Connect with us

    LATEST NEWS

    ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಸಿಎಂ ಸಿದ್ಧರಾಮಯ್ಯ ಖಡಕ್ ವಾರ್ನಿಂಗ್

    Published

    on

    ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳದ ಹೆಚ್ಚಳದ ಬೆನ್ನಲ್ಲೇ ಎಚ್ಚೆತ್ತಿರುವ ರಾಜ್ಯ ಸರ್ಕಾರವು ಇದೀಗ ಮೈಕ್ರೋ ಫೈನಾನ್ಸ್ ನಿಯಂತ್ರಣಕ್ಕೆ ಹೊಸ ಪ್ಲಾನ್ ಮಾಡಿದೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಸಂಜೆ 5 ಗಂಟೆ ಮೇಲೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ವಸೂಲಾತಿಗೆ ಹೋಗುವಂತಿಲ್ಲ ಹಾಗೂ RBI ನಿಯಮದಂತೆ ಶೇ 17.07 ಕ್ಕಿಂತ ಹೆಚ್ಚು ಬಡ್ಡಿ ತೆಗೆದುಕೊಳ್ಳುವಂತಿಲ್ಲ ಎಂದು ತಿಳಿಸಿದ್ದಾರೆ.

    ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದು, ನಿಮ್ಮ ಸಿಬ್ಬಂದಿ ನಿಯಮ ಬಾಹಿರವಾಗಿ ವಸೂಲಿ ಮಾಡಲಾಗುತ್ತಿದೆ. ಕಾನೂನು ಕೈಗೆತ್ತಿಕೊಳ್ಳಲು ನಿಮಗೆ ಅನುಮತಿ ಕೊಟ್ಟವರು ಯಾರು,? ಸಾಲ ವಸೂಲಿಗೆ ರೌಡಿಗಳನ್ನು ಇಟ್ಟುಕೊಂಡಿದ್ದೀರಾ? ಸಾಲ ತೀರಿಸಲು ಸಾಧ್ಯವೇ ಎಂಬುದನ್ನೂ ಗಮನಿಸದೇ ಒಬ್ಬನೇ ವ್ಯಕ್ತಿಗೆ ನಿಯಮ ಬಾಹಿರವಾಗಿ ಸಾಲ ನೀಡುವುದು ಸರಿಯಲ್ಲ. ಸಾಲಗಾರರ ಮನೆ ಜಪ್ತಿ ಮಾಡುವ ಮೊದಲು ನೀವು ನ್ಯಾಯಾಲಯದಿಂದ ಅನುಮತಿ ಪಡೆದಿದ್ದೀರಾ? ಕಾನೂನು ಕೈಗೆತ್ತಿಕೊಳ್ಳಲು ನಿಮ್ಮ ಸಿಬ್ಬಂದಿಗೆ ಅನುಮತಿ ಕೊಟ್ಟವರು ಯಾರು? ಸಾಲ ವಸೂಲಿಗೆ ರೌಡಿಗಳನ್ನು ಬಳಸುತ್ತಿದ್ದೀರಾ ? ರಿಸರ್ವ್ ಬ್ಯಾಂಕಿನ ಷರತ್ತು ಮತ್ತು ನಿಬಂಧನೆಗಳನ್ನು ಸಾಲಗಾರರಿಗೆ ಅವರ ಆಡು ಭಾಷೆಯಲ್ಲಿ ಅರ್ಥ ಮಾಡಿಸಿದ್ದೀರಾ? RBI ನಿಯಮ ಮೀರಿ ಸಾಲ ಕೊಡುತ್ತಿದ್ದೀರಾ ? ಮರುಪಾವತಿಯ ಕೆಪಾಸಿಟಿ ಗಮನಿಸದೆ ಒಬ್ಬರೇ ಸಾಲಗಾರರಿಗೆ ಪದೇ ಪದೇ ಸಾಲ ಕೊಡುತ್ತಿರುವುದು ಏಕೆ? ಎಂದು ಸಾಲು ಸಾಲು ಪ್ರಶ್ನೆ ಮುಂದಿಟ್ಟಿದ್ದಾರೆ.

    ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಾಲ ಕೊಡಬೇಡಿ ಎಂದು ನಾವು ಯಾರಿಗೂ ಹೇಳಿಲ್ಲ. ಆದರೆ ವಸೂಲಿ ಮಾಡುವಾಗ ಕಿರುಕುಳ ಕೊಡಬಾರದು. ಆರ್ ಬಿಐ ನಿಯಮದ ಪ್ರಕಾರ ನಡೆದುಕೊಳ್ಳಬೇಕು. ಸಂಜೆ 5 ಗಂಟೆ ಬಳಿಕ ವಸೂಲಾತಿಗೆ ಹೋಗಬಾರದು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಸಾಲ ವಸೂಲಾತಿಗೆ ಔಟ್ ಸೋರ್ಸ್, ರೌಡಿಶೀಟರ್ ಗಳನ್ನು, ಗುಂಡಾಗಳನ್ನು ಬಳಸಿಕೊಳ್ಳುವಂತಿಲ್ಲ. ಗಿರವಿ ಅಂಗಡಿಯರು, ಮೈಕ್ರೋ ಫೈನಾನ್ಸ್ ನವರು ಕಾನೂನು ಪಾಲಿಸಬೇಕು. ಕಾಣೂನು ಉಲ್ಲಂಘಿಸುವವ ವಿರುದ್ದ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ಇಂದು ನಡೆದ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ರಾಜ್ಯದಲ್ಲಿ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೆ ತರಲಾಗುವುದು. ಕಾನೂನು ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕಾನೂನು ಸಚಿವ ಹೆಚ್.ಕೆ. ಪಾಟೀಲ್. ಕಂದಾಯ ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    DAKSHINA KANNADA

    ಮಂಗಳೂರು ಉದ್ಯಮಿಗೆ ಭೂ*ಗತ ಪಾ*ತಕಿಯಿಂದ ಬೆ*ದರಿಕೆ ಕರೆ!

    Published

    on

    ಮಂಗಳೂರು : ಹಲವು ವರ್ಷಗಳ ಸದ್ದಡಗಿದ್ದ ಭೂಗತ ಲೋಕದ ಸದ್ದು ಮಂಗಳೂರಿನಲ್ಲಿ ಮತ್ತೆ ಕೇಳಿಸಿದೆ. ವಿದೇಶದಲ್ಲಿ ಕುಳಿತು ಮಂಗಳೂರಿನ ಉದ್ಯಮಿಗೆ ಹಫ್ತಾ ನೀಡುವಂತೆ ಬೆದರಿಕೆ ಕರೆ ಬಂದಿದ್ದು, ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಈ ಹಿಂದೆ ಮಂಗಳೂರು ಕಾಸರಗೋಡು ಜಿಲ್ಲೆಯಲ್ಲಿ ಹಲವಾರು ಅಪರಾಧ ಪ್ರಕರಣಗಳ ಹಿಂದೆ ಇದ್ದ ಕಲಿ ಯೋಗೀಶ ಮತ್ತೆ ಫೀಲ್ಡ್‌ಗೆ ಇಳಿದಿದ್ದಾನೆ ಎಂಬ ಅನುಮಾನ ಮೂಡಿದೆ.

    ರವಿ ಪೂಜಾರಿ, ಬನ್ನಂಜೆ ರಾಜ ಮೊದಲಾದ ಪಾ*ತಕಿಗಳ ಬಂಧನದ ಬಳಿಕ ಬಹುತೇಕ ಎಲ್ಲಾ ಭೂ*ಗತ ಪಾ*ತಕಿಗಳ ಸದ್ದು ಅಡಗಿ ಹೋಗಿತ್ತು. ಹೀಗಾಗಿ ಒಂದಷ್ಟು ಉದ್ಯಮಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟು ತಮ್ಮ ವ್ಯವಹಾರ ನಡೆಸ್ತಾ ಇದ್ರು. ಆದ್ರೆ ಈಗ ಬಜಪೆಯ ಉದ್ಯಮಿ ರೊನಾಲ್ಡ್ ಎಂಬವರಿಗೆ ಕಲಿ ಯೋಗೀಶನ ಹೆಸರಿನಲ್ಲಿ  ಫೋನ್ ಮಾಡಿ ಬೆ*ದರಿಕೆ ಹಾಕಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

    ಇದನ್ನೂ ಓದಿ : ಗೀಸರ್ ರಿಪೇರಿಗಂತ ಬಂದ ರಹಸ್ಯ ಕ್ಯಾಮರಾ ಇಟ್ಟ…ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾತ ಸಿಕ್ಕಿ ಬಿದ್ದಿದ್ಹೇಗೆ?

