ಮಂಗಳೂರು: ಮಂಗಳೂರು ಆಟೋ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ಹೊರ ವಲಯದಲ್ಲಿ ಬಸ್ಸಿನಿಂದ ಇಳಿದು ನಾಗುರಿಯಿಂದ ಪಂಪ್‌ವೆಲ್ ಕಡೆಗೆ ನಡೆದುಕೊಂಡು ಬರುತ್ತಾ ರಿಕ್ಷಾ ಹತ್ತಿ ಸಂಚರಿಸುತ್ತಿದ್ದಂತೆ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟಿಸಿದ ಕೆಲವೇ ಕ್ಷಣಗಳ ಮುಂಚೆ ಹಾದು ಹೋದ ಸರ್ಕಾರಿ ಬಸ್‌ನ ದೃಷ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಂಗಳೂರಿನ ರಿಕ್ಷಾದಲ್ಲಿ ಕುಕ್ಕರ್‌ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ವಿವಿಧ ಅಯಾಮಗಳಲ್ಲಿ ನಡೆಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಆರೋಪಿ ಮೈಸೂರಿನಿಂದ ಮಂಗಳೂರಿಗೆ ಪ್ರಯಾಣಿಸಿದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.