Connect with us

LATEST NEWS

ಯುವಕನ ಕಷ್ಟಕ್ಕೆ ತುರ್ತಾಗಿ ಸ್ಪಂದಿಸಿದ ಶಾಸಕ ಡಾ. ವೈ ಭರತ್ ಶೆಟ್ಟಿ..!

Published

on

ಯುವಕನ ಕಷ್ಟಕ್ಕೆ ತುರ್ತಾಗಿ ಸ್ಪಂದಿಸಿದ ಶಾಸಕ ಡಾ. ವೈ ಭರತ್ ಶೆಟ್ಟಿ..!

ಮಂಗಳೂರು :ಆಸ್ಪತ್ರೆಯ ಹಾಸಿಗೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ ಯುವಕ ನೋರ್ವನಿಗೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರು ತುರ್ತಾಗಿ ಸ್ಪಂದಿಸುವ ಮೂಲಕಕ ಮಾನವಿಯತೆ ಮೆರೆದಿದ್ದಾರೆ.

ಕಳೆದ ಫೆಬ್ರವರಿ ತಿಂಗಳಲ್ಲಿ ರಾಜೇಶ್ ಹಾಗೂ ವಂದನ ರವರ ಪುತ್ರರಾದ ಭರತ್ ರಾಜ್ ಕರ್ಕೇರ ರಸ್ತೆ ಆಘಾತದಿಂದ AJ ಆಸ್ಪತ್ರೆಗೆ ದಾಖಲಾಗಿದ್ದು. ಅವರ ಪರಿಸ್ಥಿತಿ ತೀರ ಗಂಭೀರವಾಗಿತ್ತು.
ಅವರು‌ ವೃತಿಯಲ್ಲಿ‌ ಅರೆಕಾಲಿಕ ಮೀನುಗಾರರಾಗಿದ್ದು, ಆರ್ಥಿಕವಾಗಿ ಬಡವರಾಗಿದ್ದಾ ಅವರ ಪೋಷಕರು ಅವರ ಚಿಕಿತ್ಸೆಗೆ ಅರ್ಥಿಕ ಸಹಾಯಕ್ಕಾಗಿ ಬೈಕಂಪಾಡಿಯ ಸ್ಥಳೀಯ ಬಿಜೆಪಿಯ ಪ್ರಮುಖರಲ್ಲಿ ಕೇಳಿದಾಗ ಅವರು ನಮ್ಮ ಮಂಗಳೂರು ಉತ್ತರ ಮಂಡಲದ ಶಾಸಕರಾದ ಡಾ ಭರತ್ ಶೆಟ್ಟಿಯರ ಗಮನಕ್ಕೆ‌ ತಂದರು.
ವಿಷಯ ತಿಳಿದ ಶಾಸಕರು ತಕ್ಷಣ ಆಸ್ಪತ್ರೆಗೆ ಬಂದು ಹುಡುಗನ ಆರೋಗ್ಯ ವಿಚಾರಿಸಿ, ಪರಿಸ್ಥಿತಿ ತೀರ ಗಂಭೀರವಾಗಿದ್ದು ಆಪರೇಷನ್ ಅಗತ್ಯವೆಂದು ವೈದ್ಯರು ತಿಳಿಸಿದರು.
ಅದಕ್ಕಾಗಿ ಶಾಸಕರು ತಕ್ಷಣ ದ ಕ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ ತಿಳಿಸಿ ತುರ್ತಾ ಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2.5 ಲಕ್ಷ ರೂ ಯನ್ನು ನೀಡಿದರು.
ಭರತ್ ರಾಜ್ ರವರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಂದರ್ಭ ದಲ್ಲಿ ಆತನ ಆಸ್ಪತ್ರೆಯ ಬಿಲ್ಲು ಸುಮಾರು 7 ಲಕ್ಷ ರೂ ಆಗಿತ್ತು . ಆ ಮೊತ್ತವನ್ನು ಹೊಂದಿಸಲು ಕಷ್ಟವಾಗಿತ್ತು, ಸುಮಾರು 6 ತಿಂಗಳು ಡಿಸ್ಚಾರ್ಜ್ ಮಾಡದೇ ಅಸ್ಪತ್ರೆಯಲಿ ಭರತ್ ರಾಜ್ ಇದ್ದರು,‌ ಅವರ ಕುಟುಂಬಕ್ಕೆ ಅಷ್ಟು ದೊಡ್ಡ ಮೊತ್ತ ಹೊಂದಿಸಲು ಕಷ್ಟದಾಯಕವಾಗಿತ್ತು.
ಆ ಸಂದರ್ಭದಲ್ಲಿ ಆ ವಿಷಯವನ್ನು ಸ್ಥಳೀಯ ಮೋಗವಿರ ಸಮಾಜದ ಬಿಜೆಪಿ ನಾಯಕರು ಶಾಸಕರ ಗಮನಕ್ಕೆ ತಂದಾಗ‌ ತಕ್ಷಣವೇ ಶಾಸಕರು ಆಸ್ಪತ್ರೆಯಲ್ಲಿ ಸ್ವತಃ ತಾನೇ ಆ ಬಿಲ್ಲಿನ ಮೊತ್ತಕ್ಕೆ ಜಾಮೀನು ನಿಂತು ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಆ ಕುಟುಂಬಕ್ಕೆ‌ ಆಸರೆಯಾದರು.
ಜನಮೆಚ್ಚುವ ಕೆಲಸ ಮಾಡಿದ ಮಂಗಳೂರು ಉತ್ತರದ ಶಾಸಕರಾದ ಡಾ.ಭರತ್ ಶೆಟ್ಟಿಯವರಿಗೆ ಧನ್ಯವಾದಗಳು

