Connect with us

LATEST NEWS

ಕುಡಿದ ಅಮಲಿನಲ್ಲಿ ನಟಿಯ ಜೊತೆ ದುರ್ವರ್ತನೆ..! ನಟನ ವಿರುದ್ಧ ಆಕ್ರೋಶ ಹೊರಹಾಕಿದ ನೆಟ್ಟಿಗರು

Published

on

ಹೈದರಾಬಾದ್/ಮಂಗಳೂರು: ತೆಲುಗು ಚಿತ್ರರಂಗದ ಮಾಸ್‌ ಹೀರೋ ಮನಂದಮೂರಿ ಬಾಲಕೃಷ್ಣ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಿನೆಮಾವೊಂದರ ಪ್ರೊಮೋಷನ್ ವೇಳೆ ನಂದಮೂರಿ ಬಾಳಕೃಷ್ಣ ಅವರು ನಟಿ ಅಂಜಲಿಯನ್ನು ಸ್ಟೇಜ್‌ನಲ್ಲಿ ತಳ್ಳಿದ್ದಾರೆ. ಈ ಕುರಿತಾದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಂದೆ ಓದಿ..; WATCH VIDEO : ಪೊಲೀಸ್ ಅಧಿಕಾರಿಗಳೊಂದಿಗೆ ಬಹುಭಾಷಾ ನಟಿ ಕಿರಿಕ್; ಡಿಕ್ಕಿ ತೆರೆಯಲ್ಲ ಅಂದಿದ್ಯಾಕೆ ನಟಿ!?

ಬಾಲಕೃಷ್ಣ ತೆಲುಗು ಚಿತ್ರರಂಗದ ಪ್ರಮುಖ ಮಾಸ್ ಹೀರೋ. ವಯಸ್ಸು 63 ಆದ್ರೂ ಅವರಿಗೆ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟ. ಬಾಲಕೃಷ್ಣ ಆಗಾಗ ನಾನಾ ವಿವಾದಗಳಲ್ಲಿ ಸಿಲುಕುತ್ತಿರುತ್ತಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ವಿಶ್ವಕ್ ಸೇನ್ ನಟನೆಯ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಕಾರ್ಯಕ್ರಮವಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಂದಮೂರಿ ಬಾಲಕೃಷ್ಣ ಆಗಮಿಸಿದ್ದರು. ‘ರಣವಿಕ್ರಮ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ಅಂಜಲಿ ಕೂಡ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದಲ್ಲಿ ನಟಿಸಿದ್ದು, ಅವರು ಕೂಡ ವೇದಿಕೆ ಮೇಲೆ ಇದ್ದರು. ಈ ವೇಳೆ ಧಿಡೀರನೇ ಅಂಜಲಿಯನ್ನು ಬಾಲಯ್ಯ ತಳ್ಳಿದ್ದಾರೆ. ಒಂದು ಕ್ಷಣ ಅಂಜಲಿ ದಿಗ್ಬ್ರಾಂತರಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

ಪಕ್ಕದಲ್ಲೇ ಇದ್ದ ನಟಿ ನೇಹಾ ಶೆಟ್ಟಿ, ಅಂಜಲಿಯನ್ನು ಹಿಡಿದುಕೊಂಡಿದ್ದಾರೆ. ನಂತರ ಸಾವರಿಸಿಕೊಂಡು ಬಾಲಯ್ಯರನ್ನು ನೋಡಿ ನಕ್ಕರು ಅಂಜಲಿ, ನಂತರ ಅವರ ಜೊತೆಗೆ ಮಾತುಕತೆಯಲ್ಲಿ ತಲ್ಲೀನರಾದರು. ಬಾಲಯ್ಯ ತಮಾಷೆಗಾಗಿ ಹೀಗೆ ಮಾಡಿದರೂ, ವಿಡಿಯೋ ನೋಡಿದವರಿಗೆ ಇದು ತಮಾಷೆ ಎನಿಸುವಂತೆ ಇರಲಿಲ್ಲ. ಕಾರ್ಯಕ್ರಮದಲ್ಲಿ ನಟನಿಗೆ ನೀರಿನ ಬದಲಾಗಿ ಆಲ್ಕೋಹಾಲ್ ಕೊಟ್ಟಿದ್ದಾರೆ. ನಶೆಯ ಅಮಲಿನಲ್ಲಿ ಹೀಗೆ ಮಾಡಿದ್ದಾರೆ ಎಂದು ಹೇಳಲಾಗಿದೆ ಇದೀಗ ಈ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಸಿದ್ಧಕಟ್ಟೆ ಕೊಡಂಗೆ ‘ವೀರ – ವಿಕ್ರಮ’ ಜೋಡುಕರೆ ಕಂಬಳ; 166 ಜೊತೆ ಕೋಣಗಳು ಭಾಗಿ

Published

on

ಮಂಗಳೂರು : ಈ ವರ್ಷದ ಕಂಬಳ ಸೀಸನ್ ನ ಮೊದಲ ಕಂಬಳ ನವೆಂಬರ್‌ 22 ಮತ್ತು 23  ರಂದು ಸಿದ್ದಕಟ್ಟೆಯಲ್ಲಿ ನಡೆಯಿತು. ಇದು ಎರಡನೇ ವರ್ಷದ ಸಿದ್ಧಕಟ್ಟೆ ಕೊಡಂಗೆ ‘ವೀರ – ವಿಕ್ರಮ’ ಜೋಡುಕರೆ ಕಂಬಳ ಆಗಿದ್ದು, ಬರೋಬ್ಬರಿ 166 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ 6 ಜೊತೆ, ಅಡ್ಡಹಲಗೆ 6 ಜೊತೆ, ಹಗ್ಗ ಹಿರಿಯ 15 ಜೊತೆ, ನೇಗಿಲು ಹಿರಿಯ 34 ಜೊತೆ, ಹಗ್ಗ ಕಿರಿಯ 27 ಜೊತೆ, ನೇಗಿಲು ಕಿರಿಯ 78 ಜೊತೆ ಕೋಣಗಳು ಪಾಲ್ಗೊಂಡಿದ್ದವು.

ಪ್ರಶಸ್ತಿ ವಿವರ :

ಕನೆಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ ಪ್ರಥಮ, ವಾಮಂಜೂರು ತಿರುವೈಲು ಗುತ್ತು ಅಭಿಷೇಕ್ ನವೀನ್‌ ಚಂದ್ರ ಆಳ್ವ ದ್ವಿತೀಯ ಸ್ಥಾನ ಪಡೆದರು. ಅಡ್ಡ ಹಲಗೆ ವಿಭಾಗದಲ್ಲಿ ನಾರಾವಿ ಯುವರಾಜ್ ಜೈನ್ ಪ್ರಥಮ ಹಾಗೂ ಆಲದ ಪದವು ಮೇಗಿನ ಮನೆ ಅಜ್ಜಾಡಿ ಬಾಬು ರಾಜೇಂದ್ರ ಶೆಟ್ಟಿ ‘ಬಿ’ ಅವರು ದ್ವಿತೀಯ ಸ್ಥಾನಿಯಾದರು.

ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ‘ಎ’ ಕೋಣಗಳು ಪ್ರಥಮ ಹಾಗೂ ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ ದ್ವಿತೀಯ ಸ್ಥಾನ ಪಡೆದರು. ಹಗ್ಗ ಕಿರಿಯ ವಿಭಾಗದಲ್ಲಿ ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ ಪ್ರಥಮ, ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ ‘ಎ’ ಕೋಣಗಳು ದ್ವಿತೀಯ  ಸ್ಥಾನ ಪಡೆದಿವೆ.

ಇದನ್ನೂ ಓದಿ: WATCH : ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ರಕ್ಷಿಸಿದ ರೈಲ್ವೇ ಸಿಬ್ಬಂದಿ

ನೇಗಿಲು ಹಿರಿಯ ವಿಭಾಗದಲ್ಲಿ ಹೊಸ್ಮಾರು ಸೂರ್ಯ ಶ್ರೀ ರತ್ನ ಸದಾಶಿವ ಶೆಟ್ಟಿ ಪ್ರಥಮ ಹಾಗೂ ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ ದ್ವಿತೀಯ ಸ್ಥಾನ ಗೆದ್ದಿದ್ದಾರೆ. ನೇಗಿಲು ಕಿರಿಯ ವಿಭಾಗದಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಪ್ರಥಮ ಹಾಗೂ ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ ‘ಎ’ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.

Continue Reading

LATEST NEWS

ಬಾವಿಯ ಪೊಟರೆಯಲ್ಲಿ ಅವಿತು ಕುಳಿತುಕೊಂಡಿದ್ದ ಚಿರತೆ ಸೆರೆ

Published

on

ಉಡುಪಿ : ಉಡುಪಿ ಜಿಲ್ಲೆಯ ಅರಣ್ಯದ ಅಂಚಿನ ಪ್ರದೇಶಗಳಲ್ಲಿ ಚಿರತೆಯ ಕಾಟ ಜೋರಾಗಿದೆ. ಆಹಾರ ಅರಸಿ ಬರುವ ಚಿರತೆಗಳು ಗ್ರಾಮಸ್ಥರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿವೆ.

ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಎರ್ಮಂಜಪಲ್ಲ ಬಳಿಯ ಬಾಗಿ ಎನ್ನುವವರ ಮನೆಯ ಬಾವಿಗೆ ರಾತ್ರಿ ಚಿರತೆಯೊಂದು ಬಿದ್ದಿತ್ತು. ಬಾವಿಯ ಪೊಟರೆಯಲ್ಲಿ ಅವಿತು ಕುಳಿತುಕೊಂಡಿದ್ದ ಚಿರತೆಯನ್ನು ಮೇಲಕ್ಕೆ ಬರುವಂತೆ ಮಾಡಲು, ಅರಣ್ಯ ಇಲಾಖೆ ಹರ ಸಾಹಸ ಪಡುವಂತಾಯ್ತು.

ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಬೋನಿನ ಮೂಲಕ ಚಿರತೆ  ಸೆರೆ ಹಿಡಿಯುವಲ್ಲಿ ಅರಣ್ಯ  ಇಲಾಖೆ  ಸಿಬ್ಬಂದಿ ಯಶಸ್ಸು ಕಂಡಿದ್ದಾರೆ. ಅರಣ್ಯ ಇಲಾಖೆಯ ಕಾರ್ಯ ದಕ್ಷತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

 

Continue Reading

LATEST NEWS

ಕದ್ದ ಚಿನ್ನಾಭಾರಣಗಳನ್ನು ಮನೆಯ ಜಗಲಿಯ ಮೇಲೆ ಇಟ್ಟು ಹೋದ ಕಳ್ಳರು !

Published

on

ಮಂಗಳೂರು/ಮಂಡ್ಯ: ರಾಜ್ಯದಲ್ಲಿ ಕಳ್ಳತನ ಎನ್ನುವುದು ಸಾಮಾನ್ಯವಾಗಿದೆ. ಕಳ್ಳರು ಕದ್ದ ಚಿನ್ನಾಭಾರಣಗಳನ್ನು ಎಲ್ಲಿಯಾದರೂ ಮಾರಿ ಬಿಡುತ್ತಾರೆ. ಆದರೆ ಕಳ್ಳರಲ್ಲೂ ಪ್ರಾಮಾಣಿಕತೆ ಇದೆ ಎಂದು ಮಂಡ್ಯದಲ್ಲಿ ಸಾಕ್ಷಿಯಾಗಿದೆ.

 

 

ಈ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದೇಗೌಡ ಎಂಬುವವರ ಕುಟುಂಬ ಮನೆದೇವರ ಪೂಜೆಗೆಂದು ಹೋಗಿದ್ದರು. ಈ ವೇಳೆ ಮನೆಯ ಹೆಂಚುಗಳನ್ನು ತೆಗೆದು ಒಳನುಗ್ಗಿದ್ದ ಕಳ್ಳರು ಬೀರುವನ್ನು ಒಡೆದು ಕಳ್ಳತನ ಮಾಡಿದ್ದರು. ಈ ವೇಳೆ 50 ಗ್ರಾಂ ಚಿನ್ನದ ಸರ, 10 ಗ್ರಾಂ ಚೈನ್, 15 ಗ್ರಾಂನ ಮೂರು ಜೊತೆ ಓಲೆಗಳು ಸೇರಿ ಒಟ್ಟು 75 ಗ್ರಾಂನಷ್ಟು ಚಿನ್ನಾಭರಣ ಕದ್ದಿದ್ದರು.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ರಕ್ಷಿಸಿದ ರೈಲ್ವೇ ಸಿಬ್ಬಂದಿ 


ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ಕೂಡ ನೀಡಿದ್ದರು. ಕಳ್ಳರಿಗೆ ಪೊಲೀಸರ ಭಯವೋ ಅಥವಾ ಮನೆದೇವರ ಆಶೀರ್ವಾದವೋ ಗೊತ್ತಿಲ್ಲ, ಪೊಲೀಸರಿಗೆ ದೂರು ನೀಡಿದ ಎರಡು ದಿನಗಳ ನಂತರ ಕಳ್ಳರು ಮನೆಯ ಮುಂಭಾಗದ ಜಗಲಿಯ ಮೇಲೆ ಚಿನ್ನಾಭರಣಗಳನ್ನು ಇಟ್ಟು ಹೋಗಿದ್ದಾರೆ.
ಚಿನ್ನಾಭರಣ ವಾಪಸ್ಸು ಸಿಕ್ಕ ಖುಷಿಯಲ್ಲಿ ಸಿದ್ದೇಗೌಡರ ಕುಟುಂಬ ನಿರಾಳವಾಗಿದೆ.

Continue Reading

LATEST NEWS

Trending

Exit mobile version