LATEST NEWS
ಪರೀಕ್ಷೆ ವೇಳೆ ಮುಟ್ಟು; ವಿದ್ಯಾರ್ಥಿನಿಯನ್ನು ಕೊಠಡಿಯಿಂದ ಹೊರ ಹಾಕಿದ ಪ್ರಾಂಶುಪಾಲ
Published
6 hours agoon
ಮಂಗಳೂರು/ಉತ್ತರ ಪ್ರದೇಶ: ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಏಕಾಏಕಿ ಮುಟ್ಟಿನ ನೋವು ಶರುವಾಗಿದ್ದು ಪ್ರಾಂಶುಪಾಲರ ಬಳಿ ಸ್ಯಾನಿಟರಿ ಪ್ಯಾಡ್ ಕೇಳಿದ್ದಕ್ಕೆ ಆಕೆಯನ್ನು ಗಂಟೆಗಳ ಕಾಲ ಕೊಠಡಿಯಿಂದ ಹೊರಗೆ ನಿಲ್ಲಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಮುಟ್ಟಿನ ನೋವು ಕಾಣಿಸಿಕೊಂಡ ಕೂಡಲೇ, ಆಕೆ ಶಿಕ್ಷಕರ ಬಳಿ ಸ್ಯಾನಿಟರ್ ಪ್ಯಾಡ್ ತಂದುಕೊಡುವಂತೆ ಕೇಳಿಕೊಂಡಿದ್ದಳು, ಅದಕ್ಕೆ ಕೋಪಗೊಂಡ ಪ್ರಾಂಶುಪಾಲ ಆಕೆಯನ್ನು ತರಗತಿಯಿಂದ ಹೊರಗಿಟ್ಟಿದ್ದಾರೆ. ಈ ಘಟನೆಯಿಂದ ಆಕೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೊಂದಿದ್ದಾಳೆ ಎಂದು ಪೋಷಕರು ತಿಳಿಸಿದ್ದಾರೆ. ಈ ಸಂಬಂಧ ತಂದೆ ಜಿಲ್ಲಾಧಿಕಾರಿ, ಜಿಲ್ಲಾ ಶಾಲಾ ನಿರೀಕ್ಷಕ (ಡಿಐಒಎಸ್), ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳಾ ಕಲ್ಯಾಣ ಇಲಾಖೆಗೆ ಲಿಖಿತ ದೂರು ನೀಡಿದ್ದು ತಂದೆಯ ದೂರಿನ ನಂತರ, ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಶಾಲಾ ಇನ್ಸ್‌ಪೆಕ್ಟರ್ ದೇವಕಿ ನಂದನ್ ತಿಳಿಸಿದ್ದಾರೆ.
ಇದನ್ನೂ ಓದಿ : “ಅವನು ನನ್ನ ಕ್ರಷ್” : ವಿವಾಹಿತ ನಟನ ಮೇಲೆ 19 ವರ್ಷದ ಸ್ಟಾರ್ ನಟಿ ಲವ್
ಈ ಘಟನೆಯನ್ನು ಹಲವು ಸಾಮಾಜಿಕ ಕಾರ್ಯಕರ್ತರು ಹಾಗೂ ಸಂಘಟನೆಗಳು ಖಂಡಿಸಿದ್ದು, ಶಾಲಾ ಆಡಳಿತ ಮಂಡಳಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಹಿಳಾ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಮಹಿಳಾ ಆಯೋಗ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಮಹಿಳಾ ಹಕ್ಕುಗಳ ಉಲ್ಲಂಘನೆ ಪ್ರಕರಣ ಎಂದು ಹೇಳಲಾಗಿದೆ. ಕಳೆದ ವರ್ಷ, ಬೋರ್ಡ್ ಪರೀಕ್ಷೆಗಳಿಗೆ ಮುಂಚಿತವಾಗಿ, ’10 ಮತ್ತು 12 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ಅಗತ್ಯ ವಿಶ್ರಾಂತಿ ಕೊಠಡಿಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಬೇಕು ಮತ್ತು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಉಚಿತ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಲಭ್ಯವಾಗುವಂತೆ ಮಾಡಬೇಕು’ ಎಂದು ಕೇಂದ್ರ ಶಿಕ್ಷಣ ಸಚಿವಾಲಯವು ಸಲಹೆ ನೀಡಿತ್ತು.
DAKSHINA KANNADA
ಎಜೆ ಆಸ್ಪತ್ರೆಯ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆ; ಮೊಣಕಾಲು, ಸೊಂಟದ ಶಸ್ತ್ರ ಚಿಕಿತ್ಸೆಗೆ ರೋಬೋಟ್ ಬಳಕೆ
Published
1 hour agoon
27/01/2025By
NEWS DESK4ಮಂಗಳೂರು : ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಮೈಲಿಗಲ್ಲು ಸ್ಥಾಪಿಸಿರುವ ಮಂಗಳೂರಿನ ಪ್ರತಿಷ್ಠಿತ ಎ.ಜೆ. ಆಸ್ಪತ್ರೆ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಯುಎಸ್ ಎಯಲ್ಲಿ ಅಭಿವೃದ್ದಿ ಪಡಿಸಲಾದ ರೋಬೋಟಿಕ್ ಜಾಯಿಂಟ್ ರಿಪ್ಲೇಸ್ ಮೆಂಟ್ ಟೆಕ್ನಾಲಜಿಯನ್ನು ಮಂಗಳೂರಿಗೆ ಪರಿಚಯಿಸಿದೆ. ಸ್ಮಿತ್ ಪ್ಲಸ್ ನೆವ್ಯೂದವರು ಅಭಿವೃದ್ದಿ ಪಡಿಸಿರುವ ಈ ಸುಧಾರಿತ ಶಸ್ತ್ರ ಚಿಕಿತ್ಸಾ ಸೌಲಭ್ಯವನ್ನು ಡಾ. ಎ.ಜೆ.ಶೆಟ್ಟಿ ಅವರು ಉದ್ಘಾಟಿಸಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಹೇಳಿದ್ದಾರೆ.
ಈ ವ್ಯವಸ್ಥೆಯ ಮೂಲಕ ರೋಗಿಗಳಿಗೆ ಉತ್ತಮ ಶಸ್ತ್ರ ಚಿಕಿತ್ಸಾ ಫಲಿತಾಂಶ ಹಾಗೂ ವೇಗವಾಗಿ ಚೇತರಿಕೆಗೆ ದಾರಿ ಮಾಡಿಕೊಡುತ್ತದೆ. ಈ ಹಿಂದೆಯೂ ಹಲವು ತಂತ್ರಜ್ಞಾನಗಳನ್ನು ಮೊದಲು ಮಂಗಳೂರಿಗೆ ಪರಿಚಯಿಸಿದ ಎಜೆ ಆಸ್ಪತ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ಇದೀಗ ಪರಿಚಯಿಸಿರುವ ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ತಂತ್ರಜ್ಞಾನ ಕೂಡ ಎಜೆ ಆಸ್ಪತ್ರೆಯ ಗರಿಮೆಯನ್ನು ಹೆಚ್ಚು ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ದಿನಗಣನೆ; ಜ.29ಕ್ಕೆ 100ನೇ ಉಪಗ್ರಹ ಉಡಾವಣೆ
ಪತ್ರಿಕಾಗೋಷ್ಠಿಯಲ್ಲಿ ಡಾ.ಸುದೀಪ್ ಶೆಟ್ಟಿ, ಡಾ.ಮಯೂರ್ ರೈ, ಡಾ.ಮಿಥುನ್ ಶೆಟ್ಟಿ ಉಪಸ್ಥಿತರಿದ್ದರು.
LATEST NEWS
ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ದಿನಗಣನೆ; ಜ.29ಕ್ಕೆ 100ನೇ ಉಪಗ್ರಹ ಉಡಾವಣೆ
Published
2 hours agoon
27/01/2025By
NEWS DESK4ಮಂಗಳೂರು/ ನವದೆಹಲಿ : ಇಸ್ರೋ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ಅಣಿಯಾಗಿದೆ. ಜನವರಿ 29 ರಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ 100 ನೇ ರಾಕೆಟ್ ಉಡಾವಣೆಗೆ ಸಿದ್ಧತೆ ನಡೆದಿದೆ. ಜನವರಿ 29 ರಂದು ಬೆಳಿಗ್ಗೆ 6.23ಕ್ಕೆ ಶ್ರೀಹರಿಕೋಟಾದಿಂದ 2,250 ಕೆಜಿ ನ್ಯಾವಿಗೇಷನ್ ಉಪಗ್ರಹವನ್ನು ಜಿಎಸ್‌ಎಲ್‌ವಿ – ಎಫ್ 15 ರ ಮೂಲಕ ಕಳುಹಿಸಲು ಸಜ್ಜಾಗಿರುವ ಬಗ್ಗೆ ಇಸ್ರೋ ಮಾಹಿತಿ ನೀಡಿದೆ.
ಇದು ಜಿಎಸ್‌ಎಲ್‌ವಿ ಉಡಾವಣಾ ವಾಹನದ 17ನೇ ಹಾರಾಟವಾಗಲಿದ್ದು, 19 ನಿಮಿಷಗಳಲ್ಲಿ ಉಪಗ್ರಹವನ್ನು ಕಕ್ಷೆಗೆ ಕೂರಿಸುವ ಯೋಜನೆ ರೂಪಿಸಲಾಗಿದೆ. ಈ ಕಾರ್ಯಾಚರಣೆಯ ಅಡಿ ಎನ್‌ವಿಎಸ್ – 02 ಉಪಗ್ರಹವನ್ನು ಉಡಾವಣೆ ಮಾಡಲಾಗುವುದು. ಇದು ಭಾರತದ ಪ್ರಾದೇಶಿಕ ನ್ಯಾವಿಗೇಷನ್ ವಿದ್ ಇಂಡಿಯನ್ ಕಾನ್‌ಸ್ಟೆಲೇಷನ್(NavIc) ಸಿಸ್ಟಮ್‌ನ್ನು ಮತ್ತಷ್ಟು ಬಲಪಡಿಸಲಿದೆ.
ಇದನ್ನೂ ಓದಿ : “ಅವನು ನನ್ನ ಕ್ರಷ್” : ವಿವಾಹಿತ ನಟನ ಮೇಲೆ 19 ವರ್ಷದ ಸ್ಟಾರ್ ನಟಿ ಲವ್
ನ್ಯಾವಿಗೇಶನ್ ವಿದ್ ಇಂಡಿಯನ್ ಕಾನ್‌ಸ್ಟೆಲೇಷನ್ (NavIc) ಭಾರತದ ಸ್ವತಂತ್ರ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯಾಗಿದೆ. ಭಾರತದ ಬಳಕೆದಾರರಿಗೆ ನಿಖರವಾದ ಸ್ಥಾನ, ವೇಗ ಮತ್ತು ಸಮಯ (PVT) ಸೇವೆಯನ್ನು ಒದಗಿಸುವ ಜೊತೆಗೆ ಮಿಲಿಟರಿ ಮತ್ತು ಇತರೆ ನ್ಯಾವಿಗೇಷನ್ ಆಧಾರಿತ ಸೇವೆ ಒದಗಿಸಲಿದೆ.
ಆಂಧ್ರಪ್ರದೇಶ: ಸಾವು ಹೇಗೆ ಬೇಕಾದರೂ ಬರಬಹುದು ಎಂಬುದಕ್ಕೆ ಇಲ್ಲೊಂದು ನಡೆದ ವಿಚಿತ್ರ ಘಟನೆಯೇ ಸಾಕ್ಷಿ. ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ಮೊಬೈಲ್ ಫೋನ್ ಅನ್ನು ನುಂಗಿ ಪ್ರಾಣ ಕಳೆದುಕೊಂಡ ಘಟನೆ ಆಂಧ್ರಪ್ರದೇಶದ ಕಾಕಿನಾಡಲ್ಲಿ ನಡೆದಿದೆ.
ಬೊಮ್ಮೂರಿನ ಪೆನುಮಲ್ಲದ ರಮ್ಯ ಸ್ಮೃತಿ (35) ಪ್ರಾಣ ಕಳೆದುಕೊಂಡ ಮಹಿಳೆ.
ಈ ಮಹಿಳೆ ಕಳೆದ 15 ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಹೀಗಾಗಿ ಮನೆಯವರೂ ಕೂಡ ಈಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಹೀಗಿರುವಾಗ ಒಂದು ದಿನ ಮಹಿಳೆ ಕೀ ಪ್ಯಾಡ್ ಮೊಬೈಲ್ ಅನ್ನು ನುಂಗಿದ್ದು, ಮನೆಯವರು ಫೋನ್ ಕಾಣುತ್ತಿಲ್ಲ ಎಂದು ಹುಡುಕಿದಾಗ ಮೊಬೈಲ್ ನುಂಗಿರುವ ಬಗ್ಗೆ ಆಕೆ ಹೇಳಿರುತ್ತಾಳೆ.
ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಈಕೆಯ ಅನ್ನನಾಳಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದು, ತಕ್ಷಣ ಆಕೆಯನ್ನು ವೈದ್ಯರ ಸಲಹೆಯ ಮೆರೆಗೆ ಕಾಕಿನಾಡದ ಜಿಜಿಎಚ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾರೆ.
ಇನ್ನು ಒಂದೆಡೆ ವೈದ್ಯರ ನಿರ್ಲಕ್ಷ್ಯದಿಂದ ತನ್ನ ಮಗಳು ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಮೃತ ಮಹಿಳೆಯ ತಂದೆ ಹೇಳಿದ್ದು, ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
LATEST NEWS
ದೈವದ ಮುನಿಸೇ ಈ ಗ್ರಾಮದಲ್ಲಿ ಜನರ ಸರಣಿ ಸಾವಿಗೆ ಕಾರಣವಾಯಿತಾ ?
ಕೋಟೆಕಾರು ಬ್ಯಾಂಕ್ ದರೋಡೆ ಕೇಸ್; ಮಾಸ್ಟರ್ ಪ್ಲಾನ್ ಬಿಚ್ಚಿಟ್ಟ ಕಮಿಷನರ್
ಉಡುಪಿ : ಪ್ರತಿಷ್ಠಿತ ವಸತಿ ಶಾಲೆಗೆ ಬಾಂ*ಬ್ ಬೆ*ದರಿಕೆ ಇಮೇಲ್
ತಾಯಿಗೆ ತಕ್ಕ ಮಗ ; ಜೊತೆಯಾಗಿ ರಾಷ್ಟ್ರಪತಿ ಪುರಸ್ಕಾರ ಪಡೆದ ಸಾಧನಾ, ತರುಣ್
ಗುಯಿಲಿನ್ ಬಾರ್ ಸಿಂಡ್ರೋಮ್ಗೆ ಮಹಾರಾಷ್ಟ್ರದಲ್ಲಿ ಮೊದಲ ಬ*ಲಿ; ಏನಿದು ಜಿಬಿಎಸ್?
ಪ್ರೀತಿಗೆ ವಯಸ್ಸು ಮುಖ್ಯನಾ ? ವೃದ್ಧಾಶ್ರಮದಲ್ಲಿ ಅಜ್ಜ – ಅಜ್ಜಿ ಅದ್ದೂರಿ ಪ್ರೇಮವಿವಾಹ
Trending
- BIG BOSS5 days ago
ಗೌತಮಿ-ಧನರಾಜ್ ಬೆನ್ನಲ್ಲೇ ಈ ವಾರ ಫಸ್ಟ್ ಎಲಿಮಿನೇಟ್ ಆಗೋದ್ಯಾರು ?
- BIG BOSS4 days ago
ಭಾವನೆಗಳ ಮಹಾಪೂರ ನೀನು, ಕನಸುಗಳ ಶಿಖರ ನೀನು: ಭವ್ಯಾಗೆ ತ್ರಿವಿಕ್ರಮ್ ಪ್ರಪೋಸ್
- BIG BOSS5 days ago
ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬಿಗ್ ಬಾಸ್ ಸ್ಪರ್ಧಿ ಕೀರ್ತಿ ಮತ್ತು ಜೈತ್ರಾ ಕುಂದಾಪುರ: ಆಶೀಶ್ ಮೈಕಾಲ
- BIG BOSS2 days ago
ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್