ಮಂಗಳೂರು: ಸಿದ್ಧರಾಮಯ್ಯ ಬಿಜೆಪಿಯನ್ನು ಕಿತ್ತೊಗೆಯಲು ಹೇಳಿದ್ದಾರೆ. ಬಿಜೆಪಿಯನ್ನು ಕಿತ್ತೆಸೆಯೋಕೆ ಬಿಜೆಪಿ ಏನು ಕೊತ್ತಂಬರಿ ಸೊಪ್ಪಾ? ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಿದ್ದರಾಮಯ್ಯ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಯಾರಿಗೂ ಬೇಡವಾದ ಕೂಸಾಗಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಹಾಗೂ ದೇಶದಲ್ಲೇ ಆಲದ ಮರವಾಗಿ ಬೆಳೆದಿದೆ ಎಂದಿದೆ.
ಕಾನೂನನ್ನು ಕೈಗೆತ್ತಿಕೊಳ್ಳುವ ಹಂತಕ್ಕೆ ಯಾರೂ ಹೋಗಬಾರದು. ಎಲ್ಲರೂ ಕೂಡ ಧರ್ಮದ ನಡುವೆ ಕಚ್ಚಾಟ ಮಾಡದೆ ದೇಶಕ್ಕಾಗಿ ದುಡಿಯಬೇಕು.
ಬಿಜೆಪಿ ಕಾರ್ಮಿಕ ವರ್ಗಕ್ಕೆ ಶಕ್ತಿಯನ್ನು ತುಂಬಿದೆ. ಪ್ರಧಾನಿ ಮೋದಿ ದೇಶಕ್ಕೆ ಸಮರ್ಥ ನಾಯಕರಾಗಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಯಾರಿಗೂ ಬೇಡವಾದ ಪಕ್ಷವಾಗಿದೆ. ಐವತ್ತು ವರ್ಷವನ್ನು ಆಳಿದ ಕಾಂಗ್ರೆಸ್ ಪಕ್ಷವನ್ನು ದೇಶ ತಿರಸ್ಕಾರ ಮಾಡಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಸಮರ್ಥ ನಾಯಕರು. ರಾಜ್ಯ ಬಜೆಟ್ ನಲ್ಲಿ ಸಿಎಂ ಏನು ಅಂತಾ ನಿರೂಪಿಸಿದ್ಧಾರೆ. ಕೊರೋನಾ ಸಂದರ್ಭದಲ್ಲೂ ಒಳ್ಳೆಯ ಬಜೆಟ್ ನ್ನು ನೀಡಿದ್ದಾರೆ. ಬೊಮ್ಮಾಯಿ ಚಾಣಕ್ಯನ ರೀತಿಯಲ್ಲಿ ರಾಜಕೀಯ ಮಾಡುತ್ತಾರೆ.
ಪ್ರತಿಪಕ್ಷಗಳಿಗೆ ಇದನ್ನೆಲ್ಲಾ ತಡೆಯೋಕೆ ಆಗ್ತಿಲ್ಲ .ಹೀಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಜನ ಮರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಗೆ ಟಕ್ಕರ್ ಹೊಡೆದಿದ್ದಾರೆ’ ಎಂದು ಹೇಳಿದ್ದಾರೆ.