LATEST NEWS
ಬಜಪೆ: ಹೆಜ್ಜೇನು ಕಡಿತದಿಂದ ಗಂಭೀರ ಗಾಯಗೊಂಡಿದ್ದ ದಿನಪತ್ರಿಕೆ ವಿತರಕ ಮೃ*ತ್ಯು
Published
3 hours agoon
By
NEWS DESK2ಬಜಪೆ: ಹೆಜ್ಜೇನು ಕಡಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ದಿನಪತ್ರಿಕೆ ವಿತರಕರೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ನ. 28ರಂದು ಕೊ*ನೆಯುಸಿರೆಳೆದಿದ್ದಾರೆ.
ಪೇಜಾವರ ಪಡ್ಡೋಡಿಯ ನಿವಾಸಿ, ದಿನಪತ್ರಿಕೆ ವಿತರಕ ಪುಷ್ಪಾರಾಜ ಶೆಟ್ಟಿ (45) ಮೃ*ತ ದುರ್ದೈವಿ.
ಪುಷ್ಪಾರಾಜ ಅವರು ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು ತಾಂಗಡಿಯಲ್ಲಿ ನ. 27ರ ಬೆಳಗ್ಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರ ಮೇಲೆ ಹೆಜ್ಜೇನಿನ ಹಿಂಡು ದಾಳಿ ನಡೆಸಿತ್ತು. ಇದರಿಂದಾಗಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರು ಪೊರ್ಕೋಡಿ ಪರಿಸರದಲ್ಲಿ ಕಾಲ್ನಡಿಗೆಯಲ್ಲಿ ಹೋಗಿ ಮನೆಮನೆಗೆ ದಿನಪ್ರತಿಕೆಯನ್ನು ವಿತರಿಸುತ್ತಿದ್ದರು. ಪರಿಸರದಲ್ಲಿ ಬೊಗ್ಗು ಎಂದೇ ಚಿರಪರಿತರಾಗಿದ್ದ ಅವರು ತಮ್ಮ ಗಳಿಕೆಯಲ್ಲಿ ಸ್ವಾತಂತ್ರ್ಯೋತ್ಸವ ಸಂದರ್ಭ ಶಾಲಾ ಮಕ್ಕಳಿಗೆ ಸಿಹಿತಿಂಡಿ ವಿತರಿಸುತ್ತಿದ್ದರು. ಮೃ*ತರು ಅವಿವಾಹಿತರಾಗಿದ್ದು, ಮೂವರು ಸಹೋದರರು ಮತ್ತು ಸಹೋದರಿಯನ್ನು ಅಗ*ಲಿದ್ದಾರೆ.
LATEST NEWS
ನವಜಾತ ಶಿಶುಗಳ ಫೋಟೊಶೂಟ್ ಮಾಡಿಸುವುದು ಎಷ್ಟು ಅಪಾಯ ನೋಡಿ..!
Published
27 minutes agoon
29/11/2024By
NEWS DESK2ಪುಟ್ಟ ಕಂದಮ್ಮಗಳ ಫೋಟೊ ನೋಡಿದಾಗ ಎತ್ತಿ ಮುದ್ದಾಡಬೇಕು ಅನ್ನಿಸುತ್ತೆ. ಇತ್ತೀಚೆಗೆ ನವಜಾತ ಶಿಶುಗಳ ಫೋಟೊಶೂಟ್ ಸಾಮಾನ್ಯವಾಗಿದೆ. ಆದರೆ ಪುಟ್ಟ ಮಕ್ಕಳ ಫೋಟೊಶೂಟ್ ಮಾಡಿಸುವುದರಿಂದ ಆ ಮಗುವಿನ ಆರೋಗ್ಯಕ್ಕೆ ಹಾನಿಯಾಗುತ್ತದೆ. ನವಜಾತ ಶಿಶುಗಳ ಫೋಟೊಶೂಟ್‌ನಿಂದ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಫೋಟೊಶೂಟ್‌ನಿಂದ ಮಗುವಿನ ಬೆನ್ನುಹುರಿ, ಕೀಲುಗಳು, ನರ ಮತ್ತು ರಕ್ತ ಪರಿಚಲನೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳುತ್ತದೆ.
ಪೊಟ್ಯಾಟೊ ಸ್ಯಾಕ್ ಪೋಸ್:
ಈ ಪೋಸ್ ನಲ್ಲಿ ಮಗು ಮುದ್ದಾಗಿ ಕಾಣಿಸುತ್ತದೆ. ಈ ಪೋಸ್‌ಗೆ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಕೈಯನ್ನು ಗಲ್ಲದ ಕೆಳಗೆ ಬರುವಂತೆ ಇರಿಸಲಾಗುತ್ತದೆ. ಇದು ಪೋಸ್‌ನಲ್ಲಿ ಮಗು ಅಂದವಾಗಿ ಕಂಡರೂ ಇದರಿಂದ ಮಗುವಿನ ರಕ್ತ ಪರಿಚಲನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಹಾಗೂ ಮಗು ತೊಂದರೆ ಅನುಭವಿಸುತ್ತದೆ
ಹ್ಯಾಂಗಿಂಗ್ ಪೋಸ್:
ನೇತಾಡುವ ಭಂಗಿಯಲ್ಲಿ ಮಗುವಿನ ಫೋಟೊಶೂಟ್ ಮಾಡಿಸುವುದು ಈಗಿನ ಟ್ರೆಂಡ್. ಇದರಿಂದ ಮಗುವಿನ ಫೋಟೊ ಚೆನ್ನಾಗಿ ಬರಬಹುದು, ಆದರೆ ಬೀಳುವ ಸಾಧ್ಯತೆ ಹೆಚ್ಚು. ಹಲವು ಬಾರಿ ಮಗುವನ್ನು ನೇತುಹಾಕಲು ಬಳಸುವ ಬಟ್ಟೆ ತುಂಬಾ ಹಗುರವಾಗಿರುತ್ತದೆ. ಹಾಗಾಗಿ ಬಟ್ಟೆಯ ಮೇಲೆ ಕಟ್ಟಲಾದ ಗಂಟು ಬಿಚ್ಚಿದರೆ ಅಥವಾ ಮಗು ತನ್ನ ಸ್ಥಾನವನ್ನು ಬದಲಾಯಿಸಿದರೆ ಕೆಳಗೆ ಬೀಳುವ ಸಾಧ್ಯತೆ ಇದೆ. ಇದರಿಂದ ಮಗುವಿಗೆ ಗಂಭೀರ ಅಪಾಯಗಳು ಆಗಬಹುದು.
ಬಕೆಟ್ ಪೋಸ್:
ಇದು ಮಗುವನ್ನು ಬಕೆಟ್ ಒಳಗೆ ಕೂರಿಸಿ ಫೋಟೊ ತೆಗೆಯುವುದು. ಮಗು ಬಕೆಟ್‌ನಲ್ಲಿ ನಿಲ್ಲುವಂತೆ ಮಾಡಿ ಮಗುವಿನ ಬಾಯಿಯನ್ನು ಬಕೆಟ್‌ನ ಅಂಚಿನ ಮೇಲೆ ಇರಿಸಲಾಗುತ್ತದೆ. ಈ ಭಂಗಿಯು ಮಗುವಿನ ಕೀಲುಗಳಿಗೆ ಹಾನಿ ಮಾಡುತ್ತದೆ ಎಂದು ಅಧ್ಯಯನ ಹೇಳಿದೆ.
ಸಿಬ್ಲಿಂಗ್ ಪೋಸ್:
ಇದು ಹೆಸರೇ ಹೇಳುವಂತೆ ಮಗುವಿನ ಅಣ್ಣ, ಅಕ್ಕನ ಜೊತೆ ಫೋಟೊ ತೆಗೆಸುವುದು. ಹಲವರು ಬಾರಿ ತಮ್ಮ ಎರಡನೇ ಮಗುವಿನ ಫೋಟೊಶೂಟ್ ಮಾಡಿಸುವಾಗ ಪೋಷಕರು ಮೊದಲ ಮಗುವಿನ ಕೈಯಲ್ಲಿ ಪುಟ್ಟ ಮಗುವನ್ನು ಕೊಡುತ್ತಾರೆ. ಮಕ್ಕಳ ಮನಸ್ಸು ಚಂಚಲ ಮತ್ತು ಅವರಿಗೆ ಮಗುವನ್ನು ಹೇಗೆ ಹಿಡಿದುಕೊಳ್ಳಬೇಕು ಎಂಬುದು ಗೊತ್ತಿರುವುದಿಲ್ಲ. ಆಗ ಅವರು ಮಗುವನ್ನು ಕೆಳಕ್ಕೆ ಬೀಳಿಸಿಬಿಡಬಹುದು. ಇದರಿಂದ ಮಗುವಿಗೆ ಗಾಯವಾಗುವ ಹಾಗೂ ಗಂಭೀರ ಅಪಾಯ ಆಗುವ ಸಾಧ್ಯತೆ ಇದೆ.
LATEST NEWS
ಈ ಟಿಪ್ಸ್ ಪಾಲಿಸಿದ್ರೆ ಗ್ಯಾಸ್ ಒಂದು ವಾರ ಹೆಚ್ಚು ಬಳಸಬಹುದು; ಅಡುಗೆ ಮಾಡುವಾಗ ಈ ಸಣ್ಣ ಕೆಲಸಗಳನ್ನು ಮಾಡಿ
Published
55 minutes agoon
29/11/2024By
NEWS DESK2ದಿನಕಳೆದಂತೆ ದಿನಬಳಕೆ ವಸ್ತುಗಳೆಲ್ಲಾ ದುಬಾರಿಯಾಗುತ್ತಿದೆ. ಅದರಂತೆ ನಿತ್ಯ ಅಡುಗೆ ಮಾಡಲು ಬೇಕಾದ ಗ್ಯಾಸ್ ಬೆಲೆ ಕೂಡಾ ಹೆಚ್ಚುತ್ತಿದೆ. ಹೀಗಾಗಿ ಅಡುಗೆ ಅನಿಲ ಉಳಿತಾಯ ಮಾಡಲು ಏನು ಮಾಡಬಹುದು ಎಂಬ ಯೋಚನೆ ನಿಮ್ಮದಾಗಿರಬಹುದು. ಇದಕ್ಕೆ ಸಲಹೆ ಇಲ್ಲಿದೆ.
ಗ್ಯಾಸ್‌ನಲ್ಲಿ ಅಡುಗೆ ಮಾಡುವಾಗ ನೀವು ಕೆಲವು ಸಣ್ಣ ಸಣ್ಣ ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ, ಅನಿಲದ ವೆಚ್ಚವನ್ನು ಕಡಿಮೆ ಮಾಡಬಹುದು. ಅಕ್ಕಿ, ಬೇಳೆಕಾಳು ಹಾಗೂ ತರಕಾರಿಗಳನ್ನು ಬೇಯಿಸುವಾಗ ಕೆಲವೊಂದು ಸಲಹೆಗಳನ್ನು ಸನುಸರಿಸಿ. ಬೇಯಿಸುವ ಮೊದಲು ಅಕ್ಕಿ (ಕೆಲವೊಂದು ಅಕ್ಕಿ ಮಾತ್ರ) ಮತ್ತು ಬೇಳೆಕಾಳುಗಳನ್ನು 1 ಗಂಟೆ ಕಾಲ ನೆನೆಸಿಡಿ. ಆಗ ಅವು ಮೃದುವಾಗುತ್ತದೆ. ಹೀಗಾಗಿ ಬೇಗನೆ ಬೇಯುತ್ತದೆ. ನಿಮ್ಮ ಗ್ಯಾಸ್ ಉಳಿಯುತ್ತದೆ.
ನೆನೆಸಿದ ನಂತರ, ಬೇಳೆಕಾಳುಗಳನ್ನು ಕಡಿಮೆ ಶಾಖದಲ್ಲಿ ಪಾತ್ರೆಯಲ್ಲಿ ಕುದಿಸಿ. ನಿಮಗೆ ಕುಡಿಯಲು ನೀರು ಬೇಕೆಂದರೆ, ಬೇಳೆ ಕಾಳು ಪಾತ್ರೆ ಮೇಲೆ ಮತ್ತೊಂದು ಪಾತ್ರೆ ಇರಿಸಿ. ಮೇಲಿನ ನೀರು ಕೆಳಗಿನ ಪಾತ್ರೆಯ ಶಾಖದಿಂದ ಬಿಸಿಯಾಗುತ್ತದೆ. ನಿಮ್ಮ ಪಾತ್ರೆ ಎಷ್ಟು ದೊಡ್ಡದಿದೆಯೋ ಅದಕ್ಕೆ ತಕ್ಕವಾಗಿ ಗ್ಯಾಸ್ ಸ್ಟವ್ ಉರಿಸಿ. ಚಿಕ್ಕ ಪಾತ್ರೆ ಇದ್ದಾಗ ಸಿಮ್‌ನಲ್ಲಿಡಿ. ಆಗ ಗ್ಯಾಸ್ ಬಳಕೆ ಕಡಿಮೆಯಾಗುತ್ತದೆ.
ಅಕ್ಕಿಯನ್ನು ಬೇಯಿಸುವಾಗ ಆರಂಭದಲ್ಲಿ ದೊಡ್ಡ ಉರಿಯಲ್ಲಿ ಬೇಯಿಸಿ. ಅನ್ನ ಬೇಯುವ ಹಂತಕ್ಕೆ ಬರುವಾಗ ಸಿಮ್‌ನಲ್ಲಿಡಿ. ತರಕಾರಿಗಳನ್ನು ಬೇಯಿಸುವಾಗಲೂ ಕೆಲವೊಂದು ಸುಲಭ ಟ್ರಿಕ್ ಅನುಸರಿಸಬೇಕು. ಕುದಿಯಲು ಹೆಚ್ಚು ಸಮಯ ತೆಗೆದುಕೊಳ್ಳುವ ತರಕಾರಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಬೇಯಲು ಕಡಿಮೆ ಸಮಯ ತೆಗೆದುಕೊಳ್ಳುವ ತರಕಾರಿಗಳನ್ನು ದೊಡ್ಡ ತುಂಡುಗಳಾಗಿ ಇಡಬಹುದು. ಅಡುಗೆ ಮಾಡುವಾಗ ತರಕಾರಿಗಳಿಗೆ ಮುಚ್ಚಳ ಮುಚ್ಚಿ ಬೇಯಿಸಿ. ಇದು ಹೆಚ್ಚು ಗ್ಯಾಸ್ ತೆಗೆದುಕೊಳ್ಳುವುದಿಲ್ಲ. ಸಾಧ್ಯವಾದಷ್ಟು ತರಕಾರಿಗಳನ್ನು ಕುಕ್ಕರ್‌ನಲ್ಲಿ ಬೇಯಿಸಿ.
ಗ್ಯಾಸ್ ಮೇಲೆ ಚಹಾ ಅಥವಾ ಇತರ ಆಹಾರವನ್ನು ತಯಾರಿಸುವಾಗ ಸಣ್ಣ ಬರ್ನರ್‌ನಲ್ಲಿ ಮಧ್ಯಮ ಉರಿಯಲ್ಲಿ ಅಡುಗೆ ಮಾಡಲು ಪ್ರಯತ್ನಿಸಿ. ಎಲ್ಲಾ ಸಮಯದಲ್ಲಿ ಹೆಚ್ಚು ಗ್ಯಾಸ್ ವ್ಯರ್ಥವಾಗುವಂತೆ ದೊಡ್ಡ ಉರಿ ಬೇಡ. ಇದು ಸಾಕಷ್ಟು ಅನಿಲವನ್ನು ಉಳಿಸಬಹುದು.
ಗ್ಯಾಸ್ ಲೀಕೇಜ್ ಆಗದಂತೆ ಎಚ್ಚರವಹಿಸಿ. ಒಲೆ ಸಿಮ್‌ನಲ್ಲಿಟ್ಟು ಅಡುಗೆ ಮಾಡುವ ಅಭ್ಯಾಸ ಮಾಡಿ. ಕುಕ್ಕರ್ ಬಳಕೆ ಜಾಸ್ತಿ ಮಾಡಿ. ಮೇಲಿನ ಎಲ್ಲಾ ಸಲಹೆ ಅಭ್ಯಾಸ ಮಾಡಿದರೆ, ನಿಮ್ಮ ಗ್ಯಾಸ್ ಕೆಲವು ದಿನಗಳವರೆಗಾದರೂ ಹೆಚ್ಚು ಬಾಳಿಕೆ ಬರುತ್ತದೆ.
International news
ಬೆಂಗಳೂರಿನಲ್ಲಿ ನಡೆಯಲಿದೆ ಡಬ್ಲ್ಯುಪಿಎಲ್ ಮಿನಿ ಹರಾಜು
Published
1 hour agoon
29/11/2024By
NEWS DESK3ಮಂಗಳೂರು/ಬೆಂಗಳೂರು: ಐಪಿಎಲ್ ಹರಾಜು ಪ್ರಕ್ರಿಯೆ ಈಗಗಾಲೇ ಮುಗಿದಿದ್ದು, ಈಗ ಮಹಿಳಾ ಪ್ರೀಮಿಯರ್ ಲೀಗ್ ಗಾಗಿ ಮಹಿಳಾ ಕ್ರಿಕೆಟಿಗರ ಮಿನಿ ಹರಾಜು ನಡೆಯಲಿದೆ.
ಮಹಿಳೆಯರ ಪ್ರೀಮಿಯರ್ ಲೀಗ್ ನ ಮುಂದಿನ ಸೀಸನ್ ಗಾಗಿ ಡಿಸೆಂಬರ್ 15 ರಂದು ಬೆಂಗಳೂರಿನಲ್ಲಿ ಮಿನಿ ಹರಾಜು ನಡೆಯಲಿದೆ. ಡಬ್ಲ್ಯುಪಿಎಲ್ ನಲ್ಲಿ ಒಟ್ಟು 5 ತಂಡಗಳು ಪಾಲ್ಗೋಳ್ಳುತ್ತಿವೆ. ಅದರಲ್ಲಿ ಪ್ರತಿ ತಂಡವು ಆರು ವಿದೇಶಿ ಆಟಗಾರ್ತಿಯರನ್ನು ಒಳಗೊಂಡಂತೆ ಒಟ್ಟು 18 ಆಟಗಾರ್ತಿಯರನ್ನು ತಂಡದಲ್ಲಿ ಹೊಂದಿರಬೇಕು. ಭಾಗಶಃ ತಂಡಗಳು ತಮ್ಮ ಹಳೆಯ ತಂಡವನ್ನು ಉಳಿಸಿಕೊಂಡಿದ್ದು, ಕೆಲವೇ ಕೆಲವು ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿವೆ.
ಇದನ್ನೂ ಓದಿ: 16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲಾತಾಣ ಬಳಕೆಗೆ ನಿಷೇಧ; ಮಸೂದೆ ಅಂಗೀಕರಿಸಿದ ಪಾರ್ಲಿಮೆಂಟ್ !
ಈ ಬಾರಿಯ ಹರಾಜಿನಲ್ಲಿ ಇಂಗ್ಲೆಂಡ್ ನಾಯಕಿ ಹೀದರ್ ನೈಟ್, ನ್ಯೂಜಿಲೆಂಡ್ ವೇಗದ ಬೌಲರ್ ಲೀ ತಾಹುಹು, ವೆಸ್ಟ್ ಇಂಡೀಸ್ ಅಲ್ ರೌಂಡರ್ ಡೇಂಡ್ರಾ ಡಾಟಿನ್, ಭಾರತದ ಅಲ್ ರೌಂಡರ್ ಸ್ನೇಹ ರಾಣಾ, ಲೆಗ್ ಸ್ಪಿನ್ನರ್ ಪೂನಂ ಯಾದವ್ ಮತ್ತು ಕನ್ನಡತಿ ವೇದಾ ಕೃಷ್ಣ ಮೂರ್ತಿ ಕೂಡ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲದೆ ಇನ್ನೂ ಹಲವು ಯುವ ಆಟಗಾರ್ತಿಯರನ್ನು ಖರೀದಿಸಲು ತಂಡಗಳು ಕಾಯುತ್ತಿವೆ.
LATEST NEWS
ಮಂತ್ರಾಲಯದಲ್ಲಿ ಹುಂಡಿ ಎಣಿಕೆ: 31 ದಿನಗಳಲ್ಲಿ 3 ಕೋಟಿ 92 ಲಕ್ಷ ಕಾಣಿಕೆ ಸಂಗ್ರಹ
ಅಕ್ರಮ ನಾಡ ಬಂದೂಕು ತಯಾರಿಕಾ ಜಾಲ ಪತ್ತೆ; 6 ಮಂದಿ ಅರೆಸ್ಟ್
ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು: ಆರೋಗ್ಯ ಸಚಿವರ ರಾಜೀನಾಮೆಗೆ ಆರ್.ಅಶೋಕ್ ಒತ್ತಾಯ
ಮಂಗಳೂರು : ದಿ.ಉಮೇಶ್ ಕಾಜಿಲ ಸವಿನೆನಪಿಗಾಗಿ ಡಿ.1 ರಂದು ಬೃಹತ್ ರಕ್ತದಾನ ಶಿಬಿರ
ಗ್ರಾಹಕರೇ ಗಮನಿಸಿ : ಅಂಗಡಿಯವರು `MRP’ ಗಿಂತ ಹೆಚ್ಚಿನ ಹಣ ಪಡೆದರೆ ತಪ್ಪದೇ ಈ ಕೆಲಸ ಮಾಡಿ.!
16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲಾತಾಣ ಬಳಕೆಗೆ ನಿಷೇಧ; ಮಸೂದೆ ಅಂಗೀಕರಿಸಿದ ಪಾರ್ಲಿಮೆಂಟ್ !
Trending
- Baindooru7 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- BIG BOSS6 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- Baindooru6 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
- BANTWAL20 hours ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು