Connect with us

LATEST NEWS

ಆಂಧ್ರಪ್ರದೇಶದಲ್ಲೊಂದು ಅಮಾನವೀಯ ಕೃತ್ಯ: ಮೂಢನಂಬಿಕೆಯ ಹೆಸರಲ್ಲಿ ಹೆತ್ತ ಮಕ್ಕಳನ್ನೇ ಬಲಿಕೊಟ್ಟ ದಂಪತಿ..!

Published

on

ಆಂಧ್ರಪ್ರದೇಶದಲ್ಲೊಂದು ಅಮಾನವೀಯ ಕೃತ್ಯ: ಮೂಢನಂಬಿಕೆಯ ಹೆಸರಲ್ಲಿ ಹೆತ್ತ ಮಕ್ಕಳನ್ನೇ ಬಲಿಕೊಟ್ಟ ದಂಪತಿ..!

ಮದನಪಲ್ಲಿ(ಆಂಧ್ರ ಪ್ರದೇಶ) : ಮೂಢನಂಬಿಕೆ, ಮಾಟ, ಮಂತ್ರ ಇತ್ಯಾದಿಗಳನ್ನು ನಂಬಿ ಎಷ್ಟೋ ಮಂದಿ ಸಿಕ್ಕಸಿಕ್ಕದವರ ಮಕ್ಕಳನ್ನು ಕೊಲೆ ಮಾಡಿ ನರಬಲಿ ನೀಡುವ ಘಟನೆಗಳು ಒಂದೆಡೆ ನಡೆಯುತ್ತಿದ್ದರೆ, ತಾವೇ ಹೆತ್ತ ಮಕ್ಕಳನ್ನು ಕೊಲೆ ಮಾಡುವ ಘಟನೆಗಳೂ ವರದಿಯಾಗುತ್ತಿವೆ.

ಅಂಥದ್ದೇ ಒಂದು ಭಯಾನಕ ಘಟನೆ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ. ತಂತ್ರವಾದಿಯ ಮಾತನ್ನು ಕೇಳಿದ ತಾಯಿಯೊಬ್ಬಳು ವಯಸ್ಸಿಗೆ ಬಂದ ತನ್ನ ಹೆಣ್ಣುಮಕ್ಕಳನ್ನು ಕೊಲೆ ಮಾಡಿರುವ ಘಟನೆ ಇದಾಗಿದೆ.

ಆಂಧ್ರ ಪ್ರದೇಶದ ಮದನಪಲ್ಲಿ ನಗರದ ಹೊರವಲಯದಲ್ಲಿರುವ ಶಿವ ನಗರದ  ಶ್ರೀ ಶಿರಡಿ ಸಾಯಿಬಾಬಾ ಅಪಾರ್ಟ್ ಮೆಂಟ್ ನಿವಾಸಿಗಳಾದ ಪದ್ಮಜಾ ಮತ್ತು ಪುರುಷೋತ್ತಮ್ ನಾಯ್ಡು ಎಂಬ ದಂಪತಿಗಳು ಈ ಕೃತ್ಯ ಎಸಗಿದ್ದು ಈ ಇಬ್ಬರೂ ಉನ್ನತ ಶಿಕ್ಷಣ ಪಡೆದವರಾಗಿದ್ದಾರೆ.

ಪದ್ಮಜಾ ಖಾಸಗಿ ಶಾಲೆಯಲ್ಲಿ ಉಪಪ್ರಾಂಶುಪಾಲೆಯಾಗಿದ್ದರೆ ಪುರುಷೋತ್ತಮ್ ಸರ್ಕಾರಿ ಶಾಲೆಯೊಂದರಲ್ಲಿ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದನು.

ಇವರ ಹಿರಿಯ ಮಗಳು ಅಲೈಕ್ಯ (27) ಭೋಪಾಲ್ ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದರು. ಕಿರಿಯ ಪುತ್ರಿ ಸಾಯಿ ದಿವ್ಯಾ (22) ಬಿಬಿಎ ಮಾಡಿದ್ದಲ್ಲದೆ ಮುಂಬೈನ ಎಆರ್ ರಹಮಾನ್ ಮ್ಯೂಸಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದರು. ಈಕೆ ಕೋವಿಡ್ ಲಾಕ್ ಡೌನ್ ನಂತರ ಮನೆಗೆ ಮರಳಿದ್ದರು.

