Saturday, August 20, 2022

ಸುಳ್ಯ: ಭೂಕಂಪನ ಪೀಡಿತ ಗ್ರಾಮಕ್ಕೆ ಸಚಿವ ಅಂಗಾರ ಭೇಟಿ

ಸುಳ್ಯ: ಇತ್ತೀಚೆಗೆ ಕೊಡಗು ಜಿಲ್ಲೆಯ ಚೆಂಬುವಿನಲ್ಲಿ ಉಂಟಾದ ಭೂಕಂಪನದಿಂದಾಗಿ ಸುಳ್ಯ ತಾಲೂಕಿನ ಹಲವೆಡೆ ಭೂಮಿ ಕಂಪಿಸಿದ್ದು ಇದರ ಪರಿಣಾಮವಾಗಿ ತಾಲೂಕಿನ ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ಹಾನಿಯಾದ ಪ್ರದೇಶಗಳಲ್ಲಿನ ಮನೆಗಳಿಗೆ ಸಚಿವರಾದ ಎಸ್. ಅಂಗಾರರವರು ಭೇಟಿ ನೀಡಿ ಪರಿಶೀಲಿಸಿದರು.


ಈ ಬಗ್ಗೆ ಮಾತನಾಡಿದ ಸಚಿವರು ಈಗಾಗಲೇ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಜ್ಞರನ್ನು ಸಂಪರ್ಕಿಸಿ ಭೂಮಿ ಕಂಪಿಸಿದ ಪ್ರದೇಶದ ಭೇಟಿ ನೀಡಲು ಸೂಚಿಸಿದ್ದು, ಸರಿಯಾದ ವರದಿ ತಯಾರು ಮಾಡುವಂತೆ ತಹಶೀಲ್ದಾರ್ ಮತ್ತು ಜಿಲ್ಲಾ ಪಂಚಾಯತ್ ಇಂಜಿನಿಯರ್ ರವರಿಗೆ ಸೂಚಿಸಿದರು.


ಪದೇ ಪದೇ ಭೂಕಂಪನವಾಗುತ್ತಿರುವ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾಕ್ಕೆ ವರದಿ ಕಳುಹಿಸಿ ಅಲ್ಲಿನ ಅಧಿಕಾರಿಗಳನ್ನು ಈ ಭಾಗಕ್ಕೆ ಅಧ್ಯಯನಕ್ಕಾಗಿ ಕರೆಯಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.

ಸಂಪಾಜೆ ಗ್ರಾಮದ ನಾಗೇಶ್ ಪೇರಾಲು ಕಲ್ಲುಗುಂಡಿ ಹಾಗೂ ಅಬುಸಾಲಿ ಅವರ ಮನೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಂಡಲ ಬಿ.ಜೆ.ಪಿ. ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ತಾ.ಪಂ. ಇ.ಓ. ಭವಾನಿಶಂಕರ್ ಎನ್, ಕಂದಾಯ ನಿರೀಕ್ಷಕರಾದ ಕೊರಗಪ್ಪ ಹೆಗ್ಡೆ, ಗ್ರಾ.ಪಂ. ಅಧ್ಯಕ್ಷರಾದ ಹಮೀದ್, ಪಿ.ಡಿ.ಓ. ಸರಿತಾ ಡಿಸೋಜಾ, ಪ್ರಮುಖರಾದ ಶಿವಾನಂದ ಕುಕ್ಕಂಬಳ, ಗಣಪತಿ ಭಟ್, ವಿಜಯ್ ಆಲಡ್ಕ, ಎ.ಜಿ.ಸುಧಾಕರ, ವರದ ಸಂಪಾಜೆ, ಎಸ್.ಪಿ. ಲೋಕನಾಥ್, ಕೇಶವ ಕಲ್ಲುಗುಂಡಿ, ಜಗದೀಶ್ ಕಲ್ಲುಗುಂಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics