Connect with us

    DAKSHINA KANNADA

    ಮಂಗಳೂರು : ಶರವು ಮಹಾಗಣಪತಿ ದೇವರಿಗೆ ಸೀಯಾಳ ಅಭಿಷೇಕ ಸೇವೆ

    Published

    on

    ಮಂಗಳೂರು :  ಕರಾವಳಿ ದೈವದೇವರ ನಾಡು. ಇಲ್ಲಿ ನಾಗರ ಪಂಚಮಿ ಬಳಿಕ ಒಂದೊಂದೇ ಹಬ್ಬಗಳು, ಉತ್ಸವಗಳು ಆರಂಭಗೊಳ್ಳುತ್ತವೆ.

    ಕೃಷ್ಣ ಜನ್ಮಾಷ್ಟಮಿ ಬಳಿಕ ಗಣೇಶೋತ್ಸವದ ಸಂಭ್ರಮ ನಾಡಿನೆಲ್ಲೆಡೆ ಮನೆ ಮಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗಣಪತಿಯ ಆರಾಧನೆ ಕ್ಷೇತ್ರಗಳಲ್ಲಿ ಪ್ರಮುಖವಾಗಿರುವ ಶರವು ಶ್ರೀಮಹಾಗಣಪತಿ ಕ್ಷೇತ್ರದಲ್ಲೂ ಇದೀಗ ಗಣೇಶೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ.

    ಶರವು ಶ್ರೀ ಮಹಾಗಣಪತಿ ದೇವರಿಗೆ ಗುರುವಾರ(ಆ.29) ಸೀಯಾಳ ಅಭಿಷೇಕ ಸೇವೆ ನಡೆಯಿತು.  ಗಣೇಶ ಚತುರ್ಥಿಗೆ ಮೊದಲು ಬರುವ ಏಕಾದಶಿಗೆ ಈ ಉತ್ಸವ ನಡೆಯುತ್ತಿದ್ದು, ಸಹಸ್ರಾರು ಮಂದಿ ಭಕ್ತರು ದೇವರಿಗೆ ಸೀಯಾಳ ಅರ್ಪಿಸಿದರು.

    ಇದನ್ನೂ ಓದಿ : ಗೋಬಿ, ಕಬಾಬ್ ಬಳಿಕ ಕೇಕ್, ಬೇಕರಿ ತಿನಿಸುಗಳ ಮೇಲೆ ಕ್ರಮಕ್ಕೆ ಸಿದ್ಧತೆ

    ಈ ಸಂದರ್ಭ ದೇವಸ್ಥಾನದ ಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ, ಸುದೇಶ್ ಶಾಸ್ತ್ರಿ, ರಾಹುಲ್‌ ಶಾಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.

    DAKSHINA KANNADA

    ಬ್ರೇಕ್ ಫೇಲ್ ಆಗಿ ದ್ವಿಚಕ್ರ ವಾಹನಕ್ಕೆ ಲಾರಿ ಡಿ*ಕ್ಕಿ; ಓರ್ವ ಸಾ*ವು

    Published

    on

    ಮಂಗಳೂರು/ಆನೇಕಲ್ ದ್ವಿಚಕ್ರ ವಾಹನಕ್ಕೆ ಲಾರಿ ಡಿ*ಕ್ಕಿ ಹೊಡೆದು, ಸವಾರ ಸ್ಥಳದಲ್ಲಿಯೇ ಮೃ*ತಪಟ್ಟಿರುವ ಘಟನೆ ತಮಿಳುನಾಡು ಗಡಿ ಪ್ರದೇಶವಾದ ಹೊಸೂರು ಸಮೀಪದ ಸೂಳಗಿರಿ ಬಳಿ ನಡೆದಿದೆ. ಆನೇಕಲ್ ತಾಲೂಕಿನ ರಾಚಮಾನಹಳ್ಳಿಯ ನಿವಾಸಿ ಅರ್ಚಕ ಶ್ರೀನಿವಾಸ್ ಮೃ*ತ‌ ದುರ್ದೈವಿ.

    ದೇವಾಲಯದ ಅರ್ಚಕರಾಗಿದ್ದ ಶ್ರೀನಿವಾಸ್, ಪೂಜೆಯ ನಿಮಿತ್ತ ಬೈಕ್‌ ಮೂಲಕ ಆನೇಕಲ್‌ನಿಂದ ಹೋಗುತ್ತಿದ್ದರು. ಈ ವೇಳೆ ತಮಿಳುನಾಡಿನ ಲಾರಿಯೊಂದರ ಬ್ರೇಕ್ ಫೇಲ್ ಆಗಿ ಹೆದ್ದಾರಿಯಿಂದ ಡಿವೈಡರ್ ದಾಟಿಕೊಂಡು ಬಂದು ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ಶ್ರೀನಿವಾಸ್ ಅವರ ವಾಹನಕ್ಕೆ ಡಿ*ಕ್ಕಿ ಹೊಡೆದಿದೆ. ಪರಿಣಾಮ ಶ್ರೀನಿವಾಸ್ ಸ್ಥಳದಲ್ಲಿಯೇ ಮೃ*ತಪಟ್ಟರೆ, ರಾಘವೇಂದ್ರ ಎಂಬುವವರಿಗೆ ಗಂಭೀರ ಗಾ*ಯವಾಗಿದೆ.

    ಇದನ್ನೂ ಓದಿ : ಖಾಸಗಿ ಬಾಹ್ಯಾಕಾಶ ನಡಿಗೆ ಯಶಸ್ವಿ; ಸುರಕ್ಷಿತವಾಗಿ ಭೂಮಿಗೆ ಮರಳಿದ ಗಗನಯಾತ್ರಿಗಳು

    ಅಪಘಾ*ತದ ರಭಸಕ್ಕೆ ಬೈಕ್‌ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸೂಳಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮ*ರಣೋತ್ತರ ಪರೀಕ್ಷೆಗಾಗಿ ಮೃ*ತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

    Continue Reading

    DAKSHINA KANNADA

    ಬಿಜೆಪಿ ಹೈಕಮಾಂಡಿಂದ ಭರ್ಜರಿ ಗಿಫ್ಟ್ ; ನಳೀನ್ ಕುಮಾರ್ ಕಟೀಲ್ ಸುತ್ತಾಟ ಮತ್ತೆ ಆರಂಭ !

    Published

    on

    ಮಂಗಳೂರು: ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ದ.ಕ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಎಂಪಿ ಚುನಾವಣೆಯಲ್ಲಿ ಟಿಕೆಟ್ ಸಿಗದೆ ವಂಚಿತರಾದ ಬಳಿಕ ಅಷ್ಟಾಗಿ ರಾಜಕೀಯ ವಿಚಾರದಲ್ಲಿ ಪ್ರಚಲಿತದಲ್ಲಿರಲಿಲ್ಲ. ಆದರೆ ಇದಿಗ ಕಟೀಲ್ ಮತ್ತೆ ಸುದ್ದಿಯಲ್ಲಿದ್ದಾರೆ.


    ನಳೀನ್ ಕುಮಾರ್‌ಗೆ ಗುಡ್ ನ್ಯೂಸ್;
    ಬಿಜೆಪಿಯು ನಳೀನ್ ಕುಮಾರ್ ಕಟೀಲ್ ಅವರನ್ನು ಒಡಿಶಾ ರಾಜ್ಯದ ಬಿಜೆಪಿ ಸದಸ್ಯತ್ವ ಅಭಿಯಾನದ ಉಸ್ತುವಾರಿಯಾಗಿ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ. ಅಂದಹಾಗೆ ಒಡಿಶಾದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸದಸ್ಯತ್ವದ ಗುರಿಯನ್ನು ನೀಡಿದ್ದು, ಕೇಂದ್ರ ನಾಯಕತ್ವ ನಳಿನ್ ಕುಮಾ‌ರ್ ಕಟೀಲ್‌ಗೆ ಈ ಜವಾಬ್ದಾರಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
    ಈ ಹಿನ್ನೆಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಸೆ.17ರಂದು ಒಡಿಶಾಗೆ ತೆರಳಲಿದ್ದು, ಅಲ್ಲಿ ಒಂದು ವಾರ ಕಾಲ ಸದಸ್ಯತ್ವ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

     

    Continue Reading

    DAKSHINA KANNADA

    ಮಂಗಳೂರಿನ ಕಾಟಿಪಳ್ಳದಲ್ಲಿ ಮಸೀದಿ ಮೇಲೆ ಕಲ್ಲು ತೂರಾಟ

    Published

    on

    ಸುರತ್ಕಲ್ : ಮಂಗಳೂರು ಹೊರವಲಯದ ಸುರತ್ಕಲ್ ಕಾಟಿಪಳ್ಳ 3ನೆ ಬ್ಲಾಕ್‌ ನಲ್ಲಿರುವ ಬದ್ರಿಯಾ ಜುಮಾ ಮಸೀದಿಗೆ ದು*ಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಭಾನುವಾರ(ಸೆ.15) ರಾತ್ರಿ 11ರ ಸುಮಾರಿಗೆ ಈ ಘಟನೆ ನಡೆದಿದೆ.

    ಎರಡು ಬೈಕ್‌ ಗಳಲ್ಲಿ ಬಂದ ನಾಲ್ಕು ಮಂದಿ ದು*ಷ್ಕರ್ಮಿಗಳು ಮಸೀದಿಗೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಮಸೀದಿಯ ಕಿಟಕಿಗಳಿಗೆ ಹಾನಿಯಾಗಿದೆ.

    ಸುರತ್ಕಲ್‌ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮಸೀದಿಯ ಸಿಸಿಟಿವಿ ಸೇರಿದಂತೆ ಸಮೀಪದ ಸಿಸಿಟಿವಿ ಫೂಟೇಜ್‌ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

    ಇಂದು(ಸೆ.16) ಈದ್ ಮಿಲಾದ್  ಹಬ್ಬ. ಹಾಗಾಗಿ ಸುರತ್ಕಲ್ ಸೇರಿದಂತೆ ಮಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    Continue Reading

    LATEST NEWS

    Trending