ದಕ್ಷಿಣ ಇಟಲಿಯ ಕರಾವಳಿಯ ಬಳಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಬಂಡೆಕಲ್ಲಿಗೆ ಅಪ್ಪಳಿಸಿದ ಪರಿಣಾಮ 60 ಜನರು ಸಾವನ್ನಪ್ಪಿದ್ದಾರೆ.
ಇಟಲಿ: ದಕ್ಷಿಣ ಇಟಲಿಯ ಕರಾವಳಿಯ ಬಳಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಬಂಡೆಕಲ್ಲಿಗೆ ಅಪ್ಪಳಿಸಿದ ಪರಿಣಾಮ 60 ಜನರು ಸಾವನ್ನಪ್ಪಿದ್ದಾರೆ. 80 ಜನರನ್ನು ಸ್ಥಳಿಯರ ನೆರವಿನಿಂದ ರಕ್ಷಣೆ ಮಾಡಲಾಗಿದೆ ಎಂದು ಇಟಾಲಿಯನ್ ಕರಾವಳಿ ಸಿಬ್ಬಂದಿ ಮತ್ತು ಪೊಲೀಸರು ತಿಳಿಸಿದ್ದಾರೆ.
ಇಟಲಿಯ ಕ್ಯಾಲಬ್ರಿಯಾದ ಪೂರ್ವ ಕರಾವಳಿಯಲ್ಲಿರುವ ಕಡಲತೀರದ ರೆಸಾರ್ಟ್‌ನ ಸ್ಟೆಕಾಟೊ ಡಿ ಕಟ್ರೊ ಬಳಿ ಹಡಗು ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಹಡಗು ಬಂಡೆಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.
ಹಡಗಿನಲ್ಲಿ ಸುಮಾರು 120ಕ್ಕೂ ಹೆಚ್ಚು ಮಂದಿ ಇದ್ದರು ಎನ್ನಲಾಗಿದ್ದು ಅವಘಡ ಸಂಭವಿಸಿದ ವೇಳೆ ಸುಮಾರು 80 ಮಂದಿ ಈಜಿ ದಡ ಸೇರಿದ್ದಾರೆ ಎನ್ನಲಾಗಿದ್ದು 60 ಮಂದಿಯ ಮೃತ ದೇಹಗಳು ಕರಾವಳಿ ಕಡಲ ತೀರದಲ್ಲಿ ತೇಲುತ್ತಿತ್ತು ಎನ್ನಲಾಗಿದ್ದು ರಕ್ಷಣಾ ತಂಡ ಮೃತ ದೇಹಗಳನ್ನು ನೀರಿನಿಂದ ಮೇಲೆತ್ತಿದ್ದು ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಸಮುದ್ರದಲ್ಲಿ ಕಾರ್ಯಾಚರಣೆ ಕಷ್ಟಕರವಾಗಿದ್ದರಿಂದ ಅಗ್ನಿಶಾಮಕ ದಳದವರು ಜೆಟ್ ಸ್ಕಿಸ್ ಬಳಸಿ ಕಾರ್ಯಾಚರಣೆ ನಡೆಸಿದ್ದರು.