Monday, July 4, 2022

ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ : ಮೂವರ ಬಂಧನ

ಚಿಕ್ಕಮಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಉಜಿರೆಯಿಂದ ಮೂಡಿಗೆರೆಗೆ ಕ್ವಾಲಿಸ್ ಕಾರಿನಲ್ಲಿ ಕೋಕಂ ಜ್ಯೂಸ್ ಮಾರಾಟ ಮಾಡುವ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಕುಕ್ಕಾವು ನಿವಾಸಿ ಅಬೂಬಕ್ಕರ್ ಸಿದ್ದಿಕ್, ಮೂಡಿಗೆರೆಯ ಅಮೃತ್ ಬಿಜುವಳ್ಳಿ, ಮೂಡಿಗೆರೆ ಟೌನ್ ನಿವಾಸಿ ರಿಷಬ್ ರಾಜ್ ಬಂಧಿತ ಆರೋಪಿಗಳು.


ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಕುಕ್ಕಾವು ಮನೆಯೊಂದರಲ್ಲಿ ಗಾಂಜಾ ತಯಾರಿಸಿ ಮೂಡಿಗೆರೆ ಕಡೆ ಕ್ವಾಲಿಸ್ ಕಾರಿನಲ್ಲಿ ಕೋಕಂ ಜ್ಯೂಸ್ ಮಾರಾಟ ಮಾಡುವ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬೆಳ್ತಂಗಡಿಯ ಅಬೂಬಕ್ಕರ್ ಸಿದ್ದಿಕ್‍ಗೆ ಸೇರಿದ ಕ್ವಾಲಿಸ್ ಕಾರಿನಲ್ಲಿ 250 ಗ್ರಾಂ ಗಾಂಜಾ ಪತ್ತೆಯಾಗಿದೆ.

ಈ ಹಿನ್ನೆಲೆ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ: ತೋಟಕ್ಕೆ ಹೋದವ ನದಿ ದಡದಲ್ಲಿ ಪತ್ತೆಯಾದ

ಬೆಳ್ತಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಪುದುವೆಟ್ಟು ಗ್ರಾಮದ ಅಡ್ಯ ಎಂಬಲ್ಲಿ ನಡೆದಿದೆ.ಪುದುವೆಟ್ಟು ಗ್ರಾಮದ ಅಡ್ಯ ನಿವಾಸಿ ಲಿಂಗಪ್ಪ ಪೂಜಾರಿ (65) ಎಂಬವರು ಮೃತಪಟ್ಟ...

ಪುತ್ತೂರಿನಲ್ಲಿ ಬೈಕ್‌ – ಕಾರು ಡಿಕ್ಕಿ: ಓರ್ವ ಜೀವಾಂತ್ಯ

ಪುತ್ತೂರು: ಬೈಕ್ ಮತ್ತು ಮಾರುತಿ ಕಾರು ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹೊರ ವಲಯದ ಕುಂಬ್ರದಲ್ಲಿ ನಡೆದಿದೆ.ಕು೦ಬ್ರ...

ಮಂಗಳೂರು: ಬೆಂಗ್ರೆ ವಾರ್ಡಿನ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಕಾಮತ್

ಮಂಗಳೂರು: ಮಹಾನಗರ ಪಾಲಿಕೆಯ ಬೆಂಗ್ರೆ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.ತೋಟ ಬೆಂಗ್ರೆಯ ಪ್ಯಾಸೆಂಜರ್ ಬೋಟ್ ಜೆಟ್ಟಿಯ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ...