Thursday, December 2, 2021

ಮಂಗಳೂರಿನಿಂದ ಗಲ್ಫ್‌ ರಾಷ್ಟ್ರಗಳ ಪ್ರಯಾಣ ಬಲು ದುಬಾರಿ: ಶೇ.200ರಷ್ಟು ಹೆಚ್ಚಳ

ಮಂಗಳೂರು: ಕೋವಿಡ್ ಲಾಕ್‍ಡೌನ್ ಇದೀಗ ಹಂತಹಂತವಾಗಿ ತೆರೆಯುತ್ತಿದೆ. ಈ ಮಧ್ಯೆ ಕರಾವಳಿಗರಿಗೆ ಗಲ್ಫ್‌ ರಾಷ್ಟ್ರಗಳು ಬಲು ದುಬಾರಿಯಾಗಿಬಿಟ್ಟಿವೆ.

ಉದ್ಯೋಗ, ಕಾರ್ಯಕ್ರಮ ಹೀಗೆ ಹತ್ತು ಹಲವು ಕಾರಣಗಳಿಗೆ ಮಂಗಳೂರಿನಿಂದ ದುಬೈ ತೆರಳುವವರು ದುಪ್ಪಟ್ಟು ಟಿಕೆಟ್‌ ಬೆಲೆ ತೆರಬೇಕಾದ ಅನಿವಾರ್ಯತೆ ಇದೆ.


ಕೋವಿಡ್‍ಗಿಂತ ಮೊದಲು ಕೇವಲ 10-12 ಸಾವಿರದ ಟಿಕೆಟ್ ದರ ಈಗ 20 – 35 ಸಾವಿರ ರೂ.ಗೆ ಏರಿಕೆಯಾಗಿದೆ.
ನಾಳೆ ಮಂಗಳೂರಿನಿಂದ ದುಬೈ ನೇರ ವಿಮಾನ ದರ ಗಮನಿಸುವುದಾದರೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ 33 ಸಾವಿರ ರೂಪಾಯಿ ಇದೆ. ಮತ್ತೂ ಕೆಲವೆಡೆ ಲಕ್ಷ ಸಮೀಪಿಸಿದೆ.
ನಾಳೆ ಮಂಗಳೂರು, ಬೆಂಗಳೂರು, ಗೋವಾದಿಂದ ದುಬೈಗೆ ಒಂದೊಂದು ವಿಮಾನ ಸಂಸ್ಥೆಗಳ ಟಿಕೆಟ್ ದರ ಒಂದೊಂದು ರೀತಿ ಇದೆ.

ಈಗಿರುವ ದರ ಹೋಲಿಸಿದರೆ ಮಂಗಳೂರಿನಿಂದ ದುಬೈಗೆ ಹೋಗಿ ಮತ್ತೆ ಮಂಗಳೂರಿಗೆ ಬರಬಹುದಾಗಿತ್ತು ಎನ್ನುತ್ತಾರೆ ಮತ್ತೋರ್ವ ಪ್ರಯಾಣಿಕ

ಕೋವಿಡ್ ಲಾಕ್‍ಡೌನ್ ಸಂದರ್ಭ ಊರಿಗೆ ಬಂದು ಇಲ್ಲಿ ಉಳಿದವರು ಇದೀಗ ಕೆಲಸಕ್ಕೆ ಮರಳುತ್ತಿದ್ದು, ಏರ್‌‍ಲೈನ್ಸ್ ಕಂಪನಿಗಳು ಇದರ ದುರ್ಲಾಭ ಪಡೆಯುತ್ತಿವೆ.

ಎನ್ನುತ್ತಾರೆ ಓರ್ವ ಅನಿವಾಸಿ ಭಾರತೀಯ
ಹಿಂದೆ ಮಂಗಳೂರಿನವರು ತೀರಾ ಟಿಕೆಟ್ ದರ ಹೆಚ್ಚಳವಿದ್ದ ಕಾರಣ, ಬೆಂಗಳೂರು, ಕೊಚ್ಚಿ, ಗೋವಾ, ಮುಂಬಯಿಗೆ ತೆರಳಿ ವಿಮಾನ ಏರುತ್ತಿದ್ದರು.

ಈಗ ಎಲ್ಲ ಕಡೆಯೂ ಟಿಕೆಟ್ ದರ ಹೆಚ್ಚಳವಾಗಿದೆ. ವಿಮಾನವೇರಲು ಕೋವಿಡ್ ನೆಗೆಟಿವ್ ರಿಪೋರ್ಟ್ ಬೇಕೇ ಬೇಕು. ಅದಕ್ಕಾಗಿ ಐದು ತಾಸು ಮೊದಲು ವಿಮಾನ ನಿಲ್ದಾಣ ತಲುಪಬೇಕು. ಇದೆಲ್ಲಾ ಪ್ರಯಾಣಿಕರಿಗೆ ತ್ರಾಸದಾಯಕವಾಗಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...