತಿದೆ. ವೈರಿ ದೇಶಗಳ ವಿರುದ್ಧ ನಾವು ನಿರ್ಲಕ್ಷ್ಯ ಮನೋಭಾವನೆ ತಾಳುವುದು ಸರಿಯಲ್ಲ ಎಂದರು.

ನಾವು ನಿರ್ಲಿಪ್ತ ರಾಷ್ಟ್ರಗಳಾಗಿದ್ದು, ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಾಗಿದೆ ಎಂದರು.

ಇಂದು ಪೆಟ್ರೋಲ್ ಬೆಲೆಗಿಂತ ಡೀಸೆಲ್ ದುಬಾರಿಯಾಗುತ್ತಿದೆ. ಪೆಟ್ರೋಲ್ ಗಿಂತ ಹೆಚ್ಚು ದರ ಡೀಸೆಲ್ ಗೆ ಆಗಿದ್ದರೆ ಇದಕ್ಕೆ ಹೊಣೆ ಯಾರು..?

ಆರ್ಥಿಕತೆ ಯಾವ ಕಡೆಗೆ ಸಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾದಾಗ ಭಾರತದಲ್ಲಿ ಮಾತ್ರ ಏರಿಕೆ ಯಾಕೆ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ.

ಪೆಟ್ರೋಲಿಯಂ ಮಂತ್ರಿ ಒಮ್ಮೆ ಜನರ ಮುಂದೆ ಬಂದು ತೈಲ ಬೆಲೆ ಏರಿಕೆಯಲ್ಲಾಗುವ ವ್ಯತ್ಯಾಸದ ಬಗ್ಗೆ ಜನರಿಗೆ ವಿವರಣೆ ನೀಡಲಿ ಎಂದು ಆಗ್ರಹಿಸಿದರು.

RECENT NEWS

ದ.ಕ‌ ಜಿಲ್ಲೆಯಲ್ಲಿ ಅರ್ಧಶತಕ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆ: ಇಂದು ಕೂಡ ಸ್ಪೋಟ 131 ಪ್ರಕರಣ ಪತ್ತೆ..!

ದ.ಕ‌ ಜಿಲ್ಲೆಯಲ್ಲಿ ಅರ್ಧಶತಕ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆ: ಇಂದು ಕೂಡ ಸ್ಪೋಟ 131 ಪ್ರಕರಣ ಪತ್ತೆ..! ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ...

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..!

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..! ಬೆಂಗಳೂರು : ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ  ನಾಳೆ ಮಂಗಳವಾರ  ಪ್ರಕಟವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್...

ಉಡುಪಿ ಜಿಲ್ಲೆಗೆ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ – ರಘುಪತಿ ಭಟ್

ಉಡುಪಿ : ಉಡುಪಿ ಜಿಲ್ಲೆ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ ಅಂತ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಜನಜೀವನ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಮತ್ತೆ ಲಾಕ್ಡೌನ್ ಮಾಡಿದರೆ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬೀಳಲಿದೆ....

ಗುರುವಾರದಿಂದ ಒಂದು ವಾರ ದಕ್ಷಿಣಕನ್ನಡ ಜಿಲ್ಲೆ ಲಾಕ್ ಡೌನ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಕೊರೊನಾ ಸೋಂಕು ಆತಂಕಕ್ಕೆ ಕಾರಣವಾಗಿರುವ ಹಿನ್ನಲೆಯಲ್ಲಿ ಜುಲೈ 16 ರಿಂದ ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿಗೆ ತರಲಾಗುವುದು...
error: Content is protected !!