DAKSHINA KANNADA
ದಂಪತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಇಬ್ಬರಿಗೂ ಕೊರೊನಾ ಸೋಂಕು ಇರಲಿಲ್ಲ-ಡೆತ್ ನೋಟ್‌ನಲ್ಲಿ ಏನಿತ್ತು? ಫುಲ್ ಡಿಟೇಲ್ಸ್
Published
3 years agoon
By
Adminಮಂಗಳೂರು: ಇಂದು ಬೆಳಿಗ್ಗೆ ಬೈಕಂಪಾಡಿಯ ಚಿತ್ರಾಪುರ ಬಳಿ ದಂಪತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೊರೊನಾ ಸೋಂಕಿನ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿಗೆ ಕೊರೊನಾ ಸೋಂಕು ತಗುಲಿಲ್ಲ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂಗಳೂರು ಡಿಸಿಪಿ ಹರಿರಾಂ ಶಂಕರ್, ಡೆತ್ ನೋಟಲ್ಲಿ ನಮಗೆ ಕೊರೊನಾ ಇದೆ, ಬ್ಲ್ಯಾಕ್ ಫಂಗಸ್ ಬಂದರೆ ಸಮಸ್ಯೆ ಅಂತೆಲ್ಲಾ ಬರೆದಿದ್ದಾರೆ. ಆದರೆ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ಪ್ರಕಾರ ಅವರಿಗೆ ಕೊರೊನಾ ಇರುವ ಬಗ್ಗೆ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ.
ಕೊರೊನಾ ಭಯದಿಂದ ನಾನು ಮತ್ತು ನನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಬೆಳಗ್ಗೆ 6.40ರ ಹೊತ್ತಿಗೆ ಕಮಿಷನರ್ಗೆ ವಾಟ್ಸಾಪ್ ಮೆಸೇಜ್ ಮತ್ತು ಕಾಲ್ ಬಂದಿದೆ. ಈ ವೇಳೆ ತಕ್ಷಣ ಕಮಿಷನರ್ ಕಾಲ್ ಮಾಡಿದರೂ ಅವರು ಎತ್ತಲಿಲ್ಲ. ವಾಯ್ಸ್ ಮೆಸೇಜ್ ಮಾಡಿ ಧೈರ್ಯ ತುಂಬಿದರೂ ರಿಪ್ಲೈ ಮಾಡಿಲ್ಲ. ನಂತರ ಲೊಕೇಶನ್ ಟ್ರೇಸ್ ಮಾಡಿ, ಪೊಲೀಸ್ ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಡಿಸಿಪಿ ಹರಿರಾಂ ಶಂಕರ್ ಮಾಹಿತಿ ನೀಡಿದರು.
ಅವರೇ ಸ್ವಂತ ನಿರ್ಧಾರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ಸಲ ಮಗು ಪಡೆಯಲು ಯತ್ನಿಸಿ ವಿಫಲರಾಗಿದ್ದು, ಇದರ ಖಿನ್ನತೆ ಇರಬಹುದು. ಆದರೆ ಇವರು ಯಾರ ಜೊತೆಗೂ ಹೆಚ್ಚಾಗಿ ಬೆರೆತ ಬಗ್ಗೆ ಮಾಹಿತಿಯಿಲ್ಲ ಎಂದು ಡಿಸಿಪಿ ಹೇಳಿದ್ದಾರೆ.
ಇನ್ನು ಆತ್ಮಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೊರೊನಾಗೆ ಹೆದರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಬಹಳ ನೋವಿನ ಸಂಗತಿಯಾಗಿದೆ. ಕೊರೊನಾ ಸೋಂಕು ಬಂದ ಕೂಡಲೇ ಯಾರೂ ಸಾಯಲ್ಲ. ಮಾಹಿತಿ ಕೊರತೆಯಿಂದ ಈ ರೀತಿ ಮಾಡಿಕೊಂಡಿರಬಹುದು. ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಸರಿಯಲ್ಲ. ಕೊರೊನಾ ಲಕ್ಷಣ ಕಂಡುಬಂದರೆ ತಪಾಸಣೆ ಮಾಡಿಸಿಕೊಳ್ಳಿ. ಆರೋಗ್ಯ ಇಲಾಖೆ, ವೈದ್ಯರು ನಿಮ್ಮ ಜೊತೆ ಇರುತ್ತಾರೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಡೆತ್ ನೋಟ್‌ನಲ್ಲಿ ಏನಿತ್ತು?
