Wednesday, October 20, 2021

ಮಂಗಳೂರು ಜೈಲಿನಲ್ಲಿ ಹಿಂದೂ-ಮುಸ್ಲಿಂ ಕೈದಿಗಳನ್ನು ಒಟ್ಟಿಗೆ ಹಾಕಿ ಹೊಡೆದಾಡಿಕೊಂಡು ಸಾಯಲಿ: ಯು.ಟಿ ಖಾದರ್‌

ಬೆಂಗಳೂರು: ಮಂಗಳೂರು ಜೈಲಿನಲ್ಲಿ ಹಿಂದೂ-ಮುಸ್ಲಿಂ ಕೈದಿಗಳಿಗೆ ಬೇರೆ ಬೇರೆ ಸೆಲ್‌ ಇದೆ. ಅವರೆಲ್ಲರನ್ನು ಅಲ್ಲೇ ಒಟ್ಟಿಗೆ ಹಾಕಿ, ಅಲ್ಲಿ ಅವರು ಒಬ್ಬರ ಕುತ್ತಿಗೆ ಮತ್ತೊಬ್ಬರು ಹಿಡಿದು ಹೊಡೆದುಕೊಂಡು ಸಾಯಲಿ.

ಅವರು ಹೊರಗೆ ಬಂದು ಗಲಾಟೆ ಮಾಡುವುದು ಬೇಡ ಎಂದು ಉಳ್ಳಾಲ ಶಾಸಕ ಯು.ಟಿ ಖಾದರ್‌ ಸರಕಾರಕ್ಕೆ ಸಲಹೆ ನೀಡಿದ್ದಾರೆ.


ವಿಧಾನಸಭೆಯಲ್ಲಿ ಮಂಗಳೂರು ಜೈಲಿನ ಬಗ್ಗೆ ಪ್ರಸ್ತಾಪಿಸಿ, ಮಂಗಳೂರು ಜೈಲಿನಲ್ಲಿ ಕೈದಿಗಳ ಮೊಬೈಲ್‌ ನೆಟ್‌ವರ್ಕ್‌ ಸಿಗಬಾರದೆಂದು ಮೊಬೈಲ್‌ ಜಾಮರ್‌ ಅಳವಡಿಸಲಾಗಿದೆ.

ಆದರೆ ಜೈಲಿನ ಹೊರಗೆ ಸುತ್ತಮುತ್ತ ಮೊಬೈಲ್‌ ಜಾಮ್‌ ಆಗುತ್ತಿದೆ.

ಆದರೆ ಕೈದಿಗಳು ಜೈಲಿನಿಂದಲೇ ಸರಾಗವಾಗಿ ಹೊರಗಿನವರೊಂದಿಗೆ ದೂರವಾಣಿ ಸಂಭಾಷಣೆ ನಡೆಸುತ್ತಿದ್ದಾರೆ.

ಸಣ್ಣ ಪುಟ್ಟ ಗಲಾಟೆ ಮಾಡಿ ಓರ್ವ ಜೈಲಿನೊಳಗೆ ಹೋಗಿ ಅಲ್ಲಿ ದೊಡ್ಡ ರೌಡಿಗಳೊಂದಿಗೆ ಸಂಬಂಧ ಬೆಳೆಸಿರುತ್ತಾನೆ.

ಆತ ಬೇಲ್‌ ಮೇಲೆ ಹೊರಗೆ ಬಂದಾಗ ಆತನ ನೆಟ್‌ವರ್ಕ್‌ ಬೇರೆಯದ್ದೇ ಆಗಿರುತ್ತದೆ ಇದನ್ನು ನಿವಾರಿಸಲು ಜೈಲಿನಲ್ಲಿ ಕಠಿಣ ಕ್ರಮ ಅಗತ್ಯ.
ಮಂಗಳೂರು ಜೈಲಿನಲ್ಲಿ ಹಿಂದೂ-ಮುಸ್ಲಿಂ ಕೈದಿಗಳಿಗೆ ಬೇರೆ ಬೇರೆ ಸೆಲ್ ಗಳಿವೆ. ಒಂದು ಸೆಲ್ ನಲ್ಲಿ ಹಿಂದೂ ಕೈದಿಗಳಿದ್ದರೆ, ಮತ್ತೊಂದು ಸೆಲ್ ನಲ್ಲಿ ಮುಸ್ಲಿಂ ಕೈದಿಗಳಿದಾರೆ.

ಅವರು ಹೊರಗೆ ಬಂದು ಸಮಾಜಕ್ಕೆ ಇನ್ನಷ್ಟು ಅನಾಹುತ ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲರನ್ನೂ ಮಿಕ್ಸ್ ಮಾಡಿ ಹಾಕಿ, ಒಬ್ಬರ ಕುತ್ತಿಗೆ ಮತ್ತೊಬ್ಬರು ಹಿಡಿದು ಸಾಯಲಿ ಎಂದು ಸಲಹೆ ನೀಡಿದ್ದಾರೆ. ಜೊತೆಗೆ ಕ್ರಿಮಿನಲ್ ಭೇಟಿ ಮಾಡುವ ವಿಸಿಟರ್ ಗಳ ಮೇಲೆಯೂ ನಿಗಾ ವಹಿಸಲು ಕ್ರಮ ಜರುಗಿಸಿ ಎಂದರು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...