Connect with us

    LATEST NEWS

    ಡೋಲು ಬಾರಿಸಿ ಮೇಕೆದಾಟು ಪಾದಯಾತ್ರೆಗೆ ಚಾಲನೆ-ಘಟಾನುಘಟಿ ಕೈ ನಾಯಕರು ಭಾಗಿ

    Published

    on

    ರಾಮನಗರ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್​ ನಡೆಸುತ್ತಿರುವ ಪಾದಯಾತ್ರೆಗೆ ಕಾವೇರಿ ಸಂಗಮದ ಬಳಿ ಹಿರಿಯ ಮುಖಂಡ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ್ ಖರ್ಗೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಕಾಂಗ್ರೆಸ್ ಪಾದಯಾತ್ರೆ ನಡೆಯುತ್ತಿದೆ.


    ಮೇಕೆದಾಟು ಸಂಗಮದಿಂದ ಆರಂಭಗೊಂಡಿರುವ ಈ ಪಾದಯಾತ್ರೆಯು ಒಟ್ಟು 11 ದಿನಗಳ ಕಾಲ ನಡೆಯಲಿದೆ. ಕೊನೆಯ ದಿನದಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾರೋಪ ಸಭೆ ನಡೆಯಲಿದೆ. ಪಾದಯಾತ್ರೆ ತೆರಳುವ ರಸ್ತೆಯುದ್ದಕ್ಕೂ ತಳಿರು ತೋರಣಗಳಿಂದ ಶೃಂಗಾರ ಮಾಡಲಾಗಿದ್ದು,

    ಆಯಾ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ತಯಾರಿ ನಡೆಸಿದ್ದಾರೆ.ಪಾದಯಾತ್ರೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ,‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌‌ ಶಿವಕುಮಾರ್, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್,‌ ಜಿ. ಪರಮೇಶ್ವರ್, ಹೆಚ್.ಎಂ.ರೇವಣ್ಣ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್,

    ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು​ ಸೇರಿದಂತೆ ಕಾಂಗ್ರೆಸ್​​ನ ಬಹುತೇಕ ಶಾಸಕರು ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಭಾಗಿಯಾಗಿದ್ದಾರೆ.

    ನಟ ದುನಿಯಾ ವಿಜಯ್, ಸಾಧುಕೋಕಿಲ ಸೇರಿ ಹಲವು ನಾಯಕರು, ಹಾಗೂ ಮರಳೆಗವಿಮಠದ ಸ್ವಾಮೀಜಿ, ಆದಿಚುಂಚನಗಿರಿ ‌ಶಾಖಾ ಮಠದ ಕಿರಿಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಸಾಥ್​ ನೀಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ತಂದೆ, ಮಗ

    Published

    on

    ಮಂಗಳೂರು/ಮಹಾರಾಷ್ಟ್ರ : ತಂದೆ ಮತ್ತು ಮಗ ಇಬ್ಬರೂ ಒಂದೇ ಮರಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

    ‘ತಂದೆ ತನಗೆ ಸ್ಮಾರ್ಟ್ ಫೋನ್ ಕೊಡಿಸಲಿಲ್ಲ’ ಎಂದು ಮನನೊಂದು 16 ವರ್ಷದ ಬಾಲಕನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಇನ್ನೊಂದು ವಿಚಿತ್ರವೆಂದರೆ ಮಗನ ಶವ ನೋಡಿ ಆತನ ತಂದೆ ‘ಮಗನಿಗೆ ಸ್ಮಾರ್ಟ್ ಫೋನ್ ಕೊಡಿಸಲು ಆಗಲಿಲ್ಲ’ ಎಂದು ತಾನೂ ಸಹ ಅದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಂದೇಡ್ ಜಿಲ್ಲೆಯ ಬಿಳೋಳಿ ಮಿನಾಕಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ.

    ರಾಜು ಅವರಿಗೆ ಮೂವರು ಮಕ್ಕಳು. ಕೊನೆಯ ಮಗ ಓಂಕಾರ್ ಹಾಸ್ಟೆಲ್ ಒಂದರಲ್ಲಿ ಇದ್ದುಕೊಂಡು 10 ನೇ ತರಗತಿ ಓದುತ್ತಿದ್ದ. ಮಕರ ಸಂಕ್ರಮಣದ ರಜೆ ಇರುವುದರಿಂದ ಮನೆಗೆ ಬಂದಿದ್ದ.

    ಇದನ್ನೂ ಓದಿ: ರೀಲ್ಸ್ ಮಾಡಲು ಹೋಗಿ ನೀರುಪಾಲಾದ ಐವರು ಯುವಕರು

    ‘ಇದೇ ವೇಳೆ ಬಾಲಕ ಓಂಕಾರ್ ತನ್ನ ತಂದೆಗೆ ಸ್ಮಾರ್ಟ್ ಫೋನ್ ಕೊಡಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಬಡ ರೈತ ಕುಟುಂಬದ ರಾಜು, ಮಗನಿಗೆ ಸ್ಮಾರ್ಟ್ ಫೋನ್ ಕೊಡಿಸಲು ಆಗಿರಲಿಲ್ಲ. ಇದರಿಂದ ಡೆತ್ ನೋಟ್ ಬರೆದಿಟ್ಟು ಹೊಲದಲ್ಲಿನ ಮರಕ್ಕೆ ಬಾಲಕ ನೇಣು ಹಾಕಿಕೊಂಡಿದ್ದ. ಅದೇ ರಾತ್ರಿ ಮಗನನ್ನು ಹುಡುಕಿಕೊಂಡು ಹೋಗಿದ್ದ ತಂದೆಯೂ ಮಗ ನೇಣೂ ಹಾಕಿಕೊಂಡಿದ್ದನ್ನು ನೋಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ನಾಂದೇಡ್ ಎಸ್ ಪಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ.