ನಾನು ಗುಣ ಆರ್ ಸುವರ್ಣ,
ಈ ದಿನ ನಾನು ಮತ್ತು ನನ್ನ ಗಂಡ ಆತ್ಮಹತ್ಯೆಯ ನಿರ್ಧಾರವನ್ನು ನನ್ನ ಆರೋಗ್ಯದ ಈ ಸ್ಥಿತಿಯಲ್ಲಿ ಮಾಡಿರುತ್ತೇನೆ. ನನಗೆ 14ನೇ ವಯಸ್ಸಿನಲ್ಲಿ ಸರ್ಜರಿ ನಡೆದಿದೆ. 2000ನೇ ಇಸವಿಯಲ್ಲಿ ನಮಗೆ ಮದುವೆಯಾಗಿತ್ತು. 2001ರಲ್ಲಿ 1 ಪ್ರೆಗ್ನೆನ್ಸಿನಲ್ಲಿ 5ನೇ ತಿಂಗಳಿನಲ್ಲಿ ಸಕ್ಕರೆ ಖಾಯಿಲೆ ಕಂಡು ಬಂತು. ಆ ನಂತರ 2002 ಜನವರಿ 25ರಂದು ಸೋನಿಯಾ ಆಸ್ಪತ್ರೆ ಮಣಿಪಾಲದಲ್ಲಿ ಡೆಲಿವರಿ ಆಗಿ ಗಂಡು ಮಗು ಜನಿಸಿತ್ತು. ಮಗುವಿನ ಆರೋಗ್ಯ ಸಮಸ್ಯೆ ಕಂಡು ಬಂದು 12 ದಿನದಲ್ಲಿ ತೀರಿಕೊಂಡಿತ್ತು. ನಂತರ 2005ರಲ್ಲಿ ಮತ್ತೆ ಪ್ರಗ್ನೆಂಟ್ ಆದಾಗ ectopic pregencyಯಿಂದ surgery ಮಾಡಬೇಕಾದ ಸಂದರ್ಭ ಬಂದಿತ್ತು. ಮಂಗಳೂರಿನ ನರ್ಸಿಂಗ್ ಹೋಮ್‌ನ ವೈದ್ಯರು ಸರ್ಜರಿ ಮಾಡಿದ್ದರು. ಆಗ ನನಗೆ ಮೆಡಿಸಿನ್ ರಿಯಾಕ್ಟ್ ಆಗಿತ್ತು. ಆ ನಂತರ ನನಗೆ ಮೆಡಿಸಿನ್ ಅಷ್ಟಾಗಿ ನಡೆಯುತ್ತಿಲ್ಲ. ಶುಗರ್ ಕಂಟ್ರೋಲ್ ಸಿಗುತ್ತಿಲ್ಲ. 2020ರಿಂದ ಕೊರೋನಾ ಶುರು ಆದ ಮೇಲೆ ನಾನು ತುಂಬಾ ಜಾಗ್ರತೆ ಮಾಡಿಸುತ್ತಿದ್ದೇನೆ. ಆದರೆ ನನಗೆ 1 ವಾರದಿಂದ ಕೋವಿಡ್‌ನ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಆರೋಗ್ಯ ಸ್ಥಿತಿ ತುಂಬಾ ಹದಗೆಡುತ್ತಿದೆ. ನನಗೆ ಯಾವುದೇ ಮೆಡಿಸಿನ್ ತೆಗೆದುಕೊಂಡಾಗ ರಿಯಾಕ್ಷನ್ ಆಗಿ ಹಾಸ್ಪಿಟಲ್‌ಗೆ ಅಡ್ಮಿಟ್ ಆಗಲು ತುಂಬಾ ಭಯವಿದೆ. ಮಾಧ್ಯಮದಲ್ಲಿ ಕೊರೋನಾ ಬಗ್ಗೆ ನ್ಯೂಸ್ ನೋಡುವಾಗ ಸಕ್ಕರೆ ಖಾಯಿಲೆ ಇರುವವರಿಗೆ ಬ್ಲಾಕ್ ಫಂಗಸ್‌ನಿಂದ ಕಣ್ಣು ಹಾಗೂ ಶರೀರದ ಅಂಗಾಂಗಗಳನ್ನು ಕಳೆದುಕೊಂಡಿದ್ದು ನೋಡಿದಾಗ, ನನ್ನ ಆರೋಗ್ಯದಲ್ಲಿ ಆದ ಬದಲಾವಣೆಯನ್ನು ನೋಡಿದಾಗ ನನಗೂ ಆ ಥರ ಆಗಬಹುದೆಂಬ ಭಯ ಕಾಡುತ್ತಿದೆ. ಇಂತಹ ಸಮಯದಲ್ಲಿ ನಮಗೆ ಜೀವನವೇ ಬೇಡ ಎನ್ನುವ ಮನಸ್ಥಿತಿಗೆ ಬಂದಿದ್ದೇವೆ. ಆದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ.
