ಮುಲ್ಕಿ: ಮಾನಸಿಕವಾಗಿ ನೊಂದಿದ್ದ ಯುವಕ ನದಿಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಳೆಯಂಗಡಿ ಸಮೀಪದ ಪಾವಂಜೆ ನಂದಿನಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿ ಶಾಲೆ ಬಳಿಯ ನಿವಾಸಿ ಬಾಲಕೃಷ್ಣ ಅಮೀನ್ (35) ಮೃತಪಟ್ಟ ದುರ್ದೈವಿ.
ಮೃತ ಬಾಲಕೃಷ್ಣ ಕಳೆದ ಒಂದು ವಾರದಿಂದ ಮಾನಸಿಕವಾಗಿ ನೊಂದಿದ್ದು, ಒಂದು ದಿನದ ಹಿಂದೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತನ್ನ ತಂಗಿಯ ಬಳಿ ಹೇಳಿದ್ದ.
ಘಟನೆ ಬಳಿಕ ನಂದಿನಿ ನದಿಯಲ್ಲಿ ಅಪರಿಚಿತ ಶವ ಕಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿರುವ ವಾಹನಗಳ ಸವಾರರು ಕುತೂಹಲದಿಂದ ನೋಡುತ್ತಿದ್ದಾಗ ಕೆಲ ಹೊತ್ತು ಹೆದ್ದಾರಿ ಸಂಚಾರ ವ್ಯತ್ಯಯ ಉಂಟಾಯಿತು.
ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ತೇಜಪಾಲ್ ಹಳೆಯಂಗಡಿ ಮತ್ತಿತರ ನೆರವಿನಿಂದ ದೋಣಿ ಮೂಲಕ ಶವವನ್ನು ನದಿಯಿಂದ ಮೇಲಕ್ಕೆತ್ತಲಾಗಿದೆ.