Connect with us

    ಮಂಗಳೂರು ಗೋಲಿಬಾರ್ ಗಲಭೆ ವಿಚಾರ: ಸಹಾಯಕ ಆಯುಕ್ತರ ಕಚೇರಿಯಲ್ಲಿ ಮುಂದುವರೆದ ವಿಚಾರಣೆ

    Published

    on

    ಮಂಗಳೂರು ಗೋಲಿಬಾರ್ ಗಲಭೆ ವಿಚಾರ: ಸಹಾಯಕ ಆಯುಕ್ತರ ಕಚೇರಿಯಲ್ಲಿ ಮುಂದುವರೆದ ವಿಚಾರಣೆ 

    ಮಂಗಳೂರು: ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಭುಗಿಲೆದ್ದ ಗಲಭೆ, ಹಿಂಸಾಚಾರದ ವೇಳೆ ನಡೆದ ಪೊಲೀಸ್‌ಗೋಲಿಬಾರ್‌ವಿಚಾರವಾಗಿ ಮಂಗಳೂರಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಮುಂದುವರೆದ ವಿಚಾರಣೆ ಇಂದು ನಡೆಯಿತು.

    ಈ ಬಗ್ಗೆ ಮಾಹಿತಿ ನೀಡಿದ ತನಿಖಾಧಿಕಾರಿ ಜಿ.ಜಗದೀಶ್, ಹೈಕೋರ್ಟ್‌ಆದೇಶದ ಮೇರೆಗೆ ಗೋಲಿಬಾರ್‌ವಿಚಾರವಾಗಿ ಕಳೆದ ಫೆಬ್ರವರಿ 13ರಂದು ಮೊದಲ ಹಂತದ ವಿಚಾರಣೆ ನಡೆದಿತ್ತು. ಇಂದು 2ನೇ ಹಂತದ ವಿಚಾರಣೆ ನಡೆದಿದೆ. ಸಾರ್ವಜನಿಕರು, ಮಾಧ್ಯಮ ಮತ್ತು ಪೋಲಿಸ್‌ಅಧಿಕಾರಿಗಳಿಂದ ಗೋಲಿಬಾರ್‌ಸಂಬಂಧಿಸಿ ವೀಡಿಯೋಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದು, ಎರಡು ದಿನಗಳ ಕಾಲ ವಿಚಾರಣೆ ನಡೆದಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಇನ್ನು ಗೋಲಿಬಾರ್‌ನಲ್ಲಿ ಗಾಯಗೊಂಡ ಮಾಜಿ ಮೇಯರ್‌ಕೆ. ಅಶ್ರಫ್‌ವೀಡಿಯೋ ಸಿ.ಡಿ. ಮತ್ತು ಪೆನ್‌ಡ್ರೈವ್‌ಅನ್ನು ಹಾಜರುಪಡಿಸಲು ನ್ಯಾಯಾಲಯಕ್ಕೆ ಅವಕಾಶ ಕೇಳಿದ್ದರು. ಸಾಮಾಜಿಕ ಜಾಲದಲ್ಲಿರುವ ವೀಡಿಯೋಗಳನ್ನು ಸಂಗ್ರಹಿಸಿ, ತೆಗೆದುಕೊಂಡು ಬಂದಿದ್ದರು. ಆದ್ರೆ ಸಾಮಾಜಿಕ ಜಾಲತಾಣದಲ್ಲಿರುವ ವೀಡಿಯೋಗಳ ಅಥೆಂಟಿಸಿಟಿ ಬಗ್ಗೆ ಪರಾಮರ್ಶೆ ಮಾಡೋದಕ್ಕೆ ಸಾಧ್ಯವಿಲ್ಲ. ಅದನ್ನು ತನಿಖೆಯಲ್ಲಿ ಬಳಸಲು ಸಾಧ್ಯವಿಲ್ಲ. ಆ ಕಾರಣಕ್ಕೆ ಅವುಗಳನ್ನು ಸ್ವೀಕಾರ ಮಾಡಿಲ್ಲ ಎಂದು ತನಿಖಾಧಿಕಾರಿ ಜಿ. ಜಗದೀಶ್‌ತಿಳಿಸಿದರು.

    ಇನ್ನು ಫೆ. 25ರಂದು ಮುಂದಿನ ವಿಚಾರಣೆ ನಡೆಯಲಿದ್ದು ಒಟ್ಟು 176 ಪೊಲೀಸರು ಸಾಕ್ಷಿ ಹೇಳಲು ಸಿದ್ದರಿರುವ ಬಗ್ಗೆ ನೋಡಲ್ ಅಧಿಕಾರಿಯೂ ಆಗಿರುವ ಎಸಿಪಿ ಬೆಳ್ಳಿಯಪ್ಪ ಪಟ್ಟಿ ನೀಡಿದ್ದಾರೆ. ಜೊತೆಗೆ ಮಂಗಳೂರು ಕಮಿಷನರ್‌, ಡಿಸಿಪಿಗೆ ಖುದ್ದು ನೋಟಿಸ್‌ನೀಡಲಾಗುವುದು ಎಂದು ತಿಳಿಸಿದರು.

     

    Click to comment

    Leave a Reply

    Your email address will not be published. Required fields are marked *

    BIG BOSS

    BBK 11: ತ್ರಿವಿಕ್ರಮ್‌ ಡೇಂಜರ್‌ ಎಂದ ಭವ್ಯಾ ಗೌಡ

    Published

    on

    ಬಿಗ್ ಬಾಸ್ ಮನೆಯ ಆಟ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ. ಈ ವಾರ ಫ್ಯಾಮಿಲಿ ರೌಂಡ್‌ನಿಂದ ಜಾಲಿ ಮೂಡ್‌ನಲ್ಲಿದ್ದ ಸ್ಪರ್ಧಿಗಳಿಗೆ ಸುದೀಪ್ ಶಾಕ್ ಕೊಟ್ಟಿದ್ದಾರೆ. ಎಂದಿನಂತೆ ಭಾನುವಾರದ ಎಪಿಸೋಡ್‌ನಲ್ಲಿ ಸುದೀಪ್ ಈ ವಾರವು ಸ್ಪರ್ಧಿಗಳಿಗೆ ಚಟುವಟಿಕೆ ಒಂದನ್ನು ಕೊಟ್ಟಿದ್ದಾರೆ. ಅದುವೆ ಈ ಬಿಗ್ ಬಾಸ್ ಮನೆಯಲ್ಲಿ ಯಾರು ಡೇಂಜರ್, ಯಾರು ಜೋಕರ್? ಎಂದು ಮನೆ ಮಂದಿಗೆ ಕಿಚ್ಚ ಕೇಳಿದ್ದಾರೆ. ಈ ವೇಳೆ, ಕಿಚ್ಚನ ಮುಂದೆ ತ್ರಿವಿಕ್ರಮ್‌ ಡೇಂಜರ್‌ ಎಂದು ಹೇಳಿದ್ದಾರೆ.

    ಹೌದು, ಈ ಜರ್ನಿಯಲ್ಲಿ ನೀವು ಯಾರು ಅಂತ ಇನ್ನೊಬ್ಬರಿಗೆ ಗೊತ್ತಾಗುತ್ತೆ ಎಂದು ಹೇಳಿದ್ದಾರೆ. ಒಂದು ಬೋರ್ಡ್ ಮೇಲೆ ಸ್ಪರ್ಧಿಗಳು ಈ ಮನೆಯಲ್ಲಿ ಯಾರು ಡೇಂಜರ್? ಯಾರು ಜೋಕರ್? ಹಾಗೂ ಯಾರು ಕಾಂಪಿಟೆಟರ್? ಅಂತ ಬರೆಯಲಾಗಿದೆ. ಅದರಂತೆ ಈ ಮನೆಯಲ್ಲಿರೋ ಸ್ಪರ್ಧಿಗಳಿಗೆ ಏನೇನೂ ಹೋಗುತ್ತೆ ಅಂತ ಬಾಣದ ಮೂಲಕ ಚುಚ್ಚಬೇಕು. ಅದರಂತೆ ಭವ್ಯಾ ಗೌಡ ಅವರು ‘ಡೇಂಜರ್’ ಜಾಗಕ್ಕೆ ತ್ರಿವಿಕ್ರಮ್ ಫೋಟೋವನ್ನು ಅಂಟಿಸಿದ್ದಾರೆ. ತ್ರಿವಿಕ್ರಮ್‌ ಡೇಂಜರ್‌ ಎಂದು ಭವ್ಯಾ ಹೇಳಿದ್ದಾರೆ.

    ಉಳಿದಂತೆ ರಜತ್ ಹಾಗೂ ಹನುಮಂತ ಚೈತ್ರಾಗೆ ಜೋಕರ್ ಪಟ್ಟ ಕೊಟ್ಟಿದ್ದಾರೆ. ಚೈತ್ರಕ್ಕಾಗೆ ನಾನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಅಂತ ಹನುಮಂತ ಹೇಳಿದ್ದಾರೆ. ಬಳಿಕ ಮಾತಾಡಿ ರಜತ್ ಅವರು ಚೈತ್ರಾ ಅವರು ಬಂದು 14 ವಾರ ಆಗಿದೆ. ಇಲ್ಲಿತನಕ ಅವರು ಇಷ್ಟು ಸಂಪಾದನೆ ಮಾಡಿದ್ದಾರೆ ಎಂದು ಈ ಚಟುವಟಿಕೆಯಿಂದ ತಿಳಿಯುತ್ತಿದೆ. ಹೀಗಾಗಿ ಅವರನ್ನು ಜೋಕರ್ ತರ ನೋಡುತ್ತಿದ್ದೇನೆ ಅಂತ ಹೇಳಿದ್ದಾರೆ.

    ರಜತ್ ಮಾತಿಗೆ ಕೂಡಲೇ ಮಾತಾಡಿದ ಚೈತ್ರಾ ಕುಂದಪುರ, ಅದೇ ಜೋಕರ್ ಆಸ್ಕರ್ ಗೆದ್ದಿದ್ದನ್ನು ನಾನು ಕೇಳಿದ್ದೀನಿ, ಹೀಗಾಗಿ ಇವರುಗಳ ಅಭಿಪ್ರಾಯ ನನಗೆ ದೊಡ್ಡದು ಅಂತ ಅನಿಸುವುದೇ ಇಲ್ಲ ಅಂತ ಹೇಳಿದ್ದಾರೆ. ಬೇಕಾದ್ರೇ ಚೈತ್ರಾ ಆಸ್ಕರ್ ಗೆದ್ದುಕೊಳ್ಳಲಿ, ನಾನು ಬಿಗ್ ಬಾಸ್ ಕಪ್ ಗೆದ್ದುಕೊಂಡು ಮನೆಗೆ ಹೋಗುತ್ತೇನೆ ಅಂತ ರಜತ್ ಠಕ್ಕರ್ ಕೊಟ್ಟಿದ್ದಾರೆ.

    Continue Reading

    LATEST NEWS

    ಬೆಳ್ಳಂಬೆಳಗ್ಗೆ ನಡೆದ ಸಿಲಿಂಡರ್ ಸ್ಪೋ*ಟ; ಕೇರಳ ಮೂಲದ ಯುವಕರು ಗಂ*ಭೀರ

    Published

    on

    ಮಂಗಳೂರು/ಬೆಂಗಳುರು : ಬೆಳ್ಳಂಬೆಳಗ್ಗೆ ಎರಡು ಅಂತಸ್ತಿನ ಕಟ್ಟಡದಲ್ಲಿ ಸಿಲಿಂಡರ್ ಬ್ಲಾ*ಸ್ಟ್‌ ಆಗಿರುವ ಘಟನೆ ಬೆಂಗಳೂರಿನ ಆನೇಕಲ್‌ ತಾಲೂಕಿನ ಕಿತ್ತಗಾನಹಳ್ಳಿಯಲ್ಲಿ ಇಂದು (ಜ.6) ಮುಂಜಾನೆ ನಡೆದಿದೆ.

    ಮೂಲತಃ ಕೇರಳದವರಾದ ಸುನೀಲ್‌ ಜೋಸೆಫ್‌, ವಿಷ್ಣು ಜಯರಾಜ್‌ ಗಾ*ಯಾಳುಗಳು ಎಂದು ಗುರುತಿಸಲಾಗಿದೆ.

    ಇಬ್ಬರೇ ಯುವಕರು ಆ ಮನೆಯಲ್ಲಿ ವಾಸವಿದ್ದರು. ಓರ್ವನಿಗೆ ಮೈ-ಕೈಗೆಲ್ಲಾ ಗಾ*ಯ ಹಾಗೂ ಮತ್ತೋರ್ವನ ತಲೆ-ಕೈಕಾಲುಗಳಿಗೆ ಪೆ*ಟ್ಟು ಬಿದ್ದಿದೆ. ಸ್ಪೋ*ಟಕ್ಕೆ ಕಾರಣವೇನು ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಆದರೆ, ಇಡೀ ಕಟ್ಟಡ ಸ್ಫೋ*ಟದ ಕಾರಣದಿಂದ ಧ್ವಂ*ಸಗೊಂಡಿದೆ.

     

    ಇದನ್ನೂ ಓದಿ : ಗುರುಪುರ : ನಗರದ ಹಲವು ಅಂಗಡಿಗಳಲ್ಲಿ ಕಳ್ಳತನ

     

    ಗಾ*ಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆ ಗೋಡೆಗಳು, ಕಿಟಕಿ, ಬಾಗಿಲು, ಅಕ್ಕಪಕ್ಕದ ನಾಲ್ಕೈದು ಮನೆಗಳು, ಕೆಲವು ವಾಹನಗಳೂ ಸ್ಫೋ*ಟದ ತೀವ್ರತೆಗೆ ಭಾರೀ ಹಾ*ನಿಯಾಗಿದೆ. ಈ ಘಟನೆಯಿಂದ ಸ್ಥಳೀಯರು ಗಾ*ಬರಿಗೊಂಡಿದ್ದು,  ಸೂರ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    Continue Reading

    FILM

    ಯಶ್ ಫ್ಯಾನ್ಸ್‌ಗೆ ಸರ್ಪ್ರೈಸ್- ‘ಟಾಕ್ಸಿಕ್’ ಟೀಮ್‌ನಿಂದ ಸಿಕ್ತು ಸಿಹಿ ಸುದ್ದಿ

    Published

    on

    ನ್ಯಾಷನಲ್ ಸ್ಟಾರ್ ಯಶ್ ಅವರು ಇದೇ ಜ.8ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಈ ದಿನ ‘ಟಾಕ್ಸಿಕ್’ ಚಿತ್ರದ ಬಗ್ಗೆ ಏನಾದರೂ ಅಪ್‌ಡೇಟ್ ಸಿಗಬಹುದು ಎಂದು ನಿರೀಕ್ಷಿಸಿದವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸದ್ಯ ಚಿತ್ರತಂಡದ ಕಡೆಯಿಂದ ಬಿಗ್ ನ್ಯೂಸ್‌ವೊಂದು ಸಿಕ್ಕಿದೆ. ಸಿನಿಮಾ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

    ಯಶ್ ಬರ್ತ್‌ಡೇಯಂದು (ಜ.8) ಬೆಳಗ್ಗೆ 10:25ಕ್ಕೆ ಗೀತು ಮೋಹನ್‌ದಾಸ್‌ ನಿರ್ದೇಶನದ ‘ಟಾಕ್ಸಿಕ್’ (Toxic) ಬಗ್ಗೆ ಅಪ್‌ಡೇಟ್ ಸಿಗಲಿದೆ ಎಂದು ಕೆವಿಎನ್ ನಿರ್ಮಾಣ ಸಂಸ್ಥೆ ತಿಳಿಸಿದೆ. ಯಶ್ ಕೂಡ ಇದೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಸದ್ಯ ರಿಲೀಸ್ ಆಗಿರೋ ಪೋಸ್ಟರ್‌ನಲ್ಲಿ ಯಶ್ ಅವರು ಹಳೆಯ ಕಾಲದ ಕಾರಿನ ಮೇಲೆ ನಿಂತಿದ್ದಾರೆ. ಅವರ ಬಾಯಲ್ಲಿ ಸಿಗರೇಟ್ ಇದೆ. ತಲೆಗೆ ಹ್ಯಾಟ್ ಧರಿಸಿದ್ದಾರೆ. ಇದು ಅವರ ಗೆಟಪ್ ಎಂದು ಹೇಳಲಾಗುತ್ತಿದೆ. ಈ ಮೊದಲು ಟೈಟಲ್ ಟೀಸರ್ ಅನೌನ್ಸ್ ಮಾಡುವಾಗಲೂ ಯಶ್ ಅವರು ತಲೆಗೆ ಹ್ಯಾಟ್ ಧರಿಸಿಯೇ ಕಾಣಿಸಿಕೊಂಡಿದ್ದರು. ಇದೇ ಲುಕ್ ಸಿನಿಮಾದಲ್ಲೂ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಫ್ಯಾನ್ಸ್ ಜ.8ರಂದು ಯಶ್ ಲುಕ್ ನೋಡಲು ಕಾಯುತ್ತಿದ್ದಾರೆ.

    ಇನ್ನೂ ಜ.8ರಂದು ಬೆಂಗಳೂರಿನಲ್ಲಿ ಇರುವುದಿಲ್ಲ ಬರ್ತ್‌ಡೇ ಆಚರಣೆ ಮಾಡಲ್ಲ ಎಂದು ಫ್ಯಾನ್ಸ್ ಯಶ್ ಈಗಾಗಲೇ ಮಾಹಿತಿ ನೀಡಿದ್ದಾರೆ. ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ ಎಂದು ಯಶ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.

    ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು (ಜ.8) ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಪ್ಲೆಕ್ಸ್, ಬ್ಯಾನರ್‌ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ, ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ ಎಂದಿದ್ದಾರೆ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ. ನಿಮ್ಮ ಪ್ರೀತಿಯ ಯಶ್ ಎಂದು ಬರೆದಿದ್ದರು.

    Continue Reading

    LATEST NEWS

    Trending