Saturday, October 1, 2022

ಟೇಕ್ವಾಂಡೋ ಚಾಂಪಿಯನ್‌ಶಿಪ್‌: ಮಂಗಳೂರಿನ ಸಂಮಿತಾಳಿಗೆ ಬೆಳ್ಳಿ ಪದಕ

ಮಂಗಳೂರು: ಮಲೇಷ್ಯಾದ ಕೌಲಲಾಂಪುರದಲ್ಲಿರುವ ಜುರಾ ಸ್ಟೇಡಿಯಂನಲ್ಲಿ ನಡೆದ 14ನೇ ಅಂತಾರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಚಾಂಪಿಯನ್‌ ಶಿಪ್‌ನಲ್ಲಿ ಮಹಿಳೆಯರ ಕಿರಿಯ ವಿಭಾಗದಲ್ಲಿ ಮಂಗಳೂರಿನ ಸಂಮಿತಾ ಅಲೆವೂರಾಯ ಅವರು ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.


ಸಂಮಿತಾ ಅವರು ಕೋಚ್‌ ಗುರುರಾಜ್‌ ಇಟಗಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ಮಂಗಳೂರಿನ ಶಾರದಾ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿರುವ ಅವರು ಕದ್ರಿ ವಾಸುದೇವ ಭಟ್‌ ಕುಂಜತ್ತೋಡಿ ಮತ್ತು ದೀಪಾ ಕೆ.ಎಸ್.‌ ಅವರ ಪುತ್ರಿ.

ಸಂಹಿತಾ ಅವರು 2022ರಲ್ಲಿ ನೇಪಾಳದಲ್ಲಿ ನಡೆದ ವಿಶ್ವಮಟ್ಟದ ಟೇಕ್ವಾಂಡೋ ಕೂಟದಲ್ಲಿ ಚಿನ್ನದ ಪದಕ ಗಳಿಸಿದ್ದರು.

 

LEAVE A REPLY

Please enter your comment!
Please enter your name here

Hot Topics

ಮಂಗಳೂರು: ನೂತನ ಮೇಯರ್ ಪ್ರಥಮ ಸಭೆ-ತ್ಯಾಜ್ಯ ವಿಲೇವಾರಿ ಗುತ್ತಿಗೆ ಮತ್ತು LED ಲೈಟ್‌ ಬಗ್ಗೆ ಗಂಭೀರ ಚರ್ಚೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮಾಸಿಕ ಸಭೆ ಇಂದು ಲಾಲ್‌ಬಾಗ್‌ನಲ್ಲಿರುವ ಪಾಲಿಕೆ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಮೇಯರ್‌ ಜಯಾನಂದ ಅಂಚನ್‌ ಆಧ್ಯಕ್ಷತೆಯ ಈ ಪ್ರಥಮ ಸಭೆಯಲ್ಲಿ ನಗರದ ತ್ಯಾಜ್ಯ ವಿಲೆವಾರಿ ಗುತ್ತಿಗೆ ಮತ್ತು...

ಪ್ರವೀಣ್ ನೆಟ್ಟಾರು ಪತ್ನಿಗೆ ಒಲಿದು ಬಂತು ಸರ್ಕಾರಿ ಕೆಲಸ: ಅಧಿಕೃತ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಅವರಿಗೆ ಸಿಎಂ ಸಚಿವಾಲಯದಲ್ಲಿ ಗುತ್ತಿಗೆ ಆಧಾರದ ನೆಲೆಯಲ್ಲಿ ನೇಮಕಾತಿ ಮಾಡಿ ರಾಜ್ಯ ಸರ್ಕಾರ ಆದೇಶ...

ಮಂಗಳೂರು: ರಥಬೀದಿ ವೆಂಕಟರಮಣ ದೇಗುಲಕ್ಕೆ ಪತ್ನಿ ಜೊತೆ ಭೇಟಿ ಕೊಟ್ಟ ಕೇಂದ್ರ ಮಾಜಿ ಸಚಿವ ಜನಾರ್ಧನ ಪೂಜಾರಿ

ಮಂಗಳೂರು: ನಗರದ ರಥಬೀದಿ ವೆಂಕಟರಮಣ ದೇವಸ್ಥಾನ, ಆಚಾರ್ಯಮಠ ವಠಾರದಲ್ಲಿ ಶತಮಾನೋತ್ಸವ ಸಂಭ್ರಮದಲ್ಲಿರುವ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವಕ್ಕೆ ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ...