Connect with us

DAKSHINA KANNADA

ಮಂಗಳೂರು: ಲೇಡಿಹಿಲ್ ಆರೋಗ್ಯ ಕೇಂದ್ರದ ನಿರ್ಲಕ್ಷ್ಯ-ಮೂಲಭೂತ ಸೌಕರ್ಯಕ್ಕೆ CPIM ಒತ್ತಾಯ

Published

on

ಮಂಗಳೂರು: ‘ಮಹಾನಗರ ಪಾಲಿಕೆ ಹಾಗೂ ಕೆ.ಎಮ್.ಸಿ ಆಸ್ಪತ್ರೆ ಸಹಯೋಗದೊಂದಿಗೆ ಕಾರ್ಯಚರಿಸುತ್ತಿರುವ ಲೇಡಿಹಿಲ್‌ ನ ಸರಕಾರಿ ನಗರ ಆರೋಗ್ಯ ಕೇಂದ್ರ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳಿಂದ ವಂಚನೆಗೊಳಗಾಗಿದೆ.

ಈ ಆರೋಗ್ಯ ಕೇಂದ್ರವನ್ನು ಕೂಡಲೇ ಎಲ್ಲಾ ಮೂಲಭೂತ ಸೌಕರ್ಯಗಳ ಸಹಿತ ಮೇಲ್ದರ್ಜೇರಿಸಲು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿಯು ಆಗ್ರಹಿಸುತ್ತದೆ’ ಎಂದು ಸಿಪಿಐಎಂ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದ್ದಾರೆ.

ಮಂಗಳೂರು ನಗರ ಹೃದಯಭಾಗ ಜನ ತಮ್ಮನ್ನು ಕಾಡುವ ರೋಗಗಳಿಗೆ ಚಿಕಿತ್ಸೆ ಪಡೆಯಲು ಲೇಡಿಹಿಲ್ ವೃತ್ತದ ಬಳಿಯಿರುವ ಸರಕಾರಿ ನಗರ ಆರೋಗ್ಯಕೇಂದ್ರಕ್ಕೆ ತೆರಳಿದರೆ ಅಲ್ಲಿ ಯಾವುದೇ ರೀತಿಯ ಸೌಲಭ್ಯಗಳು ಲಭ್ಯವಿರುವುದಿಲ್ಲ.


ಈ‌ ಸರಕಾರಿ ನಗರ ಆರೋಗ್ಯ ಕೇಂದ್ರ ತೀರಾ ಕೆಳಮಟ್ಟದಲ್ಲಿದ್ದು ಜೌಷಧಿ, ನುರಿತ ವೈದ್ಯರು ‌ಸಹಿತ ಸಿಬ್ಬಂದಿಗಳ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ.

ಆರೋಗ್ಯ ಕೇಂದ್ರದ ಕಟ್ಟಡವೂ ಹಳೆಯದಾಗಿದ್ದು ಚಾವಣಿಯು ಸಂಪೂರ್ಣ ಸೋರುತ್ತಿದೆ. ಇನ್ನು ಸಣ್ಣ ಪುಟ್ಟ ರೋಗಗಳಾದ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿಗೂ ನೀಡಬೇಕಾದ ಜೌಷಧಿಗಳು ಈ ಆರೋಗ್ಯ ಕೇಂದ್ರದಲ್ಲಿ ಲಭ್ಯವಿಲ್ಲದೆ ರೋಗಿಗಳು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.


ಕನಿಷ್ಟ ಜ್ವರದಂತಹ ಕಾಯಿಲೆಗಳಿಗೂ ನೀಡಬೇಕಾದ ಮಾತ್ರೆಗಳನ್ನು ನಗರ ಪಾಲಿಕೆ ಸರಬರಾಜು ಮಾಡದೆ ಇರುವ ಕಾರಣ ರೋಗಿಗಳು ಅವೆಲ್ಲವುಗಳನ್ನು ಹೊರಗಿನಿಂದ ಹಣತೆತ್ತು ಪಡೆಯಬೇಕಾದ ಸಂಕಷ್ಟದ ಸ್ಥಿತಿ ಎದುರಾಗಿದೆ. ಈ ಆರೋಗ್ಯ ಕೇಂದ್ರವನ್ನು ಗಮನಿಸಬೇಕಾಗಿದ್ದ ವೈಧ್ಯಕೀಯ ಅಧಿಕಾರಿ ಹುದ್ದೆ ಕಳೆದ ಹಲವು ವರುಷಗಳಿಂದ ಖಾಲಿ ಬಿದ್ದಿದೆ.