    ಜನವರಿ 17 ರಂದು ಈ ಕರೆ ಬಂದಿದ್ದು 3 ಕೋಟಿ ನೀಡಬೇಕು, ಇಲ್ಲವಾದಲ್ಲಿ ಮನೆಯವರೆಲ್ಲರನ್ನೂ ಕೊ*ಲ್ಲುವುದಾಗಿ ಬೆ*ದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

     

     

    Continue Reading

    LATEST NEWS

    ಗೀಸರ್ ರಿಪೇರಿಗಂತ ಬಂದ ರಹಸ್ಯ ಕ್ಯಾಮರಾ ಇಟ್ಟ…ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾತ ಸಿಕ್ಕಿ ಬಿದ್ದಿದ್ಹೇಗೆ?

    Published

    on

    ಮಂಗಳೂರು/ ಬೆಂಗಳೂರು : ಇಲ್ಲೊಬ್ಬ ಐನಾತಿ ಖದೀಮ  ಗೀಸರ್‌ ರಿಪೇರಿಗೆಂದು ಬಂದು ರಹಸ್ಯ ಕ್ಯಾಮೆರಾ ಇಟ್ಟು ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ನಡೆದಿರೋದು ಬೆಂಗಳೂರಿನಲ್ಲಿ.

    ಮಹಿಳೆಯ ಸ್ನಾನದ ವೀಡಿಯೋ ರಹಸ್ಯ ಕ್ಯಾಮೆರಾದ ಮೂಲಕ ಸೆರೆ ಹಿಡಿದ ಆತ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ. ಇದರಿಂದ ನೊಂದ ಮಹಿಳೆ ಯೂಟ್ಯೂಬರ್ ಸಹಾಯದಿಂದ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

    ಏನಿದು ಪ್ರಕರಣ?

    ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ  ಮಹಿಳೆ ವಾಸವಾಗಿದ್ದು, ಮನೆಯ ಗೀಸರ್ ಹಾಳಾಗಿತ್ತು. ಹೀಗಾಗಿ ಆಕೆ ಟೆಕ್ನೀಷಿಯನ್‌ಗೆ ಕರೆ ಮಾಡಿದ್ದಾರೆ. ಈ ವೇಳೆ ಗೀಸರ್ ರಿಪೇರಿ ಮಾಡುವ ನೆಪದಲ್ಲಿ ಬಂದ ಖದೀಮ ಮನೆಯ ಗೀಸರ್‌ನಲ್ಲಿ ಯಾರಿಗೂ ಗೊತ್ತಾಗದಂತೆ ರಹಸ್ಯ ಕ್ಯಾಮರಾ ಫಿಕ್ಸ್ ಮಾಡಿ ಹೋಗಿದ್ದಾನೆ. ಬಳಿಕ ಮಹಿಳೆಯ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು ಆಕೆಗೆ ವಾಟ್ಸ್ ಆ್ಯಪ್  ನಂಬರ್‌ಗೆ ಕಳುಹಿಸಿದ್ದಾರೆ. ನೀನು ನನ್ನ ಜೊತೆ ಬರಬೇಕು. ಇಲ್ಲವಾದಲ್ಲಿ  ವೀಡಿಯೋಗಳನ್ನು ಅಪ್ಲೋಡ್ ಮಾಡುವುದಾಗಿ ಹೆದರಿಸಿದ್ದಾನೆ.

    ಇದನ್ನೂ ಓದಿ : ಮನೆಯ ಕಪಾಟಿನಿಂದ ಬಟ್ಟೆಗಳು ಕೆಳಗೆ ಬೀಳುತ್ತದೆಯೇ? ಈ ಟಿಪ್ಸ್‌ ಸಹಾಯದಿಂದ ಕಬೋರ್ಡ್ ಈ ರೀತಿ ಜೋಡಿಸಿ

    ಆತನ ಬೆದರಿಕೆಗೆ ಬೇಸತ್ತ  ಮಹಿಳೆ  ಈ ವಿಚಾರ ಮನೆಯವರಿಗೆ ಹೇಳಲು ಹಿಂಜರಿದಿದ್ದಾರೆ. ಕಾ*ಟ ಹೆಚ್ಚಾಗುತ್ತಿದ್ದಂತೆ ಯೂಟ್ಯೂಬರ್ ಮಂಜೇಶ್ ಯಶಸ್ ಎಂಬವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆಕೆಯ ಕಷ್ಟಕ್ಕೆ ಸ್ಪಂದಿಸಿದ ಯೂಟ್ಯೂಬರ್ ಹಾಗೂ ಅವರ ತಂಡ ದುರ್ಷರ್ಮಿಯ ಪತ್ತೆಗೆ ಬಲೆ ಬೀಸಿದೆ.

    ಖದೀಮ ಸಿಕ್ಕಿ ಬಿದ್ದಿದ್ದು ಹೇಗೆ?

    ಯೂಟ್ಯೂಬರ್ ಹಾಗೂ ಆತನ ತಂಡ ಮಹಿಳೆಯ ಕುಟುಂಬದೊಂದಿಗೆ ಸೇರಿ ಕಾ*ಮುಕನನ್ನು ಹಿಡಿಯಲು ಯೋಜನೆ ರೂಪಿಸುತ್ತಾರೆ. ಮಹಿಳೆಗೆ ಕರೆ ಮಾಡಿದ ಖದೀಮ ಬಸ್ ನಿಲ್ದಾಣದ ಬಳಿ ಬರಲು ಸೂಚಿಸಿದ್ದಾನೆ. ಈ ಸಂದರ್ಭ ಯುವಕರ ತಂಡ ತೆರಳಿ ಆತನನ್ನು ಹಿಡಿದು ಥ*ಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

    Continue Reading

    DAKSHINA KANNADA

    ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ

    Published

    on

    ಮಂಗಳೂರು : ಹಿರಿಯ ಪತ್ರಕರ್ತ  ಗುರುವಪ್ಪ ಬಾಳೆಪುಣಿ  (62)  ಅಲ್ಪಕಾಲದ ಅಸೌಖ್ಯದಿಂದ ಇಂದು(ಜ.26) ಬಾಳೆಪುಣಿಯ ಸ್ವಗೃಹದಲ್ಲಿ ನಿ*ಧನರಾಗಿದ್ದಾರೆ. ಅವರು ಪತ್ನಿ ಹಾಗೂ ಪುತ್ರನನ್ನು ಅ*ಗಲಿದ್ದಾರೆ.

    ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ  26 ವರ್ಷ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರು ಮಿತ್ರ , ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ   ಕರ್ತವ್ಯ ನಿರ್ವಹಿಸಿದ್ದಾರೆ. ಸರಳ, ಸಜ್ಜನಿಕೆಯ ಬಾಳೆಪುಣಿ ಅವರು ಜನಾನುರಾಗಿಯಾಗಿದ್ದರು.

    ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಸೆಹ್ವಾಗ್-ಆರತಿ ದಾಂಪತ್ಯದಲ್ಲಿ ಬಿರುಕು ?

    ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ನಾಡಿಗೆ  ಪರಿಚಯಿಸಿದ ಕೀರ್ತಿ  ಗುರುವಪ್ಪ ಬಾಳೆಪುಣಿ ಅವರದು. ಪತ್ರಿಕೋದ್ಯಮದ ಅವರ ಮೇರು ಸಾಧನೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರ್ಕಾರದ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ರಾಷ್ಟ್ರೀಯ ಮಟ್ಟದ ಸರೋಜಿನಿ ನಾಯ್ಡು ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಅವರ ಮುಡಿಗೇರಿದೆ.

    Continue Reading

    LATEST NEWS

    Trending