Click to comment

Leave a Reply

Your email address will not be published. Required fields are marked *

DAKSHINA KANNADA

ಹಿಂಜಾವೇ ಮುಖಂಡ ಅಕ್ಷಯ್ ರಜಪೂತ್‌ಗೆ ಗಡಿಪಾರು..!

Published

on

ಪುತ್ತೂರು:  ಹಿಂದೂ ಜಾಗರಣ ವೇದಿಕೆಯ ಮುಖಂಡ ಅಕ್ಷಯ್ ರಜಪೂತ್‌ ರವರನ್ನು (ನಿನ್ನೆ) ಎ.25ರಂದು ರಾತ್ರಿ ಗಡಿಪಾರು ಮಾಡಲಾಗಿದೆ. ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಸಮಿತಿಯ ಸದಸ್ಯ ಅಕ್ಷಯ್ ರಜಪೂತ್‌ ರವರನ್ನು ತಡರಾತ್ರಿ ವೇಳೆ ಅವರ ಮನೆಯಲ್ಲಿ ಬಂಧಿಸಿ ಇದೀಗ ಅವರನ್ನು ಹಾವೇರಿ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

akshaya rajaputh

ಮುಂದೆ ಓದಿ..; ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ಖಾದರ್‌ ಭಾಷಾನನ್ನು ಭೀಕರವಾಗಿ ಹ*ತ್ಯೆಗೈದ ಆಂಜನೇಯ ಗುಡಿಯ ಪೂಜಾರಿ..!

ಅಕ್ಷಯ್‌ ಗಡಿಪಾರನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದ್ದು ಕಾಂಗ್ರೆಸ್ಸಿನ ಹಿಂದೂ ವಿರೋಧೀ ನೀತಿ ಎಂದು ಹೇಳಿದ್ದಾರೆ.

Continue Reading

LATEST NEWS

ಪ್ರಿಯಕರನ ಮೇಲೆ ಆ್ಯ*ಸಿಡ್ ಎರಚಿದ ಯುವತಿ!

Published

on

ಮಂಗಳೂರು/ ಉತ್ತರ ಪ್ರದೇಶ : ಪ್ರೀತಿಸಿ ಮೋಸ ಮಾಡಿದರೆ ಯುವಕರು ಪ್ರೇಯಸಿಯನ್ನು ಹ*ತ್ಯೆ ಮಾಡುವುದನ್ನು, ಆ್ಯಸಿ*ಡ್ ಎರಚುವ ಸುದ್ದಿಗಳನ್ನು ಕೇಳುತ್ತೇವೆ. ಆದರೆ, ಉತ್ತರ ಪ್ರದೇಶದಲ್ಲಿ ವಿಭಿನ್ನವಾದ ಘಟನೆ ನಡೆದಿದೆ. ಇಲ್ಲಿ ಪ್ರೇಯಸಿಯೊಬ್ಬಳು ತನ್ನ ಪ್ರಿಯಕರನ ಮೇಲೆ ಆ್ಯ*ಸಿಡ್ ದಾಳಿ ನಡೆಸಿದ್ದಾರೆ. ಮಂಗಳವಾರ(ಏ.23) ಬಲಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.


ಕೃತ್ಯ ಎಸಗಿದ್ದು ಯಾಕೆ?

ಯುವತಿ ಈ ರೀತಿ ದುಷ್ಕೃತ್ಯ ಮೆರೆಯಲು ಕಾರಣ ‘ಪ್ರೀತಿ’. ಆಕೆಯ ಪ್ರಿಯತಮ ಪ್ರೀತಿಸಿ ಮೋಸ ಮಾಡಿ ಮತ್ತೊಬ್ಬಳನ್ನು ಮದುವೆಯಾಗಲು ಮುಂದಾಗಿದ್ದ ಎನ್ನಲಾಗಿದೆ. ಹೀಗಾಗಿ ಯುವತಿ ಆತನ ಮುಖದ ಮೇಲೆ ಆ್ಯ*ಸಿಡ್ ಎರಚಿದ್ದಾಳೆ. ಮದುವೆಯ ಮೆರವಣಿಗೆಯ ವೇಳೆ ಯುವತಿ ವೇಷ ಮರೆಸಿಕೊಂಡು ಬಂದು ವರನ ಮುಖಕ್ಕೆ ಆ್ಯಸಿಡ್ ಎರಚಿದ್ದಾಳೆ ಎನ್ನಲಾಗಿದೆ.

