LATEST NEWS
ಮುಸ್ಲಿಂ ಧರ್ಮಗುರುವಿನಿಂದ ಅನ್ನಕ್ಕೆ ಉಗುಳು: ಉಗುಳಲ್ಲ ಊದಿದು…!
Published
3 years agoon
By
Adminಮಂಗಳೂರು: “ಮುಸ್ಲಿಂ ಧರ್ಮಗುರುವೊಬ್ಬರು ಸಮಾರಂಭದಲ್ಲಿ ಆಹಾರಕ್ಕೆ ಉಗುಳುತ್ತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ಇದನ್ನು ಸಾವಿರಾರು ಮಂದಿ ಷೇರ್ ಮಾಡಿದ್ದಾರೆ ಹಾಗೂ ಈ ಪೋಸ್ಟ್‌ಗೆ ವಿವಿಧ ರೀತಿಯ ಪರ-ವಿರೋಧ ಕಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಈಡು ಮಾಡಿತ್ತು.
ಆದರೆ ಅದು ಉಗುಳುವುದಲ್ಲ ಬದಲಾಗಿ ಊದುವುದು ಎಂದು ಹಲವರು ಸ್ಪಷ್ಟಪಡಿಸಿದ್ದು, ಈ ಬಗ್ಗೆ ಆಲ್ಟ್ ನ್ಯೂಸ್ ವರದಿ ಮಾಡಿದೆ.
https://www.altnews.in/fact-check-does-this-video-show-a-maulana-spitting-on-food/
ಕೂರಾ ತಂಙಳ್ ರವರ ತಂದೆ ಸೈಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ರವರ ಉರೂಸ್ ನಡೆದ ಸಂದರ್ಭದಲ್ಲಿ ಸಾಮೂಹಿಕ ಅನ್ನ ಸಂತರ್ಪಣೆ ಕಾರ್ಯಕ್ರಮವಿತ್ತು. ಆಹಾರ ವಿತರಣೆಗೂ ಮುಂಚೆ ಕುರ್ ಆನ್ ಸೂಕ್ತಗಳನ್ನು ಓದಿ ಊದುವುದು ರೂಢಿ.
ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ನಡೆದಿದ್ದು, ಈ ವೇಳೆ ತಂಙಳ್ ಸೂಕ್ತಗಳನ್ನು ಓದಿ ಊದಿದ್ದರೆ ವಿನಃ ಉಗುಳಿದ್ದಲ್ಲ” ಎಂದು ಅವರ ಸಹಾಯಕ ಹನೀಫ್ ಹಾಜಿ ಉಳ್ಳಾಲ ಹೇಳಿಕೆ ನೀಡಿದ್ದಾಗಿ ವರದಿ ಉಲ್ಲೇಖಿಸಿದೆ.
ಹಝ್ರತ್ ನಿಝಾಮುದ್ದೀನ್ ಔಲಿಯಾ ದರ್ಗಾದ ಪೀರ್ಝಾದಾ ಅಲ್ತಮಶ್ “ಅವರು ಊದುತ್ತಿದ್ದಾರೆಯೇ ಹೊರತು ಉಗುಳುತ್ತಿಲ್ಲ. ಇಂತಹಾ ಸಂಪ್ರದಾಯವನ್ನು ಪಾಲಿಸುವ ಹಲವು ಸಮುದಾಯಗಳಿವೆ.
ಇದು ಬರ್ಕತ್ (ಅನುಗ್ರಹ)ಕ್ಕಾಗಿ ನಡೆಸುವ ಒಂದು ಧಾರ್ಮಿಕ ರೂಢಿ ಮಾತ್ರ. ನಮ್ಮ ದರ್ಗಾದಲ್ಲಿ ಈ ಸಂಪ್ರದಾಯವಿಲ್ಲ ಆದರೆ ಹಲವೆಡೆ ಇದನ್ನು ಪಾಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಸಹ ಸ್ಪಷ್ಟನೆ ನೀಡಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
“ಸಯ್ಯಿದ್ ಕೂರ ತಂಙಳ್ ರವರು ಖುರ್‌ಆನ್ ಓದಿ ಮಂತ್ರಿಸಿ ಊದುವ ವಿಡಿಯೋ ವನ್ನು ಕೆಲವರು ಭಕ್ಷಣಕ್ಕೆ ಉಗುಳುವುದೆಂದು ಅಪಪ್ರಚಾರ ಪಡಿಸುತ್ತಿದ್ದಾರೆ.
