Sunday, November 27, 2022

ಮಂಗಳೂರು: ನೂತನ ಮೇಯರ್ ಪ್ರಥಮ ಸಭೆ-ತ್ಯಾಜ್ಯ ವಿಲೇವಾರಿ ಗುತ್ತಿಗೆ ಮತ್ತು LED ಲೈಟ್‌ ಬಗ್ಗೆ ಗಂಭೀರ ಚರ್ಚೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮಾಸಿಕ ಸಭೆ ಇಂದು ಲಾಲ್‌ಬಾಗ್‌ನಲ್ಲಿರುವ ಪಾಲಿಕೆ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಮೇಯರ್‌ ಜಯಾನಂದ ಅಂಚನ್‌ ಆಧ್ಯಕ್ಷತೆಯ ಈ ಪ್ರಥಮ ಸಭೆಯಲ್ಲಿ ನಗರದ ತ್ಯಾಜ್ಯ ವಿಲೆವಾರಿ ಗುತ್ತಿಗೆ ಮತ್ತು ಎಲ್‌ಇಡಿ ಲೈಟ್‌ ಅಳವಡಿಕೆಯ ಬಗ್ಗೆ ಗಂಭೀರವಾದ ಚರ್ಚೆ ನಡೆಯಿತು.


ಮಂಗಳೂರು ನಗರದ ತ್ಯಾಜ್ಯ ವಿಲೆವಾರಿಗೆ ಸಂಬಂಧಿಸಿ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಟೆಂಡರ್‌ ಅವಧಿ 2023 ಜನವರಿ ವೇಳೆಗೆ ಮುಕ್ತಾಯವಾಗಲಿದೆ.

ಆದರೆ ಹೊಸ ಸಂಸ್ಥೆಗೆ ಟೆಂಡರ್‌ ವಹಿಸಿಕೊಡುವ ಪ್ರಕ್ರಿಯೆ ಇನ್ನೂ ಪೂರ್ತಿಗೊಂಡಿಲ್ಲ. ಹೊಸತಾಗಿ ಟೆಂಡರ್‌ ವಹಿಸಿಕೊಳ್ಳುವ ಬಗ್ಗೆ ಮಂಗಳೂರಿನ ರಾಮಕೃಷ್ಣ ಮಿಷನ್‌ ಸಹಿತ ಎರಡು ಸಂಸ್ಥೆಗಳು ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದು, ಅದರ ಬಗ್ಗೆ ಏನಾಯಿತೆಂಬ ಮಾಹಿತಿ ಇಲ್ಲ.


ಹಾಗೆಯೇ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್‌ ಸಂಸ್ಥೆಗೆ ಪಾವತಿ ಮಾಡಲು ಬಾಕಿ ಇರುವ ಮೊತ್ತ ಎಷ್ಟು ಎನ್ನುವ ಕುರಿತಂತೆಯೂ ಮಾಹಿತಿ ಬೇಕು. ಪಾಲಿಕೆಯ ಆರ್ಥಿಕ ಸ್ಥಿತಿಯ ಬಗ್ಗೆ ಶ್ವೇತ ಪತ್ರ ಹೊರಡಿಸ ಬೇಕು ಎಂದು ಪಾಲಿಕೆಯ ಪ್ರತಿಪಕ್ಷ ಸದಸ್ಯರು ಒತ್ತಾಯಿಸಿದರು.

ಈ ಕುರಿತಂತೆ ಶೀಘ್ರದಲ್ಲಿ ಸಭೆ ನಡೆಸಿ ಮಾಹಿತಿ ನೀಡಲಾಗುವುದು ಎಂದು ಮೇಯರ್‌ ಜಯಾನಂದ ಅಂಚನ್‌ ತಿಳಿಸಿದರು. ಪಾಲಿಕೆಯ ಎಲ್ಲಾ 60 ವಾರ್ಡ್‌ಗಳಲ್ಲಿ ಎಲ್‌ಇಡಿ ಬಲ್ಬ್‌ ಅಳವಡಿಸುವ ಕಾಮಗಾರಿ ವಿಳಂಬವಾಗಿರುವ ಬಗ್ಗೆ ಪ್ರತಿ ಪಕ್ಷದ ಸದಸ್ಯ ಎ.ಸಿ. ವಿನಯರಾಜ್‌ ಪ್ರಸ್ತಾಪಿಸಿದರು.


ಈ ಎರಡು ವಿಷಯಗಳ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಆಡಳಿತ ಪಕ್ಷದ ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ, ರಾಧಾಕೃಷ್ಣ, ಪ್ರತಿ ಪಕ್ಷ ನಾಯಕ ನವೀನ್‌ ಆರ್‌. ಡಿ’ಸೋಜಾ ಮತ್ತು ಸದಸ್ಯರಾದ ಅಬ್ದುಲ್‌ ರವೂಫ್‌, ಎಂ. ಶಶಿಧರ ಹೆಗ್ದೆ, ಎ.ಸಿ. ವಿನಯರಾಜ್‌, ಭಾಸ್ಕರ್‌ ಕೆ. ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.


ಸಭೆಯಲ್ಲಿ ಉಪ ಮೇಯರ್‌ ಪೂರ್ಣಿಮಾ ಮತ್ತು ಉಪ ಆಯುಕ್ತ ರವಿ ಕುಮಾರ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ವಿಶ್ವದಲ್ಲೇ ಬೃಹತ್ ಗಾತ್ರದ ಮೂತ್ರಕೋಶದ ಕಲ್ಲು ಹೊರತೆಗೆದ ಮಣಿಪಾಲ ವೈದ್ಯರು..!

ಉಡುಪಿ: ವ್ಯಕ್ತಿಯೋರ್ವರ 11.5 x 7.5 ಸೆಂಮೀ ಅಳತೆಯ 672 ಗ್ರಾಂ ತೂಕದ ಮೂತ್ರಕೋಶದ ಕಲ್ಲನ್ನು ಮಣಿಪಾಲದ ಕಸ್ತೂರಿ ಬಾ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ನಡೆಸಿ ಹೊರೆ ತೆಗೆದಿರುವ ಘಟನೆ ನಡೆದಿದೆ. ಇದು ವಿಶ್ವದಲ್ಲಿ ಇಲ್ಲಿಯವರೆಗೆ...

ಉಡುಪಿಯ ಮಂದಾರ್ತಿಯಲ್ಲೂ ಸ್ಯಾಟ್‌ಲೈಟ್ ಫೋನ್ ಸಕ್ರಿಯ-ಉಗ್ರ ಕೃತ್ಯಕ್ಕೆ ಸಂಚು ಶಂಕೆ..?

ಉಡುಪಿ: ಇದುವರೆಗೆ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಷ್ಟೇ ಕೇಳಿ ಬರುತ್ತಿದ್ದ ಸ್ಯಾಟಲೈಟ್‌ ಫೋನ್‌ ಕರೆ ಈಗ ದೇವಾಲಯಗಳ ನಗರಿ ಉಡುಪಿ ಜಿಲ್ಲೆಯಲ್ಲೂ ಮೊಳಗಿದೆ. ಉಡುಪಿಯಲ್ಲೂ ಉಗ್ರರ ಕರಿನೆರಳು ಕಾಣಿಸಿದೆ.ಉಡುಪಿಯ ಮಂದಾರ್ತಿ ಸಮೀಪದ ಅರಣ್ಯ...

ಮಂಗಳೂರಿನಲ್ಲಿ ಹಣದ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ-ಖ್ಯಾತ ವೈದ್ಯೆ ಸಹಿತ ಮೂವರ ವಿರುದ್ಧ ಸಂತ್ರಸ್ತ ಯುವತಿಯಿಂದಲೇ ದೂರು ದಾಖಲು

ಮಂಗಳೂರು: ಮುಸ್ಲಿಂ ಯುವಕನೊಬ್ಬ ಮತಾಂತರಗೊಳಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿಯೋರ್ವಳು ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.ಆಕೆ ನೀಡಿರುವ ದೂರಿನಲ್ಲಿ 'ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಗ ಬಿಕರ್ನಕಟ್ಟೆಯ ಕೈಕಂಬದಲ್ಲಿರುವ ಖಲೀಲ್‌ನ...