ಆ್ಯ*ಸಿಡ್ ಬಿದ್ದ ಪರಿಣಾಮ ಗಾಯಗೊಂಡ ಯುವಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನಿಗೆ ಆ್ಯ*ಸಿಡ್ ಎರಚಿದ ಯುವತಿಯನ್ನು ಹಿಡಿದ ಮಹಿಳೆಯರು ಸರಿಯಾಗಿ ಥಳಿಸಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನ ತಾಯಿಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 326 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬಲಿಯಾದ ಪೊಲೀಸ್ ಅಧಿಕಾರಿ ಮುನ್ನಾ ಲಾಲ್ ಯಾದವ್ ತಿಳಿಸಿದ್ದಾರೆ.

ಇದನ್ನೂ ಓದಿ : ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ಖಾದರ್‌ ಭಾಷಾನನ್ನು ಭೀಕರವಾಗಿ ಹ*ತ್ಯೆಗೈದ ಆಂಜನೇಯ ಗುಡಿಯ ಪೂಜಾರಿ..!
ಯುವಕ – ಯುವತಿ ಪರಸ್ಪರ ಪ್ರೀತಿಸಿದ್ದರು. ದೈಹಿಕ ಸಂಪರ್ಕ ಹೊಂದಿದ್ದರು. ಆದರೆ, ಇವರ ಸಂಬಂಧವನ್ನು ಎರಡೂ ಕುಟುಂಬ ವಿರೋಧಿಸಿತ್ತು ಎನ್ನಲಾಗಿದೆ. ಏಪ್ರಿಲ್ 22 ರಂದು ಯುವಕನ ಮನೆಯವರು ಬೇರೆ ಯುವತಿಯೊಂದಿಗೆ ಮದುವೆ ಮಾಡಲು ಸಿದ್ಧತೆ ಮಾಡಿದ್ದರು. ಇದರಿಂದ ಕೋಪಗೊಂಡ ಯುವತಿ ಮದುವೆ ಮೆರವಣಿಗೆಯಲ್ಲಿ ಈ ಕೃತ್ಯ ಎಸಗಿದ್ದಾಳೆ ಎಂದು ವರದಿಯಾಗಿದೆ.

 

Continue Reading

LATEST NEWS

ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ಖಾದರ್‌ ಭಾಷಾನನ್ನು ಭೀಕರವಾಗಿ ಹ*ತ್ಯೆಗೈದ ಆಂಜನೇಯ ಗುಡಿಯ ಪೂಜಾರಿ..!

Published

on

ರಾಯಚೂರು : ಪತ್ನಿಗೆ ಮೆಸೇಜ್ ಮಾಡಿದ ಕಾರಣಕ್ಕೆ ಹನುಮ ಜಯಂತಿಯಂದು ಉಗ್ರ ರೂಪ ತಾಳಿದ ಆಂಜನೇಯ ಗುಡಿ ಪೂಜಾರಿ ಆ ಯುವಕನನ್ನು ಬರ್ಬರವಾಗಿ ಕೊ*ಲೆಗೈದಿರುವ ಘಟನೆ ರಾಯಚೂರಿನ ತುಗ್ಗಲದಿನ್ನಿ ಗ್ರಾಮದಲ್ಲಿ ನಡೆದಿದೆ.


ಖಾದರ್ ಭಾಷಾ (28) ಕೊ*ಲೆಯಾದ ವ್ಯಕ್ತಿ. ಮಾರುತಿ ಹ*ತ್ಯೆಗೈದ ಪೂಜಾರಿ. ಇಬ್ಬರೂ ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ನಿವಾಸಿಗಳು. ಆದರೆ, ಖಾದರ್ ಭಾಷಾ ಮಾರುತಿ ಪತ್ನಿ‌ ಮೇಲೆ ಕಣ್ಣು ಹಾಕಿದ್ದಾನೆ. ಹೀಗಾಗಿ ಮಾರುತಿ, ಖಾದರ್‌ ಭಾಷಾನ ಕಣ್ಣು ಕಿತ್ತು ಹಾಕಿ, ಮುಖದ ಗುರುತು ಸಿಗದಂತೆ ಕೊಚ್ಚಿ ಭೀ*ಭತ್ಸವಾಗಿ ಹ*ತ್ಯೆ ಮಾಡಿದ್ದಾನೆ.

ಕೊ*ಲೆಗೈದ ಮಾರುತಿ ಖುದ್ದಾಗಿ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಕೊ*ಲೆಯಲ್ಲಿ ಇತರರೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಳಗಾನೂರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ : ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬ್ಯಾಗ್ ಪರಿಶೀಲಿಸಿದ ಕಸ್ಟಮ್ಸ್ ಅಧಿಕಾರಿಗಳಿಗೆ ಶಾಕ್; ಅದರಲ್ಲಿತ್ತು 10 ಅನಕೊಂಡಾ!

Continue Reading

LATEST NEWS

Trending