    ಮೃತ ಬಾಲಕನ ತಾಯಿ ನೀಡಿದ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೃತದೇಹಗಳನ್ನು ಸಿವಿಲ್ ಆಸ್ಪತ್ರೆಗೆ ಸಾಗಿಸಿದ್ದು, ಇಬ್ಬರೂ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

     

    Continue Reading

    LATEST NEWS

    ಛೇ! ಇದೆಂಥ ಅಮಾನವೀಯ ಕೃ*ತ್ಯ; ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಕಿ*ಡಿಗೇಡಿಗಳು

    Published

    on

    ಮಂಗಳೂರು/ಬೆಂಗಳೂರು : ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಅಮಾನವೀಯ ಕೃ*ತ್ಯ ಚಾಮರಾಜಪೇಟೆಯ ವಿನಾಯಕನಗರದಲ್ಲಿ ನಡೆದಿದೆ. ತಡರಾತ್ರಿ ದು*ಷ್ಕರ್ಮಿಗಳು ವಿ*ಕೃತಿ ಮೆರೆದಿದ್ದಾರೆ. ರಸ್ತೆಯಲ್ಲಿ ಮಲಗಿದ್ದ ಕೆಚ್ಚಲುಗಳನ್ನು ಕೊಯ್ದು ಕಿ*ಡಿಗೇಡಿಗಳು ಪರಾರಿಯಾಗಿದ್ದಾರೆ.

    ರಾತ್ರಿಯಿಡೀ ಹಸುಗಳು ರ*ಕ್ತದ ಮಡುವಿನಲ್ಲಿ ನರಳಾಡಿವೆ. ಇಂದು(ಡಿ.12) ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಹಸುಗಳಿಗೆ ಚಾಮರಾಜಪೇಟೆಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಟನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದಿದ್ದಾರೆ.

    ಸಂಸದ ಪಿಸಿ ಮೋಹನ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಕ್ಷಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಹಸುವಿನ ಮಾಲೀಕರಿಂದ ಮಾಹಿತಿ ಪಡೆದಿದ್ದಾರೆ.

    Continue Reading

    LATEST NEWS

    ರೀಲ್ಸ್ ಮಾಡಲು ಹೋಗಿ ನೀರುಪಾಲಾದ ಐವರು ಯುವಕರು

    Published

    on

    ಮಂಗಳೂರು/ಹೈದರಾಬಾದ್ : ರೀಲ್ಸ್ ಮಾಡಲು ಹೋದ ಐವರು ಯುವಕರು ನೀರುಪಾಲಾದ ಘಟನೆ ತೆಲಂಗಾಣದ ಸಿದ್ದಿ ಪೇಟ್ ಜಿಲ್ಲೆಯ ಕೊಂಡ ಪೋಚಮ್ಮ ಸಾಗರ ಜಲಾಶಯದಲ್ಲಿ ನಡೆದಿದೆ.

    ಇಂದು ಏಳು ಮಂದಿ ಯುವಕರ ತಂಡ ಬೆಳಗ್ಗೆ ಒಂಬತ್ತರ ಸುಮಾರಿಗೆ ಜಲಾಶಯದ ಬಳಿ ಬಂದು, ಅಲ್ಲೇ ತಿರುಗಾಡಿ ಕೊನೆಗೆ ನೀರಿಗೆ ಇಳಿದಿದ್ದರು. ನೀರಿಗೆ ಇಳಿದು ನೀರಿನಲ್ಲಿ ಆಟವಾಡುತ್ತಿದ್ದ ದೃಶ್ಯವನ್ನು ಈಜು ಬಾರದ ಇಬ್ಬರು ಬದಿಯಲ್ಲಿ ನಿಂತು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದರು.

    ಇದನ್ನೂ ಓದಿ: ಕಡಬ : ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಬಾಣಂತಿ ಸಾ*ವು

    ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಐವರೂ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಇಬ್ಬರು ಅವರ ರಕ್ಷಣೆಗೆ ಮುಂದಾದ್ರೂ ಸಾಧ್ಯವಾಗಿಲ್ಲ. ಮುಶೀರಾಬಾದ್‌ನ ಸಹೋದರರಾದ ಧನುಷ್ (20), ಲೋಹಿತ್ (17), ಬನ್ಸಿಲಾಲ್ ಪೇಟೆಯ ದಿನೇಶ್ವರ್ (17), ಖೈರತಾಬಾದ್‌ನ ಚಾಂತಲ್ ಬಸ್ತಿಯ ಜತಿನ್ (17), ಮತ್ತು ಸಾಹಿಲ್ (19) ನೀರು*ಪಾಲಾದ ಯುವಕರು. ಮೃಗಾಂಕ್‌ (17) ಮತ್ತು ಇಬ್ರಾಹಿಂ (19) ಇಬ್ಬರು ನೀರಿನ ಆಳಕ್ಕೆ ಇಳಿಯದ ಕಾರಣ ಅಪಾಯದಿಂದ ಪಾರಾಗಿದ್ದಾರೆ.

    ಜಲಾಶಯದ ಬಳಿ ಜನರ ಓಡಾಟ ಕಡಿಮೆ ಇದ್ದ ಕಾರಣ ಮುಳುಗುತ್ತಿದ್ದ ಐವರ ರಕ್ಷಣೆಗೆ ಯಾರೂ ಸಿಗಲಿಲ್ಲ ಎಂದು, ಬದುಕಿ ಉಳಿದ ಇಬ್ಬರು ಸ್ನೇಹಿತರು ಪೊಲೀಸರ ಬಳಿ ಹೇಳಿದ್ದಾರೆ.

     

    Continue Reading

    LATEST NEWS

    Trending