Connect with us

    LATEST NEWS

    ಮೈಕ್ರೋಸಾಫ್ಟ್ CEO ಸತ್ಯ ನಾದೆಲ್ಲಾ ಪುತ್ರ ಝೈನ್ ನಾದೆಲ್ಲಾ ಇನ್ನಿಲ್ಲ..!

    Published

    on

    ವಾಷಿಂಗ್ಟನ್‌ : ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಅವರ ಪುತ್ರ ಝೈನ್ ನಾದೆಲ್ಲಾ ನಿಧನ ಹೊಂದಿದ್ದಾರೆ. ಈ ಬಗ್ಗೆ ಮೈಕ್ರೋಸಾಫ್ಟ್ ಕಾರ್ಪೊರೇಷನ್ ಮಾಹಿತಿ ನೀಡಿದೆ.

    26 ವರ್ಷದ ಝೈನ್ ನಾದೆಲ್ಲಾ ಮೆದುಳಿನ ನರಕ್ಕೆ ಸಂಬಂಧಿಸಿದ ವಿಶೇಷ ಕಾಯಿಲೆಯಿಂದ ಬಳಲುತ್ತಿದ್ದನು.

     

    ಮೆದುಳಿನ ನರಕ್ಕೆ ಸಂಬಂಧಿಸಿದ ಸೆರೆಬ್ರಲ್ ಪಾಲ್ಸಿಯೊಂದಿಗೆ (cerebral palsy) ಜನಿಸಿದ್ದರು.

    2014ರಲ್ಲಿ ಮೈಕ್ರೋಸಾಫ್ಟ್ ಸಿಇಒ ಆಗಿ ನೇಮಕರಾದ ಸಂದರ್ಭದಿಂದಲೂ ಸತ್ಯ ನಾದೆಲ್ಲಾ ಅವರು ಕಂಪನಿಯ ವಿಶೇಷಚೇತನರ ಬಳಕೆಗೆ ಹೆಚ್ಚು ಅನುಕೂಲಕರವಾಗುವಂತೆ ಉತ್ಪನ್ನಗಳ ವಿನ್ಯಾಸಗೊಳಿಸುವುದಕ್ಕೆ ಒತ್ತು ನೀಡಿದ್ದರು.

    ವಿಶೇಷಚೇತನರಾಗಿದ್ದ ಝೈನ್‌ಗೆ ಕಳೆದ ವರ್ಷ ಸಿಯಾಟಲ್ ಚಿಲ್ಡ್ರನ್ಸ್ ಸೆಂಟರ್ ಫಾರ್ ಇಂಟಿಗ್ರೇಟಿವ್ ಬ್ರೈನ್ ರಿಸರ್ಚ್‌ನ ಭಾಗವಾಗಿ ಪೀಡಿಯಾಟ್ರಿಕ್ ನ್ಯೂರೋಸೈನ್ಸ್‌ನಲ್ಲಿ ಎಂಡೋವ್ಡ್ ಚೇರ್ ಅನ್ನು ಸ್ಥಾಪಿಸಲಾಗಿತ್ತು.

    DAKSHINA KANNADA

    ಬಸ್ಸುಗಳು ಮುಖಾಮುಖಿ; ದಂಪತಿಗೆ ಗಾಯ

    Published

    on

    ನೆಲ್ಯಾಡಿ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಬಸ್ಸ್ ಹಾಗೂ ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸ್ ಅಡ್ಡಹೊಳೆ ಪೆಟ್ರೋಲ್ ಬಂಕ್ ಬಳಿ ಎದುರಾಗಿ ಡಿಕ್ಕಿಹೊಡೆದು ವಾಹನಗಳು ಜಖಂಗೊಂಡಿದೆ.


    ಹಾಸನ ಮೂಲದ ದಂಪತಿಗಳಾದ ನಾಗೇಂದ್ರ ಪ್ರಸಾದ್ (60) ಮತ್ತು ಭಾರತಿ (54) ಎಂಬುವವರಿಗೆ ಪೆಟ್ಟಾಗಿದ್ದು, ಶಿರಾಡಿಯ ಆಂಬಲೆನ್ಸ್‌ ಮೂಲಕ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
    ಇತ್ತೀಚೆಗೆ ಅತೀ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಚಾಲಕನ ಅತಿವೇಗ ಹಾಗೂ ಅಜಾಗರುಕತೆ ಮುಖ್ಯ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ನೆಲ್ಯಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಕಾರಿನಡಿಗೆ ಬಿದ್ದು ಬಾಲಕ ಸಾ*ವು

    Published

    on

    ಕೊಕ್ಕಡ: ಮನೆಯ ಅಂಗಳದಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಬಾಲಕ ಕಾರಿನಡಿಗೆ ಬಿದ್ದು, ಮೃ*ತಪಟ್ಟ ದಾ*ರುಣ ಘಟನೆ ನೆಲ್ಯಾಡಿಯ ಕೊಕ್ಕಡದಲ್ಲಿ ನಿನ್ನೆ (ಅ.1) ನಡೆದಿದೆ.


    ನವಾಫ್ (10) ಮೃ*ತಪಟ್ಟ ಬಾಲಕ. ಮನೆಗೆ ಬಂದಿದ್ದ ಅತಿಥಿಗಳು ಹೊರಡುವ ಸಂದರ್ಭದಲ್ಲಿ ಕಾರನ್ನು ಹಿಂದಕ್ಕೆ ತೆಗೆಯುವಾಗ , ಹಿಂಬದಿಯೇ ನಿಂತಿದ್ದ ನವಾಫ್ ಕಾರಿ*ನಡಿಗೆ ಬಿದ್ದದ್ದಾನೆ. ಅವನ ಮೇಲೆಯೇ ಕಾರು ಹರಿದ ಪರಿಣಾಮವಾಗಿ ತಲೆ ಹಾಗೂ ಕಾಲಿಗೆ ಗಂ*ಭೀರ ಪೆ*ಟ್ಟಾಗಿ ಸಾವ*ನ್ನಪ್ಪಿದ್ದಾನೆ.
    ನವಾಫ್ ಕಾರಿನ ಹಿಂದೆ ನಿಂತಿರುವುದು ಯಾರಿಗೂ ತಿಳಿಯದ ಕಾರಣ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃ*ತ ದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯ ಶವಗಾರ ಕೊಠಡಿಯಲ್ಲಿ ಇಡಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಆತಂಕದಲ್ಲಿ ಕಾಂತಾರ 2 ಚಿತ್ರ ತಂಡ..! ಇಲ್ಲಿದೆ ಕಾರಣ..!

    Published

    on

    ಮಂಗಳೂರು : ಸಿನೆಮಾ, ನಾಟಕಗಳಲ್ಲಿ ದೈವಾರಾಧನೆ ಪ್ರದರ್ಶಿಸಲು ವಿರೋಧ ವ್ಯಕ್ತಪಡಿಸಿರುವ ದೈವ ನರ್ತಕರ ಸಮುದಾಯದ ಎಚ್ಚರಿಕೆಯಿಂದ ಕಾಂತಾರ 2 ಗೂ ಸಂಚಕಾರ ಎದುರಾಗಿದೆ. ದೇಶಾದ್ಯಂತ ಭರ್ಜರಿ ಯಶಸ್ಸು ಕಂಡಿದ್ದ ಕಾಂತಾರ ಸಿನೆಮಾದ ಪಾರ್ಟ್‌ 2 ಶೂಟಿಂಗ್ ಈಗಾಗಲೇ ಆರಂಭಗೊಂಡಿದೆ. ನಿರ್ದೇಶಕ ಮತ್ತು ನಾಯಕ ನಟ ರಿಷಭ್ ಶೆಟ್ಟಿ ಸಿನೆಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ, ಈ ನಡುವೆ ದೈವಾರಾಧಕರು ಸಿನಿಮಾ ಹಾಗೂ ನಾಟಕದಲ್ಲಿ ದೈವಾರಾಧನೆ ಪ್ರದರ್ಶನ ಮಾಡಿದ್ರೆ ಚಿತ್ರ ಮಂದಿರಕ್ಕೆ ನುಗ್ಗಿ ತಡೆಯುವುದಾಗಿ ಎಚ್ಚರಿಕೆ ನೀಡಿದೆ.

    ಇತ್ತೀಚೆಗೆ ಸಿನೆಮಾ ಹಾಗೂ ನಾಟಕದಲ್ಲಿ ದೈವಾರಾಧನೆಯ ಬಳಕೆ ಜಾಸ್ತಿಯಾಗಿದ್ದು, ಈ ಬಗ್ಗೆ ದೈವ ನರ್ತಕರ ಸಮುದಾಯ ಆಕ್ರೋಶಗೊಂಡಿದೆ. ನಮ್ಮ ಕಾನೂನಾತ್ಮಕ ಹೋರಾಟಕ್ಕೆ ನ್ಯಾಯ ಸಿಗುತ್ತಿಲ್ಲ ಎಂದು ಅಸಹಾಯಕತೆಯನ್ನೂ ತೋಡಿಕೊಂಡಿದೆ. ಈ ನಡುವೆ ಪೊಲೀಸರಿಗೂ ದೂರು ನೀಡಿ ಇದನ್ನು ತಡೆಯುವಂತೆ ಮನವಿ ಮಾಡಿದೆ. ಆದ್ರೆ, ಇದ್ಯಾವುದಕ್ಕೂ ಬೆಲೆ ಸಿಗದೇ ಇರುವ ಕಾರಣ ಇದೀಗ ಸಿನೆಮಾ ಪ್ರದರ್ಶನವಾದ್ರೆ ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದೆ. ನ್ಯಾಯಯುತವಾಗಿ ನಾವು ಕೇಳಿರುವ ಬೇಡಿಕೆಗೆ ಯಾವುದೇ ಸ್ಪಂದನೆ ಸಿಗದ ಕಾರಣ ಇಂತಹ ನಿರ್ಧಾರ ಅನಿವಾರ್ಯ ಎಂದು ದೈವ ನರ್ತಕ ಸಮುದಾಯದವರು ಹೇಳಿದ್ದಾರೆ.


    ಕಾಂತಾರ ಸಿನೆಮಾ ರಿಲೀಸ್ ಆಗಿ ಅಪಾರ ಜನ ಮನ್ನಣೆ ಪಡೆದುಕೊಂಡ ಬಳಿಕ ಅದು ಹಲವು ಭಾಷೆಗಳಲ್ಲಿ ಡಬ್ ಆಗಿತ್ತು. ಈ ಸಿನೆಮಾ ರಿಷಭ್ ಶೆಟ್ಟಿ ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನೂ ತಂದು ಕೊಟ್ಟಿತ್ತು. ಇದೀಗ ಕಾಂತಾರ ಸಿನೆಮಾದ ಪ್ರೀಕ್ವೆಲ್‌ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆದ್ರೆ ದೈವಾರಾಧಕರು ನೀಡಿರುವ ಎಚ್ಚರಿಕೆಯಿಂದ ಚಿತ್ರ ಬಿಡುಗಡೆಯ ಬಗ್ಗೆ ಕೊಂಚ ಆತಂಕ ಕಾಡಿದೆ.

    Continue Reading

    LATEST NEWS

    Trending