Connect with us

    ಕರಾವಳಿಗೂ ತಟ್ಟಿದ ಕೊರೋನಾ ವೈರಸ್‌ ಭೀತಿ : NMPTಯಲ್ಲಿ ಹೈ ಅಲರ್ಟ್..! 

    Published

    on

    ಕರಾವಳಿಗೂ ತಟ್ಟಿದ ಕೊರೋನಾ ವೈರಸ್‌ ಭೀತಿ : NMPTಯಲ್ಲಿ ಹೈ ಅಲರ್ಟ್..! 

    ಮಂಗಳೂರು : ಚೀನಾದಲ್ಲಿ ಮಾರಕವಾಗಿ ಕಾಡುತ್ತಿರುವ ಕರೋನಾ ವೈರಸ್ ಈಗಾಗಲೇ ನೂರಾರು ಜನರನ್ನು ಆಹುತಿ ಪಡೆದುಕೊಂಡಿದೆ. ಈ ಮಾರಕ ರೋಗದ ತಡೆಗೆ ಚೀನಾದಲ್ಲಿ ಹೈ ಎಲರ್ಟ್ ಕೂಡಾ ಘೋಷಿಸಲಾಗಿದೆ. ರೋಗ ಹೆಚ್ಚಾಗಿ ಪತ್ತೆಯಾದ ವ್ಯೂಹನ್ ನಲ್ಲಿ ಪತ್ತೆಯಾದ ಈ ವೈರಸ್ ಇದೀಗ ಇಡೀ ವಿಶ್ವಕ್ಕೆ ಹರಡುವ ಹಂತಕ್ಕೆ ತಲುಪಿ ನಿಂತಿದೆ.

    ಈ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳೂ ತಮ್ಮ ತಮ್ಮ ಗಡಿಗಳಲ್ಲಿ ಹೆಚ್ಚಿನ ನಿಗಾ ವಹಿಸುತ್ತಿವೆ.ಭಾರತಕ್ಕೂ ಈ ವೈರಸ್ ಕಾಲಿಡುವ ಸಾಧ್ಯತೆ ಹಿನ್ನಲೆಯಲ್ಲಿ ಚೀನಾದಿಂದ ದೇಶಕ್ಕೆ ಬರುವ ಎಲ್ಲ ಪ್ರಯಾಣಿಕರನ್ನೂ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವೈರಾಣು ಪತ್ತೆ ಸೆಂಟರ್ ಗಳನ್ನು ತೆರೆಯಲಾಗಿದೆ. 

    ಮಂಗಳೂರಿನ ನವ ಮಂಗಳೂರು ಬಂದರಿನಲ್ಲೂ ಈ ವೈರಾಣು ಪತ್ತೆ ಸೆಂಟರ್ ತೆರೆಯಲಾಗಿದೆ. ಮಂಗಳೂರು ಬಂದರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಚೀನಾದಿಂದ ಹಡಗುಗಳ ಆಗಮನ ಹಾಗೂ ನಿರ್ಗಮನವಾಗುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

    ಕೇಂದ್ರ ಸರಕಾರ ಈ ಬಗ್ಗೆ ಈಗಾಗಲೇ ಸೂಚನೆಯನ್ನು ನೀಡಿದ ಮೇರೆಗೆ ನವ ಮಂಗಳೂರು ಬಂದರಿನಲ್ಲೂ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ ವಿಶ್ವದಾದ್ಯಂತ ಈ ವೈರಸ್‌ನ ಮಹಾಮಾರಿ ಶರ ವೇಗದಲ್ಲಿ ಹಬ್ಬುತ್ತಿದೆ.

    ನೂರಾರು ಜನ ಈಗಾಗಲೇ ಪ್ರಾಣ ತೆತ್ತಿದ್ದಾರೆ. ಸಾವಿರಾರು ಜನರು ಈ ಸೋಂಕಿಗೆ ತುತ್ತಾಗಿದ್ದಾರೆ ಆದರೆ ರಾಜ್ಯದ ವಾಣಿಜ್ಯ ಹೆಬ್ಬಾಗಿಲಾಗಿರುವ ಕರಾವಳಿ ನಗರ ಮಂಗಳೂರಿನಲ್ಲಿ ಇದುವರೆಗೂ ಯಾವುದೇ ಮುಂಜಾಗೃತಾ ಕ್ರಮಗಳನ್ನು ಜಿಲ್ಲಾಡಳಿತವಾಗಲಿ- ಜಿಲ್ಲಾ ಆರೋಗ್ಯ ಇಲಾಖೆಯಾಗಲಿ ಕೈಗೊಂಡಿಲ್ಲ.

    ವಿಡಿಯೋಗಾಗಿ..

     

    Click to comment

    Leave a Reply

    Your email address will not be published. Required fields are marked *

    LATEST NEWS

    ವಾಟರ್ ಹೀಟರ್ ನಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ

    Published

    on

    ಬೆಂಗಳೂರು: ಸ್ನೇಹಿತನನ್ನೇ ವ್ಯಕ್ತಿಯೊಬ್ಬ ವಾಟರ್ ಹೀಟರ್ ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಶ್ರೀನಿವಾಸಪುರದಲ್ಲಿ ನಡೆದಿದೆ.
    ನಾಗರಾಜ್ ಎಂಬಾತ ಶ್ರೀನಿವಾಸ್ ನನ್ನು ವಾಟರ್ ಹೀಟರ್ ನಿಂದ ಹೊಡೆದ ಕೊಲೆ ಮಾಡಿದ್ದಾನೆ.

    ಶ್ರೀನಿವಾಸ್ ಹಾಗೂ ನಾಗರಾಜ್ ಇಬ್ಬರು ಗಾರೆ ಕೆಲಸ ಮಾಡಿಕೊಂಡಿದ್ದರು. ಶ್ರೀನಿವಾಸ್ ಮದುವೆಯಾಗಿದ್ದರೂ ಪತ್ನಿಯನ್ನು ಬಿಟ್ಟು ಪ್ರತ್ಯೇಕವಾಗಿ ವಾಸವಾಗಿದ್ದ. ಕೊಲೆ ಆರೋಪಿ ನಾಗರಾಜ್ ಗೆ ಇನ್ನೂ ಮದುವೆಯಾಗಿರಲಿಲ್ಲ.ಇಬ್ಬರೂ ಶ್ರೀನಿವಾಸಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

    ಶ್ರೀನಿವಾಸ್ ಹಾಗೂ ನಾಗರಾಜ್ ಜಗಳವಾಗಿದ್ದು, ಈ ವೇಳೆ ನಾಗರಾಜ್ ಕೋಪದ ಬರದಲ್ಲಿ ವಾಟರ್ ಹೀಟರ್ ನಿಂದ ಶ್ರೀನಿವಾಸ್ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಶ್ರೀನಿವಾಸ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

    Continue Reading

    LATEST NEWS

    ಅರಂತೋಡು: ಭತ್ತದ ಲೋಡ್ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ

    Published

    on

    ಅರಂತೋಡು: ಈಚರ್ ಲಾರಿಯೊಂದಕ್ಕೆ ಆಕಸ್ಮಿಕ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ಘಟನೆ ಕೊಡಗು ಜಿಲ್ಲೆಯ ಜೋಡುಪಾಲ ಸಮೀಪ ಡಿ. 28ರ ತಡರಾತ್ರಿಯಲ್ಲಿ ನಡೆದಿದೆ.

    ಹೆಚ್.ಡಿ. ಕೋಟೆಯಿಂದ ಭತ್ತದ ಲೋಡ್ ಉಡುಪಿಗೆ ಸಾಗಿಸುತ್ತಿದ್ದ ವೇಳೆ ಲಾರಿಗೆ ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಹಾಗೂ ಕ್ಲೀನರ್ ಲಾರಿಯನ್ನು ರಸ್ತೆ ಪಕ್ಕ ನಿಲ್ಲಿಸಿ, ಕೆಳಗಿಳಿದಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

    Continue Reading

    LATEST NEWS

    ವಿಷಕಾರಿ ಅನಿಲ ಸೇವಿಸಿ ನಾಲ್ವರು ಕಾರ್ಮಿಕರು ಸಾ*ವು

    Published

    on

    ಮಂಗಳೂರು/ಭರೂಚ್ : ರಾಸಾಯನಿಕ ಘಟಕವೊಂದರಲ್ಲಿ ಸೋರಿಕೆಯಾದ ವಿಷಕಾರಿ ಅನಿಲವನ್ನು ಸೇವಿಸಿ ನಾಲ್ವರು ಕಾರ್ಮಿಕರು ಮೃ*ತಪಟ್ಟಿರುವ ಘಟನೆ ಗುಜರಾತಿನ ಭರೂಚ್ ಜಿಲ್ಲೆಯ ದಹೇಜ್‌ನಲ್ಲಿ ನಡೆದಿದೆ. ಗುಜರಾತ್‌ ಮೂಲದ ರಾಜೇಶ್ ಕುಮಾರ್, ಜಾರ್ಖಂಡ್ ಮೂಲದ ಮುದ್ರಿಕಾ ಯಾದವ್, ಉತ್ತರ ಪ್ರದೇಶದ ಸುಶಿತ್ ಪ್ರಸಾದ್ ಮತ್ತು ಮಹೇಶ್ ನಂದಲಾಲ್ ಮೃ*ತ ಕಾರ್ಮಿಕರು.

    ಶನಿವಾರ(ಡಿ.೨೮) ರಾತ್ರಿ 10 ರ ವೇಳೆಗೆ ಈ ಘಟನೆ ನಡೆದಿದೆ. ಗುಜರಾತ್ ಫ್ಲೋರೊಕೆಮಿಕಲ್ಸ್ ಲಿಮಿಟೆಡ್ (ಜಿಎಫ್‌ಎಲ್) ಉತ್ಪಾದನಾ ಘಟಕದಲ್ಲಿ ಪೈಪ್‌ನಿಂದ ಸೋರಿಕೆಯಾದ ವಿಷಕಾರಿ ಅನಿಲವನ್ನು ಉಸಿರಾಡಿದ ಪರಿಣಾಮ ನಾಲ್ವರು ಇಹಲೋಕ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ. ತಕ್ಷಣ ಅವರನ್ನು ಭರೂಚ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರಲ್ಲಿ ಮೂವರು ಭಾನುವಾರ ಮುಂಜಾನೆ 3 ಗಂಟೆಗೆ ಮೃ*ತಪಟ್ಟರೆ, ಇನ್ನೊಬ್ಬರು ಬೆಳಿಗ್ಗೆ 6 ಗಂಟೆಗೆ ಮೃ*ತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ರಾತ್ರಿ 10 ಗಂಟೆಗೆ ಕಂಪೆನಿಯ ಸಿಎಂಎಸ್ ಸ್ಥಾವರದ ನೆಲ ಅಂತಸ್ತಿನ ಮೂಲಕ ಹಾದುಹೋಗಿರುವ ಪೈಪ್‌ನಿಂದ ಅನಿಲ ಸೋರಿಕೆಯಾಗಿದೆ. ಈ ವೇಳೆ ನಾಲ್ವರು ಕಾರ್ಮಿಕರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ನಾಲ್ವರು ಮೃ*ತಪಟ್ಟಿದ್ದಾರೆ. ಮೃತದೇಹಗಳನ್ನು ಮ*ರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ : ಈ ವಾರ ಬಿಗ್‌ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ ಇವರೇ ನೋಡಿ..!

    ಜಿಎಫ್‌ಎಲ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಜಿಗ್ನೇಶ್ ಪರ್ಮಾರ್, ಈ ಬಗ್ಗೆ ತನಿಖೆ ನಡೆಸಲಿದ್ದು, ಮೃ*ತ ಕಾರ್ಮಿಕರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ

    Continue Reading

    LATEST NEWS

    Trending