ಉಳ್ಳಾಲ: ವಿದ್ಯುತ್ ಕಂಬಕ್ಕೆ ಮಾರುತಿ 800 ಢಿಕ್ಕಿ ಹೊಡೆದು ಕಂಬ ಅಪ್ಪಚ್ಚಿಯಾಗಿ ನೆಲಕ್ಕುರುಳಿದರೂ , ಕಾರು ಚಲಾಯಿಸುತ್ತಿದ್ದ ವಿದ್ಯಾರ್ಥಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಪವಾಡಸದೃಶವಾಗಿ ಪಾರಾದ ಘಟನೆ ಉಳ್ಳಾಲ ನಾಟೆಕಲ್ ಸಮೀಪದ ಸಂಕೇಶ ಎಂಬಲ್ಲಿ ಬುಧವಾರ ತಡರಾತ್ರಿ ವೇಳೆ ಸಂಭವಿಸಿದೆ.
ಮಾರುತಿ 800 ಕಾರು ಢಿಕ್ಕಿ ಹೊಡೆದರೂ, ಯಾವುದೇ ರೀತಿಯ ಹಾನಿಯಾಗಿಲ್ಲ.
ಚಾಲಕ ವಿದ್ಯಾರ್ಥಿ ಗೂ ಅಲ್ಪಸ್ವಲ್ಪ ಗಾಯಗಳಾಗಿದೆ.
ಆದರೆ ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಸಂಪೂರ್ಣ ಹಾನಿಯಾಗಿ ನೆಲಕ್ಕುರುಳಿದೆ.
ಹಳೇಯ ಕಾರೇ ಲೇಸು : ಜೀವ ಸುರಕ್ಷಿತವಾಗಿರಿಸುವ ಬಲೂನ್ ತಂತ್ರಜ್ಞಾನ ಕಾರಲ್ಲಿ ಇಲ್ಲದಿದ್ದರೂ ಚಾಲಕ ಸುರಕ್ಷಿತವಾಗಿದ್ದಾನೆ.
ಕ್ವಿಂಟಾಲ್ ಗಟ್ಟಲೆ ತೂಕವಿರುವ ಕಂಬವೇ ನೆಲಕ್ಕುರುಳಿದೆ.
ಬೆಲೂನ್ ಇದ್ದರೂ ಸಾವನ್ನಪ್ಪುವ ಅಪಘಾತ ಗಳು ಕಣ್ಣ ಮುಂದಿರುವಾಗ, ಮಾರುತಿ 800 ಕಾರೇ ಎಂದಿಗೂ ಬಲಿಷ್ಠ ಅನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂತು.
ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತೆರವು ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ. .