Connect with us

LATEST NEWS

‘ಕೋಟ್ಯಾಂತರ ರೂ.ಆಸ್ತಿ ಘೋಷಿಸುವ ಮಂತ್ರಿಗಳಿಗೆ ವೇತನ ಹೆಚ್ಚಳ ಯಾಕೆ?’-ಇಂಟಕ್ ಪ್ರಶ್ನೆ

Published

on

ಮಂಗಳೂರು: ಚುನಾವಣಾ ಸಂದರ್ಭದಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಆದಾಯವನ್ನಾಗಿ ತೋರಿಸುವ ಶಾಸಕರು, ಮಂತ್ರಿಗಳು ಮುಖ್ಯಮಂತ್ರಿಗಳಿಗೆ ಆದಾಯವನ್ನು ಏರಿಸುವ ಅಗತ್ಯವೇನಿತ್ತು.

ಕಾರ್ಮಿಕರು ಇಂದಿಗೂ ಕನಿಷ್ಠ ಕೂಲಿಯಲ್ಲಿ ಜೀವನವನ್ನು ನಡೆಸುತ್ತಿದ್ದು ಅವರಿಗೂ ಕೂಡ ದುಪ್ಪಟ್ಟಾಗಿ ಏರಿಕೆ ಮಾಡಿ ಎಂದು ಕಾರ್ಮಿಕ ಸಂಘಟನೆಯಾದ ಇಂಟಕ್ ದ.ಕ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ  ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದ್ದಾರೆ.

ತಮ್ಮ ವೇತನ ಭತ್ಯೆಯನ್ನು ಏರಿಸುವಾಗ ಯಾವುದೇ ಶಾಸಕರು ವಿರೋಧ ಮಾಡುವ ಮನಸ್ಸು ಮಾಡಿಲ್ಲ. ಇಲ್ಲಿ ಯಾವುದೇ ರಾಜಕೀಯವನ್ನು ಶಾಸಕರುಗಳು ಮಂತ್ರಿಗಳು ಯಾಕೆ ತೋರಿಸುತ್ತಿಲ್ಲ.

ಸಮಾಜಸೇವೆಗಾಗಿ ಇರುವ ರಾಜಕೀಯ ಇದೀಗ ವೃತ್ತಿಪರ ಉದ್ಯೋಗವನ್ನಾಗಿ ಮಾಡುವತ್ತ ರಾಜ್ಯ ಸರಕಾರ ಮುಂದಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.

ಪೊಲೀಸ್ ಇಲಾಖೆ, ಶಿಕ್ಷಕರು,ಅತಿಥಿ ಉಪನ್ಯಾಸಕರು  ಕಾರ್ಮಿಕ ವಲಯ ಮತ್ತಿತರ ದುಡಿಯುವ ವರ್ಗದವರನ್ನು ಕಡೆಗಣಿಸುತ್ತಿರುವ ಸರ್ಕಾರ ಅವರಿಗೆ ವೇತನ ಆಯೋಗ ನೀಡುವ ವೇತನವನ್ನು ಕೂಡಲು ಸರ್ಕಾರದಲ್ಲಿ ದುಡ್ಡಿಲ್ಲ ಎಂದು ತಳ್ಳಿ ಹಾಕಲಾಗುತ್ತಿದೆ.

ಮೊದಲು ಕೊರೊನಾದಿಂದ ಉದ್ಯೋಗ ಕಳೆದುಕೊಂಡವರಿಗೆ ಉದ್ಯಮದಲ್ಲಿ ನಷ್ಟ ಹೊಂದಿರುವವರಿಗೆ ಬಡಜನತೆಗೆ ಮೊದಲು ನೆರವಾಗಬೇಕು ಕರ್ನಾಟಕದ  ರಾಜ್ಯಪಾಲರು ಮಧ್ಯ ಪ್ರವೇಶಿಸಿ ಈ ವೇತನ ಹೆಚ್ಚಳವನ್ನು ತಡೆ ಹಿಡಿಯಲು ಸರಕಾರಕ್ಕೆ ಸೂಚಿಸಬೇಕು.

ನಮ್ಮ ಸಮಾನ ಮನಸ್ಕ ಕಾರ್ಮಿಕ ಸಂಘಟನೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.

LATEST NEWS

ಬೈಕ್‌ ಅಪಘಾತ: ರಸ್ತೆಗೆ ಬಿದ್ದ ವ್ಯಕ್ತಿಗಳ ಮೇಲೆ ಹರಿದ ಲಾರಿ- ಮೂವರು ಸ್ಥಳದಲ್ಲೇ ಸಾವು..!

Published

on

ಶಿವಮೊಗ್ಗ: ಬೈಕ್ ಗಳ ಮದ್ಯೆ ನಡೆದ ಅಪಘಾತದಿಂದ ರಸ್ತೆಗೆ ಬಿದ್ದ ವ್ಯಕ್ತಿಗಳ ಮೇಳೆ ಲಾರಿ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಹತೊಳಲು ಗ್ರಾಮದಲ್ಲಿ ನಡೆದಿದೆ.

ಹಳೆ ಜಂಬರಗಟ್ಟ ನಿವಾಸಿ ವಿಕಾಸ್ (18), ಯಶ್ವಂತ್ (17), ಹಾಗೂ ಶಶಾಂಕ್ (17) ಮೃತ ದುರ್ದೈವಿಗಳು.

ಎರಡು ಬೈಕ್ ಗಳ ಮಧ್ಯೆ ನಡೆದ ಅಪಘಾತದಲ್ಲಿ ಸವಾರರ ರಸ್ತೆ ಮೇಲೆ ಬಿದ್ದಿದ್ದಾರೆ.

ಇದೇ ವೇಳೆ ರಭಸವಾಗಿ ಬಂದ ಲಾರಿ ಆ ವ್ಯಕ್ತಿಗಳ ಮೇಲೆ ಹರಿದಿದೆ.

ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಒಬ್ಬನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

FILM

ಮೋದಿಗೆ ರಕ್ತದಲ್ಲಿ ಪತ್ರ ಬರೆದ ಚಿತ್ರ ನಟ ಪ್ರೇಮ್..!

Published

on

ಚಿಕ್ಕಮಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಯಬಿಡುವುದನ್ನು ಖಂಡಿಸಿದ ಕನ್ನಡ ಚಿತ್ರನಟ ಪ್ರೇಮ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ​ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಕಾವೇರಿ ವಿಚಾರವಾಗಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದ್ದು, ಚಿತ್ರನಟ ನೆನಪಿರಲಿ ಪ್ರೇಮ್ ಸಾಥ್ ನೀಡಿದ್ದಾರೆ.

‘ಕಾವೇರಿ ನಮ್ಮದು’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಕಾವೇರಿ ನೀರಿನಿಂದ ರಾಜ್ಯಕ್ಕೆ ನ್ಯಾಯ ನೀಡಬೇಕೆಂದು ಪತ್ರದ ಮೂಲಕ ಪ್ರೇಮ್ ಅವರು  ಮನವಿ ಮಾಡಿದ್ದಾರೆ.

ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Continue Reading

bengaluru

ನಟ ನಾಗಭೂಷಣ್ ಕಾರು ಅಪಘಾತ – ಮಹಿಳೆ ಸಾವು..!

Published

on

ಬೆಂಗಳೂರು: ಕನ್ನಡದ ಹೆಸರಾಂತ ನಟ ನಾಗಭೂಷಣ್ ಅವರು ಚಲಾಯಿಸುತ್ತಿದ್ದ ಕಾರು ದಂಪತಿಗಳಿಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನಪ್ಪಿದ್ದು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ 9 ಗಂಟೆಯ ಹೊತ್ತಿಗೆ ಕುಮಾರಸ್ವಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮಹಿಳೆಯ ಸಾವಿಗೆ ಕಾರಣರಾದ ನಟ ನಾಗಭೂಷಣ್ ಅವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ವಸಂತಪುರದ ನಿವಾಸಿ ಪ್ರೇಮಾ (48) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ನಾಗಭೂಷಣ್ ಶೂಟಿಂಗ್ ಮುಗಿಸಿಕೊಂಡು ಬರುವಾಗ ರಸ್ತೆಯಲ್ಲಿ ಅಡ್ಡಬಂದ ಪಾದಚಾರಿ ದಂಪತಿಗಳಾದ ಪ್ರೇಮಾ ಮತ್ತು ಕೃಷ್ಣ ಅವರಿಗೆ ಕಾರು ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ದಂಪತಿಗಳಿಬ್ಬರಿಗೂ ತೀವ್ರ ಗಾಯವಾಗಿದ್ದು, ಗಾಯಾಳುಗಳನ್ನು ಖುದ್ದಾಗಿ ನಾಗಭೂಷಣ್ ಅವರೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಾ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಪತಿ ಕೃಷ್ಣ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಗಭೂಷಣ್ ಅವರೇ ಸ್ವತಃ ಕಾರನ್ನು ಚಲಾಯಿಸುತ್ತಿದ್ದರಿಂದ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮಾಹಿತಿ ಪಡೆಯುತ್ತಿದ್ದಾರೆ.

ಮೃತರ ಪುತ್ರನು ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಫುಟ್ ಪಾತ್ ಮೇಲೆ ತಂದೆ ತಾಯಿ ವಾಕ್ ಮಾಡುವಾಗ ಕಾರು ಹಾಯ್ದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Continue Reading

LATEST NEWS

Trending