ನನ್ನ ತಂದೆ-ತಾಯಿ ಹಾಗೂ ತಮ್ಮನಿಗೂ ಕೋವಿಡ್ ಸೋಂಕು ತಗುಲಿ ಚೇತರಿಸಿಕೊಂಡಿದ್ದಾರೆ. ನನ್ನ ತಾಯಿ ಕೋವಿಡ್ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ತುಂಬಾ ಕಷ್ಟದಿಂದ ಚೇತರಿಸಿಕೊಂಡಿದ್ದಾರೆ. ಆದುದರಿಂದ ಅವರಿಗೆ ನಮ್ಮ ಅಂತ್ಯಕ್ರಿಯೆಯ ತೊಂದರೆ ಕೊಡಬಾರದಾಗಿ ವಿನಂತಿಸಿಕೊಳ್ಳುತ್ತಿದ್ದೇನೆ
ನನಗೆ 2 ಸಲ ಮಕ್ಕಳ ಸಮಸ್ಯೆ ಆದುದರಿಂದ ಎಲ್ಲಿ ಹೋದರೂ ಮಕ್ಕಳ ಬಗ್ಗೆಯೇ ಕೇಳುತ್ತಾರೆ. ಅದಕ್ಕಾಗಿ ನಾನು ಯಾರೊಂದಿಗೂ ಹೆಚ್ಚಾಗಿ ಬೆರೆಯಲು ಇಷ್ಟಪಡುವುದಿಲ್ಲ. ನಾನು ಮತ್ತು ನನ್ನ ಗಂಡ ನಿರ್ಧರಿಸಿದ ಪ್ರಕಾರ ಹಿಂದೂ ಸಂಘಟನೆಯ ಶರಣ್ ಪಂಪ್‌ವೆಲ್ ಹಾಗೂ ಸತ್ಯಜಿತ್ ಸುರತ್ಕಲ್ ಅವರಲ್ಲಿ ವಿನಂತಿಸುವುದೇನೆಂದರೆ ನಮ್ಮಿಬ್ಬರ ಅಂತ್ಯಕ್ರಿಯೆಯನ್ನು ಹಿಂದೂ ಧರ್ಮದ ಪ್ರಕಾರ ಮಾಡಬೇಕಾಗಿ ವಿನಂತಿಸುತ್ತಿದ್ದೇವೆ. ನಮ್ಮ ಅಂತ್ಯಕ್ರಿಯೆಯ ವೆಚ್ಚಕ್ಕಾಗಿ 1 ಲಕ್ಷ ರೂಪಾಯಿ ಇಟ್ಟಿದ್ದೇವೆ. ನಮ್ಮ ಅಂತ್ಯಕ್ರಿಯೆಗೆ ಮಂಗಳೂರಿನ ಕಮಿಷನರ್ ಆದ ಶಶಿಕುಮಾರ್ ಸರ್, ಶರಣ್ ಪಂಪ್‌ವೆಲ್ ಹಾಗೂ ಸತ್ಯಜಿತ್ ಸುರತ್ಕಲ್ ಅವರೊಂದಿಗೆ ಸಹಕರಿಸಬೇಕಾಗಿ ವಿನಂತಿಸುತ್ತಿದ್ದೇವೆ. ನನ್ನ ಹಾಗೂ ನನ್ನ ಗಂಡನ ಮನೆಯವರಿಗೆ ಈ ವಸ್ತುಗಳ ಅವಶ್ಯಕತೆ ಇರುವುದಿಲ್ಲ. ನಮ್ಮ ಮನೆಯ ಮಾಲೀಕರೇ ನಮ್ಮನ್ನು ಕ್ಷಮಿಸಿ.
ಇಂತೀ
ಗುಣ
DAKSHINA KANNADA
ಆಸ್ಪತ್ರೆಯಲ್ಲೇ ಜೀವನ ಸಾಗಿಸುತ್ತಿರುವ ಮಹಿಳೆ; ಸಣ್ಣ ಪ್ರಾಯದಲ್ಲೇ ಹಲವು ಶಸ್ತ್ರ ಚಿಕಿತ್ಸೆ
Published
11 hours agoon
28/11/2024ಸುಳ್ಯ: ಮಹಿಳೆಯೊಬ್ಬರು ಅಪರೂಪದ ಕಾಯಿಲೆಗೆ ತುತ್ತಾಗಿ ತಮ್ಮ 34ರ ಹರೆಯದಲ್ಲೇ ಇದೀಗ 13ನೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ.ಚಾಂದಿನೆ ಎಮಬ ಹೆಸರಿನ ಮಹಿಳೆಗೆ ಆಸ್ಪತ್ರೆಯೇ ಬದುಕಾಗಿಬಿಟ್ಟಿದೆ. ಶಸ್ತ್ರ ಚಿಕಿತ್ಸೆ ಮಾತ್ರವಲ್ಲದೆ ಈಗಾಗಲೇ ಕೃತಕ ಉಸಿರಾಟ, ಶಾಕ್ ಟ್ರೀಟ್ಮೆಂಟ್, ಕಿಮೋಥೆರಪಿ ಸೇರಿದಂತೆ ಕಳೆದ 31 ವರ್ಷಗಳಲ್ಲಿ ತಮ್ಮ ಜೀವನವನ್ನು ಬಹುತೇಕವಾಗಿ ಆಸ್ಪತ್ರೆಯಲ್ಲೇ ಕಳೆದಿರುವ ಮಹಿಳೆಯ ಬದುಕು ನಿಜಕ್ಕೂ ಮೈ ನಡುಗಿಸುವಂತದ್ದು.
