Connect with us

    BANTWAL

    ಶಾಸಕ ಪೂಂಜಾ ಕೊಲೆ ಯತ್ನ ಪ್ರಕರಣ-ಬಂಟ್ವಾಳದಲ್ಲಿ CID ತನಿಖೆ ಆರಂಭ

    Published

    on

    ಬಂಟ್ವಾಳ: ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಕೊಲೆ ಯತ್ನ ಪ್ರಕರಣದ ಬಗ್ಗೆ ಸಿ.ಐ.ಡಿ. ತನಿಖೆ ಆರಂಭಗೊಂಡಿದೆ.

    ರಾಜ್ಯದ ಸಿ.ಐ.ಡಿ.ಇನ್ಸ್‌ಪೆಕ್ಟರ್ ಶಿವರಾಜ್ ನೇತೃತ್ವದ ಓರ್ವ ಎಸ್.ಐ ಹಾಗೂ ಇಬ್ಬರು ಸಿಬ್ಬಂದಿಯನ್ನು ಒಳಗೊಂಡ ತಂಡ ನಿನ್ನೆ ಬಂಟ್ವಾಳಕ್ಕೆ ಬಂದಿಳಿದು ತನಿಖೆಯನ್ನು ಆರಂಭಿಸಿದೆ.


    ಅಕ್ಟೋಬರ್‌ 13 ರಂದು ರಾತ್ರಿ ಶಾಸಕ ಹರೀಶ್ ಪೂಂಜಾ ಅವರು ಬೆಂಗಳೂರಿನಿಂದ ಮಂಗಳೂರಿಗೆ ಬಂದು ಅಲ್ಲಿಂದ ಬೆಳ್ತಂಗಡಿಗೆ ತೆರಳುವ ಸಂದರ್ಭದಲ್ಲಿ ಓರ್ವ ವ್ಯಕ್ತಿ ಕಾರನ್ನು ಬೆನ್ನಟ್ಟಿ ತಲವಾರು ಝಳಪಿಸಿ ಕೊಲೆ ಮಾಡಲು ಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು.

    ಪ್ರಕರಣಕ್ಕೆ ಸಂಬಂಧಿಸಿ ರಿಯಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಸರಕಾರ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿ.ಐ.ಡಿ.ಪೋಲೀಸರಿಗೆ ಒಪ್ಪಿಸಿತ್ತು.

    ‌ ಅ.18 ರಂದು ಈ ಪ್ರಕರಣದ ಸಂಪೂರ್ಣ ಫೈಲ್ ಗಳನ್ನು ಬಂಟ್ವಾಳ ಗ್ರಾಮಾಂತರ ಎಸ್.ಐ. ಹರೀಶ್ ‌ಅವರು ಬೆಂಗಳೂರು ‌ಕಚೇರಿಗೆ ಮುಟ್ಟಿಸಿದ್ದರು.

    ಇದೀಗ ಸಿ.ಐ.ಡಿ.ಪೋಲೀಸರು ತನಿಖೆ ಆರಂಭಿಸಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿ ಆರೋಪಿಯನ್ನು ಸಿ.ಐ.ಡಿ.ನ್ಯಾಯಾಲಯಕ್ಕೆ ‌ಹಾಜರಾಗುವಂತೆ ನೋಟೀಸ್ ‌ಜಾರಿ ಮಾಡುವ ಸಾಧ್ಯತೆಗಳಿವೆ.

     

    BANTWAL

    ಬಂಟ್ವಾಳ: ಹಂಚಿಕಟ್ಟೆಯಲ್ಲಿ ಸಾಗಾಟದ ಲಾರಿಯಲ್ಲಿದ್ದ ಸಿಎನ್‌ಜಿ ಸೋರಿಕೆ

    Published

    on

    ಬಂಟ್ವಾಳ: ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯ ವಗ್ಗ ಸಮೀಪದ ಹಂಚಿಕಟ್ಟೆಯಲ್ಲಿ ಗೇಲ್ ಕಂಪನಿಯ ಸಿಎನ್‌ಜಿ ಗ್ಯಾಸ್ ಸಾಗಾಟದ ಲಾರಿಯಲ್ಲಿದ್ದ ಸಿಎನ್‌ಜಿ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾದ ಘಟನೆ ನಡೆದಿದೆ.

