Connect with us

    LATEST NEWS

    ಇಸ್ತ್ರಿ ಮಾಡಲು ಹೋಗುವುದಾಗಿ ಹೇಳಿ ಹೋದ ವಿವಾಹಿತ ಮಹಿಳೆ ನಾಪತ್ತೆ

    Published

    on

    ಶಿರ್ವ: ಬಟ್ಟೆಯನ್ನು ಇಸ್ತ್ರಿ ಮಾಡಲು ಹೋಗುವುದಾಗಿ ನೆರೆಮನೆಯವರಲ್ಲಿ ತಿಳಿಸಿ ಹೋದ ವಿವಾಹಿತ ಮಹಿಳೆ ನಾಪತ್ತೆಯಾದ ಘಟನೆ ಆ. 25 ರಂದು ಶಿರ್ವ ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಳಪುವಿನಲ್ಲಿ ನಡೆದಿದೆ.


    ಬೆಳಪು ನಿವಾಸಿ ಆಶಾ(36) ಕಾಣೆಯಾಗಿರುವ ಮಹಿಳೆ.
    ಆ. 25 ರಂದು ಮಧ್ಯಾಹ್ನ ತನ್ನ ಗಂಡನಿಗೆ ನಿಮ್ಮೊಂದಿಗೆ ಇರಲು ಇಷ್ಟವಿಲ್ಲ. ನನ್ನಷ್ಟಕ್ಕೆ ಇರುತ್ತೇನೆ ಎಂದು ಬೇರೆ ಯಾರದೋ ಮೊಬೈಲ್‌ನಿಂದ ಕರೆ ಮಾಡಿ ತಿಳಿಸಿದ್ದು, ಬಳಿಕ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿದ್ದಾರೆ.

    ಆಶಾ ಅವರು ಈ ಹಿಂದೆಯೂ ಒಮ್ಮೆ ಮನೆ ಬಿಟ್ಟು ಹೋಗಿದ್ದು ಮಣಿಪಾಲ ಠಾಣೆ ಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದ್ದು ಬಳಿಕ ಪತ್ತೆಯಾಗಿದ್ದರು. ಆಕೆಯ ಗಂಡ ಸುಬ್ರಹ್ಮಣ್ಯ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    LATEST NEWS

    ಕರಾವಳಿ ಉತ್ಸವದ ಪ್ರಯುಕ್ತ ಡಿಸೆಂಬರ್ 28 ಮತ್ತು 29 ರಂದು ಬೀಚ್ ಉತ್ಸವ

    Published

    on

    ಮಂಗಳೂರು: ಕರಾವಳಿ ಉತ್ಸವದ ಹಿನ್ನಲೆಯಲ್ಲಿ ಡಿಸೆಂಬರ್ 28 ಮತ್ತು 29 ರಂದು ತಣ್ಣೀರು ಬಾವಿ ಬೀಚ್‌ನಲ್ಲಿ ಬೀಚ್ ಉತ್ಸವ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ಜನರಿಗೆ ಬರಪೂರ ಮನರಂಜನೆ ನೀಡಲಿರುವ ಈ ಬೀಚ್ ಉತ್ಸವದಲ್ಲಿ ಖ್ಯಾತ ಹಿನ್ನೆಲೆ ಗಾಯಕರ ಸಮಾಗಮವಾಗಲಿದೆ.

    ಈ ಬೀಚ್ ಉತ್ಸವದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದು, ಕಾರ್ಯಕ್ರಮಗಳ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕರಾಗಿರುವ ಮಣಿಕಾಂತ್ ಕದ್ರಿ ಹಾಗೂ ತನ್ನದೇ ಶೈಲಿಯ ಸಂಗೀತದ ಮೂಲಕ ಜಗತ್ಪ್ರಸಿದ್ದಿ ಪಡೆದುಕೊಂಡಿರುವ ಗಾಯಕ ರಘು ದೀಕ್ಷೀತ್ ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ.

    ಇದರ ಜೊತೆಗೆ ಬೀಚ್ ಉತ್ಸವದಲ್ಲಿ ಡ್ಯಾನ್ಸ್ ಫೆಸ್ಟಿವಲ್ , ವಾಟರ್ ಸ್ಪೋರ್ಟ್ಸ್‌, ಸ್ಯಾಂಡ್ ಆರ್ಟ್‌ , ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವೀಕೆಂಡ್ ಎಂಜಾಯ್ ಮಾಡಲು ಇದೊಂದು ಸದಾವಕಾಶವಾಗಿದ್ದು, ಕರಾವಳಿ ಉತ್ಸವ ಸಂಭ್ರಮಕ್ಕೆ ಈ ಎರಡು ದಿನಗಳ ಬೀಚ್‌ನಲ್ಲಿ ಜನರಿಗೆ ಸಾಕಷ್ಟು ಮನರಂಜನೆ ಸಿಗಲಿದೆ. ವಾಹನ ನಿಲುಗಡೆಗೂ ಪೊಲೀಸ್ ಇಲಾಖೆಯಿಂದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸುಲ್ತಾನ್ ಬತ್ತೇರಿಯಿಂದ ಬೋಟ್ ಮೂಲಕ ತೆರಳುವವರಿಗೂ ಹೆಚ್ಚಿನ ವ್ಯವಸ್ಥೆಯನ್ನ ಮಾಡಲಾಗಿದೆ.

    ಮಂಗಳೂರಿನ ಖ್ಯಾತ ಬಿಲ್ಡರ್ ರೋಹನೊ ಕಾರ್ಪೋರೇಷನ್ ಈ ಬೀಚ್ ಫೆಸ್ಟಿವಲ್‌ಗೆ ಟೈಟಲ್ ಸ್ಪಾನ್ಸರ್ ಆಗಿ ಸಹಕರಿಸಿದ್ದು, ಬೀಚ್ ಫೆಸ್ಟಿವಲ್ ಸಮಿತಿಯ ಅದ್ಯಕ್ಷತೆಯನ್ನು ನಗರ ಪೊಲೀಸ್ ಆಯುಕ್ತರು ವಹಿಸಿಕೊಂಡಿದ್ದಾರೆ.

    Continue Reading

    LATEST NEWS

    ಮಗನ ಆ ಒಂದು ನಿರ್ಧಾರದಿಂದ ಸಾ*ವಿಗೆ ಶರಣಾದ ಹೆತ್ತವರು!

    Published

    on

    ಮಂಗಳೂರು/ನಂದ್ಯಾಲ್ : ತಮ್ಮ 24 ವರ್ಷದ ಮಗ ತೃತೀಯ ಲಿಂಗಿಯನ್ನು ಮದುವೆಯಾಗಲು ಮುಂದಾಗಿದ್ದನ್ನು ಕೇಳಿ ತಂದೆ – ತಾಯಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ನಡೆದಿದೆ. ಸುಬ್ಬಾ ರಾಯುಡು(45) ಮತ್ತು ಸರಸ್ವತಿ(38) ಮೃ*ತ ದಂಪತಿ.

    ಮಗ ಸುನೀಲ್ ಕುಮಾರ್ ಕಳೆದ ಮೂರು ವರ್ಷಗಳಿಂದ ಸ್ಥಳೀಯ ತೃತೀಯ ಲಿಂಗಿ ಸಮುದಾಯದೊಂದಿಗೆ ಒಡನಾಟ ಹೊಂದಿದ್ದನಂತೆ. ಈ ವಿಚಾರ ಗೊತ್ತಾದಾಗ ಸುಬ್ಬಾ ರಾಯುಡು, ಸರಸ್ವತಿ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಗನೊಂದಿಗೆ ಜಗಳವೂ ನಡೆದಿದೆ ಎಂದು ತಿಳಿದು ಬಂದಿದೆ.

    ತೃತೀಯಲಿಂಗಿಯೊಂದಿಗೆ ಮೂರು ವರ್ಷಗಳಿಂದ ಸುನೀಲ್ ಕುಮಾರ್ ಸಂಬಂಧ ಹೊಂದಿದ್ದ. ಅವರನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದ. ಈ ಬಗ್ಗೆ ಪೋಷಕರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಇದೇ ವಿಚಾರವಾಗಿ ಈ ಹಿಂದೆ ಸುನೀಲ್ ಆತ್ಮಹ*ತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿರುವ ಬಗ್ಗೆ ವರದಿಯಾಗಿದೆ.

    ಇದನ್ನೂ ಓದಿ : ಹೆಚ್ಚು ಮೊಬೈಲ್ ನೋಡ್ಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ವಿಷ ಸೇವಿಸಿ ಯುವತಿ ಆತ್ಮಹತ್ಯೆ

    ತೃತೀಯ ಲಿಂಗಿಗಳ 1.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದು, ಪೋಷಕರಿಗೆ ಆ ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ತೃತೀಯ ಲಿಂಗಿ ಸಮುದಾಯದ ಸದಸ್ಯರು ಪೋಷಕರನ್ನು ಸಾರ್ವಜನಿಕವಾಗಿ ನಿಂದಿಸಿದ್ದರು. ಇದರಿಂದ ನೊಂದ ದಂಪತಿ ಸಾ*ವಿನ ದಾರಿ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

    Continue Reading

    LATEST NEWS

    ಸ್ವಾಮಿತ್ತ ಕಾರ್ಡ್ ಬಳಸಿ; ಬ್ಯಾಂಕ್‌ನಿಂದ ಸುಲಭವಾಗಿ ಸಾಲ ಪಡೆಯಿರಿ

    Published

    on

    ಭೂ ಮಾಲೀಕತ್ವದ ಹಕ್ಕುಗಳನ್ನು ಖಚಿತಪಡಿಸಿಕೊಳ್ಳುವುದು, ಭೂ ವಿವಾದಗಳನ್ನು ಕಡಿಮೆ ಮಾಡುವುದು ಹಾಗೂ ಗ್ರಾಮ ಮಟ್ಟದ ಯೋಜನೆಗಳಿಗೆ ಈ ಸ್ವಾಮಿತ್ತ ಕಾರ್ಡ್ ಸಹಕಾರಿಯಾಗಲಿದೆ. ಡಿಸೆಂಬರ್ 27 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್‌ಗಢ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಿಜೋರಾಂ, ಒಡಿಶಾ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ ಮುಂತಾದ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಪ್ರಗತಿ ತರಲು 2020ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಗ್ರಾಮ ಸಮೀಕ್ಷೆ ಮತ್ತು ಮ್ಯಾಪಿಂಗ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದರು.

    ಡ್ರೋನ್​ಗಳ ಮೂಲಕ ಭೂಮಿಯನ್ನು ಸಮೀಕ್ಷೆ ಮಾಡುವುದು ಮತ್ತು ಜಿಐಎಸ್ ತಂತ್ರಜ್ಞಾನದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಭೂಮಿಗಳನ್ನು ಗುರುತಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಡಿಸೆಂಬರ್ 27 ರಂದು 10 ರಾಜ್ಯಗಳ 50 ಸಾವಿರ ಹಳ್ಳಿಗಳ 58 ಲಕ್ಷ ಜನರಿಗೆ ಸ್ವಾಮಿತ್ವ ಆಸ್ತಿ ಕಾರ್ಡ್ ವಿತರಿಸಲಾಗುವುದು. ಗ್ರಾಮೀಣ ಪ್ರದೇಶದ ಭೂ ಮಾಲೀಕರಿಗೆ ಮಾಲೀಕತ್ವದ ಕಾರ್ಡ್ ನೀಡಲು ಕೇಂದ್ರ ಸರ್ಕಾರ ಯೋಜಿಸಿತ್ತು. ಇದಕ್ಕಾಗಿ, ಭೂ ಮಾಲೀಕರಿಗೆ ಮಾಲೀಕತ್ವದ ಹಕ್ಕುಗಳನ್ನು ಹೊಂದಿರುವ ಕಾರ್ಡ್ ಅನ್ನು ನೀಡಲಾಗುತ್ತದೆ. ಅದರ ಸಹಾಯದಿಂದ ಬ್ಯಾಂಕ್‌ಗಳಿಂದ ಸಾಲ ಪಡೆಯುವುದು ಸುಲಭವಾಗುತ್ತದೆ. ಈ ಕಾರ್ಡ್‌ನಲ್ಲಿ ಜನರ ಭೂಮಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ.

    ಸಚಿವಾಲಯದ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಮಾತನಾಡಿ, ಸ್ವಾಮಿತ್ವ ಯೋಜನೆಯಡಿ 3.17 ಗ್ರಾಮಗಳಲ್ಲಿ ಡ್ರೋನ್ ಸಮೀಕ್ಷೆ ಪೂರ್ಣಗೊಂಡಿದೆ. ಈ ಹಿಂದೆ ಹಲವು ರಾಜ್ಯಗಳಲ್ಲಿ ಹಳ್ಳಿಗಳ ವಸತಿ ಪ್ರದೇಶಗಳ ನಕ್ಷೆ ಇರಲಿಲ್ಲ ಎಂದು ಪಂಚಾಯತ್ ರಾಜ್ ಸಚಿವಾಲಯ ತಿಳಿಸಿದೆ. ಇದರಿಂದ ಬ್ಯಾಂಕ್‌ಗಳಿಂದ ಸಾಲ ಪಡೆಯಲು ತೊಂದರೆಯಾಗುತ್ತಿತ್ತು. ಹೊಸ ಪ್ರಯತ್ನದ ನಂತರ, ಅನೇಕ ಆಸ್ತಿ ಮಾಲೀಕರು ತಮ್ಮ ಆಸ್ತಿ ಕಾರ್ಡ್‌ಗಳ ಮೂಲಕ ಬ್ಯಾಂಕ್ ಸಾಲವನ್ನು ಪಡೆಯಲು ಸಮರ್ಥರಾಗಿದ್ದಾರೆ, ಅದು ಈಗ ಕಾನೂನು ಮಾನ್ಯತೆಯನ್ನೂ ಹೊಂದಿದೆ.ಜನವಸತಿ ಮತ್ತು ಜನವಸತಿ ಇಲ್ಲದ ಪ್ರದೇಶಗಳ ಡ್ರೋನ್ ಸಮೀಕ್ಷೆಯು ಈ ಯೋಜನೆಯ ಮೊದಲ ಹಂತವಾಗಿದೆ. ಇದುವರೆಗೆ 1.49 ಲಕ್ಷ ಗ್ರಾಮಗಳಲ್ಲಿ 2.19 ಕೋಟಿಗೂ ಹೆಚ್ಚು ಆಸ್ತಿ ಕಾರ್ಡ್‌ಗಳನ್ನು ಸೃಷ್ಟಿಸಲಾಗಿದೆ. ಈ ಯೋಜನೆಯಡಿ ಮಾರ್ಚ್ 2026 ರೊಳಗೆ ಎಲ್ಲಾ ಫಲಾನುಭವಿಗಳಿಗೆ ಕಾರ್ಡ್‌ಗಳು ಲಭ್ಯವಾಗುವಂತೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

    Continue Reading

    LATEST NEWS

    Trending