Friday, July 1, 2022

ಬೆಳ್ತಂಗಡಿ: ಸಂಪ್‌ ಕ್ಲೀನಿಂಗ್‌ಗೆ ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

ಬೆಳ್ತಂಗಡಿ: ನೀರಿನ ಸಂಪ್‌ನ ಸ್ವಚ್ಛತೆಗೆ ಇಳಿದವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿಯ ಕೊಯ್ಯೂರು ಗ್ರಾಮದ ಅತ್ಯಾರ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.


ಮೃತರನ್ನು ಶ್ರೀಧರ ಗೌಡ ಎಂದು ಗುರುತಿಸಲಾಗಿದೆ.
ಶ್ರೀಧರ ಗೌಡ ಕೂಲಿ ಕೂಲಿ ಕಾರ್ಮಿಕರಾಗಿದ್ದು, ನಿನ್ನೆ ಸಂಜೆ 3 ಗಂಟೆಗೆ ನೆರೆಯ ಚಂದಪ್ಪ ಗೌಡ ಎಂಬವರ ಮನೆಯ ಬಳಿಯ ನೀರಿನ ಸಂಪ್‌ ಸ್ವಚ್ಛ ಮಾಡಲು ಹೋಗಿದ್ದರು.

ಸಂಜೆಯಾದರು ಶ್ರೀಧರ ಗೌಡ ಮರಳಿ ಬಾರದ ಕಾರಣ ನೀರಿನ ಸಂಪ್‌ ಬಳಿ ಸಂಜೆ ಹೋಗಿ ನೋಡಿದಾಗ ಶ್ರೀಧರ ಗೌಡರು ಟ್ಯಾಂಕ್ ನೀರಿನಲ್ಲಿ ಅರ್ಧ ಮುಳುಗಿದ್ದು ಕಂಡು ಬಂದಿತೆನ್ನಲಾಗಿದೆ.

ಕೂಡಲೇ ಅವರನ್ನು ನೀರಿನಿಂದ ಮೇಲಕ್ಕೆತ್ತಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರೆನ್ನಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದರಿಂದ ಮನನೊಂದು ಪಿಯುಸಿ ವಿದ್ಯಾರ್ಥಿನಿ ಜೀವಾಂತ್ಯ

ಉಡುಪಿ: ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಮತ್ತೆ ಅನುತ್ತೀರ್ಣಳಾಗಿದ್ದರಿಂದ ಮನನೊಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದಲ್ಲಿ ನಿನ್ನೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಮಾನಸ (17)...

“ಭರತ್‌ ಶೆಟ್ರೇ ನಿಮ್ಮ ಜನರಿಗೆ ನ್ಯಾಯ ಕೊಡಲಾಗದಿದ್ದರೆ ಮನೆಗೆ ಹೋಗಿ ಅಥವಾ ವೈದ್ಯ ವೃತ್ತಿ ಮುಂದುವರೆಸಿ”

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಶಾಸಕರೇ ನಿಮಗೆ ಮತ ನೀಡಿದ ಜನರಿಗೆ ನ್ಯಾಯ ಕೊಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಅಥವಾ ವೈದ್ಯ ವೃತ್ತಿ ಮುಂದುವರೆಸಿ ಎಂದು ಮಾಜಿ ಶಾಸಕ ಮೊಯ್ದೀನ್‌...

ಬೆಳ್ತಂಗಡಿ: ಬೀದಿ ಬದಿ ಅಂಗಡಿ ತೆರವು ಪ್ರಕರಣದ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಿಂದ ಕೊಕ್ಕಡ ಸಂಪರ್ಕಿಸುವ ನಿಡ್ಲೆ ಪಂಚಾಯತ್‌ ವ್ಯಾಪ್ತಿಯ ಪಾರ್ಪಿಕಲ್‌ ರಸ್ತೆಯಲ್ಲಿರುವ ಬೀದಿ ಬದಿ ವ್ಯಾಪಾರಸ್ಥರನ್ನು PWD ತೆರವುಗೊಳಿಸಿರುವ ವಿರುದ್ಧ ಬೃಹತ್ ಪ್ರತಿಭಟನೆ ಇಂದು ಬೆಳ್ತಂಗಡಿಯ ಪಿಡಬ್ಲ್ಯೂಡಿ...