Friday, August 12, 2022

ಮಂಗಳೂರು: ರಾಜಸ್ಥಾನದ ಪೈಶಾಚಿಕ ಕೃತ್ಯವನ್ನು ಖಂಡಿಸಿದ ಮುಸ್ಲಿಂ ಒಕ್ಕೂಟ

ಮಂಗಳೂರು: ರಾಜಸ್ಥಾನದಲ್ಲಿ ಅಮಾಯಕ ಟೈಲರ್‌ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಪೈಶಾಚಿಕ ಕೃತ್ಯವನ್ನು ಮುಸಲಿಂ ಒಕ್ಕೂಟ ಖಂಡಿಸಿದೆ.

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿದ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ ಅಶ್ರಫ್ ‘ಇತ್ತೀಚೆಗೆ ಸುದ್ದಿಯಾಗಿದ್ದ ನೂಪುರ್ ಶರ್ಮ ಹೇಳಿಕೆಯನ್ನು ಬೆಂಬಲಿಸಿದ ರಾಜಸ್ತಾನದ ಉದಯಪುರದಲ್ಲಿನ ಕನ್ನಯ್ಯ ಲಾಲ್ ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಹತ್ಯೆ ನಡೆಸಿದ ಕೃತ್ಯವು ಖಂಡನೀಯ. ಈ ಕೃತ್ಯದ ಹಿಂದೆ ಗೂಡಾಲೋಚನೆಯ ವಾಸನೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.

ಅಮಾಯಾಕ ವ್ಯಕ್ತಿಯ ಸಾವನ್ನು ನಾಗರಿಕ ಸಮಾಜ ಕಟು ಶಬ್ದದಿಂದ ಖಂಡಿಸುತ್ತದೆ. ಆದರೆ ಈ ಬಗ್ಗೆ ಸಮಗ್ರ ತನಿಖೆ ಅತ್ಯಗತ್ಯ ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು.

ಈಗಾಗಲೇ ಹತ್ತು ಹಲವು ದೃಶ್ಯಗಳನ್ನು ಸಾಧಿಸಿದ ಫ್ಯಾಸಿಸ್ಟ್ ಪರಿವಾರ ಈ ಕೃತ್ಯದ ಹಿಂದೆ ಕೂಡಾ ತನ್ನ ಕೈ ಚಳಕ ಪ್ರದರ್ಶಿಸಿರುವ ಸಾದ್ಯತೆ ಇದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಹರ್ ಘರ್ ತಿರಂಗಾ ಅಭಿಯಾನದಲ್ಲಿ ರಾಷ್ಟ್ರಧ್ವಜ ಸಂಹಿತೆ ಪಾಲಿಸಲು ದ.ಕ ಡಿಸಿ ಸೂಚನೆ

ಮಂಗಳೂರು: ಆಗಸ್ಟ್ 13 ರಿಂದ 15ರ ವರೆಗೆ ದೇಶದ ಪ್ರತೀ ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶಭಕ್ತಿ ಬಿಂಬಿಸುವ ಮೂಲಕ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸುವಂತೆ ಅಭಿಯಾನವನ್ನು ಹಮ್ಮಿಕೊಂಡಿದೆ.ಈ ಅಭಿಯಾನದ ಹಿನ್ನೆಲೆ ಸರ್ಕಾರಿ ಕಟ್ಟಡಗಳ...

ಮಂಗಳೂರಿನಲ್ಲಿರುವ ರಸ್ತೆ ಹೊಂಡ ಗುಂಡಿಗಳ ವಿರುದ್ಧ patholeseazaadi ಅಭಿಯಾನ

ಮಂಗಳೂರು: ನಗರದ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ಕಳೆದ ಆ.5 ರಂದು ರಸ್ತೆ ಗುಂಡಿ ತಪ್ಪಿಸಲು ಹೋಗಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತಿಶ್ (20) ಮೃತಪಟ್ಟ ನಂತರ ರಾಷ್ಟ್ರೀಯ ಹೆದ್ದಾರಿ ಸಹಿತ ಮಂಗಳೂರು ನಗರದಲ್ಲಿರುವ...

“ಸ್ವಾತಂತ್ರ್ಯ ಬಂದು 75 ವರ್ಷವಾದರೂ ಲೋಕಾಯುಕ್ತ ಬೆಂಬಲಿಸುವ ರಾಜಕೀಯ ಪಕ್ಷ ಹೊಂದಿಲ್ಲದಿರುವುದು ದುರದೃಷ್ಟಕರ”

ಬೆಂಗಳೂರು: “ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಲೋಕಾಯುಕ್ತದಂಥ ಸ್ವತಂತ್ರ ಸಂಸ್ಥೆಯು ಪಾರದರ್ಶಕವಾಗಿ ಕೆಲಸ ಮಾಡಲು ಬೆಂಬಲಿಸುವ ಇಚ್ಛೆಯನ್ನು ಯಾವುದೇ ರಾಜಕೀಯ ಪಕ್ಷ ಹೊಂದಿಲ್ಲದಿರುವುದು ದುರದೃಷ್ಟಕರ” ಎಂದು ಕರ್ನಾಟಕ ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದೆ.ಬೆಂಗಳೂರು ವಕೀಲರ...