ಕೋವಿಡ್ -19 ಕಂಡುಬಂದ ನಂತರದಲ್ಲಿ ಹೆಚ್ಚಿನ ಸಮಯವನ್ನು ತಮ್ಮ ಮನೆಯಲ್ಲೇ ಕಳೆಯುತ್ತಿದ್ದ ಪದ್ಮಜಾ-ಪುರುಷೋತ್ತಮ್ ದಂಪತಿಗಳು ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುತ್ತಿದ್ದರು.

ನಿನ್ನೆ (ಜನವರಿ 24) ಮನೆಯಿಂದ ವಿಚಿತ್ರವಾದ ಮತ್ತು ದೊಡ್ಡ ಶಬ್ದಗಳನ್ನು ಕೇಳಿದ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದರು.

ಆರಂಭದಲ್ಲಿ ದಂಪತಿಗಳು ಪೊಲೀಸರನ್ನು ಮನೆಗೆ ಪ್ರವೇಶಿಸದಂತೆ ತಡೆದರು. ಪೊಲೀಸರು ಮನೆಯೊಳಗೆ ಪ್ರವೇಶಿದ ವೇಳೆ ಒಬ್ಬ ಯುವತಿ ಪೂಜಾಕೋಣೆಯಲ್ಲಿ ಶವವಾಗಿದ್ದರೆ ಇನ್ನೊಬ್ಬಳು ಇನ್ನೊಂದು ಕೋಣೆಯಲ್ಲಿ ಹೆಣವಾಗಿ ಕಂಡುಬಂದಿದ್ದಾಳೆ.

ಎರಡೂ ಶವಗಳ  ದೇಹಕ್ಕೆ ಕೆಂಪು ಬಣ್ಣದ ಬಟ್ಟೆ ಸುತ್ತಲಾಗಿದ್ದು ಅವುಗಳ ಸುತ್ತ ಕೆಲವು ಪೂಜಾ ಸಾಮಗ್ರಿಗಳನ್ನು ಇರಿಸಲಾಗಿತ್ತು.

“ಪ್ರಾಥಮಿಕತನಿಖೆಯ ಸಮಯದಲ್ಲಿ, ದಂಪತಿಗಳು ತಮ್ಮ ಹೆಣ್ಣುಮಕ್ಕಳು ಮತ್ತೆ ಜೀವ ಪಡೆಯುತ್ತಾರೆಎಂದು ಹೇಳುವ ಮೂಲಕ ಶವಗಳನ್ನು ಒಂದು ದಿನ ಮನೆಯಲ್ಲಿಇರಿಸಲು ಒತ್ತಾಯಿಸಿದ್ದರು.” ಮದನಪಲ್ಲಿ ಡಿಎಸ್ಪಿ ರವಿ ಮನೋಹರ ಚಾರಿ ಹೇಳಿದ್ದಾರೆ.

andrapradesh
ಮಕ್ಕಳನ್ನು ಬಲಿ ಕೊಟ್ಟ ಆರೋಪಿ ದಂಪತಿ

“ಕಲಿಯುಗವು ಇಂದು ರಾತ್ರಿ ಕೊನೆಗೊಳ್ಳಲಿದ್ದು, ಸತ್ಯಯುಗದ ಆರಂಭ ನಾಳೆ ಆಗಲಿದೆ. ಆ ಸಮಯಕ್ಕೆ ಸರಿಯಾಗಿ ಈ ಇಬ್ಬರೂ ಹೆಣ್ಣುಮಕ್ಕಳು ಪುನರ್ಜನ್ಮ ಪಡೆಯಲಿದ್ದಾರೆ ಹಾಗಾಗಿ ಇವರನ್ನು ಬಲಿ ನೀಡುವಂತೆ ದೈವ ಸಂದೇಶ ನೀಡಿದೆ” ಎಂದು ದಂಪತಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಇದೀಗ ಸಾಕಷ್ಟು ಮನವೊಲಿಕೆಯ ನಂತರ ಎರಡೂ ಶವಗಲನ್ನು ಮರಣೋತ್ತರ ಪರೀಕ್ಷೆಗೆ ವರ್ಗಾಯಿಸಲಾಗಿದ್ದು ವಿಚಾರಣೆಗಾಗಿ ದಂಪತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದೆ.

ಮೂಢನಂಬಿಕೆ, ಮಾಟ, ಮಂತ್ರ ಇತ್ಯಾದಿಗಳನ್ನು ನಂಬಿ ಎಷ್ಟೋ ಮಂದಿ ಸಿಕ್ಕಸಿಕ್ಕದವರ ಮಕ್ಕಳನ್ನು ಕೊಲೆ ಮಾಡಿ ನರಬಲಿ ನೀಡುವ ಘಟನೆಗಳು ಒಂದೆಡೆ ನಡೆಯುತ್ತಿದ್ದರೆ, ತಾವೇ ಹೆತ್ತ ಮಕ್ಕಳನ್ನು ಕೊಲೆ ಮಾಡುವ ಘಟನೆಗಳೂ ವರದಿಯಾಗುತ್ತಿವೆ.

ಅಂಥದ್ದೇ ಒಂದು ಭಯಾನಕ ಘಟನೆ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ. ತಂತ್ರವಾದಿಯ ಮಾತನ್ನು ಕೇಳಿದ ತಾಯಿಯೊಬ್ಬಳು ವಯಸ್ಸಿಗೆ ಬಂದ ತನ್ನ ಹೆಣ್ಣುಮಕ್ಕಳನ್ನು ಕೊಲೆ ಮಾಡಿರುವ ಘಟನೆ ಇದಾಗಿದೆ.

ಅನಕ್ಷರಸ್ಥರು, ಹಳ್ಳಿಗಾಡಿನಲ್ಲಿ ವಾಸಿಸುವವರು ಇಂಥದ್ದೊಂದು ಮೌಢ್ಯಕ್ಕೆ ಗುರಿಯಾಗುತ್ತಾರೆ ಎಂಬ ನಂಬಿಕೆ ಇದೆ.

ಆದರೆ ಅಚ್ಚರಿಯ ವಿಷಯವೆಂದರೆ, ಕಾಲೇಜೊಂದರ ಪ್ರಾಂಶುಪಾಲರಾಗಿದ್ದವರ ಪತ್ನಿಯೊಬ್ಬರು ಇಂಥದ್ದೊಂದು ಕೃತ್ಯ ಎಸಗಿದ್ದಾರೆ. ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪುರುಷೋತ್ತಮ ನಾಯ್ಡು ಅವರ ಪತ್ನಿಯ ಕೆಲಸವಿದು.

ಈಕೆಯ ಮೌಢ್ಯಕ್ಕೆ ಬಲಿಯಾದವರು 22 ಮತ್ತು 27 ವರ್ಷ ವಯಸ್ಸಿನ ಅಲೈಖ್ಯಾ ಮತ್ತು ಸಾಯಿ ದಿವ್ಯಾ ಸಹೋದರಿಯರು.

ಈ ಹೆಣ್ಣುಮಕ್ಕಳ ಮೃತದೇಹ ಬೆತ್ತಲೆಯಾಗಿ ಸಿಕ್ಕಿದೆ. ಇದರರ್ಥ ಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ ಈ ‘ಮಹಾತಾಯಿ’ ನಂತರ ಡಂಬಲ್ಸ‌ನಿಂದ ಹೊಡೆದು ಹತ್ಯೆಮಾಡಿದ್ದಾಳೆ.

ಮದನಪಲ್ಲಿ ಶಿವಾಲಯಂ ದೇವಾಲಯದ ರಸ್ತೆ ಬಳಿ ಘಟನೆ ನಡೆದಿದೆ. ಭಾನುವಾರ ರಾತ್ರಿ ಪೂಜೆ ಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ ದಂಪತಿ ಕೊಲೆ ಮಾಡಿದ್ದಾರೆ.

ಪೊಲೀಸರು ಬಂದು ವಿಚಾರಿಸಿದಾಗ ನನ್ನ ಮಕ್ಕಳು ಮೃತಪಟ್ಟಿಲ್ಲ. ಅವರನ್ನು ಮುಟ್ಟಬೇಡಿ. ನಾಳೆ ಅವರಿಗೆ ಜೀವ ಬರುತ್ತದೆ ಎಂದು ಹೇಳಿದ್ದಾಳೆ ಈ ತಾಯಿ.

ನಂತರ ಕಪಟ ಸ್ವಾಮಿಯೊಬ್ಬನ ಮಾತು ನಂಬಿ ಇಂತಹ ಕೃತ್ಯವೆಸಗಿರುವುದಾಗಿ ಪೊಲೀಸರಿಗೆ ತಿಳಿದುಬಂದಿದ್ದು, ತನಿಖೆ ಕೈಗೊಂಡಿದ್ದಾರೆ.

LATEST NEWS

238 ಬಾರಿ ಸೋತ ಅಭ್ಯರ್ಥಿ ಮತ್ತೆ ಲೋಕಸಭಾ ಅಖಾಡಕ್ಕೆ!

Published

on

ಮಂಗಳೂರು ( ಮೆಟ್ಟೂರು ) : ಚುನಾವಣೆ ಅಂದ ಮೇಲೆ ಅಭ್ಯರ್ಥಿ ಹೇಗಾದ್ರೂ ಗೆಲ್ಲಲೇ ಬೇಕು ಅಂತ ಪ್ರಯತ್ನ ಮಾಡ್ತಾನೆ. ಹಾಗಂತ ಎರಡು ಮೂರು ಸ್ಪರ್ಧೆ ಮಾಡಿ ಗೆಲುವು ಸಿಕ್ಕಿಲ್ಲಾ ಅಂದ್ರೆ ಸುಮ್ಮನೆ ಮನೇಲಿ ಕೂರ್ತಾನೆ. ಆದ್ರೆ ಅದೊಂದು ಅಭ್ಯರ್ಥಿ ಮಾತ್ರ ಚುನಾವಣೆಯಲ್ಲಿ ಬರೋಬ್ಬರಿ 238 ಬಾರಿ ಸ್ಪರ್ಧೆ ಮಾಡಿ ಸೋತರೂ ಮತ್ತೆ ಈ ಬಾರಿ ಲೋಕಸಭಾ ಚುನಾವಣ ಕಣಕ್ಕೆ ಇಳಿದಿದ್ದಾರೆ.
ಚುನಾವಣೆಗೆ ನಿಲ್ಲೋದೇ ಸೋಲೋದಿಕ್ಕೆ ಅನ್ನೋ ರೀತಿ ನಿರಂತರವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮೂಲಕ 65 ವಯಸ್ಸಿನ ಪದ್ಮರಾಜನ್‌ ಎಂಬವರು ಈ ಭಾರಿ ಮತ್ತೆ ಕಣಕ್ಕಿಳಿದಿದ್ದಾರೆ.

ಚುನಾವಣೆಯಲ್ಲಿ ಭಾಗವಹಿಸುವುದು ಮುಖ್ಯ!

ತಮಿಳುನಾಡಿನ ಮೆಟ್ಟೂರು ವಿಧಾನಸಭಾ ಕ್ಷೇತ್ರದಿಂದ 1988 ರಲ್ಲಿ ಚುನಾವಣೆಯಲ್ಲಿ ಪದ್ಮರಾಜನ್‌ ತಮ್ಮ ಮೊದಲ ಸ್ಪರ್ಧೆ ಆರಂಭಿಸಿದ್ದಾರೆ. ಸಾಮಾನ್ಯ ಟೈರ್‌ ರಿಪೇರಿ ಅಂಗಡಿ ಮಾಲೀಕರಾಗಿರುವ ಕೆ. ಪದ್ಮರಾಜನ್‌ ಅಂದಿನಿಂದ ಇಂದಿನವರೆಗೆ ಸರಿ ಸುಮಾರು 238 ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಚುನಾವಣೆಯ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಕಟ್ಟಿದ ಲಕ್ಷಾಂತರ ರೂಪಾಯಿ ಠೇವಣಿಯನ್ನೇ ಇವರು ಕಳೆದುಕೊಂಡಿದ್ದಾರೆ. ಆದರೆ ಅದೆಷ್ಟೇ ಸಲ ಸೋತರು.. ಠೇವಣಿ ಕಳೆದುಕೊಂಡರು ಕೂಡ ಇವರ ತಲೆ ಕೆಡಿಸಿಕೊಂಡಿಲ್ಲ.

ಎಲ್ಲಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವನ್ನು ಬಯಸುತ್ತಾರೆ. ಆದರೆ ನಾನು ಹಾಗೆ ಅಲ್ಲ ನನಗೆ ಚುನಾವಣೆಯಲ್ಲಿ ಭಾಗವಹಿಸುವುದೇ ಮುಖ್ಯ ಅಂತಾರೆ ಪದ್ಮರಾಜನ್. ಏಪ್ರಿಲ್ 19 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸಂಸದೀಯ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.

ಕಿಂಗ್ ಆಫ್ ದಿ ಎಲೆಕ್ಷನ್ ಬಿರುದು :

ಸ್ಥಳೀಯಾಡಳಿತದ ಚುನಾವಣೆಯಿಂದ ಹಿಡಿದು ರಾಷ್ಟ್ರಪತಿ ಚುನಾವಣೆಗೂ ಇವರು ಸ್ಪರ್ಧೆ ಮಾಡಿದ್ದಾರೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಘಟಾನುಘಟಿ ನಾಯಕರುಗಳಾದ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ, ರಾಹುಲ್ ಗಾಂಧಿ ಹೀಗೆ ಅನೇಕರ ವಿರುದ್ಧ ಇವರು ಸ್ಪರ್ಧೆ ಮಾಡಿ ಸೋತಿದ್ದಾರೆ. ಹೀಗಾಗಿ ಇವರಿಗೆ ಕಿಂಗ್ ಆಪ್‌ ದಿ ಎಲೆಕ್ಷನ್‌ ಅಂತಾನೂ ಬಿರುದು ಸಿಕ್ಕಿದೆ.

ಸೋತರೂ ಗೆಲುವು :
ನಿರಂತರ ಚುನಾವಣೆಯಲ್ಲಿ ಸೋತಿರುವ ಪದ್ಮರಾಜನ್ ಅವರು ಒಂದು ವಿಚಾರದಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ಮೂವತ್ತೈದು ವರ್ಷಗಳಿಂದ ಸೋಲುವ ಮೂಲಕ ಈ ಗೆಲುವು ತಂದುಕೊಂಡಿದ್ದಾರೆ. ಸೋಲಿನ ಮೂಲಕವೇ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ಸೇರಿಸಿಕೊಳ್ಳುವ ಮೂಲಕ ಆ ಗೆಲುವು ಇವರಿಗೆ ಸಿಕ್ಕಿದೆ.

ಈ ಬಾರಿ ಮತ್ತೆ ಲೊಕಸಭಾ ಚುನಾವಣೆಯ ಕಣಕ್ಕಿಳಿದಿರುವ ಪದ್ಮರಾಜನ್ ಅವರು ನನಗೆ ಸೋಲಿನಲ್ಲೇ ಖುಷಿ ಇದೆ. ಹಾಗೊಂದು ವೇಳೆ ಎಲ್ಲಿಯಾದ್ರೂ ಜನ ನನ್ನನ್ನು ಗೆಲ್ಲಿಸಿದ್ರೆ ಹೃದಯಾಘಾತವಾಗಿ ಉಸಿರೇ ನಿಂತು ಹೋಗಬಹುದು ಎಂದು ತಮಾಷೆಯಾಗಿ ಹೇಳುತ್ತಾರೆ. ಹೀಗಾಗಿ ನನ್ನ ಉಸಿರು ಇರಬೇಕು ಅಂದ್ರೆ ನಾನು ಸದಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಹಾಗೂ ಸೋಲಬೇಕು ಅಂತಾರೆ.

Continue Reading

LATEST NEWS

ಪ್ರಧಾನಿ ಕಾರಿನ ನೋಂದಣಿಯನ್ನು ವಿಸ್ತರಿಸಲು ಅಸಾಧ್ಯ ಎಂದ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ; ಕಾರಣ ಏನು?

Published

on

ನವದೆಹಲಿ : ಪ್ರಧಾನಿ ಕಾರಿನ ನೋಂದಣಿಯನ್ನು ವಿಸ್ತರಿಸಲು ಅಸಾಧ್ಯ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ( NGT ) ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಮೂರು ಡಿಸೇಲ್‌ ಕಾರುಗಳ ನೋಂದಣಿ ವಿಸ್ತರಿಸುವಂತೆ ಎಸ್‌ಪಿಜಿ (SPG) ಮನವಿ ಸಲ್ಲಿಸಿತ್ತು.

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಹೇಳಿದ್ದೇನು?

“ಈ ಮೂರು ಕಾರುಗಳು ಸಾಮಾನ್ಯವಾಗಿ ಬಳಸಲ್ಪಡದ ವಿಶೇಷ ಉದ್ದೇಶದ ವಾಹನಗಳಾಗಿವೆ. ಈ ವಾಹನಗಳು ಹತ್ತು ವರ್ಷಗಳಲ್ಲಿ ಬಹಳ ಕಡಿಮೆ ಚಲಿಸಿವೆ ಮತ್ತು ಪ್ರಧಾನಿ ಅವರ ಭದ್ರತೆಯ ನಿರ್ದಿಷ್ಟ ಉದ್ದೇಶಕ್ಕಾಗಿ ಅಗತ್ಯವಾಗಿವೆ. ಆದರೆ ಸುಪ್ರೀಂ ಕೋರ್ಟ್ 2018ರ ಅಕ್ಟೋಬರ್‌ 29ರಂದು ನೀಡಿದ ಆದೇಶದಂತೆ ಆ ವಾಹನಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಮನವಿಯನ್ನು ತಿರಸ್ಕರಿಸಲಾಗಿದೆ” ಎಂದು ಎನ್‌ಜಿಟಿ ಹೇಳಿದೆ.

ಎಸ್‌ಪಿಜಿ ಈ ಕಾರುಗಳಿಗೆ ಅನುಮತಿ ಕೇಳಿದ್ಯಾಕೆ?

ಈ ವಾಹನಗಳ ವಿನ್ಯಾಸ ಮತ್ತು ತಾಂತ್ರಿಕ ಹಾಗೂ ಕಾರ್ಯತಂತ್ರಗಳು ಬಹಳಷ್ಟು ವಿಶೇಷವಾಗಿದೆ. ಇಂತಹ ವಾಹನಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವುದಿಲ್ಲ. ಭದ್ರತೆಯ ದೃಷ್ಟಿಯಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿರುವ ಕಾರಣ ಈ ಕಾರುಗಳಿಗೆ ಇನ್ನೂ ಐದು ವರ್ಷಗಳ ಕಾಲ ನೊಂದಣಿಯನ್ನು ವಿಸ್ತರಿಸಿ ಎಂದು ಎಸ್‌ಪಿಜಿ ಕೋರಿಕೆ ಸಲ್ಲಿಸಿತ್ತು.

ದೆಹಲಿ ಎನ್‌ಸಿಆರ್‌ನಲ್ಲಿನ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಕ್ರಮವಾಗಿ ಎನ್‌ಜಿಟಿ ಮತ್ತು ಸುಪ್ರೀಂ ಕೋರ್ಟ್ ಈ ಆದೇಶಗಳನ್ನು ಹೊರಡಿಸಿದ್ದವು. ಎನ್‌ಜಿಟಿ 2015ರ ಏಪ್ರಿಲ್‌ನಲ್ಲಿ ದೆಹಲಿ ಎನ್‌ಸಿಆರ್‌ ರಸ್ತೆಗಳಲ್ಲಿ 10 ವರ್ಷಕ್ಕಿಂತ ಹಳೆಯದಾದ ಎಲ್ಲ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. 10 ವರ್ಷಕ್ಕಿಂತ ಹಳೆಯದಾದ ಯಾವುದೇ ಡೀಸೆಲ್ ವಾಹನವನ್ನು ನೋಂದಾಯಿಸದಂತೆ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.

 ಇದನ್ನೂ ಓದಿ…238 ಬಾರಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಮತ್ತೆ ಲೋಕಸಭಾ ಅಖಾಡಕ್ಕೆ…!

2013ರಲ್ಲಿ ತಯಾರಿಸಿದ ಮತ್ತು 2014ರ ಡಿಸೆಂಬರ್‌ನಲ್ಲಿ ನೋಂದಾಯಿಸಲಾದ ಮೂರು ರೆನಾಲ್ಟ್ ಎಂಡಿ -5 (Renault MD-5) ವಿಶೇಷ ಶಸ್ತ್ರಸಜ್ಜಿತ ವಾಹನಗಳು 9 ವರ್ಷಗಳಲ್ಲಿ ಕ್ರಮವಾಗಿ ಸುಮಾರು 6,000 ಕಿ.ಮೀ., 9,500 ಕಿ.ಮೀ. ಮತ್ತು 15,000 ಕಿ.ಮೀ. ಕ್ರಮಿಸಿವೆ.

Continue Reading

bengaluru

ಚುನಾವಣೆ ಗೆಲ್ಲೋಕೆ ನನ್ನ ಹೆ*ಣ ಬೀಳಿಸೋಕು ಬಿಜೆಪಿಯವ್ರು ಸಿದ್ಧರಿದ್ದಾರೆ; ಜೀವ ಬೆದರಿಕೆ ಪತ್ರ ಹಿಡಿದು ಕಿಡಿಕಾರಿದ ಪ್ರಿಯಾಂಕ್ ಖರ್ಗೆ

Published

on

ಬೆಂಗಳೂರು : ಸದ್ಯ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈ ನಡುವೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆ*ದರಿಕೆ ಪತ್ರ ಬಂದಿದೆ. ಸ್ವತ: ಈ ಬಗ್ಗೆ ಪ್ರಿಯಾಂಕ ಖರ್ಗೆ ಅವರೇ ಹೇಳಿದ್ದಾರೆ.

 

ಎನ್ ಕೌಂಟರ್ ಬೆ*ದರಿಕೆ:

ಭಾರತೀಯ ಜನತಾ ಪಾರ್ಟಿಯವರು ಗಲಭೆ ಸೃಷ್ಟಿ ಮಾಡಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆ*ಣ ಬೀಳಿಸಿಯಾದರೂ ಚುನಾವಣೆ ಗೆಲ್ಲುವ ಯೋಜನೆಯಲ್ಲಿದ್ದಾರೆ. ಅಲ್ಲದೆ, ತನಗೆ ಮತ್ತೊಂದು ಜೀವ ಬೆ*ದರಿಕೆ ಪತ್ರ ಬಂದಿದೆ. ಅದರಲ್ಲಿ ತನ್ನನ್ನು ಎನ್ಕೌಂಟರ್ ಮಾಡುವುದಾಗಿ ಬೆ*ದರಿಕೆ ಹಾಕಲಾಗಿದೆ. ಫಿನ್​ಲ್ಯಾಂಡ್​ನಿಂದ ಪತ್ರ ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮಗೆ ಬಂದಿರುವ ಜೀವ ಬೆದರಿಕೆ ಪತ್ರ ಓದಿದರು.

“ಪಂಚಾಮೃತದಿಂದ ಪೂಜೆ ಮಾಡಿದರೂ ನಿನ್ನ ಜಾತಿ ಬೇರೆಯಾಗುವುದಿಲ್ಲ. ಎಂತ ವೇಷ ಭೂಷಣ ಹಾಕಿದರೂ ನಿನ್ನ ಜಾತಿ ಬದಲಾಗುವುದಿಲ್ಲ. ಮಂತ್ರಿಯಾಗು, ರಾಜನಾಗೂ, ನಿನ್ನ ಸೊಕ್ಕು ಹೊಲೆಯ-ಮಾದಿಗ ಓಣಿಯಲ್ಲಿ ನಡೆಯುತ್ತೆ” ಎಂದು ಪತ್ರದಲ್ಲಿ ಅಶ್ಲೀಲ ಪದ ಬಳಸಿದ್ದಾರೆ. ಖಾಕಿಯಾದರೂ, ಖಾದಿಯಾದರೂ, ಯಾರಿಂದಲಾದರೂ ನಿನ್ನನ್ನು ಎನ್ಕೌಂ*ಟರ್ ಮಾಡುವುದು ಸತ್ಯ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದರು.

ಬೆದರಿಕೆ ಸಂಬಂಧ ಮಾರ್ಚ್ 13 ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದೇನೆ. ವಿಕಾಸೌಧದಲ್ಲಿರುವ ನನ್ನ ಕಚೇರಿಗೆ ಕಲಬುರಗಿಯಿಂದಲೇ ಪತ್ರ ಬಂದಿದೆ. ಹೆದರಿಸುವುದು ಅಥವಾ ಬೆದರಿಸಲು ಬಂದರೆ ಅದಕ್ಕೆಲ್ಲ ನಾವು ಹೆದರುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

Continue Reading

LATEST NEWS

Trending