    ಸಿಎನ್‌ಜಿ ಸೋರಿಕೆ ಗಮನಕ್ಕೆ ಬಂದ ತಕ್ಷಣ ಲಾರಿ ಚಾಲಕ ಹೆದ್ದಾರಿ ಬದಿಗೆ ನಿಲ್ಲಿಸಿದ್ದು, ಬಳಿಕ ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕೆ ತೆರಳಿದ್ದಾರೆ.

    ಅದಾಗಲೇ ಸೋರಿಕೆಯನ್ನು ಚಾಲಕ ಹಾಗೂ ಸ್ಥಳೀಯರು ಸೇರಿ ತಡೆದಿದ್ದಾರೆ.

    Continue Reading

    BANTWAL

    ಬಂಟ್ವಾಳ: ವಿದ್ಯುತ್ ಶಾ*ಕ್‌ ಹೊಡೆದು ಶಾಮಿಯಾನದ ಕೆಲಸಗಾರ ಬ*ಲಿ

    Published

    on

    ಬಂಟ್ವಾಳ: ಪುಂಜಾಲಕಟ್ಟೆಯಲ್ಲಿ ನಿನ್ನೆಯ ದಿನ ಶಾಮಿಯಾನದ ಲಾರಿ ಪಲ್ಟಿಯಾಗಿ ಓರ್ವ ಮೃ*ತಪಟ್ಟ ಘಟನೆಯ ಬೆನ್ನಲ್ಲೇ ಶಾಮಿಯಾನದ ಕೆಲಸಗಾರನೋರ್ವ ವಿದ್ಯುತ್ ಶಾ*ಕ್‌ ಗೆ ಬ*ಲಿಯಾದ ದುರಂ*ತ ಘಟನೆ ನಡೆದಿದೆ.

    ಲಾರಿಯಿಂದ ಶಾಮಿಯಾನದ ಸಾಮಾಗ್ರಿಗಳನ್ನು ಇಳಿಸುವ ವೇಳೆ ವಿದ್ಯುತ್ ವಯರ್ ತಾಗಿ ನಾಲ್ವರು ಕೆಲಸಗಾರರಿಗೆ ಗಾಯವಾಗಿದ್ದು, ಅದರಲ್ಲಿ ಓರ್ವ ಗಂಭೀರವಾಗಿ ಗಾ*ಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಇದ್ದರು. ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃ*ತಪಟ್ಟ ಘಟನೆ ಕಡೇಶಿವಾಲಯ ಸಮೀಪ ಕಾಡಬೆಟ್ಟು ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.

    ಈತ ಕಲ್ಲಡ್ಕ ಸಾಲಿಯಾನ್ ಶಾಮಿಯಾನದ ಕೆಲಸಗಾರರು ಎಂದು ಸ್ಥಳೀಯರು ತಿಳಿಸಿದ್ದು, ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ನಾಲ್ವರು ಕೆಲಸಗಾರರು ಉತ್ತರಪ್ರದೇಶ ಮೂಲದವರು ಎಂದು ಹೇಳಲಾಗುತ್ತಿದೆ.

    ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    BANTWAL

    ವಿಟ್ಲದಲ್ಲಿ ಕುಸಿದು ಬಿದ್ದ ಕೋಳಿ ಶೆಡ್; 1500ಕ್ಕೂ ಅಧಿಕ ಕೋಳಿ ಸಾ*ವು

    Published

    on

    ವಿಟ್ಲ: ಕೋಳಿ ಸಾಕಾಣೆ ಮಾಡುವ ಶೆಡ್ ನೆಲಕ್ಕುರುಳಿ ಸುಮಾರು ಒಂದೂವರೆ ಸಾವಿರ ಕೋಳಿಗಳು ಮೃ*ತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ ನಡೆದಿದೆ.

    ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ನಿವಾಸಿ ರಾಘವರವರ ಮಾಲಕತ್ವದ ಶೆಡ್ ಇದಾಗಿದ್ದು, ಸುಮಾರು 2200 ಕೋಳಿಗಳನ್ನು ಅವರು ಸಾಕಾಣೆ ಮಾಡುತ್ತಿದ್ದರು.

    ಶೆಡ್ಡಿನ ಮೇಲ್ಚಾವಣಿ ಒಮ್ಮೆಲೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸುಮಾರು 1500 ಕೋಳಿಗಳು ಅದರಡಿಗೆ ಬಿದ್ದು ಸತ್ತುಹೋಗಿವೆ. ಘಟನೆಯಿಂದಾಗಿ ಶೆಡ್ ಸಂಪೂರ್ಣ ನಾ*ಶವಾಗಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

    Continue Reading

    LATEST NEWS

    Trending