ಯುಎಇಯ ಅಜ್ಮಾನ್ ಮಾರುಕಟ್ಟೆಯಲ್ಲಿ ಭಾರೀ ಅಗ್ನಿ ಅವಘಡ..!
ದುಬೈ: ಲೆಬನಾನ್ ರಾಜಧಾನಿ ಬೈರೂತ್ ನಲ್ಲಿ ಭಾರೀ ಸ್ಫೋಟ ಸಂಭವಿಸಿದ ಬೆನ್ನಲೇ ಇದೀಗ ಯುಎಇಯ ಅಜ್ಮಾನ್ ಮಾರುಕಟ್ಟೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ದುಬೈಯಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಕೈಗಾರಿಕಾ ವಲಯದಲ್ಲಿರುವ ಅಜ್ಮಾನ್ ನ ಹಣ್ಣು ಮತ್ತು ತರಕಾತಿ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ.
ಪ್ರಸ್ತುತ ಯಾವುದೇ ಸಾವು ನೋವುಗಳಾದ ಬಗ್ಗೆ ವರದಿಯಾಗಿಲ್ಲ. ಆದರೆ ಬೆಂಕಿಯ ಜ್ವಾಲೆಗೆ ಇಡೀಯ ಮಾರುಕಟ್ಟೆ ಪ್ರದೇಶ ಸುಟ್ಟು ಬೂದಿಯಾಗಿದೆ.
ಲೆಬನಾನ್ ರಾಜಧಾನಿ ಬೈರೂತ್ ನಲ್ಲಿ ನಡೆದ ಭಾರಿ ಸ್ಫೋಟ ಬಳಿಕ ಯುಎಈಯಲ್ಲಿ ನಡೆದ ಅತ್ಯಂತ ದೊಡ್ಡ ಬೆಂಕಿ ಅನಾಹುತಾ ಇದಾಗಿದೆ.
ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು ದುರ್ಘಟನೆಗೆ ಸ್ಪಷ್ಟ ಕಾರಣಗಳು ತಿಳಿದು ಬಂದಿಲ್ಲ..
#Video: After #Lebanon tragedy, a Huge fire and explosion is happening now in #Ajman, near #Dubai in UAE…. And still 5 months left from 2020!#Beirut #Beirutblast #Adjman pic.twitter.com/eVGMmne19e
— simsalen (@simsalen) August 5, 2020