Connect with us

LATEST NEWS

ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ, 14 ರಾಜಕೀಯ ಪಕ್ಷಗಳು ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು..!

Published

on

14 ರಾಜಕೀಯ ಪಕ್ಷಗಳು ಒಟ್ಟಾಗಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಲು ಸುಪ್ರೀಂಕೋರ್ಟ್‌ ಶುಕ್ರವಾರ ಸಮ್ಮತಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಏಪ್ರಿಲ್ 5 ರಂದು ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಒಪ್ಪಿದೆ.
ನವದೆಹಲಿ: ವಿರೋಧ ಪಕ್ಷದ ನಾಯಕರನ್ನು ಬಂಧಿಸಲು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ)ವನ್ನು ಕೇಂದ್ರ ಸರಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು 14 ರಾಜಕೀಯ ಪಕ್ಷಗಳು ಒಟ್ಟಾಗಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಲು ಸುಪ್ರೀಂಕೋರ್ಟ್‌ ಶುಕ್ರವಾರ ಸಮ್ಮತಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಏಪ್ರಿಲ್ 5 ರಂದು ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಒಪ್ಪಿದೆ.

ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐ ಅನ್ನು ಕೇಂದ್ರ ಸರಕಾರವು ತನಗೆ ಬೇಕಾದ್ದಂತೆ ಬಳಸುತ್ತಿದೆ ಎಂದು 14 ರಾಜಕೀಯ ಪಕ್ಷಗಳು ಸಲ್ಲಿಸಿರುವ ಮನವಿಯನ್ನು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಪ್ರಸ್ತಾಪಿಸಿದ್ದಾರೆ.

ಹಿರಿಯ ವಕೀಲ ಸಿಂಘ್ವಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ರೀತಿ ದಾಳಿ ನಡೆಸಿದಾಗ ಬಂಧನ ಪೂರ್ವ ಮತ್ತು ಬಂಧನದ ನಂತರ ಮತ್ತು ಅವುಗಳ ಜಾರಿಗಾಗಿ ಮಾರ್ಗಸೂಚಿಗಳನ್ನು ಸುಪ್ರೀಂಕೋರ್ಟ್‌ ನೀಡಬೇಕು ಎಂದಿದ್ದಾರೆ.

“ಇಂದು ಇಡಿ ಮತ್ತು ಸಿಬಿಐ ಅನ್ನು ವಿರೋಧ ಪಕ್ಷಗಳ ನಾಯಕರ ವಿರುದ್ಧ ಬಳಸಲಾಗುತ್ತಿದೆ ಮತ್ತು ಶೇಕಡಾ 95 ರಷ್ಟು ಪ್ರಕರಣಗಳು ವಿರೋಧ ಪಕ್ಷದ ನಾಯಕರದ್ದಾಗಿವೆ.

ನಾವು ಬಂಧನ ಪೂರ್ವ ಮಾರ್ಗಸೂಚಿಗಳನ್ನು ಮತ್ತು ಬಂಧನದ ನಂತರದ ಮಾರ್ಗಸೂಚಿಗಳನ್ನು ಕೇಳುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಈ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುತ್ತಿವೆ ಎಂದು ಸಿಂಘ್ವಿ ಹೇಳಿದರು. ಅಸ್ತಿತ್ವದಲ್ಲಿರುವ ತನಿಖೆಗಳ ಮೇಲೆ ಪರಿಣಾಮ ಬೀರಲು ಅವರು ಬಯಸುವುದಿಲ್ಲ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ರಾಷ್ಟ್ರೀಯ ಜನತಾ ದಳ, ಭಾರತ್ ರಾಷ್ಟ್ರ ಸಮಿತಿ, ಅಖಿಲ ಭಾರತ ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ), ಶಿವಸೇನಾ ಉದ್ಧವ್ ಶಿಬಿರ, ಜಾರ್ಖಂಡ್ ಮುಕ್ತಿ ಸೇರಿದಂತೆ ವಿವಿಧ ಪಕ್ಷಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿವೆ. ಮೋರ್ಚಾ (ಜೆಎಂಎಂ), ಜನತಾ ದಳ (ಯುನೈಟೆಡ್), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಮಾಜವಾದಿ ಪಕ್ಷ (ಎಸ್‌ಪಿ) ಸೇರಿದಂತೆ ಒಟ್ಟು ಹದಿನಾಲ್ಕು ಪಕ್ಷಗಳು ಈ ಅರ್ಜಿಗೆ ಸಹಿ ಹಾಕಿವೆ.

 

DAKSHINA KANNADA

ಪ್ರತಿಭಾವಂತೆ ವಿದ್ಯಾರ್ಥಿನಿಯನ್ನು ಬಲಿ ಪಡೆದ ಮೆದುಳು ಜ್ವರ

Published

on

ಮೂಡಬಿದಿರೆ: ಮೆದುಳು ಜ್ವರಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಮೂಡಬಿದರೆಯಲ್ಲಿ ನಡೆದಿದೆ. ಶಿರ್ತಾಡಿ ಮೌಂಟ್ ಕಾರ್ಮೆಲ್ ಹೈಸ್ಕೂಲ್‌ನ 10ನೇ ತರಗತಿಯ ಸ್ವಸ್ತಿ ಶೆಟ್ಟಿ (15) ಮೃತ ವಿದ್ಯಾರ್ಥಿನಿ. ಸ್ವಸ್ತಿ ಶೆಟ್ಟಿ ಮೆದುಳು ಜ್ವರ ಉಲ್ಬಣಗೊಂಡ ಪರಿಣಾಮ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

Swasthi

ಉತ್ತಮ ತ್ರೋಬಾಲ್ ಆಟಗಾರ್ತಿಯಾಗಿದ್ದ ಈಕೆ ಉತ್ತಮ ನೃತ್ಯಪಟುವೂ ಆಗಿದ್ದಳು.ತಂದೆ ಸತೀಶ್‌ ಶೆಟ್ಟಿ ಗೋವಾದಲ್ಲಿ ಉದ್ಯೋಗದಲ್ಲಿದ್ದು ತಾಯಿ ಸರಿತಾ ಶೆಟ್ಟಿ ಶಿರ್ತಾಡಿ ನವಮೈತ್ರಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಉದ್ಯೋಗಿ. ಮೂಲತಃ ವಾಲ್ಪಾಡಿಯವರಾದ ಇವರು ಪ್ರಸ್ತುತ ಮೂಡಬಿದಿರೆಯಲ್ಲಿ ನೆಲೆಸಿದ್ದಾರೆ.

READ MORE..; ಪ್ರಚಾರದ ಭರದಲ್ಲಿ ತೇಜಸ್ವಿ ಸೂರ್ಯ ಕಿರಿಕ್‌..! ಸಂಸದರಿಗೆ ಡೌನ್ ಡೌನ್ ಎಂದ ಸಭಿಕರು

Continue Reading

LATEST NEWS

ಅರ್ಚಕರಿಂದಲೇ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ..!! ವಿಡಿಯೋ ವೈರಲ್

Published

on

ಹರಿದ್ವಾರ: ದೇವಸ್ಥಾನದಲ್ಲಿ ವಾಹನ ಪಾರ್ಕಿಂಗ್ ವಿಚಾರದಲ್ಲಿ ಅರ್ಚಕರು ಹಾಗೂ ದೇವಸ್ಥಾನದ ಭಕ್ತರ ನಡುವೆ ಗಲಾಟೆ ನಡೆದ ಘಟನೆ ಉತ್ತಾರಖಂಡದ ಹರಿದವಾರದಲ್ಲಿರುವ ಸಿದ್ಧಪೀಠ ಶ್ರೀ ದಕ್ಷಿಣ ಕಾಳೀ ಮಂದಿರದಲ್ಲಿ ನಡೆದಿದೆ.

halle

ಹರಿದ್ವಾರದಲ್ಲಿನ ಮಂದಿರದಲ್ಲಿ ಈ ಘಟನೆ ನಡೆದಿದ್ದು ಗಲಾಟೆ ಹಿಂಸಾತ್ಮಕವಾಗಿ ನಡೆದಿದ್ದು ಅದರ ವಿಡಿಯೋ ವೈರಲ್ ಆಗಿದೆ.  ಅರ್ಚಕರು ಮತ್ತು  ದೇವಸ್ಥಾನದ ಸಿಬ್ಬಂದಿಗಳು ಭಕ್ತರನ್ನು ದೊಣ್ಣೆಯಿಂದ ಥಳಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಉತ್ತರ ಪ್ರದೇಶದ ಸಹರಾನ್ ಪುರದಿಂದ ಬಂದಿದ್ದ ಭಕ್ತರು ಪಾರ್ಕಿಂಗ್ ಶುಲ್ಕದ ವಿಚಾರದಲ್ಲಿ ತಗಾದೆ ತೆಗೆದಿದ್ದರು. ಈ ವಿಚಾರದಲ್ಲಿ ಅರ್ಚಕರು ಹಾಗೂ ಭಕ್ತರ ನಡುವೆ ಗಲಾಟೆ ಆರಂಭವಾಗಿತ್ತು . ಬಳಿಕ ಅದು ಹಿಂಸಾತ್ಮಕ ರೂಪ ತಾಳಿದ್ದು, ದೊಣ್ಣೆಯಿಂದ ಭಕ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಗಲಾಟೆಯಲ್ಲಿ ಹಲವರು ಭಕ್ತರು ಗಾಯಗೊಂಡಿದ್ದು ಆಸ್ಪತ್ರೆ ಸೇರಿದ್ದಾರೆ. ಸ್ಥಳಕ್ಕೆ ಆಗಮಿಸಿದ ಘಾಟ್ ಚೌಕಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

READ MORE..; ಪ್ರಚಾರದ ಭರದಲ್ಲಿ ತೇಜಸ್ವಿ ಸೂರ್ಯ ಕಿರಿಕ್‌..! ಸಂಸದರಿಗೆ ಡೌನ್ ಡೌನ್ ಎಂದ ಸಭಿಕರು

Continue Reading

DAKSHINA KANNADA

ಬಿಜೆಪಿಗೆ ಸವಾಲಾದ ಬಿರುವೆರ್..! ವರ್ಕೌಟ್‌ ಆಗಿಲ್ಲ ನಮೋ ಪ್ಲ್ಯಾನ್‌…!

Published

on

ಮಂಗಳೂರು : 33 ವರ್ಷದ ಬಳಿಕ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪ್ರಚಾರದ ವೈಖರಿ ಹಾಗೂ ಪಡೆದುಕೊಳ್ಳುತ್ತಿರುವ ಜನಪ್ರೀಯತೆ ಒಂದು ಕಾರಣವಾದ್ರೆ. ಬಿಜೆಪಿಯಲ್ಲಿದ್ದ ಬಿಲ್ಲವ ಸಮೂದಾಯದ ಬಹುದೊಡ್ಡ ಮತದಾರರು ಪದ್ಮರಾಜ್ ಕಡೆ ವಾಲಿರುವುದು ಮತ್ತೊಂದು ಕಾರಣ . ಈ ಎರಡು ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನೇ ಕರೆಯಿಸಿ ಅವರ ಮೂಲಕ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಮಾಡಿಸಲಾಗಿದೆ.

ಎಚ್ಚರಿಕೆ ನೀಡಿದ್ದ ನಾರಾಯಣಗುರು ವಿಚಾರ ವೇದಿಕೆ..!

ಬಿಲ್ಲವರನ್ನು ಓಲೈಸಿಕೊಳ್ಳಲು ಬಿಜೆಪಿಗೆ ಇದ್ದ ಒಂದೇ ಮಾರ್ಗ ಅಂದ್ರೆ ಅದು ನಾರಾಯಣಗುರು.  ಆ ಒಂದು ಕಾರಣ ಇಟ್ಟುಕೊಂಡು ಕಾರಣಾಂತರದಿಂದ ಸಮಾವೇಶ ರದ್ಧು ಮಾಡಿ ರೋಡ್‌ ಶೋ ನಡೆಸಲಾಗಿತ್ತು ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡಿ ಬಳಿಕ ರೋಡ್‌ ಶೋ ಮಾಡುವ ಬಗ್ಗೆ ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಆದ್ರೆ ಈ ವಿಚಾರ ತಿಳಿಯುತ್ತಿದ್ದಂತೆ ನಾರಾಯಣಗುರು ವಿಚಾರ ವೇದಿಕೆ ಮೂಲಕ ಸತ್ಯಜಿತ್‌ ಸುರತ್ಕಲ್‌ ಬಿಜೆಪಿ ನಾಯಕರಿಗೆ ಹಲವು ಸವಾಲು ಎಸೆದಿದ್ದರು.  ಗಣರಾಜ್ಯೋತ್ಸವದಲ್ಲಿ ನಾರಾಯಣಗುರುಗಳ ಟ್ಯಾಬ್ಲೋ ನಿರಾಕರಣೆ, ರಾಜ್ಯದಲ್ಲಿ ಪಠ್ಯದಿಂದ ನಾರಾಯಣಗುರುಗಳ ಪಾಠ ತೆಗೆದು ಹಾಕಿರುವುದು ಹಾಗೂ ಕೋಟಿ ಚೆನ್ನಯ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಉತ್ತರ ನೀಡಿ ಎಂದು ಆಗ್ರಹಿಸಿದ್ದರು.  ಇಷ್ಟೆಲ್ಲಾ ಮಾಡಿ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿಸುವ ಬಿಜೆಪಿಯ ನಿರ್ಧಾರವನ್ನು ಟೀಕಿಸಿದ್ದರು.

 

ಬಿಲ್ಲವರ ಕಡೆಗಣನೆ ಮಾಡಿದ ಬಿಜೆಪಿ ನಾಯಕರು…!

ಪ್ರಧಾನಿ ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿದ್ರೆ ಎಲ್ಲವೂ ಸರಿಯಾಗಲಿದೆ ಅಂದುಕೊಂಡಿದ್ದರು. ಆದ್ರೆ ಬಹುತೇಕ ಬಿಲ್ಲವರು ಮೋದಿ ಕಾರ್ಯಕ್ರಮದ ವಿಚಾರವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಪ್ರಧಾನಿ ಮೋದಿ ಗುರುಗಳಿಗೆ ಹಾರ ಹಾಕುವಾಗ ಮಾಡಿದ ಆ ಒಂದು ತಪ್ಪು ಬಿಲ್ಲವ ಸಮೂದಾಯದ ಜನರ ಮನಸಿಗೆ ನೋವುಂಟು ಮಾಡಿದೆ ಎಂಬ ಚರ್ಚೆ ನಡೆಯುತ್ತಿದೆ. ಅಷ್ಟೇ ಅಲ್ಲದೆ ನಾರಾಯಣ ಗುರು ವೃತ್ತ ನಿರ್ಮಾಣದ ರೂವಾರಿಯಾಗಿದ್ದ ಬಿರುವೆರ ಕುಡ್ಲದ ಮುಖಂಡ ಉದಯ ಪೂಜಾರಿಯನ್ನು ಕಡೆಗಣಿಸಿದ್ದೂ ಬಿಲ್ಲವ ಯುವಕರಲ್ಲಿ ಅಸಮಾಧಾನ ಮೂಡಿಸಿದೆ. ಈ ವಿಚಾರವಾಗಿ ಬಿಜೆಪಿ ಜಿಲ್ಲಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.

ಗುರು ಪೀಠದ ಮೇಲೆ ಕಾಲಿರಿಸಿದ ಪ್ರಧಾನಿ..!

ನಾರಾಯಣಗುರುಗಳಿಗೆ ಮಾಲಾರ್ಪಣೆ ಮಾಡಿದ ಪ್ರಧಾನಿ ಮೋದಿ ಗುರುಪೀಠದ ಮೇಲೆ ಕಾಲಿರಿಸಿದ್ದರು. ಇದು ಬಿಲ್ಲವರ ಸ್ವಾಭಿಮಾನದ ಮೇಲೆ ಸ್ಥಳಿಯ ಬಿಜೆಪಿಯ ನಾಯಕರು ಇಟ್ಟ ಕಾಲು ಎಂದು ಟೀಕೆ ವ್ಯಕ್ತವಾಗಿದೆ. ಬಿರುವೆರ ಕುಡ್ಲದ ಉದಯ ಪೂಜಾರಿಯನ್ನು ಕಡೆಗಣಿಸಿದ್ದಲ್ಲದೆ, ಮೋದಿಯವರಿಗೆ ಸರಿಯಾದ ಮಾರ್ಗದರ್ಶನ ನೀಡದೆ ಈ ಪ್ರಮಾದ ಆಗಿದೆ. ಪ್ರಧಾನಿ ಮೋದಿಯ ಮೇಲೆ ಇರುವ ಅಭಿಮಾನ ಬಿಟ್ಟು ಕೊಡದ ಬಿಲ್ಲವ ಯುವಕರು ಇದಕ್ಕೆ ಸ್ಥಳಿಯ ಬಿಜೆಪಿ ನಾಯಕರೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ಪ್ರಧಾನಿ ಮೋದಿ ಗುರುಪೀಠದ ಮೇಲೆ ಕಾಲು ಇರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ಕಾಂಗ್ರೆಸ್‌ ಪಕ್ಷ ಕೂಡಾ ಅಸ್ತ್ರವಾಗಿ ಬಳಸಿಕೊಂಡಿದೆ.

 

ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಹೋಗಿ ಬಿಜೆಪಿ ಯಡವಟ್ಟು…!

ಪದ್ಮರಾಜ್‌ ಪೂಜಾರಿ ಅವರಿಗೆ ಟಿಕೇಟ್‌ ಸಿಕ್ಕ ಸಮಯದಲ್ಲಿ ಭಾಷಣ ಮಾಡಿದ್ದ ಬಿಜೆಪಿ ಅಭ್ಯರ್ಥಿ ಬೃಜೇಶ್‌ ಚೌಟ ಪದ್ಮರಾಜ್‌ ಪೂಜಾರಿ ದೇಶ ದ್ರೋಹಿ ಎಂದು ಕರೆದಿದ್ದರು . ಆ ಒಂದು ಹೇಳಿಕೆಯ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಬಿಜೆಪಿ ನಾಯಕರು ಹಲವಾರು ಸರ್ಕಸ್‌ ಮಾಡಿದ್ದಾರೆ. ಜನಾರ್ಧನ ಪೂಜಾರಿ ಕಾಲಿಗೆ ಬಿದ್ದ ಬೃಜೇಶ್‌ ಚೌಟ ಒಂದು ರೀತಿಯಲ್ಲಿ ಬಿಲ್ಲವರ ಮನ ಒಲಿಸುವ ಪ್ರಯತ್ನ ಕೂಡಾ ಮಾಡಿದ್ದಾರೆ. ಆದರೆ ಅದಾಗಲೇ ಬಿಲ್ಲವ ಯುವಕರು ಅದೇನೇ ಆದ್ರೂ ಈ ಬಾರಿ ಪದ್ಮರಾಜ್‌ ಪೂಜಾರಿ ಗೆಲ್ಲಿಸುವ ಪಣತೊಟ್ಟಿದ್ದಾರೆ. ಬಿಜೆಪಿ ಮತಗಳು ಕೇವಲ ಜಾತಿ ಹೆಸರಿನಲ್ಲಿ ಕಾಂಗ್ರೆಸ್‌ ಪಾಲಾಗಲಿದೆ ಅನ್ನೋ ಆತಂಕದಲ್ಲಿ ಬಿಲ್ಲವರ  ಓಲೈಕೆಗೆ ಪ್ರಧಾನಿ ಮೋದಿಯವರನ್ನು ಕರೆಸಲಾಗಿದೆ. ಆದ್ರೆ ಈಗ ಪ್ರಧಾನಿ ಮೋದಿ ಅವರಿಂದ ಆದ ಪ್ರಮಾದ ಹಾಗೂ ಸ್ಥಳೀಯ ನಾಯಕರಿಂದ ಬಿರುವೆರ ಕುಡ್ಲದ ನಾಯಕನ ಕಡೆಗಣನೆ ಬಿಜೆಪಿಗೆ ಮುಳುವಾಗುವ ಲಕ್ಷಣ ಕಾಣಿಸಿದೆ. ಸಾಮಾಜಿಕ ಜಾಲ ತಾಣದಲ್ಲಿ ಪ್ರಧಾನಿ ಬಂದು ಹೋದಾಗಿನಿಂದ ಈ ಚರ್ಚೆ ಜೋರಾಗಿ ನಡೆಯುತ್ತಿದೆ.

Continue Reading

LATEST NEWS

Trending