ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಪ್ರಕರಣ:ಇನ್ನಿಬ್ಬರು ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು..!
ಮಂಗಳೂರು: ಬಿಜೈ ಮತ್ತು ಜಿಲ್ಲಾ ಕೋರ್ಟ್ ಸಮೀಪದ ಗೋಡೆಯಲ್ಲಿ ಲಷ್ಕರ್ ಪರ ಬರಹಕ್ಕೆ ಸಂಬಂಧಪಟ್ಟಂತೆ ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ನಗರದ ಪ್ರಮುಖ ರಸ್ತೆಗಳ ಗೋಡೆಗಳಲ್ಲಿ ಕಂಡು ಬಂದ ವಿವಾದಾತ್ಮಕ ಬರಹಗಳನ್ನು ಕಂಡು ಕರಾವಳಿ ಬೆಚ್ಚಿ ಬಿದ್ದಿತ್ತು.
ಈ ಬರಹದ ಹಿಂದೆ ಯಾರಿದ್ದಾರೆ ಹಾಗೂ ಏನಿದರ ಉದ್ದೇಶ ಎಂಬುದರ ಜಾಡು ಹಿಡಿದ ಪೊಲೀಸರು ಇದೀಗ ಮತ್ತೆ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ACP ಜಗದೀಶ್ ಹಾಗೂ ಸಿ.ಸಿ.ಬಿ ಅಧಿಕಾರಿ ಮಹೇಶ್ ಪ್ರಸಾದ್ ತಂಡದಿಂದ ನಡೆದ ಕಾರ್ಯಚರಣೆಯಿಂದ ಇಲ್ಲಿಯವರೆಗೆ ಸಧ್ಯ ಮೂವರ ಬಂಧನವಾಗಿದೆ.