ಬದುಕಲ್ಲಿ ಏನಿಲ್ಲದಿದ್ದರೂ ಪರವಾಗಿಲ್ಲ ಆದರೆ ಆರೋಗ್ಯವೊಂದು ಸರಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಇದರಿಂದಲೇ ಕನ್ನಡದಲ್ಲಿ ‘ಆರೋಗ್ಯವೇ ಭಾಗ್ಯ’ ಎಂಬ ಗಾದೆಯೂ ಇದೆ. ಅನೇಕರು ತಮ್ಮ ಜೀವನದಲ್ಲಿ ಆಸ್ಪತ್ರೆಯ ಮೆಟ್ಟಿಲನ್ನೇ ಹತ್ತಿರುವುದಿಲ್ಲ. ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡು, ಗಟ್ಟಿ ಮುಟ್ಟಾಗಿ ಇರುತ್ತಾರೆ. ಇನ್ನು ಕೆಲವರು ಆಗಾಗ ಕಾಯಿಲೆ, ರೋಗಗಳನ್ನು ತಂದಳೆದುಕೊಂಡು ಸದಾ ಆಸ್ಪತ್ರೆಯತ್ತ ಮುಖ ಮಾಡಿರುತ್ತಾರೆ. ಆದರೆ, ಇಲ್ಲೊಬ್ಬಳು ಮಹಿಳೆಗೆ ಆಸ್ಪತ್ರೆಯೇ ಬದುಕಾಗಿದೆ. ಈಕೆಯ ಕರುಣಾಜನಕ ಕಥೆ ಕೇಳಿದ್ರೆ ಖಂಡಿತ ಕಣ್ಣಂಚಲ್ಲಿ ನೀರು ಬರುತ್ತದೆ.
ಚಾಂದಿನಿಗೆ ಇರುವ ಖಾಯಿಲೆ ಏನು ?
ಸುಳ್ಯದ ನಾವೂರಿನ ದಿ. ಧನಂಜಯ ಮತ್ತು ಸರೋಜನಿ ದಂಪತಿ ಪುತ್ರಿ ಚಾಂದಿನಿಗೆ ತನ್ನ 3ರ ಹರೆಯದಲ್ಲೇ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿತ್ತು. ತನ್ನ ದೇಹವನ್ನು ಆವರಿಸಿಕೊಂಡ ಕಾಯಿಲೆಯ ಅರಿವೇ ಇಲ್ಲದ ಚಾಂದಿನಿ 7ನೆ ತರಗತಿ ವರೆಗೂ ಸುಳ್ಯದ ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ಕಲಿತರಾದರೂ ಬಳಿಕ ಸಾಂಪ್ರದಾಯಿಕ ಶಾಲಾ, ಕಾಲೇಜು ಶಿಕ್ಷಣದಿಂದ ವಂಚಿತರಾದರು. ತಿಂಗಳಲ್ಲಿ 10 ದಿನ ಮನೆಯಲ್ಲಿದ್ದರೆ, ಉಳಿದ 20 ದಿನ ಆಸ್ಪತ್ರೆಯಲ್ಲಿ ಇರಬೇಕಾಗಿದ್ದ ಚಾಂದಿನಿಗೆ ತಾಯಿಯೇ ಶಿಕ್ಷಕಿಯಾದರು.
ಬಡತನದ ನಡುವೆಯೂ ತನ್ನ ಮಗಳ ಚಿಕಿತ್ಸೆಗಾಗಿ ತಂದೆ ತನ್ನ ದುಡಿಮೆಯ ಹಣವನ್ನೆಲ್ಲಾ ವಿನಿಯೋಗಿಸಿದರು. ಈ ರೀತಿ 19 ವರ್ಷಗಳ ಕಾಲ ಯಾರೊಬ್ಬರಲ್ಲೂ ಕೈಚಾಚದೆ ಚಾಂದಿನಿ ತಂದೆ ಮಗಳಿಗೆ ಚಿಕಿತ್ಸೆ ಕೊಡಿಸಿದ್ದರು. ಈ ನಡುವೆ ಸ್ಟಿರಾಯಿಡ್ ಸೇವನೆಯ ಪರಿಣಾಮ ಚಾಂದಿನಿ ಕಣ್ಣಿನ ದೃಷ್ಟಿ ಹೀನಗೊಂಡವು. ಈ ಸಂದರ್ಭ ಪೋಷಕರೇ ಮಗಳ ಕಣ್ಣಾಗಿ ಕಾಪಾಡಿದರು. ಅನಾರೋಗ್ಯದ ನಡುವೆಯೂ ಚಾಂದಿನಿಯವರ ಕಲಿಕೆಯ ಆಸಕ್ತಿ ಕಡಿಮೆಯಾಗಿರಲಿಲ್ಲ. ಹಾಗಾಗಿ 7ನೆ ತರಗತಿ ಪರೀಕ್ಷೆಯನ್ನು ಶಿಕ್ಷಕರ ಸಹಕಾರದೊಂದಿಗೆ ಖಾಸಗಿಯಾಗಿ ಬರೆದು ಉತ್ತೀರ್ಣರಾದರು.
10ನೆ ತರಗತಿ ಪರೀಕ್ಷೆ ವೇಳೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಚಾಂದಿನಿಗೆ ವಿಶೇಷ ಮುತುವರ್ಜಿ ಮೇರೆಗೆ ಆಂಬುಲೆನ್ಸ್‌ನಲ್ಲಿ ತೆರಳಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು. 10ನೆ ತರಗತಿ ಪಾಸ್ ಆದ ಚಾಂದಿನಿ ತಮ್ಮ ಅನಾರೋಗ್ಯದ ಜತೆಯಲ್ಲೇ ಖಾಸಗಿ ಉದ್ಯೋಗವೊಂದಕ್ಕೆ ಸೇರಿ ಪಿಯುಸಿ ಪರೀಕ್ಷೆ ಬರೆದರು. ಈ ನಡುವೆ ಚಾಂದಿನಿಯ ಅನಾರೋಗ್ಯದ ಅರಿವಿದ್ದರೂ ಕಾಸರಗೋಡಿನ ಬಂದಡ್ಕದ ಪುರುಷೋತ್ತಮ ಅವರು 2013ರಲ್ಲಿ ಚಾಂದಿನಿ ಅವರ ಕೈ ಹಿಡಿದರು. ಪತಿಯ ಪ್ರೀತಿ, ಆರೈಕೆಯ ಜತೆಯಲ್ಲಿ ಪದವಿ ಪರೀಕ್ಷೆಯನ್ನೂ ಖಾಸಗಿಯಾಗಿ ಚಾಂದಿನಿ ಮುಗಿಸಿದ್ದು, ಪಂಜದ ಮೊರಾರ್ಜಿ ದೇಸಾಯಿ ವಿದ್ಯಾಸಂಸ್ಥೆಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ. 6 ವರ್ಷದ ಪುಟ್ಟ ಕಂದಮ್ಮನ ತಾಯಿಯಾಗಿಯೂ ತನ್ನ ಕರ್ತವ್ಯ ನಿರ್ವಹಿಸುತ್ತಿರುವ ಚಾಂದಿನಿಯವರ ಆಸ್ಪತ್ರೆ ಬದುಕು ಮಾತ್ರ ಮುಂದುವರಿದಿದೆ.
ಇದನ್ನೂ ಓದಿ : ಪಿಸಿಒಡಿ, ಪಿಸಿಒಎಸ್ ಸಮಸ್ಯೆ ಎದುರಿಸುತ್ತಿದ್ದೀರಾ ? ಹಾಗಾದ್ರೆ ಇದನ್ನು ಸೇವಿಸಿ !!
ಇಷ್ಟೇ ಅಲ್ಲದೆ ಹೈಪರ್ ಐಜಿಇ ಮೆಡಿಕೇಟೆಟ್ ಮಸ್ಟ್ ಸೆಲ್ ಆಕ್ಟಿವೇಶನ್ ಸಿಸ್ಟಮ್ (Hyper IGE Medicated Mast cell activation syndrome) ಎಂಬ ಕಾಯಿಲೆಯಿಂದ ಬಳಲುತ್ತಿರುವ ಚಾಂದಿನಿ ಹೃದಯದ ಬಲಭಾಗದಲ್ಲಿ ಟ್ಯೂಮರ್ ಆಗಿರುವುದು ಇತ್ತೀಚೆಗೆ ಪತ್ತೆಯಾಗಿದೆ. ಇದೀಗ ಬೆಂಗಳೂರಿನ ಆಸ್ಪತ್ರೆಯಲ್ಲಿ ಇದಕ್ಕಾಗಿ ಶಸ್ತ್ರ ಚಿಕಿತ್ಸೆಗೆ ತೆರಳುವಂತೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ವೈದ್ಯರು ಸೂಚನೆ ನೀಡಿದ್ದಾರೆ.