ನಗರದ ಜನರ ಆರೋಗ್ಯ ಕಾಳಜಿ ವಹಿಸಬೇಕಾಗಿದ್ದ ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತವು ಆರೋಗ್ಯ ಕೇಂದ್ರವನ್ನು ಸಂಪೂರ್ಣ ಕಡೆಗಣಿಸುತ್ತಿರುವುದು ಜನವಿರೋಧಿ ನಡೆಯಾಗಿದ್ದು ಮಾತ್ರವಲ್ಲದೆ ಇಂತಹ ಅವ್ಯವಸ್ಥೆಯ ಪರಿಸ್ಥಿತಿಗೆ ಸ್ಥಳೀಯ ಶಾಸಕ ವೇದವ್ಯಾಸ ಕಾಮತರು ನೇರ ಹೊಣೆಯಾಗಿದ್ದಾರೆ.

ಈಗಾಗಲೇ ನಗರದೆಲ್ಲೆಡೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟ್ಯಾಂತರ ಹಣವನ್ನು ವ್ಯರ್ಥ ಕಾಮಗಾರಿಗಳಿಗೆ ಖರ್ಚು ಮಾಡುವ ಬದಲು ಕನಿಷ್ಟ ಇಂತಹ ಅಗತ್ಯ ಇಲಾಖೆಗಳ ಅಭಿವೃಧ್ಧಿಗೆ ವಿನಿಯೋಗಿಸಿದರೆ ಜನ ಅವುಗಳ ಸದುಪಯೋಗವನ್ನು ಪಡೆಯುವಂತಾಗಲಿದೆ.

ಈ ಎಲ್ಲಾ ಹಿನ್ನಲೆಯಲ್ಲಿ ಪಾಲಿಕೆ ಆಡಳಿತವು ಲೇಡಿಹಿಲ್ ನ‌ ಸರಕಾರಿ ನಗರ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಜೌಷಧಿ, ನುರಿತ ವೈದ್ಯರು ಸಹಿತ ಎಲ್ಲಾ ಮೂಲಭೂತ ಸೌಕರ್ಯಗಳ ಕೊರತೆಗಳನ್ನು ಸರಿಪಡಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಹಾಗೂ ಈ ಆರೋಗ್ಯ ಕೇಂದ್ರವನ್ನು ಸುಸಜ್ಜಿತ ಕಟ್ಟಡ ಸಹಿತ ಮೇಲ್ದರ್ಜೆಗೇರಿಸಬೇಕೆಂದು ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

DAKSHINA KANNADA

ಮಂಗಳೂರು: 73ನೇ ವರ್ಷದ ಬಳ್ಳಾಲ್‌ಭಾಗ್‌ ಗುರ್ಜಿ ದೀಪೋತ್ಸವ ಸಂಭ್ರಮ

Published

on

ಮಂಗಳೂರು: ಬಳ್ಳಾಲ್‌ಭಾಗ್‌ ಗುರ್ಜಿ ದೀಪೋತ್ಸವ ಸಮಿತಿ ವತಿಯಿಂದ 73ನೇ ವರ್ಷದ ಗುರ್ಜಿ ದೀಪೋತ್ಸವ ಬಹಳ ಸಂಭ್ರಮದಿಂದ ಜರುಗಿತು.

ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ , ಸೇವಾ ಕಾರ್ಯಕ್ರಮಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ ನೆರವೇರಿಸಲಾಯಿತು. ಅತ್ಯಂತ ಜನಮಣ್ಣನೆ ಗಳಿಸಿದ ಈ ಗುರ್ಜಿ ದೀಪೋತ್ಸವವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಈ ಬಾರಿಯೂ ನಡೆಯಿತು. ಸಂಜೆ 5.55ಕ್ಕೆ ದೀಪಾರಾಧನೆ, ಸಂಜೆ 6 .30ಕ್ಕೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ರಾತ್ರಿ 9.30ಕ್ಕೆ ರಸಮಂಜರಿ ಕಾರ್ಯಕ್ರಮ ನಡೆಯಿತು. ವೈಭವದ ಮೆರವಣಿಗೆ ಮೂಲಕ ಶ್ರೀದೇವರನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಬರಲಾಯಿತು. ವಿದ್ಯುತ್ ಅಲಂಕಾರ, ಹೂವಿನ ಅಲಂಕಾರದಿಂದ ರಥವನ್ನು ಶೃಂಗರಿಸಲಾಗಿತ್ತು.

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆಯನ್ನು ಉದ್ಯಮಿ ಕುಡ್ಪಿ ಜಗದೀಶ್ ಶೆಣೈ ಅವರು ನೀಡಿದರು. ಕಾರ್ಮಿಕ ನಾಯಕ ಸುರೇಶ್ಚಂದ್ರ ಶೆಟ್ಟಿ, ಉದ್ಯಮಿ ರವೀಂದ್ರ ಶೇಟ್‌, ಕಾಂಗ್ರೆಸ್ ನಾಯಕ ಸುರೇಶ್ ಬಲ್ಲಾಳ್‌, ಮಾಜಿ ಕಾರ್ಪೋರೇಟರ್ ಪದ್ಮನಾಭ ಅಮೀನ್‌ , ರಂಗ ಕಲಾವಿದ ವಿಜಯಕುಮಾರ್ ಕೊಡಿಯಾಲ್‌ಬೈಲು, ಸುಶಾಂತ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಪ್ರಕಾಶ್ ಸಾಲ್ಯಾನ್, ಪ್ರಮೋದ್ ಭಂಢಾರಿ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸನಾತನ ನೃತ್ಯಾಂಜಲಿ ಕಾರ್ಯಕ್ರಮ ಪ್ರದರ್ಶನಗೊಂಡಿತು. ಇದೇ ವೇಳೆ ಗುರ್ಜಿ ದೀಪೋತ್ಸವದಲ್ಲಿ ಹಲವು ಮಂದಿ ಸಾಧಕರನ್ನು ಗೌರವಿಸಲಾಯಿತು.

 

Continue Reading

BANTWAL

ನಾಲ್ಕು ಪತ್ನಿಯರಿಗೆ ಕೈಕೊಟ್ಟು ಐದನೇ ಮದುವೆಗೆ ಸಜ್ಜಾಗುತ್ತಿದ್ದ ರಸಿಕ ಅರೆಸ್ಟ್ !!

Published

on

ಬಂಟ್ವಾಳ: ನಾಲ್ಕು ಮದುವೆಯಾಗಿ, ಐದನೇ ಮದುವೆಗೆ ತಯಾರಾಗುತ್ತಿದ್ದ ಭೂಪನೊಬ್ಬನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ನಾಲ್ಕನೇ ಮದುವೆಯಾದ ಪತ್ನಿಗೆ ತ್ರಿವಳಿ ತಲಾಖ್ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹ*ಲ್ಲೆ ನಡೆಸಿ ಮನೆಯಿಂದ ಹೊರದಹಾಕಿದ್ದ ರಾ*ಕ್ಷಸೀಯ ಕೃ*ತ್ಯವೊಂದು ಬಂಟ್ವಾಳ ತಾಲೂಕಿನ ಗೂಡಿನಬಳಿಯಲ್ಲಿ ಬುಧವಾರ (ನ.27) ರಾತ್ರಿ ನಡೆದಿದೆ.

ಈ ಬಗ್ಗೆ ಸಂತ್ರಸ್ತ ಪತ್ನಿ ನೀಡಿರುವ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆಯಾಗುವುದನ್ನೇ ಕಸುಬಾಗಿಸಿಕೊಂಡ ನಟೋರಿಯಸ್ ಬಹುಪತ್ನಿ ವಲ್ಲಭನನ್ನು ಮಾಣಿ ರಫೀಕ್ ಯಾನೆ ಮಹಮ್ಮದ್ ರಫೀಕ್(42)ನನ್ನು ಬಂಟ್ವಾಳ ಪೊಲೀಸರು ಬಲೆಗೆ ಕೆಡವಿದ್ದಾರೆ. ಆರೋಪಿ ಮಾಣಿ ರಫೀಕ್ ಈಗಾಗಲೇ ನಾಲ್ಕು ಮದುವೆಯಾಗಿದ್ದು, ಒಂದೆರಡು ವರ್ಷ ಜೊತೆಯಾಗಿ ಜೀವನ ಮಾಡಿ ಮಕ್ಕಳನ್ನು ಕರುಣಿಸಿದ ಬಳಿಕ ವಿಚ್ಚೇದನ ನೀಡಿ ಪರಾರಿಯಾಗುತ್ತಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ.

ನಾಲ್ಕನೇ ಪತ್ನಿಯಿಂದ ದೂರು ದಾಖಲು :

‘ನಿನ್ನೆ ( ನ.26) ಸಂಜೆ ಐದು ಗಂಟೆ ಸುಮಾರಿಗೆ ರಫೀಕ್ ನ ಮನೆಗೆ ನಾನು ಹೋಗಿದ್ದೇನೆ. ಹೋದಂತ ಸಂದರ್ಭದಲ್ಲಿ ಆರೋಪಿಯಾದ ರಫೀಕ್ ಅ*ವಾಚ್ಯ ಶಬ್ದಗಳಿಂದ ಬೈದು, ಹ*ಲ್ಲೆ ನಡೆಸಿದ್ದಲ್ಲದೇ ಮಗುವನ್ನು ಕೊಂ*ದು ಹಾಕುತ್ತೇನೆಂದು ಬೆದರಿಕೆ ಹಾಕಿದ್ದಲ್ಲದೇ, ತಾಯಿಯ ಮಡಿಲಲ್ಲಿದ್ದ ಮಗುವನ್ನು ಎಳೆದು ಎಸೆಯಲು ಮುಂದಿಗಿದ್ದಾನೆ’ ಎಂದು ಸಂತ್ರಸ್ತ ಪತ್ನಿ ಆರೋಪಿಸಿದ್ದಾಳೆ. ಅಲ್ಲದೇ ತ್ರಿವಳಿ ತಲಾಖ್ ಎಂದು ಹೇಳಿ ಕುತ್ತಿಗೆಗೆ ಕೈಹಾಕಿ ಮನೆಯಿಂದ ಹೊರಗೆ ದಬ್ಬಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾಳೆ. ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನೂ ಕಿತ್ತುಕೊಂಡಿರುವ ಬಗ್ಗೆ ದೂರಿನಲ್ಲಿ ವಿವರಿಸಿದ್ದಾರೆ.

ಮಾಣಿ ರಫೀಕ್ ಯಾರು ? ಹಿನ್ನಲೆ ಏನು ?

ಮಾಣಿ ರಫೀಕ್ ಯಾನೆ ನಟೋರಿಯಸ್ ಕಿರಾತಕ. ಮಾಣಿಯಿಂದ ವಲಸೆ ಬಂದ ರಫೀಕ್ ವಿಟ್ಲ ಸಮೀಪದ ಮಂಗಲಪದವು ಎಂಬಲ್ಲಿ ಮನೆ ಕಟ್ಟಿಕೊಂಡಿದ್ದ. ಅಲ್ಲಿಯೂ ನೆರೆಹೊರೆಯವರ ಜೊತೆ ಗಲಾಟೆ, ಗದ್ದಲ ಎಬ್ಬಿಸಿ ಕೊನೆಗೆ ಮನೆ ಮಾರಾಟ ಮಾಡಿ ಪಾಣೆಮಂಗಳೂರು ಸಮೀಪದ ಗೂಡಿನಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಅಲ್ಲೂ ಕೂಡಾ ಪರಿಸರದ ಶಾಂತಿಪ್ರಿಯ ನಿವಾಸಿಗಳ ಜೊತೆ ತಕರಾರು ಎಬ್ಬಿಸಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಜನ್ಮ ನೀಡಿದ ತಾಯಿಯ ಮೇಲೆಯೇ ಮನಬಂದಂತೆ ಹ*ಲ್ಲೆ ನಡೆಸಿ ಆಕೆಯ ಚಿನ್ನಾಭರಣ ಕಿತ್ತು ಕಾಲಿನಿಂದ ತುಳಿದು ಮನೆಯಿಂದ ಹೊರದಬ್ಬಿ ರಾ*ಕ್ಷಸೀಯ ಕೃ*ತ್ಯ ನಡೆಸಿದ್ದ. ಈತನ ಹ*ಲ್ಲೆ, ಕಿರುಕುಳದಿಂದ ಮನನೊಂದ ತಾಯಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಲ್ಲದೇ ಠಾಣೆಯಲ್ಲೂ ಹೆತ್ತ ತಾಯಿಯ ಮೇಲೆ ಮನಬಂದಂತೆ ಅ*ವಾಚ್ಯ ಶಬ್ದಗಳಿಂದ ನಿಂದಿಸಿ ರಾ*ಕ್ಷಸೀ ಕೃ*ತ್ಯ ನಡೆಸಿರುವುದು ಪ್ರತಿಯೊಬ್ಬನಿಗೂ ತಿಳಿದ ವಿಚಾರವಾಗಿದೆ. ಅದಾದ ಬಳಿಕ ಅನಾರೋಗ್ಯದಿಂದ ಮೃ*ತಪಟ್ಟ ಮೊದಲ ಪತ್ನಿಯ ಹಿರಿಮಗಳ ಮೇಲೆ ಹ*ಲ್ಲೆ ನಡೆಸಿ ಮನೆಯಿಂದ ಹೊರದಬ್ಬಿದ್ದಾನೆ. ಇದೀಗ ಆಕೆಯೂ ತನ್ನ ಅಜ್ಜಿ ಜೊತೆ ಮಂಗಲಪದವು ಬಳಿ ಬಾಡಿಗೆ ಮನೆಯಲ್ಲಿದ್ದಾರೆ।

ಇದೀಗ ನಾಲ್ಕನೇ ಪತ್ನಿಯ ಚಿನ್ನಾಭರಣವನ್ನೆಲ್ಲಾ ಕಿತ್ತುಕೊಂಡು ಬಳಿಕ ಆಕೆಯ ಮಗುವಿನ ಮೇಲೆ ಹ*ಲ್ಲೆ ನಡೆಸಿ ಹೊರದಬ್ಬಿದ್ದ ಕಿರಾತಕನ ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಸೆಕ್ಷನ್ BNS/-85,86,352,351(1),115(2) ರಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಮಂಗಳೂರು : ದಿ.ಉಮೇಶ್ ಕಾಜಿಲ ಸವಿನೆನಪಿಗಾಗಿ ಡಿ.1 ರಂದು ಬೃಹತ್ ರಕ್ತದಾನ ಶಿಬಿರ

Published

on

ಮಂಗಳೂರು : ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ, ವೀರಾಂಜನೇಯ ಶಾಖೆ ಕಾಜಿಲ, ಭಾರತೀಯ ಜನತಾ ಪಾರ್ಟಿ ತೆಂಕುಳಿಪಾಡಿ ವಾರ್ಡ್ ಸಮಿತಿ ಕಾಜಿಲ, ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗ ಮೋರ್ಚಾ ಮಂಗಳೂರು ಉತ್ತರ ಮಂಡಲ ಇದರ ಸಹಯೋಗದಿಂದ ರಕ್ತಕೇಂದ್ರ ಕೆ.ಎಂ.ಸಿ.ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ದಿ.ಉಮೇಶ್ ಕಾಜಿಲ ಇವರ ಸವಿನೆನಪಿಗಾಗಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಡಿಸೆಂಬರ್ 1 ರಂದು ಭಾನುವಾರ ಕಾಜಿಲ ಮಾಧವ ಮನೆ ವಠಾರದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 8.30 ರಿಂದ 1 ರ ವರೆಗೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.

Continue Reading

LATEST NEWS

Trending

Exit mobile version