DAKSHINA KANNADA
ಮಂಗಳೂರಿಗೆ ಮೊದಲು ರೈಲು ಬಂದದ್ದು ಯಾವಾಗ ಗೊತ್ತಾ..?
Published
3 hours agoon
By
NEWS DESK2ಮಂಗಳೂರು: ಭಾರತೀಯ ರೈಲ್ವೇಗೆ ಸುಮಾರು 170 ವರ್ಷಗಳ ಇತಿಹಾಸ ಇದೆ. 1853 ರಲ್ಲಿ ಭಾರತದ ರೈಲು ಸಂಪರ್ಕ ಆರಂಭವಾಯಿತು. ಇವತ್ತಿನ ಈ ದಿನ ದೇಶದಾದ್ಯಂತ ಸುಮಾರು 23 ಸಾವಿರಕ್ಕಿಂತಲೂ ಹೆಚ್ಚಿನ ರೈಲುಗಳಿವೆ. ರೈಲ್ವೇ ವ್ಯವಸ್ಥೆಯಲ್ಲಿ ಇಡೀ ಜಗತ್ತಿನಲ್ಲೇ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಇದರೆಲ್ಲದರ ನಡುವೆ ಮಂಗಳೂರಿಗೆ ಮೊದಲು ರೈಲು ಯಾವಾಗ ಬಂದಿತು..? ಅದು ಯಾವುದು..? ತಿಳಿಯೋಣ ಬನ್ನಿ.
ಭಾರತಕ್ಕೆ ರೈಲಿನ ಪರಿಚಯ ಆಗಿ 54 ವರ್ಷಗಳ ನಂತರ ಅಂದರೆ 1907 ರಲ್ಲಿ ನಮ್ಮ ಮಂಗಳೂರಿಗೆ ಮೊದಲ ರೈಲು ಬಂದಿತು. 1906 ರ ತನಕ ರೈಲ್ವೇ ಪಟ್ಟಿ ಕಾಂಞಂಗಾಡ್ ವರೆಗೆ ಮಾತ್ರ ಇತ್ತು. ತದನಂತರ ಕಾಸರಗೋಡು, ಕುಂಬ್ಳೆ ಆಗಿ ಮಂಗಳೂರಿಗೆ ಬರುತ್ತದೆ. 1907 ರಲ್ಲಿ ಕ್ಯಾಲಿಕಟ್ ನಿಂದ ಮಂಗಳೂರಿಗೆ ಮೊದಲ ರೈಲು ಬರುತ್ತದೆ. ಇದನ್ನು ಆಗದ ಮದ್ರಾಸ್ ಗವರ್ನರ್ ಹೆಚ್. ಇ. ಸರ್ ಆರ್ಥರ್ ಲವ್ಲಿ ಉದ್ಘಾಟನೆ ಮಾಡಿದರು.
1910 ರಲ್ಲಿ ಮದ್ರಾಸ್‌ನಿಂದ ಮಂಗಳೂರಿಗೆ ರೈಲು ಬರಲು ಪ್ರಾರಂಭವಾಯಿತು. ಆ ರೈಲಿನಲ್ಲಿ ನಮ್ಮ ಮಂಗಳೂರಿನಲ್ಲಿ ಆಗಿತ್ತಿದ್ದ ಹಂಚುಗಳು ರವಾನೆ ಆಗುತ್ತಿದ್ದವು. ವಿಶೇಷವೆಂದರೆ 1929 ರಲ್ಲಿ ಮಂಗಳೂರಿನಿಂದ ಪಾಕಿಸ್ತಾನದ ಪೇಶಾವರಕ್ಕೆ ರೈಲ್ವೇ ವ್ಯವಸ್ಥೆ ಇದ್ದವು. ಆ ರೈಲಿನ ಹೆಸರು ಗ್ರಾಂಡ್ ಟ್ರಂಕ್ ಎಕ್ಸ್‌ಪ್ರೆಸ್. ಇದು ಭಾರೀ ಉದ್ದದ ರೈಲು ಜರ್ನಿ ಆಗಿದ್ದು, ಹೋಗಿ ಎತ್ತಲು 4 ರಿಂದ 5 ದಿನಗಳು ಬೇಕಿದ್ದವಂತೆ.
1930ರ ನಂತರ ಮಂಗಳೂರಿನಲ್ಲಿ ಶಾಶ್ವತ ರೈಲ್ವೇ ಸ್ಟೇಷನ್ ಆಗುತ್ತದೆ. ಮಂಗಳೂರು ಸಿಟಿಯ ವಳಗೆ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಎನ್ನುವ ಎರಡು ದೊಡ್ಡ ಸ್ಟೇಷನ್ ಗಳು ಆಗುತ್ತದೆ. ದಕ್ಷಿಣ ರೈಲ್ವೇ ವಲಯದ ಪಾಲಕ್ಕಾಡ್ ರೈಲ್ವೇ ವಿಭಾಗದಲ್ಲಿ ನಮ್ಮ ಮಂಗಳೂರಿನ ರೈಲ್ವೇ ಸ್ಟೇಷನ್ ಬರುತ್ತದೆ. ಇಲ್ಲಿಂದ ದೇಶದ ಮೂಲೆ ಮೂಲೆಗೆ ಹೋಗಲು ಒಂದಷ್ಟು ರೈಲುಗಳು ಇವೆ.
DAKSHINA KANNADA
ಪುತ್ತೂರು : ಖತರ್ನಾಕ್ ಮನೆಗಳ್ಳ ಅರೆಸ್ಟ್; ತನಿಖೆ ವೇಳೆ ಬಹಿರಂಗವಾಯ್ತು ಹಲವು ಪ್ರಕರಣ
Published
2 hours agoon
11/01/2025By
NEWS DESK4ಪುತ್ತೂರು : ಪುತ್ತೂರು ಗ್ರಾಮಾಂತರ, ವಿಟ್ಲ, ಕಡಬ ಪೊಲೀಸರು ಕಾರ್ಯಾಚರಣೆ ನಡೆಸಿ ಖತರ್ನಾಕ್ ಮನೆಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಸರಗೋಡಿನ ಸೂರಜ್ ಕೆ(36) ಬಂಧಿತ ಕಳ್ಳ. ಡಿಸೆಂಬರ್ 20 ರಂದು ಭಕ್ತಕೋಡಿ ಎಂಬಲ್ಲಿ ಮನೆಯ ಹಿಂಬಾಗಿಲು ಮುರಿದು ಆರೋಪಿ ಸೂರಜ್ ಚಿನ್ನಾಭರಣಗಳನ್ನು ಕದ್ದಿದ್ದ. ಇದೇ ರೀತಿಯ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಬೆಳಕಿಗೆ ಬಂದಿತ್ತು.
ಕಳ್ಳನ ಜಾಡು ಹಿಡಿದು ಹೊರಟ ಪೊಲೀಸರು ಕಾರು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ವೇಳೆ ಆತ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ಬಯಲಾಗಿದೆ. ಪುತ್ತೂರು ಗ್ರಾಮಾಂತರ ಠಾಣಾ ಸರಹದ್ದಿನ ಸರ್ವೆ ಗ್ರಾಮದ ಭಕ್ತಕೋಡಿ, ಕಡಬ ಠಾಣಾ ವ್ಯಾಪ್ತಿಯ ಆಲಂಗಾರು ಗ್ರಾಮದ ಕಲ್ಲೇರಿ, ಬಂಟ್ವಾಳ ಗ್ರಾಮಾಂತರ ವ್ಯಾಪ್ತಿಯ ಇರಾ, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಂಟು ಕುಡೇಲು, ಮಂಕುಡೆ, ಕಾಡುಮಠ, ಇಡ್ಕಿದು ಗ್ರಾಮದ ಅಳಕೆ ಮಜಲು ಎಂಬಲ್ಲಿ ಆರೋಪಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದಾಗಿ ತಿಳಿದುಬಂದಿದೆ.
ಇದನ್ನೂ ಓದಿ : ಮಂಗಳೂರಿಗೆ ಮೊದಲು ರೈಲು ಬಂದದ್ದು ಯಾವಾಗ ಗೊತ್ತಾ..?
ಆರೋಪಿಯಿಂದ 18,00000 ಮೌಲ್ಯದ 200 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ 3,00,000 ರೂ. ಮೌಲ್ಯದ ಕಾರು ಸೇರಿ ಒಟ್ಟು 21,00,000 ರೂ.ನ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
DAKSHINA KANNADA
ಕರಾವಳಿ ಉತ್ಸವದ ಅಂಗವಾಗಿ ಇಂದು ಬೀಚ್ ಉತ್ಸವ; ನೃತ್ಯೋತ್ಸವ, ಕದ್ರಿ ಮಣಿಕಾಂತ್ ಲೈವ್
Published
5 hours agoon
11/01/2025By
NEWS DESK3ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ಕರಾವಳಿ ಉತ್ಸವದ ಅಂಗವಾಗಿ ಬಹು ನಿರೀಕ್ಷಿತ ಬೀಚ್ ಉತ್ಸವ ಇಂದು ಆರಂಭವಾಗಲಿದೆ.
ಇಂದು ಮತ್ತು ನಾಳೆ ಎರಡು ದಿನಗಳ ಕಾಲ ತಣ್ಣೀರು ಬಾವಿ ಬೀಚ್ ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ 6 ಗಂಟೆಗೆ ನೃತ್ಯೋತ್ಸವ ಹಾಗೂ ರಾತ್ರಿ 7.30 ಕ್ಕೆ ಕದ್ರಿ ಮಣಿಕಾಂತ್ ಲೈವ್ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: ಕರಾವಳಿ ಉತ್ಸವ ಪ್ರಯುಕ್ತ ಕದ್ರಿ ಪಾರ್ಕ್‌ನಲ್ಲಿ ಕಾರು-ಬೈಕ್‌ಗಳ ಪ್ರದರ್ಶನ
ಇನ್ನುಮಂಗಳಾ ಕ್ರೀಡಾಂಗಣ ಬಳಿಯ ಕರಾವಳಿ ಉತ್ಸವ ವಸ್ತು ಪ್ರದರ್ಶನ ವೇದಿಕೆಯಲ್ಲಿ ಇಂದು ಸಂಜೆ 6 ರಿಂದ ಮಂಗಳೂರು ಬಾಯ್‍ಝೋನ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಫಿಲ್ಮಿ ಡ್ಯಾನ್ಸ್ ಹಾಗೂ ರಾತ್ರಿ 7.30 ರಿಂದ ಮಂಗಳೂರು ಪತ್ರಕರ್ತರ ಯಕ್ಷ ಮಾಧ್ಯಮದಿಂದ ಯಕ್ಷ ವೈವಿಧ್ಯ ನಡೆಯಲಿದೆ.
ಇದಲ್ಲದೆ ಕದ್ರಿ ಪಾರ್ಕಿನಲ್ಲಿ ಕಲಾಪರ್ಬ ಚಿತ್ರ ಶಿಲ್ಪ ನೃತ್ಯ ಮೇಳ ಹಾಗೂ ಮಕ್ಕಳ ಚಿತ್ರ ಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
DAKSHINA KANNADA
ರಾಜ್ಯ ಮಟ್ಟದ ತ್ರೋಬಾಲ್ : ದರ್ಬೆ ಬೆಥನಿ ಶಾಲೆ ದ್ವಿತೀಯ
Published
22 hours agoon
10/01/2025By
NEWS DESK4ಪುತ್ತೂರು : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೋಲಾರ ಜಿಲ್ಲೆಯ ಕೆಜಿಎಫ್ ಪ್ರೌಢ ಶಾಲೆಯಲ್ಲಿ ಜ. 8 ಮತ್ತು 9 ರಂದು ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಪುತ್ತೂರು ದರ್ಬೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ತಂಡದಲ್ಲಿ ಆದ್ಯ ಕೆ, ಶಾನ್ವಿ ಪ್ರೀಷ್ಮ, ಫಾತಿಮಾತ್ ಮುನವರ, ಫಾತಿಮಾತ್ ಝುಲ್ಫ, ನಿರೀಕ್ಷಾ H ಶೆಟ್ಟಿ, ಸ್ನಿಗ್ಧ, ಆಯಿಷಾತ್ ಹಿಬಾ ಉತ್ತಮ ಪ್ರದರ್ಶನವನ್ನು ನೀಡಿ ಗೆಲುವಿಗೆ ಕಾರಣೀಭೂತರಾದರು. ಹಿಬಾ ಉತ್ತಮ ಆಟಗಾರ್ತಿಯಾಗಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.
ಇದನ್ನೂ ಓದಿ : ಕಾಲೇಜು ಕಾರ್ಯಕ್ರಮದಲ್ಲಿ ಅಶ್ವಿನ್ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ ಫ್ಯಾನ್ಸ್
ತಂಡಕ್ಕೆ ದೈಹಿಕ ಶಿಕ್ಷಕರಾದ ನಿರಂಜನ್ ಹಾಗೂ ಅಕ್ಷಯ್ ತರಬೇತಿಯನ್ನು ನೀಡಿದ್ದಾರೆ. ತಂಡದ ವ್ಯವಸ್ಥಾಪಕಿಯಾಗಿ ಅನಿತಾಸಿಯ ಗೋನ್ಸಲ್ವಸ್ ಇವರು ತಂಡವನ್ನು ಮುನ್ನಡೆಸಿದರು ಎಂಬುದಾಗಿ ಶಾಲಾ ಮುಖ್ಯ ಶಿಕ್ಷಕಿ ಭಗಿಣಿ ಸೆಲಿನ್ ಪೇತ್ರ ಮಾಹಿತಿ ನೀಡಿದ್ದಾರೆ.
LATEST NEWS
ಇದು ಜಗತ್ತಿನ ಅತ್ಯಂತ ಸುರಕ್ಷಿತ ಬಿಲ್ಡಿಂಗ್
ಪುತ್ತೂರು : ಖತರ್ನಾಕ್ ಮನೆಗಳ್ಳ ಅರೆಸ್ಟ್; ತನಿಖೆ ವೇಳೆ ಬಹಿರಂಗವಾಯ್ತು ಹಲವು ಪ್ರಕರಣ
ಕರ್ನಾಟಕ ಇನ್ನೂ ನಕ್ಸಲ್ ಮುಕ್ತ ರಾಜ್ಯವಾಗಿಲ್ಲ; ಹಾಗಾದರೆ ಉಳಿದಿರುವ ಆ ಮೋಸ್ಟ್ ವಾಂಟೆಡ್ ನಕ್ಸಲ್ ಯಾರು ?
ವಿಶ್ವಪ್ರಸಿದ್ಧ ‘ಮಹಾಕುಂಭ ಮೇಳ’ ಕ್ಕೆ ದಿನಗಣನೆ ಆರಂಭ
ಮಂಗಳೂರಿಗೆ ಮೊದಲು ರೈಲು ಬಂದದ್ದು ಯಾವಾಗ ಗೊತ್ತಾ..?
ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್ ಹೂವು
Trending
- FILM5 days ago
ಸುದೀಪ್ ಮಗಳು ಸಾನ್ವಿ ಬಗ್ಗೆ ಯಾಕಿಷ್ಟು ಟ್ರೋಲ್? ಅವರು ಮಾಡಿದ ತಪ್ಪೇನು?
- FILM3 days ago
ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್ಡೇ ಸಂಭ್ರಮ
- LATEST NEWS23 hours ago
ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!
- FILM2 days ago
ಮಗುವಿನೊಂದಿಗೆ ಕೊಲ್ಲೂರು ದೇಗುಲಕ್ಕೆ ಹರ್ಷಿಕಾ ದಂಪತಿ ಭೇಟಿ