Sunday, November 27, 2022

ಮೀನು, ಮಟನ್‌ಗಿಂತ ಜಾಸ್ತಿ ಬೀಫ್‌ ತಿನ್ನಿ ಎಂದ ಬಿಜೆಪಿ ಶಾಸಕ

ಮೇಘಾಲಯ: ಮೀನು, ಚಿಕನ್​, ಮಟನ್​ಗಳಿಗಿಂತ ಜಾಸ್ತಿ ಬೀಫ್‌ ತಿನ್ನಿ ಎಂದು ರಾಜ್ಯದ ಜನರಿಗೆ ಹೇಳಿದ ಮೇಘಾಲಯದ ಬಿಜೆಪಿ ಸಚಿವರೀಗ ಸಿಕ್ಕಾಪಟೆ ಟೀಕೆಗೆ ಗುರಿಯಾಗಿದ್ದಾರೆ. ದೊಡ್ಡಮಟ್ಟದ ವಿವಾದ ಸೃಷ್ಟಿಯಾಗಿದೆ. ಮೇಘಾಲಯದ ಬಿಜೆಪಿ ಸಚಿವ ಸ್ಯಾನ್ಬೋರ್​ ಶುಲ್ಲೈ ಇಂಥದ್ದೊಂದು ಕರೆ ಕೊಟ್ಟು ಬಹುದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ.

ಬಿಜೆಪಿ ಹಾಗೂ ಆರ್​ಎಸ್​ಎಸ್‌ಗಳು ಗೋಹತ್ಯೆ, ಗೋಮಾಂಸ ಸೇವನೆಯನ್ನು ಕಟುವಾಗಿ ವಿರೋಧಿಸುತ್ತವೆ. ಹೀಗಿರುವಾಗ ಬಿಜೆಪಿಯದ್ದೇ ಸಚಿವರೊಬ್ಬರು ಇಂಥ ಹೇಳಿಕೆ ನೀಡಿರುವುದು ಎಷ್ಟು ಸರಿ ಎಂದು ಜನರೂ ಪ್ರಶ್ನಿಸುತ್ತಿದ್ದಾರೆ. ಕಳೆದವಾರವಷ್ಟೇ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವ ಶುಲ್ಲೈ, ಇದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಅವರಿಗೆ ಬೇಕಾದ್ದನ್ನು ತಿನ್ನಲ್ಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ. ನಾನಂತೂ ಜನರಿಗೆ ಚಿಕನ್​, ಮಟನ್​, ಮೀನಿಗಿಂತಲೂ ಜಾಸ್ತಿ ಗೋಮಾಂಸ ತಿನ್ನಿ ಎಂದೇ ಪ್ರೋತ್ಸಾಹಿಸುತ್ತೇನೆ.

ಬಿಜೆಪಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುತ್ತದೆಂಬ ಗ್ರಹಿಕೆ ತುಂಬ ಜನರಿಗೆ ಇದೆ. ಗೋಮಾಂಸ ತಿನ್ನಲು ಹೆಚ್ಚೆಚ್ಚು ಪ್ರೋತ್ಸಾಹ ನೀಡುವ ಮೂಲಕ ಆ ಅನಿಸಿಕೆಯನ್ನು ಹೋಗಲಾಡಿಸಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಉಡುಪಿ: ಹೊಟೇಲ್‌ನಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅನಾಹುತ….

ಉಡುಪಿ: ಹೊಟೇಲ್‌ವೊಂದರಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅನಾಹುತ ಸಂಭವಿಸಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಸಕಾಲಿಕ ಕಾರ್ಯಾಚರಣೆಯಿಂದ ಸಂಭಾವ್ಯ ಅವಘಡವೊಂದು ತಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.ಇಲ್ಲಿನ ಸಿಟಿ ಬಸ್ ನಿಲ್ದಾಣ ಸಮಿಪದಲ್ಲಿರುವ ಟಾಪ್ ಟೌನ್...

ಇನ್ಮುಂದೆ ಬಾಡಿಗೆ ಮನೆ ಪಡೆಯಲು ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಅಗತ್ಯ-ಮೈಸೂರು ನಗರ ಪೊಲೀಸ್ ಕಮಿಷನರ್ ಹೊಸ ಸುತ್ತೋಲೆ

ಮಂಗಳೂರು: ಮಂಗಳೂರಿನಲ್ಲಿ ಬಾಂಬ್‌ ಬ್ಲಾಸ್ಟ್ ಆಗಿರುವ ಘಟನೆ ಬೆನ್ನಲ್ಲೇ ಆರೋಪಿ ವಾಸವಾಗಿದ್ದ ಮೈಸೂರಿನ ಬಾಡಿಗೆ ಮನೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈ ನಡುವೆ ಬಾಡಿಗೆ ಮನೆ ನೀಡುವ ಮಾಲಕರು ಯಾರೂ ಗುರುತು ಪರಿಚಯ...

ವಿಶ್ವದಲ್ಲೇ ಬೃಹತ್ ಗಾತ್ರದ ಮೂತ್ರಕೋಶದ ಕಲ್ಲು ಹೊರತೆಗೆದ ಮಣಿಪಾಲ ವೈದ್ಯರು..!

ಉಡುಪಿ: ವ್ಯಕ್ತಿಯೋರ್ವರ 11.5 x 7.5 ಸೆಂಮೀ ಅಳತೆಯ 672 ಗ್ರಾಂ ತೂಕದ ಮೂತ್ರಕೋಶದ ಕಲ್ಲನ್ನು ಮಣಿಪಾಲದ ಕಸ್ತೂರಿ ಬಾ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ನಡೆಸಿ ಹೊರೆ ತೆಗೆದಿರುವ ಘಟನೆ ನಡೆದಿದೆ. ಇದು ವಿಶ್ವದಲ್ಲಿ ಇಲ್ಲಿಯವರೆಗೆ...