ಸಾಧಾರಣ ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ಮಾಡುವ ಆಹಾರ ಪದಾರ್ಥಗಳಿಗೆ ಖುರ್‌ಆನ್ ಮಂತ್ರಿಸಿ ಊದುವ ವಾಡಿಕೆ ಮುಸ್ಲಿಮರ ನಡುವೆ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಅವರ ನಂಬಿಕೆ ಪ್ರಕಾರ ಇಂತಹ ಹಲವಾರು ಆಚಾರಗಳು ನಡೆಯುತ್ತವೆ.
ಅದರ ಬಗ್ಗೆ ತಿಳಿಯದೆ ಅಪಪ್ರಚಾರ ನಡೆಸುವುದು ಸರಿಯಲ್ಲ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
Need your valuable inputs, @zoo_bear. Can you please verify & fact check this video clip for our viewers?!
Is that man actually spitting in the food that is ready to be served?? Why??
And please don't ignore my request like you did the last time. Thanks in advance!! :)) pic.twitter.com/j0HEOB5H62
— Priti Gandhi – प्रीति गांधी (@MrsGandhi) November 7, 2021
FILM
ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ
Published
45 minutes agoon
29/11/2024By
NEWS DESK4ಉಡುಪಿ : ಖ್ಯಾತ ನಟಿ ಮಾಲಾಶ್ರೀ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ದೇವರ ದರ್ಶನ ಮಾಡಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಮಾಲಾಶ್ರೀ ಜೊತೆ ಪುತ್ರಿ ಕಾಟೇರಾ ನಟಿ ಆರಾಧನಾ ಕೂಡ ಉಪಸ್ಥಿತರಿದ್ದರು.
ಪರ್ಯಾಯದಲ್ಲಿ ಭಗವದ್ಗೀತೆಯನ್ನು ಬರೆಯುವ ಕೋಟಿಗೀತಾ ಲೇಖನ ಯಜ್ಞದೀಕ್ಷೆಯನ್ನು ಇಬ್ಬರೂ ಸ್ವೀಕರಿಸಿದರು.
LATEST NEWS
ಬೈಕ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಡ್ರೈವರ್ ಎಡವಟ್ಟು: 12 ಮಂದಿಯ ದುರಂತ ಅಂತ್ಯ
Published
1 hour agoon
29/11/2024By
NEWS DESK3ಮಂಗಳೂರು/ಮಹಾರಾಷ್ಟ್ರ: ಮಹಾರಾಷ್ಟ್ರ ರಾಜ್ಯದ ಗೊಂಡಿಯಾ ಜಿಲ್ಲೆಯ ಕೊಹ್ಮಾರಾ ರಾಜ್ಯ ಹೆದ್ದಾರಿಯ ಖಾಜ್ರಿ ಎಂಬ ಗ್ರಾಮದ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು 9 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಅಷ್ಟಕ್ಕೂ, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಏಕಾಏಕಿ ಎದುರಿಗೆ ಬಂದಿದ್ದ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಬಿದ್ದಿದೆ. ಇದರ ಪರಿಣಾಮ 9 ಜನರು ಸ್ಥಳದಲ್ಲಿಯೇ ಮೃತಪಟ್ಟು ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ವಿಶ್ವವಿದ್ಯಾಲಯಗಳಿಗೆ ಮುಖ್ಯಮಂತ್ರಿಯೇ ಕುಲಪತಿ!
ಬಸ್ಸ್ ನ ಎದುರಿಗೆ ಸಡನ್ ಆಗಿ ಬಂದ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೇರೆ ಕಡೆ ತಿರುಗಿಸಿದ ಪರಿಣಾಮ ಬಸ್ಸ್ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯರ ಸಹಾಯದೊಂದಿಗೆ ಘಟನೆಯಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಇನ್ನೂ ಅಪಘಾತ ನಡೆದ ತಕ್ಷಣವೇ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಪ್ರಕರಣವನ್ನು ದಾಖಿಲಿಸಿಕೊಂಡಿದ್ದು ತನಿಖೆಯನ್ನು ಶುರು ಮಾಡಿದ್ದಾರೆ.
LATEST NEWS
ಓವರ್‌ಟೇಕ್ ಮಾಡಲು ಹೋಗಿ ಬೈಕ್‌ಗೆ ಕಾರು ಡಿ*ಕ್ಕಿ; ಇಬ್ಬರ ದುರ್ಮ*ರಣ
Published
1 hour agoon
29/11/2024By
NEWS DESK4ಮಂಗಳೂರು/ಯಾದಗಿರಿ : ಕಾರು ಡಿ*ಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸಾ*ವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ರಿಕಿ ಗ್ರಾಮದ ಬಳಿ ನಡೆದಿದೆ.
ಹಳ್ಳೆಪ್ಪ(45) ಹಾಗೂ ಮಲ್ಲಯ್ಯ(35) ಮೃ*ತ ಬೈಕ್ ಸವಾರರು. ಜೇವರ್ಗಿ ತಾಲೂಕಿನ ಚಿಕ್ಕಮುದವಾಳ ಗ್ರಾಮದ ಬಳಿಯಿರುವ ಜಮೀನು ನೋಡಿಕೊಂಡು ಬರಲು ಬೈಕ್‌ನಲ್ಲಿ ತೆರಳಿದ್ದರು. ವಾಪಾಸ್ ಊರಿಗೆ ಬರುವಾಗ, ಕಾರು ಚಾಲಕ ಬೈಕ್‌ನ್ನು ಓವರ್‌ಟೇಕ್ ಮಾಡಲು ಹೋಗಿ ಡಿ*ಕ್ಕಿ ಹೊಡೆದಿದ್ದಾನೆ, ಡಿ*ಕ್ಕಿಯ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರು ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಇದನ್ನೂ ಓದಿ : Watch Video: ರಸ್ತೆಯಲ್ಲಿ ಸೂಪರ್ ಮ್ಯಾನ್‌ನಂತೆ ಬೈಕ್ ಹಾರಿಸಿದ ವ್ಯಕ್ತಿ
ಮ*ರಣೋತ್ತರ ಪರೀಕ್ಷೆಗಾಗಿ ಮೃ*ತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಭೀಮರಾಯನ ಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
ಇನ್ಮುಂದೆ ವಿಶ್ವವಿದ್ಯಾಲಯಗಳಿಗೆ ಮುಖ್ಯಮಂತ್ರಿಯೇ ಕುಲಪತಿ!
ಮಂಗಳೂರು: ವರ್ಕ್ ಶಾಪ್ನಲ್ಲಿ ಕಳವು ಪ್ರಕರಣ; ಆರೋಪಿಯ ಬಂಧನ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮನೆ ಮುಂದೆ ವಿಚಿತ್ರ ಪ್ರತಿಭಟನೆ; ಕಾರಣವೇನು?
Watch Video: ರಸ್ತೆಯಲ್ಲಿ ಸೂಪರ್ ಮ್ಯಾನ್‌ನಂತೆ ಬೈಕ್ ಹಾರಿಸಿದ ವ್ಯಕ್ತಿ
ಮೆಗಾ ಹರಾಜಿನಲ್ಲಿ ಅನ್ಸೋಲ್ಡ್; ನಿವೃತ್ತಿ ಘೋಷಿಸಿದ ಆರ್ಸಿಬಿ ಮಾಜಿ ಆಟಗಾರ
ಅಪರಾಧ ಪ್ರಕರಣಗಳಿಂದ ಸುಸ್ತಾದ ಪೊಲೀಸರು; ಠಾಣೆಯಲ್ಲಿ ಹೋಮ, ಹವನ !
Trending
- BIG BOSS6 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- BANTWAL24 hours ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- Baindooru6 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
- Ancient Mangaluru2 days ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು