Connect with us

    MANGALORE

    ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್: ತಾಲೂಕು ಘಟಕದ ಅಧ್ಯಕ್ಷರಾಗಿ ಡಾ.ಮಂಜುನಾಥ್.ಎಸ್.ರೇವಣ್‌ಕರ್‌ ಆಯ್ಕೆ

    Published

    on

    ಮಂಗಳೂರು: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾಗಿ ಡಾ.ಮಂಜುನಾಥ್.ಎಸ್.ರೇವಣ್‌ಕರ್ ರವರು ಆಯ್ಕೆಯಾಗಿದ್ದಾರೆ.


    ಇವರು ಸೂರಜ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದು, ಕರ್ನಾಟಕ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು(ರಿ)ಇದರ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು,

    ತಮ್ಮ ಸಂಸ್ಥೆಯಲ್ಲಿ ರಾಷ್ಟ್ರ ಮಟ್ಟದ ಖ್ಯಾತಿಯ ಸೂರಜ್ ಕಲಾಸಿರಿಯನ್ನು ನಡೆಸಿದ ಕೀರ್ತಿ ಇವರದ್ದು,

    ಅಲ್ಲದೇ ತಮ್ಮ ಸಂಸ್ಥೆಯಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಅಯೋಜಿಸಿ ಮೆಚ್ಚುಗೆ ಪಡೆದಿದ್ದಾರೆ.

    ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿಯ ಜಿಲ್ಲಾ ಘಟಕದ ಹಲವಾರು ಸೇವಾ ಕಾರ್ಯಕ್ರಮವನ್ನು ನಡೆಸಿದ ಖ್ಯಾತಿ ಇವರಿಗಿದೆ.

    DAKSHINA KANNADA

    ಮೂಲ್ಕಿ : ಎಲೆಕ್ಟ್ರಿಕ್ ಅಟೋ ಪಲ್ಟಿ; ಮೂವರಿಗೆ ಗಾಯ

    Published

    on

    ಮೂಲ್ಕಿ : ಎಲೆಕ್ಟ್ರಿಕ್ ಅಟೋ ಪಲ್ಟಿ ಯಾಗಿ ಇಬ್ಬರು ಗಾ*ಯಗೊಂಡಿದ್ದು, ಓರ್ವ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿರುವ ಘಟನೆ ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿಯ ಕೆರೆಕಾಡು ಜಂಕ್ಷನ್ ಬಳಿ ನಡೆದಿದೆ.

    ಆಟೋ ಚಾಲಕ ಪಕ್ಷಿಕೆರೆ  ಕಾಪಿಕಾಡು ನಿವಾಸಿ ರಾಮಚಂದ್ರ ( 45) ಮತ್ತು ಪ್ರಯಾಣಿಕ ಶೇಕ್ ಸಾಹೇಬ್ (60) ಗಾಯಗೊಂಡವರು.

    ಇದನ್ನೂ ಓದಿ : ‘ಕಲ್ಟ್’ ಚಿತ್ರದ ಟೆಕ್ನಿಷಿಯನ್ ಆತ್ಮಹ*ತ್ಯೆ ಯತ್ನ; ಸಚಿವ ಜಮೀರ್ ಪುತ್ರ ಜೈದ್ ಖಾನ್ ವಿರುದ್ಧ ಗಂಭೀರ ಆರೋಪ

    ಶೇಕ್ ಸಾಹೇಬ್ ಪಕ್ಷಿಕೆರೆಯಿಂದ ಆಟೋ ಮೂಲಕ ಮೂಲ್ಕಿ ಕಡೆಗೆ ಹೋಗುತ್ತಿದ್ದಾಗ ಕೆರೆಕಾಡು ಬಳಿ ನಾಯಿ ಅಡ್ಡ ಬಂದಿದ್ದು ಅಪಘಾ*ತ ತಪ್ಪಿಸಲು ಯತ್ನಿಸಿದಾಗ ಆಟೋ ಪ*ಲ್ಟಿಯಾಗಿದೆ. ಅಪ*ಘಾತದ ರಭಸಕ್ಕೆ ಆಟೋದಲ್ಲಿದ್ದವರು ಗಾ*ಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    Continue Reading

    DAKSHINA KANNADA

    ಅ*ನ್ಯಕೋಮಿನ ಯುವಕನಿಂದ ವಿದ್ಯಾರ್ಥಿನಿಗೆ ಕಿ*ರುಕುಳ; ದೂರು ದಾಖಲಿಸಲು ಪೊಲೀಸರ ಹಿಂದೇಟು !!

    Published

    on

    ಕುಂಬಳೆ: ಬೆಳಗಿನ ಜಾವ ಮಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ತೆರಳುವ ಹಿಂದು ವಿಧ್ಯಾರ್ಥಿನಿಗೆ ಅ*ನ್ಯಕೋಮಿನ ಯುವಕನೊಬ್ಬ ಕಿ*ರುಕುಳ ನೀಡಲು ಪ್ರಯತ್ನಿಸಿದ ವೇಳೆ ಆತನನಿಂದ ತಪ್ಪಿಸಿಕೊಂಡು ಯುವತಿ ತನ್ನ ಮನೆಯವರು ಹಾಗು ಹಿಂದು ಐಕ್ಯವೇದಿ ನೇತಾರರ ಜೊತೆಗೆ ಹೋಗಿ ಕುಂಬಳೆ ಪೊಲೀಸರಿಗೆ ದೂರು ನೀಡಿದ ಘಟನೆ ಇತ್ತೀಚೆಗೆ ನಡೆದಿದೆ.

    ಕಿ*ರುಕುಳ ನೀಡಲು ಯತ್ನಿಸಿದ ಯುವಕ ತಂಗಲ್ ವೀಡ್ ಪರಿಸರದ ಕುಂಬಳೆ ಸಿ. ಎಚ್. ಸಿ ರೋಡ್ ನಿವಾಸಿ ನೌಫಲ್ ಎಂಬಾತನೆಂದು ತಿಳಿದುಬಂದಿದೆ.

    ಈತ ಪ್ರಸ್ತುತ ತಂಗಳಬೀಡು ಪರಿಸರವಾಸಿ ಎಂದು ಗುರುತಿಸಲಾಗಿದ್ದು, ಈ ವಿಚಾರದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಿದ ವೇಳೆ ಪೊಲೀಸರು ಪ್ರಕರಣ ದಾಖಲಿಸದೆ ನೌಫಾಲ್ ನನ್ನು ಕೇಸಿನಿಂದ ಪಾರು ಮಾಡಲು ಪ್ರಯತ್ನಿಸಿದ್ದರು ಎಂಬ ಆರೋಪ ಕೂಡ ಕೇಳಿಬಂದಿತ್ತು. ಈ ವಿಷಯವನ್ನು ಅರಿತ ಹಿಂದು ಐಕ್ಯ ವೇದಿ ನೇತಾರರು ಮತ್ತು ಮನೆಯವರು ಈ ವಿಚಾರವನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯ ಗಮನಕ್ಕೆ ತಂದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಆದೇಶದಂತೆ ಕುಂಬಳೆ ಪೊಲೀಸರು ದೂರು ದಾಖಲಿಸಿ ಕೊಂಡರು.

    *ಒಂದೊಂದು ಮತದವರಿಗೆ ಒಂದೊಂದು ಕಾನೂನು ಎಂದು ಹೇಳಲು ಕೇರಳ ರಾಜ್ಯವೆಂಬುದು ಒಂದು ಪ್ರತ್ಯೇಕ ಮತ ರಾಜ್ಯವಲ್ಲ* ಎಂದು ಹಿಂದು ಐಕ್ಯ ವೇದಿ ಕುಂಬಳೆ ಪಂಚಾಯತ್ ಸಮಿತಿಯು ಅಭಿಪ್ರಾಯವನ್ನು ಹಿಂದೂ ಐಕ್ಯವೇದಿ ಪತ್ರಿಕಾ ಪ್ರಕಟಣೆಯಲ್ಲಿ ವ್ಯಕ್ತಪಡಿಸಿದೆ. ಇಂತಹ ಕುಕೃತ್ಯಗಳನ್ನು ಮಾಡುವವರಿಗೆ ತಕ್ಕ ಶಾಸ್ತಿಯಾಗಬೇಕೆಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.

    Continue Reading

    DAKSHINA KANNADA

    ಮಂಗಳೂರು: ಕ್ಷುಲ್ಲಕ ಕಾರಣ ಮುಂದಿಟ್ಟು ಬೂತ್‌ ಅಧ್ಯಕ್ಷರಿಗೆ ಹಲ್ಲೆ

    Published

    on

    ಮಂಗಳೂರು: ಹರೇಕಳ ಬೂತ್‌ ಅಧ್ಯಕ್ಷ ಶರತ್‌ ಕುಮಾರ್‌ ಗಟ್ಟಿ ಎಂಬವರ ಮೇಲೆ ಗುಂಪೊಂದು ನಡೆಸಿರುವ ಹಲ್ಲೆ ಪ್ರಕರಣವನ್ನು ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಪುತ್ತೂರು ಖಂಡಿಸಿದ್ದಾರೆ.

    ಗಾಯಾಳು ಶರತ್‌ ಕುಮಾರ್‌ ಭೇಟಿಯಾಗಿ ಧೈರ್ಯ ತುಂಬಿದ ಅವರು, ಮತಾಂಧ ಗುಂಪು ನಡೆಸಿರುವ ದಾಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಗೃಹ ಇಲಾಖೆ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸೂಚನೆ ನೀಡಬೇಕು. ಇಲ್ಲದೇ ಹೋದಲ್ಲಿ ಹಿಂದೂ ಸಮಾಜಕ್ಕೆ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದೆ ಎಂದು ಎಚ್ಚರಿಸಿದ್ದಾರೆ. ಸುಮಾರು 15-20 ಜನರಿದ್ದ ಗುಂಪೊಂದು ಶುಕ್ರವಾರ ಮಸೀದಿಯಿಂದ ನೇರವಾಗಿ ಶರತ್‌ ಕುಮಾರ್‌ ಗಟ್ಟಿ ಅವರ ಮನೆಗೆ ನುಗ್ಗಿ ಕ್ಷುಲ್ಲಕ ಕಾರಣ ಮುಂದಿಟ್ಟು ಹಲ್ಲೆ ನಡೆಸಿದೆ. ಈ ವೇಳೆ ತಡೆಯಲು ಬಂದ ಶರತ್‌ ಕುಮಾರ್‌ ಅವರ ಅಜ್ಜಿಯನ್ನು ದೂಡಿ ದಬ್ಬಾಳಿಕೆ ನಡೆಸಿದ್ದಾರೆ ಎಂದು ಕಿಶೋರ್‌ ಕುಮಾರ್‌ ಆರೋಪಿಸಿದ್ದಾರೆ.

    Continue Reading

    LATEST NEWS

    Trending