ಬಂಟ್ವಾಳ: ಹಾಲು ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮಂಗಳೂರು ಕಡೂರು ರಾಜ್ಯ ಹೆದ್ದಾರಿ ಯ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ನಡೆದಿದೆ.
ರಸ್ತೆ ಅಪಘಾತದಿಂದ ಲಾರಿ ಚಾಲಕ ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಪುಂಜಾಲಕಟ್ಟೆ ಕಡೆಯಿಂದ ವಗ್ಗ ಕಡೆಗೆ ಹಾಲು ಖರೀದಿಸಲು ಬರುತ್ತಿದ್ದ ಲಾರಿಯ ತಾಂತ್ರಿಕ ಅಡಚಣೆ ಯಿಂದಾಗಿ ರಸ್ತೆಯ ಪಕ್ಕದಲ್ಲಿದ್ದ ಪಾಸ್ಟ್ ಪುಡ್ ಅಂಗಡಿಗೆ ಡಿಕ್ಕಿ ಹೊಡೆದು ವಾಲಿ ನಿಂತಿದೆ.
ಇನ್ನು ಘಟನೆಯಿಂದ ಲಾರಿಯಲ್ಲಿದ್ದ ಹಾಲು ರಸ್ತೆಗೆ ಚೆಲ್ಲಿದ್ದು ಸಾವಿರಾರು ರೂ ನಷ್ಟ ಸಂಭವಿಸಿದೆ ಎನ್ನಲಾಗಿದೆ.