ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಹಂಪ್‌ಗಳಿಗೆ ಹೊಸದಾಗಿ ಬಣ್ಣ ಬಳಿಯುವ ಮಹತ್ವದ ಕಾಮಗಾರಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.
ನಗರದ ಹಲವೆಡೆ ಹಂಪ್ ಇದ್ದರೂ ಬಣ್ಣ ಮಾತ್ರ ಮಾಸಿ ಹೋಗಿ ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿತ್ತು. ಇದೀಗ ಹಂಪ್‌ಗಳಿಗೆ ಬಣ್ಣ ಬಳಿಯುವ ಕಾರ್ಯಕ್ಕೆ ಮಂಗಳೂರು ಪಾಲಿಕೆ ನಿರ್ಧರಿಸಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಶುರುವಾಗಲಿದೆ.
ಎರಡು ದಿನದ ಹಿಂದೆಯೇ ಕೆಪಿಟಿ ಸಹಿತ ಕೆಲವು ಕಡೆ ಬಣ್ಣ ಬಳಿಯುವ ಕೆಲಸ ಶುರು ಮಾಡಲಾಗಿದ್ದರೂ, ಅದೇ ವೇಳೆಗೆ ಮಳೆ ಬಂದ ಕಾರಣದಿಂದ ಬಣ್ಣ ಬಳಿಯಲು ಸಾಧ್ಯವಾಗಿರಲಿಲ್ಲ.
ಬಣ್ಣ ಬಳಿದ ಸಮಯ ಮಳೆಯಾದರೆ ವೆಚ್ಚದಲ್ಲಿ ರಸ್ತೆ ಎಲ್ಲವೂ ವ್ಯರ್ಥವಾಗಲಿದೆ.
ಸದ್ಯ ಒಂದೆರಡು ದಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ ಕಾರಣದಿಂದ ಅದಾದ ಬಳಿಕ ಬಣ್ಣ ಬಳಿಯುವ ಕೆಲಸ ಶುರುವಾಗಲಿದೆ.