ಇದು ಸುಳ್ಯದ ಚಾಂದಿನಿ ಪುರುಷೋತ್ತಮ ಅವರ ಬದುಕಿನ ಕಥೆ. ಚಾಂದಿನಿ ಅವರಿಗೆ ಸುಮಾರು ಮೂರು ವರ್ಷ ಪ್ರಾಯವಿದ್ದಾಗ ಆರೋಗ್ಯದ ಸಮಸ್ಯೆ ಕಂಡುಬಂದಿತ್ತು. ಅಂದಿನಿಂದ ಆಸ್ಪತ್ರೆ ಮೆಟ್ಟಿಲು ಹತ್ತುತ್ತಲೇ ಬದುಕು ಸಾಗಿಸಿದ ಚಾಂದಿನಿಗೆ “ಬದುಕಿನಲ್ಲಿ ನಾಳೆ ಇದೆ” ಎನ್ನುವ ಭರವಸೆ, ವಿಶ್ವಾಸದಿಂದ ಇಂದು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಆರೋಗ್ಯಕ್ಕಾಗಿ ಸುಮಾರು 70 ಲಕ್ಷ ಖರ್ಚು ಮಾಡಿದ್ದಾರೆ. ಹಲವು ಬಾರಿ ಆಪರೇಷನ್ ಆಗಿದೆ. ಕೃತಕ ಉಸಿರಾಟ, ವಿದ್ಯುತ್ ಟ್ರೀಟ್‌ಮೆಂಟ್ ಹೀಗೆ ಹಲವು ಚಿಕಿತ್ಸೆಗಳು ನಡೆದಿದೆ. ಇತ್ತೀಚೆಗೆ ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಅಲ್ಲಿನ ಬಿಲ್ ಮೊತ್ತ ಪಾವತಿಸಲು ಸಾಧ್ಯವಾಗದೆ ದಯಾ ಮರಣ ಪಾಲಿಸುವಂತೆ ಚಾಂದಿನಿಯವರು ಸರಕಾರಕ್ಕೆ ಪತ್ರ ಬರೆದಿದ್ದರು. ಚಾಂದಿನಿಗೆ, ಅವರ ಚಿಕಿತ್ಸೆಗೆ ಈಗಾಗಲೇ ಸಾಕಷ್ಟು ಸಹೃದಯಿಗಳು ಸಹಕರಿಸಿದ್ದಾರೆ. ಮುಂದೆಯೂ ಸಹಕಾರದ ಅಗತ್ಯವಿದೆ. ನೆರವು ನೀಡಲು ಇಚ್ಚಿಸುವ ಸಹೃದಯಿಗಳು ಸಹಾಯ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಕುಟುಂಬವಿದೆ.
DAKSHINA KANNADA
ಮಂಗಳೂರು : ನ. 30 ರಂದು ‘ಇಸ್ಕಾನ್’ ನಶಾಮುಕ್ತಿ ಅಭಿಯಾನ; ಅಮೋಘ್ ಲೀಲಾ ದಾಸ್ ಭಾಷಣ
Published
13 hours agoon
28/11/2024By
NEWS DESK4ಮಂಗಳೂರು : ಇಸ್ಕಾನ್ ಕುಡುಪುಕಟ್ಟೆವತಿಯಿಂದ ನಡೆಯಲಿರುವ ನಶಾ ಮುಕ್ತಿ ಅಭಿಯಾನಕ್ಕೆ ನ. 30ರಂದು ಅಪರಾಹ್ನ 3.30ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಚಾಲನೆ ನೀಡಲಾಗುವುದು ಎಂದು ಇಸ್ಕಾನ್ ಕುಡುಪು ಕಟ್ಟೆಯ ಕಾರ್ಯದರ್ಶಿ ಎಚ್.ಜಿ. ಪ್ರೇಮಾ ಭಕ್ತಿದಾಸ್ ಮತ್ತು ಯುವ ಘಟಕದ ಸದಸ್ಯ ಎಚ್.ಜಿ. ದೇವಧರ್ಮ ದಾಸ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಶಾ ವ್ಯಸನದ ವಿರುದ್ದ ಜಾಗೃತಿ ಮೂಡಿಸಲು ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಉದ್ಘಾಟನೆಯ ಬಳಿಕ ‘ಉಮಂಗ್ 3.0 : ಮೆಗಾ ಯೂತ್ ಫೆಸ್ಟ್‌ವಲ್’ ನಡೆಯಲಿದ್ದು, ಇಸ್ಕಾನ್ ಹೊಸದಿಲ್ಲಿಯ ಉಪಾಧ್ಯಕ್ಷ ಪ್ರೇರಕ ಭಾಷಣಕಾರ ಅಮೋಘ್ ಲೀಲಾ ದಾಸ್ ಪಾಲ್ಗೊಳ್ಳಲಿದ್ದಾರೆ. ದೇಶಾದ್ಯಂತದ 1,200ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಇಸ್ಕಾನ್ ಯೂತ್‌ವಿಂಗ್‌ನ್ನು ಯುವ ಪ್ರಭಾವದ ಉಪಕ್ರಮಗಳಿಗಾಗಿ ಶ್ಲಾಘಿಸಿದ್ದು, ವ್ಯಸನ ಮತ್ತು ಮಾದಕ ದ್ರವ್ಯಗಳ ವಿಷಯದ ಕುರಿತು ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡಲು ಎಂಒಯುಗೆ ಸಹಿ ಹಾಕಿದೆ. ಕರ್ನಾಟಕದಲ್ಲಿ ಸುಮಾರು ಶೇ.30ರಷ್ಟು ನಶಾ ವ್ಯಸನ ಪ್ರಕರಣಗಳು ಮಂಗಳೂರು ನಗರದಲ್ಲಿಯೇ ಕಂಡುಬಂದಿದ್ದು ಇಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಎಚ್.ಜಿ. ಪ್ರೇಮಾ ಭಕ್ತಿದಾಸ್ ತಿಳಿಸಿದರು.
ಮಂಗಳೂರು: ಬರ್ಕೆ ಫ್ರೆಂಡ್ಸ್ ಇದರ ಗುರ್ಜಿ ದೀಪೋತ್ಸವ ಮಣ್ಣಗುಡ್ಡೆಯಲ್ಲಿ ಅದ್ಧೂರಿಯಾಗಿ ನಡೆದಿದೆ. ಸಾವಿರಾರು ಜನರು ಈ ಗುರ್ಜಿ ದೀಪೋತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರಾರಾಗಿದ್ದಾರೆ. ಹುಲಿ ವೇಷ ಮಾತ್ರವಲ್ಲದೆ ಹಲವಾರು ಸಮಾಜಸೇವಾ ಕಾರ್ಯದ ಮೂಲಕ ಜನರ ಕಷ್ಟಕ್ಕೆ ಸ್ಪಂಧಿಸುತ್ತಿರುವ ಬರ್ಕೆ ಫ್ರೆಂಡ್ಸ್ ಈ ಧಾರ್ಮಿಕ ಕಾರ್ಯಕ್ರಮವನ್ನು ಕೂಡಾ ಆಯೋಜಿಸುತ್ತಿದೆ. ಈ ಕಾರ್ಯಕ್ರಮದ ಮೂಲಕ ಜನರಿಗೆ ಭಕ್ತಿಯ ಪ್ರಸಾದ ನೀಡುವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮನರಂಜಿಸುವ ಕೆಲಸ ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ನಡೆಸಲಾಗುತ್ತಿದೆ. ಬುಧವಾರ ಸಂಜೆ ಮಣ್ಣಗುಡ್ಡೆಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸುವುದರೊಂದಿಗೆ ಬರ್ಕೆ ಗುರ್ಜಿ ದೀಪೋತ್ಸವ ಸಂಪನ್ನಗೊಂಡಿದೆ.
ಇದುವರೆಗೆ ನೂರಾರು ಸಾಧಕರನ್ನು ಗುರುತಿಸಿ ಗೌರವಿಸಿರುವ ಬರ್ಕೆ ಫ್ರೆಂಡ್ಸ್ ತಂಡ ಈ ಬಾರಿ ವಿಶೇಷವಾಗಿ ಇಬ್ಬರು ಹಿರಿಯರನ್ನು ಹಾಗೂ ಇಬ್ಬರು ಕಿರಿಯರನ್ನು ಸನ್ಮಾನಿಸಿದೆ. ಕಟೀಲು ಯಕ್ಷಗಾನ ಮೇಳದ ಹಿರಿಯ ಕಲಾವಿದ ಉಮೇಶ್ ಕಕ್ಕೆಪದವು ಅವರನ್ನು ಈ ವೇದಿಕೆಯಲ್ಲಿ ಸನ್ಮಾನಿಸಲಾಗಿದೆ. ಉಮೇಶ್ ಕಕ್ಕೆಪದವು ಕಟೀಲು ಯಕ್ಷಗಾನದಲ್ಲಿ ಮಹಿಷಾಸುರನ ಪಾತ್ರದ ಮೂಲಕ ಜನರ ಮನಸ್ಸು ಗೆದ್ದವರಾಗಿದ್ದಾರೆ. ಅಷ್ಟೇ ಅಲ್ಲದೆ ಒಬ್ಬ ಬಡ ಕೂಲಿಕಾರ್ಮಿಕನಾಗಿ ಹಗಲಿನಲ್ಲಿ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡಿ ಸಂಜೆಯಾಗುತ್ತಿದ್ದಂತೆ ಯಕ್ಷಗಾನದಲ್ಲಿ ಬಣ್ಣ ಹಚ್ಚಿ ದೇವಿಯ ಸೇವೆ ಮಾಡುತ್ತಿದ್ದಾರೆ. ಇವರ ಈ ಸೇವಾ ಕಾರ್ಯವನ್ನು ಬರ್ಕೆ ಫ್ರೆಂಡ್ಸ್ ಗುರುತಿಸಿ ಗೌರವಿಸಿದೆ.
ಜಾತಿ ಧರ್ಮದ ಎಲ್ಲೆ ಮೀರಿ ಪ್ರೀತಿ ವಿಶ್ವಾಸಕ್ಕೆ ಬೆಲೆ ನೀಡುವ ಬರ್ಕೆ ಫ್ರೆಂಡ್ಸ್ , ತಮ್ಮೆಲ್ಲಾ ಕಾರ್ಯಕ್ಕೆ ಹಲವಾರು ವರ್ಷಗಳಿಂದ ಕೈ ಜೋಡಿಸುವ ಸೆಂಟ್ರಲ್ ಮಾರ್ಕೆಟ್‌ನ ಹಣ್ಣಿನ ವ್ಯಾಪಾರಿ ಅಶ್ರಫ್ ಅವರನ್ನು ಸನ್ಮಾನಿಸಿದೆ. ಅಶ್ರಫ್ ಅವರ ಸಂಕಷ್ಟದ ಸಮಯದಲ್ಲಿ ಬರ್ಕೆ ಫ್ರೆಂಡ್ಸ್ ಸಹಾಯ ಮಾಡಿದ್ದನ್ನು ಮರೆಯದೆ ಕೃತಜ್ಞತೆಯನ್ನು ತೋರಿಸಿದ್ದಾರೆ. ಬರ್ಕೆ ಫ್ರೆಂಡ್ಸ್ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಹಲವಾರು ವರ್ಷದಿಂದ ಗುರ್ಜಿ ಸೇರಿದಂತೆ ಎಲ್ಲಾ ಕಾರ್ಯಕ್ರಮದಲ್ಲೂ ಅಶ್ರಫ್ ಅವರು ಸಹಾಯ ಹಸ್ತ ನೀಡಿದ್ದಾರೆ. ಇದೇ ವೇಳೆ ಸ್ಕೇಟಿಂಗ್‌ನಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಕೇಟ್ ಆರ್ವಿ ವಾಸ್ ಹಾಗೂ ತನ್ನ ಸುಂದರ ಹಸ್ತಾಕ್ಷರಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಕೃತಿ ಬೋಳೂರು ಅವರನ್ನು ಸನ್ಮಾನಿಸಲಾಗಿದೆ.
ಗುರ್ಜಿ ದೀಪೋತ್ಸವದ ಹಿನ್ನಲೆಯಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆದಿತ್ತು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವರ್ಣರಂಜಿತ ಬೆಳಕಿನಲ್ಲಿ ರಸಮಂಜರಿ ಹಾಗೂ ನೃತ್ಯಗಳ ಮೂಲಕ ಜನರನ್ನು ರಂಜಿಸಲಾಗಿತ್ತು. ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಂಗಳೂರು ಮೇಯರ್ ಮನೋಜ್ ಕೋಡಿಕಲ್, ಸರ್ವದಾ ಡಿಸ್ಟಿಲರ್ಸ್ ಇದರ ಮಾಲಕ ಮನುಕುಮಾರ್, ಮಾಯಾ ಕ್ಯಾಟರರ್ಸ್ ಮಾಲಕ ಮಾದವ ಕಾಮತ್, ಮಾಯ ಇಂಟರ್ನ್ಯಾಷನಲ್ ಇದರ ಮಾಲಕಾರದ ವಾಸುದೇವ ಕಾಮತ್, ಇನ್ ಆರ್ಟ್‌ದ ಮಾಲಕ ಯಶ್ ರಾಜ್, ಗುರ್ಜಿಯನ್ನು ಆರಂಭಿಸಿದ ಯಜ್ಞೇಶ್ ಬರ್ಕೇ, ಸುಚೀಂದ್ರ ಅಮೀನ್ , ಕಿಶನ್ ಬರ್ಕೆ, ಸಂತೋಷ್ ಶೆಟ್ಟಿ , ಉದ್ಯಮಿ ಅಜಿತ್ ಕಾಂಚನ್ , ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಬಿ ಕರ್ಕೇರಾ ಮೊದಲಾದವರು ಉಪಸ್ಥಿತರಿದ್ದರು.
LATEST NEWS
ಕ್ಯಾನ್ಸರ್ ವಾಸಿ ಬಗ್ಗೆ ಸಿಧು ಹೇಳಿಕೆಗೆ ಆಕ್ಷೇಪ..! 850 ಕೋಟಿ ಮಾನನಷ್ಟ ಕೋರಿ ನೋಟಿಸ್
ಉತ್ತರ ಪ್ರದೇಶ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ವೈರ್ ತಗುಲಿ ವಿದ್ಯಾರ್ಥಿನಿ ಸಾವು
ಬೆಂ*ಕಿ ಹಚ್ಚಿ ಇಡೀ ಕುಟುಂಬದ ಸಾಮೂಹಿಕ ಹ*ತ್ಯೆಗೆ ಯತ್ನ
ಕೊರೆಯುವ ಚಳಿಯಲ್ಲಿ ತುಟಿಗಳ ಅಂದ ಮಾಸದಿರಲಿ, ಈ ರೀತಿ ಆರೈಕೆ ಮಾಡಿ
Watch video: ಜೈಲಿನಿಂದ ಬಿಡುಗಡೆಯಾದ ಸಂಭ್ರಮದಲ್ಲಿ ಜೈಲಾಧಿಕಾರಿಗಳ ಎದುರೇ ಯುವಕನ ಭರ್ಜರಿ ಡ್ಯಾನ್ಸ್ !
ಅಂತಾರಾಷ್ಟ್ರೀಯ ಸಮ್ಮೇಳನ: ವ್ಯಾಟಿಕನ್ಗೆ ತೆರಳಿದ ಸ್ಪೀಕರ್ ಯುಟಿ ಖಾದರ್
Trending
- Baindooru7 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- BIG BOSS5 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- Baindooru5 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
- Ancient Mangaluru1 day ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು