LATEST NEWS
ರಾಜೇಶ್ ಭಟ್ ಪ್ರಕರಣ: ‘ತನಿಖಾಧಿಕಾರಿಯಿಂದ ಸಂತ್ರಸ್ತೆಗೆ ಮಾನಸಿಕ ಕಿರುಕುಳ’ ಗಂಭೀರ ಆರೋಪ
Published
3 years agoon
By
Adminಮಂಗಳೂರು: ಕಾನೂನು ವಿದ್ಯಾರ್ಥಿನಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತನಿಖಾಧಿಕಾರಿಯೇ ಸಂತ್ರಸ್ತೆಗೆ ಬೈಯ್ದು, ಮಾನಸಿಕ ಕಿರುಕುಳ ಕೊಟ್ಟು ತೇಜೋವಧೆ ಮಾಡುತ್ತಿದ್ದಾರೆಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಗಂಭೀರ ಆರೋಪ ಮಾಡಿದ್ದಾರೆ.
ಜೊತೆಗೆ ಪ್ರಕರಣದ ತನಿಖೆಯನ್ನು ಡಿಸಿಪಿ ಹರಿರಾಂ ಶಂಕರ್‌ಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣದ ತನಿಖೆ ಆರಂಭವಾದಾಗಿನಿಂದ ಮಂಗಳೂರು ನಗರ ಪೊಲೀಸ್ ಆಯುಕ್ತ 4 ತಂಡ ರಚಿಸಿದ್ದೇವೆ ಎಂದು ಹೇಳಿಕೆ ಕೊಡುತ್ತಾರೆ.
ಪ್ರಕರಣದ ತನಿಖಾಧಿಕಾರಿ ಎಸಿಪಿ ರಂಜಿತ್ ಬಂಡಾರು ಸಂತ್ರಸ್ತೆಯನ್ನು ತನಿಖೆಗೆ ಕರೆದಾಗ ಹೇಳುತ್ತಾರೆ ‘ನೀನು ಯಾಕೆ ಹೋರಾಟ ಮಾಡುತ್ತಿಯಾ, ಆರೋಪಿಯ ಹೆಂಡತಿ ಚಿಂತೆಯಲ್ಲಿದ್ದಾರೆಂದು’ ಕೇಳುತ್ತಾರೆ.
ಈವರೆಗೆ ತನಿಖಾಧಿಕಾರಿಯವರ ತಂಡ ನಮಗೆ ಉಪದ್ರವ ಮಾಡುವುದು ಬಿಟ್ಟು ಏನೂ ಮಾಡಿಲ್ಲ ಎಂದರು.
ನಾವು ಪ್ರತಿಭಟನೆ ನಡೆಸುವಾಗ ನಮಗೆ ನೀತಿ ಸಂಹಿತೆ ಹೆಸರಿನಲ್ಲಿ ಅವಕಾಶವಿಲ್ಲ, ಆದರೆ ಉಳಿದಿರುವವರು ಈ ಸಮಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಅವರಿಗೆ ಯಾಕೆ ನೀವು ಅನುಮತಿ ನೀಡುತ್ತಿದ್ದೀರಿ. ಕಾನೂನು ನಮ್ಮ ಪರವಾಗಿದೆ. ಜೊತೆಗೆ ಹೋರಾಟ ಮಾಡುವ ವಿದ್ಯಾರ್ಥಿಗಳನ್ನು ಯೂಸ್‌ಲೆಸ್ ಹೇಳುತ್ತಿದ್ದಾರೆ.
ಇತ್ತೀಚೆಗೆ ಆರೋಪಿ ಪತ್ತೆಗೆ ಲುಕ್ ಔಟ್ ನೊಟೀಸ್ ಜಾರಿ ಮಾಡಿದ್ದೇನೆ ಎಂದಿದ್ದಾರೆ. ಆದರೆ ಎಲ್ಲಿ ಲುಕ್ ಔಟ್ ನೊಟೀಸ್ ಜಾರಿ ಮಾಡಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ರೈಲ್ವೇ ನಿಲ್ದಾಣದಲ್ಲಿ ಕೇಳಿದಾಗ ಅದಕ್ಕೆ ಸಂಬಂಧಿಸಿದ ದಾಖಲೆ ಇಲ್ಲ ಎಂದು ಆರೋಪಿಸಿದ್ದಾರೆ.
ಕಮೀಷನರ್ ಬಗ್ಗೆ ವೈಯುಕ್ತಿಕ ದ್ವೇಷ ಇಲ್ಲ ಗೌರವ ಇದೆ
ಮಂಗಳೂರು ನಗರ ಪೊಲೀಸ್ ಆಯುಕ್ತರ ಬಗ್ಗೆ ವೈಯುಕ್ತಿಕ ದ್ವೇಷ ಇಲ್ಲ, ಗೌರವ ಇದೆ. ಆದರೆ ಈ ರೀತಿ ಮಾಡುವುದು ಬೇಸರ ತರಿಸುತ್ತಿದೆ. ನಾವು ಆರೋಪಿಯ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಿಲ್ಲ ಎಂದರು.
ಸದ್ಯದಲ್ಲೇ ದೊಡ್ಡ ಮಟ್ಟದ ಪ್ರತಿಭಟನೆ
ಇದೇ ವೇಳೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ತನುಷ್ ಶೆಟ್ಟಿ ಮಾತನಾಡಿ, ದೆಹಲಿ, ಯುಪಿಯಲ್ಲಿ ಇಂತಹ ಘಟನೆ ನಡೆದಾಗ ಇಲ್ಲಿನ ರಾಜಕೀಯ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
ಆದರೆ ನಮ್ಮದೇ ತುಳುನಾಡಲ್ಲಿ ಆದ ಅನ್ಯಾಯವನ್ನು ಖಂಡಿಸಲು ಯಾವೂದೇ ನಾಯಕರು ಬಂದಿಲ್ಲ. ಅದೊಂದು ಬೇಸರ ಇದೆ. ಈ ಬಗ್ಗೆ ಎಲ್ಲರ ಬೆಂಬಲ ಕೇಳಿದ್ದೇವೆ. ಸದ್ಯದಲ್ಲೇ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತೇವೆ ಎಂದರು.
ಪ್ರಧಾನ ಕಾರ್ಯದರ್ಶಿ ವಿಖ್ಯಾತ್ ಉಳ್ಳಾಲ ಇದ್ದರು.
FILM
ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ
Published
12 hours agoon
29/11/2024By
NEWS DESK4ಉಡುಪಿ : ಖ್ಯಾತ ನಟಿ ಮಾಲಾಶ್ರೀ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ದೇವರ ದರ್ಶನ ಮಾಡಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಮಾಲಾಶ್ರೀ ಜೊತೆ ಪುತ್ರಿ ಕಾಟೇರಾ ನಟಿ ಆರಾಧನಾ ಕೂಡ ಉಪಸ್ಥಿತರಿದ್ದರು.
ಪರ್ಯಾಯದಲ್ಲಿ ಭಗವದ್ಗೀತೆಯನ್ನು ಬರೆಯುವ ಕೋಟಿಗೀತಾ ಲೇಖನ ಯಜ್ಞದೀಕ್ಷೆಯನ್ನು ಇಬ್ಬರೂ ಸ್ವೀಕರಿಸಿದರು.
LATEST NEWS
ಬೈಕ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಡ್ರೈವರ್ ಎಡವಟ್ಟು: 12 ಮಂದಿಯ ದುರಂತ ಅಂತ್ಯ
Published
12 hours agoon
29/11/2024By
NEWS DESK3ಮಂಗಳೂರು/ಮಹಾರಾಷ್ಟ್ರ: ಮಹಾರಾಷ್ಟ್ರ ರಾಜ್ಯದ ಗೊಂಡಿಯಾ ಜಿಲ್ಲೆಯ ಕೊಹ್ಮಾರಾ ರಾಜ್ಯ ಹೆದ್ದಾರಿಯ ಖಾಜ್ರಿ ಎಂಬ ಗ್ರಾಮದ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು 9 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಅಷ್ಟಕ್ಕೂ, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಏಕಾಏಕಿ ಎದುರಿಗೆ ಬಂದಿದ್ದ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಬಿದ್ದಿದೆ. ಇದರ ಪರಿಣಾಮ 9 ಜನರು ಸ್ಥಳದಲ್ಲಿಯೇ ಮೃತಪಟ್ಟು ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ವಿಶ್ವವಿದ್ಯಾಲಯಗಳಿಗೆ ಮುಖ್ಯಮಂತ್ರಿಯೇ ಕುಲಪತಿ!
ಬಸ್ಸ್ ನ ಎದುರಿಗೆ ಸಡನ್ ಆಗಿ ಬಂದ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೇರೆ ಕಡೆ ತಿರುಗಿಸಿದ ಪರಿಣಾಮ ಬಸ್ಸ್ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯರ ಸಹಾಯದೊಂದಿಗೆ ಘಟನೆಯಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಇನ್ನೂ ಅಪಘಾತ ನಡೆದ ತಕ್ಷಣವೇ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಪ್ರಕರಣವನ್ನು ದಾಖಿಲಿಸಿಕೊಂಡಿದ್ದು ತನಿಖೆಯನ್ನು ಶುರು ಮಾಡಿದ್ದಾರೆ.
LATEST NEWS
ಓವರ್‌ಟೇಕ್ ಮಾಡಲು ಹೋಗಿ ಬೈಕ್‌ಗೆ ಕಾರು ಡಿ*ಕ್ಕಿ; ಇಬ್ಬರ ದುರ್ಮ*ರಣ
Published
12 hours agoon
29/11/2024By
NEWS DESK4ಮಂಗಳೂರು/ಯಾದಗಿರಿ : ಕಾರು ಡಿ*ಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸಾ*ವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ರಿಕಿ ಗ್ರಾಮದ ಬಳಿ ನಡೆದಿದೆ.
ಹಳ್ಳೆಪ್ಪ(45) ಹಾಗೂ ಮಲ್ಲಯ್ಯ(35) ಮೃ*ತ ಬೈಕ್ ಸವಾರರು. ಜೇವರ್ಗಿ ತಾಲೂಕಿನ ಚಿಕ್ಕಮುದವಾಳ ಗ್ರಾಮದ ಬಳಿಯಿರುವ ಜಮೀನು ನೋಡಿಕೊಂಡು ಬರಲು ಬೈಕ್‌ನಲ್ಲಿ ತೆರಳಿದ್ದರು. ವಾಪಾಸ್ ಊರಿಗೆ ಬರುವಾಗ, ಕಾರು ಚಾಲಕ ಬೈಕ್‌ನ್ನು ಓವರ್‌ಟೇಕ್ ಮಾಡಲು ಹೋಗಿ ಡಿ*ಕ್ಕಿ ಹೊಡೆದಿದ್ದಾನೆ, ಡಿ*ಕ್ಕಿಯ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರು ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಇದನ್ನೂ ಓದಿ : Watch Video: ರಸ್ತೆಯಲ್ಲಿ ಸೂಪರ್ ಮ್ಯಾನ್‌ನಂತೆ ಬೈಕ್ ಹಾರಿಸಿದ ವ್ಯಕ್ತಿ
ಮ*ರಣೋತ್ತರ ಪರೀಕ್ಷೆಗಾಗಿ ಮೃ*ತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಭೀಮರಾಯನ ಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
ಇನ್ಮುಂದೆ ವಿಶ್ವವಿದ್ಯಾಲಯಗಳಿಗೆ ಮುಖ್ಯಮಂತ್ರಿಯೇ ಕುಲಪತಿ!
ಮಂಗಳೂರು: ವರ್ಕ್ ಶಾಪ್ನಲ್ಲಿ ಕಳವು ಪ್ರಕರಣ; ಆರೋಪಿಯ ಬಂಧನ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮನೆ ಮುಂದೆ ವಿಚಿತ್ರ ಪ್ರತಿಭಟನೆ; ಕಾರಣವೇನು?
Watch Video: ರಸ್ತೆಯಲ್ಲಿ ಸೂಪರ್ ಮ್ಯಾನ್‌ನಂತೆ ಬೈಕ್ ಹಾರಿಸಿದ ವ್ಯಕ್ತಿ
ಮೆಗಾ ಹರಾಜಿನಲ್ಲಿ ಅನ್ಸೋಲ್ಡ್; ನಿವೃತ್ತಿ ಘೋಷಿಸಿದ ಆರ್ಸಿಬಿ ಮಾಜಿ ಆಟಗಾರ
ಅಪರಾಧ ಪ್ರಕರಣಗಳಿಂದ ಸುಸ್ತಾದ ಪೊಲೀಸರು; ಠಾಣೆಯಲ್ಲಿ ಹೋಮ, ಹವನ !
Trending
- BIG BOSS7 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- BANTWAL1 day ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- Baindooru7 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
- Ancient Mangaluru2 days ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು