Wednesday, October 5, 2022

ಏಪ್ರಿಲ್‌ನಿಂದ ವಾಹನ ಬೆಲೆ ಹೆಚ್ಚಿಸಿದ ಮಾರುತಿ ಸುಜುಕಿ ಇಂಡಿಯಾ

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಈ ತಿಂಗಳು ತನ್ನ ವಾಹನದ ಬೆಲೆಗಳನ್ನು ಹೆಚ್ಚಿಸುವುದಾಗಿ ಬುಧವಾರ ತಿಳಿಸಿದೆ.


ಇನ್‌ಪುಟ್ ವೆಚ್ಚದಲ್ಲಿ ನಿರಂತರ ಹೆಚ್ಚಳದಿಂದಾಗಿ ಸುಮಾರು ಶೇ 8.8ರಷ್ಟು ಹೆಚ್ಚಿಸಿದೆ. ಕಂಪೆನಿಯು ದೇಶೀಯ ಮಾರುಕಟ್ಟೆಯಲ್ಲಿ ಆಲ್ಟೊದಿಂದ ಪ್ರಾರಂಭಿಸಿ ಎಸ್-ಕ್ರಾಸ್​ವರೆಗೆ ಹಲವಾರು ಮಾದರಿಗಳನ್ನು ಮಾರಾಟ ಮಾಡುತ್ತದೆ.
ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚದ ಪರಿಣಾಮವನ್ನು ಸರಿದೂಗಿಸಲು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಸಂಪೂರ್ಣ ಮಾದರಿ ಶ್ರೇಣಿಯ ಬೆಲೆಗಳನ್ನು ಏಪ್ರಿಲ್ 1ರಿಂದ ಶೇಕಡಾ 4ರ ವರೆಗೆ ಹೆಚ್ಚಿಸಿದೆ.

ಅದೇ ರೀತಿ ಬಿಎಂಡಬ್ಲ್ಯ ಇಂಡಿಯಾ ಈ ತಿಂಗಳಿನಿಂದ ಉತ್ಪನ್ನದ ಬೆಲೆಯನ್ನು ಶೇಕಡಾ 3.5 ರಷ್ಟು ಹೆಚ್ಚಿಸಿದೆ. ಇತರ ಐಷಾರಾಮಿ ಕಾರು ತಯಾರಕರಾದ ಔಡಿ ಮತ್ತು ಮರ್ಸಿಡಿಸ್-ಬೆಂಜ್ ಕೂಡ ಏಪ್ರಿಲ್ 1 ರಿಂದ ಬೆಲೆಗಳನ್ನು ಹೆಚ್ಚಿಸಿವೆ.

LEAVE A REPLY

Please enter your comment!
Please enter your name here

Hot Topics

ಅರಬ್‌ ನಾಡಲ್ಲಿ ನೂತನ ಹಿಂದೂ ದೇವಾಲಯ: ಉದ್ಘಾಟಿಸಿದ UAE ಸಚಿವ ಶೇಖ್ ನಹ್ಯಾನ್

ದುಬೈ(ಯುಎಇ): ಅರಬ್‌ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ನಿನ್ನೆ ಉದ್ಘಾಟನೆಗೊಂಡಿದೆ.ಯುಎಇಯ ಜೆಬೆಲ್‌ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಈ ಮೂಲಕ ಭಾರತೀಯರ ದಶಕದ ಕನಸು ಈಡೇರಿದೆ.ಯುಎಇಯ...

‘ಮಂಗಳೂರು ದಸರಾ’ ವೈಭವದ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶರನ್ನವರಾತ್ರಿ ಅಂಗವಾಗಿ ಕಳೆದ 9 ದಿನಗಳಿಂದ ಪೂಜಿಸಲ್ಪಟ್ಟ ಶಾರದೆ ಹಾಗೂ ನವ ದುರ್ಗೆಯರ ವೈಭವದ ಶೋಭಾ ಯಾತ್ರೆ ಇಂದು ಸಂಜೆ ನಡೆಯಲಿದೆ.ಸಂಜೆ 4 ಗಂಟೆಗೆ ಶಾರದಾ...

ಉಡುಪಿಯಲ್ಲಿ ಬೋನಿಗೆ ಬಿದ್ದ ಚಿರತೆ: ಮತ್ತೆ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

ಉಡುಪಿ: ಜಿಲ್ಲೆಯ ಮಟಪಾಡಿ ಗ್ರಾಮದಲ್ಲಿ ಊರಿನ ಜನರು ಅರಣ್ಯ ಇಲಾಖೆ ಮೂಲಕ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.ಮಟಪಾಡಿ ಗ್ರಾಮದಲ್ಲಿ ಬಹಳಷ್ಟು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಮೂಲಕ ಬೋನನ್ನು...