Home ಪ್ರಮುಖ ಸುದ್ದಿ ಕೊರೊನಾ ವೈರಸ್ ತಡೆಗಟ್ಟಲು ಸ್ಪೆಷಲ್ ಪಡೆಯೊಂದಿಗೆ ಶಾಸಕ ಹರೀಶ್ ಪೂಂಜಾ ಸಜ್ಜು

ಕೊರೊನಾ ವೈರಸ್ ತಡೆಗಟ್ಟಲು ಸ್ಪೆಷಲ್ ಪಡೆಯೊಂದಿಗೆ ಶಾಸಕ ಹರೀಶ್ ಪೂಂಜಾ ಸಜ್ಜು

ಕೊರೊನಾ ವೈರಸ್ ತಡೆಗಟ್ಟಲು ಸ್ಪೆಷಲ್ ಪಡೆಯೊಂದಿಗೆ ಶಾಸಕ ಹರೀಶ್ ಪೂಂಜಾ ಸಜ್ಜು

ಬೆಳ್ತಂಗಡಿ: ವಿಶ್ವದಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬಿದೆ. ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಲೇ ಇದೆ.

ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿರುವ ಕೊರೊನಾ ವೈರಸ್ ಅನ್ನು ಹೇಗಾದರೂ ತಡೆಗಟ್ಟಬೇಕೆಂಬ ಹಿನ್ನಲೆಯಲ್ಲಿ ಎಪ್ರಿಲ್ 14ರ ವರೆಗೆ ಮನೆಯಿಂದ ಯಾರೂ ಹೊರ ಬರಬೇಡಿ ಅಂತ ಮನವಿ ಮಾಡಿರುವ ಪ್ರಧಾನಿ ಮೋದಿ ಎಲ್ಲರನ್ನೂ ಲಾಕ್ ಡೌನ್ ಮಾಡಿದ್ದಾರೆ.

ರಾಜ್ಯದಾದ್ಯಂತ ಕೊರೊನಾ ವೈರಸ್ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ.

ಇದೀಗ ಬೆಳ್ತಂಗಡಿ ತಾಲೂಕಿನಲ್ಲೂ ಕೊರೊನಾ ವೈರಸ್ ತಟೆಗಟ್ಟುವ ನಿಟ್ಟಿನಲ್ಲಿ ವಿಶೇಷ ಕ್ರಮ ಕೈಗೊಳ್ಳಲಾಗಿದ್ದು, ತಾಲೂಕಿನ ಮಿನಿ ವಿಧಾನಸೌಧದಲ್ಲಿ ‘ವಾರ್ ರೂಮ್’ ಎಂಬ ವಿಶೇಷ ಸಹಾಯವಾಣಿ ಕೊಠಡಿಯನ್ನು ತೆರೆಯಲಾಗಿದೆ.

ಇದಕ್ಕಾಗಿ ಶಾಸಕ ಹರೀಶ್ ಪೂಂಜಾ ಅವರು ಒಂದು ವಿಶೇಷ ಪಡೆಯನ್ನೇ ರಚಿಸಿದ್ದಾರೆ.

ಇದರಲ್ಲಿ ಶಾಸಕರ ಕಛೇರಿಯ ಸಿಬ್ಬಂದಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಕಂದಾಯ ಇಲಾಖೆ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿರುತ್ತಾರೆ.

ವಾರ್ ರೂಮ್:

ಈಗಾಗಲೇ ರಾಜ್ಯದಲ್ಲಿ ವಾರ್ ರೂಮ್ ಕಾರ್ಯನಿರ್ವಹಿಸುತ್ತಿದೆ. ಇದೀಗ ಬೆಳ್ತಂಗಡಿ ತಾಲೂಕಿನಲ್ಲಿ ವಾರ್ ರೂಮ್ ತೆರೆದಿರುವುದು ವಿಶೇಷವಾಗಿದೆ.

ತಾಲೂಕಿನ ತಹಶೀಲ್ದಾರ್ ಹಾಗೂ ವಿವಿಧ ಅಧಿಕಾರಿಗಳೊಂದಿಗೆ ಇಂದು (ಮಾರ್ಚ್ 25) ಬೆಳ್ತಂಗಡಿ ‘ಐಬಿ’ಯಲ್ಲಿ ಚರ್ಚೆ ನಡೆಸಿದ ಶಾಸಕ ಪೂಂಜಾ ಈ ಮಹತ್ವದ ಯೋಜನೆ ಹಾಕಿಕೊಂಡಿದ್ದಾರೆ.

ತಾಲೂಕು ಸಾರ್ವಜನಿಕ ಆಸ್ಪತ್ರೆ ಕೊರೊನಾಗೆ ಮೀಸಲು:

ಇನ್ನು ಮತ್ತೊಂದು ವಿಶೇಷವೇಂದರೆ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೊನಾ ರೋಗಿಗಳು ಹಾಗೂ ಶಂಕಿತರಿಗಾಗಿ ಮೀಸಲಿಡಲಾಗಿದೆ.

ಇದು ಯಂಗ್ ಅಂಡ್ ಎನರ್ಜಿಟಿಕ್ ಶಾಸಕರ ದಿಟ್ಟ ನಿರ್ಧಾರಕ್ಕೆ ಮತ್ತೊಂದು ಉದಾಹರಣೆಯಾಗಿದೆ.

ಈಗಾಗಲೇ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ ಇನ್ನಿತರೇ ಕಾಯಿಲೆಯ ರೋಗಿಗಳನ್ನು ತಾಲೂಕಿನ ಆರು ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿ ಅವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು.

ತಾಲೂಕಿನಲ್ಲಿ ಶಂಕಿತರು ಅಥವಾ ಹೊರ ಜಿಲ್ಲೆ, ಹೊರದೇಶದಿಂದ ಬಂದವರು ನಿಮಗೆ ಕಂಡುಬಂದಲ್ಲಿ ಅಥವಾ ಮಾಹಿತಿ ಸಿಕ್ಕಿದಲ್ಲಿ ಕೊರೊನಾ ವಾರ್ ರೂಮ್ ಸಹಾಯವಾಣಿ ಸಂಖ್ಯೆ: 08256-232047 ಹಾಗೂ 9901212207 ಗೆ ಕರೆ ಮಾಡಿ ಮಾಹಿತಿ ಹಂಚಿಕೊಳ್ಳಬೇಕಾಗಿ ಶಾಸಕರು ಕಳಕಳಿಯ ಮನವಿ ಮಾಡಿದ್ದಾರೆ.

ತೀವ್ರ ನಿಗಾದಲ್ಲಿ 205 ಮಂದಿ:

ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಕೊರೊನಾ ಭೀತಿ ಎದುರಾದ ಹಿನ್ನಲೆ ವಿದೇಶದಿಂದ ಊರಿಗೆ ಬಂದಿಳಿದಿರುವ ಒಟ್ಟು 205 ಮಂದಿಯ ಮೇಲೆ ತೀವ್ರ ನಿಗಾ ಇರಿಸಲಾಗಿದೆ.

ಈಗಾಗಲೇ ಎಲ್ಲರನ್ನೂ ತಪಾಸಣೆಗೊಳಪಡಿಸಲಾಗಿದ್ದು, ಇದರಲ್ಲಿ ಮೂರು ಮಂದಿ ಮಾತ್ರ ವಿಶೇಷ ನಿಗಾದಲ್ಲಿದ್ದಾರೆ.

ಈ 205 ಜನರ ಮನೆ ಗೋಡೆ ಮೇಲೆ ಭಿತ್ತಿಪತ್ರ ಅಂಟಿಸಲಾಗಿದೆ. ಇವರು ಮನೆಯಿಂದ ಹೊರಬರದಂತೆ ಅವರಿಗೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ.

ಇವರ ಮನೆಗೆ ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರು ಭೇಟಿ ನೀಡುತ್ತಿದ್ದಾರೆ. ಒಂದು ವೇಳೆ ಆದೇಶ ಉಲ್ಲಂಘಿಸಿದಲ್ಲಿ ಅವರ ವಿರುದ್ಧ 188 ಸೆಕ್ಷನ್ ಅಡಿ ಕೇಸು ದಾಖಲಿಸಿಕೊಳ್ಳಲಾಗುವುದು ಎಂದು ಶಾಸಕರು ಖಡಕ್ಕಾಗಿ ತಿಳಿಸಿದ್ದಾರೆ.

ಇಲ್ಲಿಯವರೆಗೆ ತಾಲೂಕಿನಲ್ಲಿ ಯಾವುದೇ ಕೊರೊನಾ ಸೋಂಕಿತರು ಪತ್ತೆಯಾಗಿಲ್ಲ.

ಅಂಗಡಿಗಳ ಎದುರು ಮಾರ್ಕಿಂಗ್:

ತಾಲೂಕಿನ ದಿನಸಿ ಅಂಗಡಿ, ಮೆಡಿಕಲ್, ಹಾಗೂ ತುರ್ತು ಸಾಮಾಗ್ರಿಗಳ ಮಳಿಗೆಗಳ ಮುಂದೆ ನಾಲ್ಕು ಅಡಿ ಅಂತರದಲ್ಲಿ ಜನ ಸರತಿ ಸಾಲಿನಲ್ಲಿ ನಿಲ್ಲುವಂತೆ ರೌಂಡಪ್ ಮಾರ್ಕ್ ಮಾಡುವ ವ್ಯವಸ್ಥೆ ಮಾಡಲಾಗಿದೆ.

ಜನರು ಕೂಡ ಇದನ್ನು ಪಾಲಿಸಲು ಆದೇಶಿಸಲಾಗಿದೆ.

- Advertisment -

RECENT NEWS

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ ಮಂಗಳೂರು: ಸದ್ಯ ಕೊರೊನಾ ವೈರಸ್ ಹಿನ್ನಲೆ ಕೇರಳ ಹಾಗೂ ಕರ್ನಾಟಕ ಗಡಿ ಸಮಸ್ಯೆ ತಾರಕಕ್ಕೇರಿದ್ದು, ಇದೀಗ ಈ ಸಮಸ್ಯೆ ಪರಿಹರಿಸಲು ಮಾಜಿ ಪ್ರಧಾನಿ...

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ ಮಂಗಳೂರು: ಎಮ್ ರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರ ಉದಾರ ದಾನವಾಗಿ...

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..!

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..! ಮಂಗಳೂರು : ಇಂದು ಐದು ವರ್ಷದ ಬಾಲಕನೊಬ್ಬ ಸಿಎಂ ಪರಿಹಾರ ನಿಧಿಗೆ ತನ್ನ ಪಾಕೆಟ್ ಮನಿಯನ್ನೇ ದೇಣಿಗೆ ನೀಡಿ...

ದೆಹಲಿ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್

ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್ ಬೀದರ್: ಬೀದರ್‌ನಲ್ಲಿ 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ 11 ಮಂದಿಯೂ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಾಗಿದ್ದಾರೆ. ಬೀದರ್‌ನಿಂದ ದೆಹಲಿಗೆ ತೆರಳಿದ್ದ...