ಕಾಠ್ಮಂಡು: ನೇಪಾಳದ ಖಾಸಗಿ ಏರ್‌ಲೈನ್ಸ್ ವಿಮಾನ ಪತನಗೊಂಡ ಸ್ಥಳವನ್ನು ನೇಪಾಳ ಸೇನೆ ಸೋಮವಾರ ಪತ್ತೆ ಮಾಡಿದೆ ಎಂದು ನೇಪಾಳ ಸೇನಾ ವಕ್ತಾರರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಸದ್ಯ 14 ಮಂದಿಯ ಶವ ಪತ್ತೆಯಾಗಿದೆ ಉಳಿದವರಿಗಾಗಿ ಶೋಧ ನಡೆಯುತ್ತಿದೆ.
ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ತಾರಾ ಏರ್‌ನ 9 NAET ಅವಳಿ ಎಂಜಿನ್ ವಿಮಾನ ಭಾನುವಾರ ನಾಪತ್ತೆಯಾಗಿತ್ತು.
ನಾಪತ್ತೆಯಾದ ಕೆಲವೇ ಗಂಟೆಗಳ ನಂತರ ಮುಸ್ತಾಂಗ್ ಜಿಲ್ಲೆಯ ಕೊವಾಂಗ್ ಗ್ರಾಮದಲ್ಲಿ ಪತನಗೊಂಡಿದೆ.
ಮುಸ್ತಾಂಗ್ ಜಿಲ್ಲೆಯಲ್ಲಿ ಹಿಮಪಾತದಿಂದಾಗಿ ಅಪಘಾತಕ್ಕೀಡಾದ ವಿಮಾನದ ಹುಡುಕಾಟಕ್ಕಾಗಿ ನಿಯೋಜಿಸಲಾದ ಎಲ್ಲಾ ಹೆಲಿಕಾಪ್ಟರ್‌ಗಳನ್ನು ವಾಪಸ್ ಕರೆಸಲಾಗಿತ್ತು.
ಇಂದು ಮುಂಜಾನೆ, ನೇಪಾಳ ಸೇನೆ ತಾರಾ ಏರ್‌ನ ವಿಮಾನವನ್ನು ಹುಡುಕುವ ರಕ್ಷಣಾ ಪ್ರಯತ್ನ ಪುನರಾರಂಭಿಸಿದ್ದು,
ಮುಸ್ತಾಂಗ್‌ನಲ್ಲಿ ಪತ್ತೆಯಾಗಿದೆ ಎಂದು ನೇಪಾಳ ಸೇನಾ ವಕ್ತಾರರು ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ 9:55ಕ್ಕೆ ಪೋಖರಾದಿಂದ ಜೋಮ್ಸಮ್‌ಗೆ ತೆರಳುತ್ತಿದ್ದ ಈ ವಿಮಾನವು ಮುಸ್ತಾಂಗ್‌ನ ಲೆಟೆ ಪ್ರದೇಶವನ್ನು ತಲುಪಿದ ನಂತರ ಸಂಪರ್ಕ ಕಳೆದುಕೊಂಡಿತ್ತು.