Friday, July 1, 2022

ಮುಂಬೈ : ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿಅವಘಡ; ಇಬ್ಬರ ಸಾವು..!

ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿನ ಕೋವಿಡ್-19 ಆಸ್ಪತ್ರೆಯೊಂದರಲ್ಲಿ ನಿನ್ನೆ ತಡರಾತ್ರಿ ಅಗ್ನಿ ದುರಂತ ಸಂಭವಿಸಿದ್ದು, ಎರಡಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ.

ಮುಂಬೈನ ಭಾಂಡುಪ್​ನಲ್ಲಿರುವ ಡ್ರೀಮ್ಸ್ ಮಾಲ್​ನಲ್ಲಿ ಸ್ಥಾಪಿಸಲಾಗಿದ್ದ ಸನ್​ರೈಸ್ ಹಾಸ್ಪಿಟಲ್​​ನಲ್ಲಿ ರಾತ್ರಿ 12:30ರ ವೇಳೆಯಲ್ಲಿ ಈ ಅವಘಡವಾಗಿದೆ.

ಈ ವೇಳೆ ಆಸ್ಪತ್ರೆಯಲ್ಲಿ 70ಕ್ಕೂ ಹೆಚ್ಚು ರೋಗಿಗಳು ಇದ್ದರೆನ್ನಲಾಗಿದೆ. ಬೆಂಕಿ ದುರಂತವಾದ ಬಳಿಕ ಬಹುತೇಕ ರೋಗಿಗಳನ್ನ ಕೂಡಲೇ ಸ್ಥಳಾಂತರ ಮಾಡಲಾಗಿದೆ. ಆದರೆ, ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂದು ಗೊತ್ತಾಗಿಲ್ಲ. ತನಿಖೆ ನಡೆಯುತ್ತಿದೆ.

ಭಾಂಡುಪ್​ನಲ್ಲಿರುವ ಡ್ರೀಮ್ಸ್ ಮಾಲ್​ನ ಮೊದಲ ಮಹಡಿಯಲ್ಲಿ ಬೆಂಕಿ ಮೊದಲು ಕಾಣಿಸಿಕೊಂಡಿತು. 3 ಅಥವಾ 4ನೇ ಮಟ್ಟದಲ್ಲಿ ಸಂಭವಿಸಿದ ಅಗ್ನಿ ದುರಂತ ಇದಾಗಿದೆ. ಸುಮಾರು 22 ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸುವ ಕೆಲಸ ನಡೆದಿದೆ.

ಮಾಲ್​ನಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪಿಸಿದ್ದಕ್ಕೆ ಬಹಳಷ್ಟು ಆಕ್ಷೇಪಗಳು ವ್ಯಕ್ತವಾಗಿವೆ. ಈ ವಿಷಯವಾಗಿ ಮುಂಬೈ ಮೇಯರ್ ಕೂಡ ಅಸಮಾಧಾನಗೊಂಡಿದ್ದಾರೆ.

ಮಾಲ್​ನಲ್ಲಿ ಆಸ್ಪತ್ರೆ ಮಾಡಿದ್ದನ್ನು ತಾನು ಇದೇ ಮೊದಲು ನೋಡಿದ್ದಾಗಿ ಅವರು ಆಕ್ರೋಶ ಹೊರಹಾಕಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ಧಾರೆ.

LEAVE A REPLY

Please enter your comment!
Please enter your name here

Hot Topics

ರಾಜ್ಯದಲ್ಲಿ ಮತ್ತೆ ಕೊರೋನಾ ಸ್ಫೋಟ: 1,249 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಪ್ರಕರಣಗಲು ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 25,753 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 1,249 ಮಂದಿಗೆ ಸೋಂಕು ದೃಢಪಟ್ಟಿದೆ.1,154 ಮಂದಿ ಡಿಸ್ಚಾರ್ಜ್...

ಮುಲ್ಕಿ: ಆಯತಪ್ಪಿ ಚರಂಡಿಗೆ ಬಿದ್ದು ವ್ಯಕ್ತಿ ಜೀವಾಂತ್ಯ…

ಮುಲ್ಕಿ: ನಡೆದುಕೊಂಡು ಹೋಗುತ್ತಿರುವಾಗ ಆಯತಪ್ಪಿ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ ಘಟನೆ ಮುಲ್ಕಿಯ ನಗರ ಪಂಚಾಯತ್ ವ್ಯಾಪ್ತಿಯ ಕೆಎಸ್ ರಾವ್ ನಗರ ಲಿಂಗಪ್ಪಯ್ಯಕಾಡು ಸರಕಾರಿ ಬಾವಿ ಬಳಿ ನಿನ್ನೆ ರಾತ್ರಿ ನಡೆದಿದೆ.ಮೃತ ವ್ಯಕ್ತಿಯನ್ನು...

ಸುಳ್ಯ: ಲೈಸೆನ್ಸ್‌ ಇಲ್ಲದೆ ಕಾರ್ಯಾಚರಿಸುತ್ತಿದ್ದ ಕ್ಲಿನಿಕ್‌ಗೆ ಬೀಗ ಜಡಿದ ಇಲಾಖೆ

ಸುಳ್ಯ: ಲೈಸೆನ್ಸ್‌ ಇಲ್ಲದೆ ಕಾರ್ಯಾಚರಿಸುತ್ತಿದ್ದ ಕ್ಲಿನಿಕ್‌ಗೆ ಆರೋಗ್ಯ ಇಲಾಖೆ ಬೀಗ ಜಡಿದು, ಕ್ಲಿನಿಕ್‌ ನಡೆಸುತ್ತಿದ್ದವರ ಮೇಲೆ ಕೇಸು ದಾಖಲಿಸಿದ ಘಟನೆ ಸುಳ್ಯದ ಕಲ್ಲುಗುಂಡಿಯಲ್ಲಿ ನಡೆದಿದೆ.ಕ್ಲಿನಿಕ್‌ನ ವಸ್ತುಗಳನ್ನು ಕೂಡಾ ಮುಟ್ಟುಗೋಲು ಹಾಕಲಾಗಿದೆ.ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ...