ಕೊರೋನಾ ಎಫೆಕ್ಟ್: ಕಡಲನಗರಿ ಮಂಗಳೂರು ಸ್ತಬ್ಧ
ಮಂಗಳೂರು: ಡೆಡ್ಲಿ ಕೊರೋನಾ ಇಡೀ ವಿಶ್ವವನ್ನೇ ಮೃತ್ಯುಕೂಪಕ್ಕೆ ತಳ್ಳುತ್ತಿದೆ. ಈ ಹಿನ್ನಲೆ ಜಗತ್ತೇ ಬೆಕ್ಕಸ ಬೆರಗಾಗಿದೆ. ನಮ್ಮ ರಾಜ್ಯವೂ ಈ ಕಂಟಕಕ್ಕೆ ಸಿಲುಕಿದ್ದು, ಈಗಾಗಲೇ ಸರಕಾರ ಮುಂಜಾಗೃತ ಕ್ರಮಕ್ಕೆ ಮುಂದಾಗಿದೆ.
ಇಂದಿನಿಂದ ಶಾಲಾ ಕಾಲೇಜು, ಮಾಲ್, ಸಿನೇಮಾ ಥಿಯೇಟರ್, ಸಭೆ ಸಮಾರಂಭಗಳನ್ನು ರದ್ದು ಮಾಡುವಂತೆ ಆದೇಶ ಹೊರಡಿಸಿದೆ. ಈ ಹಿನ್ನಲೆ ಮಂಗಳೂರಿನಲ್ಲಿ 1 ರಿಂದ 6 ರ ವರೆಗಿನ ತರಗತಿಗಳು, ಸಿಟಿಸೆಂಟರ್, ಫಾರಮ್ ಮಾಲ್ ಸೇರಿದಂತೆ ಇನ್ನಿತರ ಮಾಲ್ ಗಳು, ಸಿನೆಮಾ ಥಿಯೇಟರ್ ಗಳು ಅಕ್ಷರಶಃ ಬಂದ್ ಆಗಿವೆ.
ಕರಾವಳಿಗೂ ಕೊರೋನಾ ಎಫೆಕ್ಟ್ ಇರೋದ್ರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಅಳವಡಿಸಿಕೊಂಡಿದೆ. ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೋವಿಡ್ 19 ಸೋಂಕು ಪತ್ತೆಯಾಗದಿದ್ದರೂ, ಸೋಂಕು ತಡೆಗಟ್ಟುವ ಕೆಲಸ ಮಾತ್ರ ಬಿರುಸಿನಿಂದ ಸಾಗುತ್ತಿದೆ.