Connect with us

    LATEST NEWS

    ಫೆ.17, 18ರಂದು ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಾವಧಿ ಮಹಾಪೂಜೆ ಸಂಭ್ರಮ

    Published

    on

    ಮಂಗಳೂರು: ಬೋಳೂರಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಹಿತ ವರ್ಷಾವಧಿ ಮಹಾಪೂಜೆ ಫೆಬ್ರವರಿ 17ರಿಂದ 18ರ ವರೆಗೆ ಸಂಭ್ರಮದಿಂದ ಜರುಗಲಿದೆ.

    ದೇಶ ವಿದೇಶಗಳಲ್ಲೂ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿರುವ ಉರ್ವ ಮಾರಿಯಮ್ಮನ ಬಗ್ಗೆ ಕೇವಲ ಮೊಗವೀರ ಸಮುದಾಯದವರಷ್ಟೇ ಅಲ್ಲದೆ ಸರ್ವಧರ್ಮದವರೂ ದೇವಿ ಕಾರಣಿಕದ ಬಗ್ಗೆ ಬಣ್ಣಿಸುತ್ತಾರೆ. ಇಂತಹ ದೇವಿ ಆಲಯದಲ್ಲಿ ವರ್ಷಾವಧಿ ಉತ್ಸವದ ಹಿನ್ನೆಲೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ದೇವಿ ಸನ್ನಿಧಿಯಲ್ಲಿ ಶುಕ್ರವಾರ ದಿನದ ಶುಭ ದಿನದಂದು ಬಿಡುಗಡೆಗೊಳಿಸಲಾಯಿತು.

    ದೇವಿ ಮುಂಭಾಗದಲ್ಲಿ ಆಮಂತ್ರಣ ಪತ್ರಿಕೆಯನ್ನಿಟ್ಟು ಪೂಜೆ ಸಲ್ಲಿಸಿ, ಕ್ಷೇತ್ರದ ತಂತ್ರಿವರ್ಯರಾದ ಸುಬ್ರಹ್ಮಣ್ಯ ತಂತ್ರಿ ಕೋಡಿಕಲ್ ಅವರು ಪ್ರಾರ್ಥನೆ ನೆರವೇರಿಸಿದ ಬಳಿಕ ಆಡಳಿತ ಸಮಿತಿ ಗಣ್ಯರ ಉಪಸ್ಥಿತಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

    ಕರ್ನಾಟಕ ಪರ್ಸಿನ್‌ ಮೀನುಗಾರರ ಸಂಘದ ಅಧ್ಯಕ್ಷ ಅನಿಲ್‌ ಕುಮಾರ್ ಬೊಕ್ಕಪಟ್ಣ, ಉಪಾಧ್ಯಕ್ಷ ಮನೋಹರ್ ಬೋಳೂರು, ಮೋಹನ್ ಬೆಂಗ್ರೆ, ನವೀನ್ ಕರ್ಕೇರ, ಸಿಎ ಎಸ್ ಎಸ್ ನಾಯಕ್‌, ರಮಾನಂದ ರಮಾನಂದ ಶೆಟ್ಟಿ, ಯಶವಂತ , ಲೀಲಾಕ್ಷ ಕರ್ಕೇರ, ಯಶವಂತ ಬೋಳೂರು, ಆಡಳಿತ ಸಮಿತಿ ಪ್ರಮುಖರು, ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು. ಇನ್ನು ಕಾರ್ಯಕ್ರಮದ ಕುರಿತಂತೆ ಕ್ಷೇತ್ರದ ತಂತ್ರಿಗಳು ಕಾರ್ಯಕ್ರಮಗಳ ವಿವರಣೆ ನೀಡಿದರು.

    DAKSHINA KANNADA

    ಮಂಗಳೂರು : ಎನ್‌ಸಿಸಿಯ ರಾಷ್ಟ್ರಮಟ್ಟದ ಪ್ಯಾರಾ ಜಂಪ್‌ನಲ್ಲಿ ತೇರ್ಗಡೆಯಾದ ಗ್ರಾಮೀಣ ಪ್ರತಿಭೆ

    Published

    on

    ಮಂಗಳೂರು : ತನ್ನ ಛಲ, ಹಠ ಮತ್ತು ಕಠಿಣ ಪರಿಶ್ರಮದ ಮೂಲಕ ಎನ್ ಸಿಸಿಯ ಪ್ಯಾರ ಜಂಪಿಂಗ್ ಪರೀಕ್ಷೆಯಲ್ಲಿ ಕುಮಾರಿ ಪ್ರತಿಕ್ಷಾ  ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ. ಈ ಸಾಧನೆ ಮೆರೆದ  ದಕ್ಷಿಣ-ಕನ್ನಡ ಜಿಲ್ಲೆಯ ಪ್ರಪ್ರಥಮ ಗ್ರಾಮೀಣ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾರೆ.

    ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ಬೊಳಿಯದ ಪ್ರೇಮ ಪೂಜಾರಿ ಹಾಗೂ ಪ್ರಕಾಶ್ ಪೂಜಾರಿಯವರ ಮಗಳು, ಮೂಡಬಿದ್ರಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಪ್ರತಿಕ್ಷಾ 2024ರ ನವೆಂಬರ್ 1 ರಿಂದ 25ರವೆರೆಗೆ ಉತ್ತರ ಪ್ರದೇಶದ ಆಗ್ರಾದ ಎಎಟಿಸಿ( Army Airborne Training Centre)ಯಲ್ಲಿ  ನಡೆದ ರಾಷ್ಟ್ರ  ಮಟ್ಟದ ಪ್ಯಾರ ಜಂಪ್ ಕ್ಯಾಂಪ್ (All India Parajump Camp) ನ್ನು ಯಶಸ್ವಿಯಾಗಿ ಮುಗಿಸಿದ ಅಪ್ಪಟ ಗ್ರಾಮೀಣ ಪ್ರತಿಭೆ. ಮಂಗಳೂರು ತಾಲೂಕು ಕೊಳವೂರು ಗ್ರಾಮದ  ಬೊಳಿಯ ಸರಕಾರಿ ಉನ್ನತಿಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ನೇ ತರಗತಿ ವರೆಗೆ ವ್ಯಾಸಂಗ ಮಾಡಿದ ಬಳಿಕ ಕಾರ್ಕಳದ ಕೊಳಕ್ಕೆ ಇರ್ವತ್ತೂರು ಮೈಂದೊಟ್ಟುವಿನಲ್ಲಿ ವಾಸವಾಗಿದ್ದಾರೆ.

    ಸತತ ಪರಿಶ್ರಮದ ಫಲ :

    ದೇಶದಾದ್ಯಂತ 20 ಲಕ್ಷಕ್ಕೂ ಅಧಿಕ ಎನ್ ಸಿಸಿ ಕೆಡೆಟ್ ಗಳಲ್ಲಿ ಆಯ್ಕೆಯಾಗಿದ್ದ 100 ಕೆಡೆಟ್ ಗಳ ಪೈಕಿ ಕರ್ನಾಟಕ – ಗೋವಾ ಡೈರೆಕ್ಟರೇಟ್ ವ್ಯಾಪ್ತಿಯ ಮಂಗಳೂರು ಎನ್ ಸಿಸಿ 6ನೇ (ಕಾರ್) KAR ಏರ್ ಸ್ಕ್ಯಾಡ್ರೆನ್ ನ  ಆಳ್ವಾಸ್ ಕಾಲೇಜಿನ ಎನ್ ಸಿಸಿ ಯಿಂದ ತರಬೇತಿಗೆ ಆಯ್ಕೆಯಾದ ಪ್ರತೀಕ್ಷಾ ಮೂರು ಪ್ಯಾರಾ ಜಂಪ್ ಗಳನ್ನು ಯಶಸ್ವಿಯಾಗಿ ಪೂರೈಸಿದವರು. ಪ್ರತಿದಿನ ರನ್ನಿಂಗ್, ಪುಶ್ ಅಪ್, ಫುಲ್ಲಪ್ ಸೇರಿದಂತೆ ಸತತ ಪರಿಶ್ರಮ, ಕಠಿಣ ತರಬೇತಿ ಮತ್ತು ದೈಹಿಕ ಕ್ಷಮತೆಯನ್ನು ಬಯಸುವ ಪ್ಯಾರಾ ಜಂಪ್ ಸುಲಭದ ಕೆಲಸವಲ್ಲ.

    ತರಬೇತಿ ಕೇಂದ್ರದಲ್ಲಿ ಕಠಿಣ ತರಬೇತಿಯನ್ನು ನೀಡಿದ ಬಳಿಕ ಕೆಡೆಟ್ ಗಳ ಎತ್ತರದ ಭಯವನ್ನು ನಿವಾರಿಸಲು ಹಲವು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕನಿಷ್ಠ 30 ಅಡಿ ಎತ್ತರದಿಂದ ಪ್ರಾರಂಭವಾಗುವ ಹಂತ ಹಂತದ ಪರೀಕ್ಷೆಗಳ ಬಳಿಕ 1250 ಅಡಿ ಎತ್ತರದಿಂದ ಪ್ಯಾರಾ ಜಂಪಿಂಗ್ ಪರೀಕ್ಷೆ ನಡೆಸಲಾಗುತ್ತದೆ. ಹೀಗೆ ವಿವಿಧ ಹಂತದ ಪರೀಕ್ಷೆಗಳನ್ನು ಎದುರಿಸಿ, ಮೂರು  ಪ್ಯಾರಾ ಜಂಪ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದ ಹೆಮ್ಮೆ ಪ್ರತೀಕ್ಷಾ ಅವರದು.

    ಇದನ್ನೂ ಓದಿ :

    ಸೇನೆಗೆ ಸೇರುವ ಆಸೆ :

    ಬಾಲ್ಯದಿಂದಲೇ ಸೇನೆಗೆ ಸೇರಬೇಕು ಎಂಬ ಅಸೆ ಚಿಗುರಿದ್ದು ಪ್ರತೀಕ್ಷಾ ಅವರ ಅಣ್ಣ ಪ್ರಜ್ವಲ್ ಅವರಿಂದ. ಪ್ರಜ್ವಲ್ ಪೂಜಾರಿಯವರು ಸೈನಿಕನಾಗಿದ್ದು ಅವರೇ ನನಗೆ ಸ್ಫೂರ್ತಿ ಎನ್ನುತ್ತಾರೆ ಪ್ರತೀಕ್ಷಾ. ಪ್ಯಾರಾ ಜಂಪ್ ಪರೀಕ್ಷೆ ತೇರ್ಗಡೆಯಾಗಿರುವುದು ಪ್ರತೀಕ್ಷಾ ಅವರಿಗೆ ವಾಯುಪಡೆಗೆ ಸೇರಲು ಸಹಕಾರಿಯಾಗಿದೆ. ಅಲ್ಲದೇ ಯಾವುದೇ ಸರಕಾರಿ ಉದ್ಯೋಗಕ್ಕೆ ಆಯ್ಕೆ ಸಂದರ್ಭ ಪ್ಯಾರಾ ಜಂಪ್ ನ  ವಿಶೇಷ ಅಂಕಗಳು ಪರಿಗಣನೆಗೆ ಬರುತ್ತವೆ.

    ಆರ್ಥಿಕವಾಗಿ ಸದೃಢವಲ್ಲದ ಕುಟುಂಬದ, ಕುಳವೂರಿನ ಅಪ್ಪಟ ಗ್ರಾಮೀಣ ಬಾಲೆಯ ಈ ಸಾಧನೆಗೆ ಗ್ರಾಮಸ್ಥರಿಂದ  ಸಂತಸ ವ್ಯಕ್ತವಾಗಿದೆ.

     

    Continue Reading

    LATEST NEWS

    10 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ..! 16 ವರ್ಷದ ಸ್ನೇಹಿತನಿಂದ ಕೃತ್ಯ..!

    Published

    on

    ಮಂಗಳೂರು/ ಗುಜರಾತ್ : 16 ವರ್ಷದ ಹುಡುಗನೊಬ್ಬ 5 ನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಗುಜರಾತ್‌ನ ಅರಾವಳಿ ಜಿಲ್ಲೆಯ ಧನ್ಸೂರಾ ಗ್ರಾಮದ ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ತನ್ನ ತಾಯಿಯ ಸ್ಮಾರ್ಟ್‌ ಫೋನ್ ಬಳಸುತ್ತಿದ್ದ ಬಾಲಕಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 16 ವರ್ಷದ ಯುವಕನೊಬ್ಬನ ಪರಿಚಯವಾಗಿದೆ. ಇಬ್ಬರೂ ಚಾಟಿಂಗ್ ಮಾಡುತ್ತಿದ್ದು, ಫೋನ್‌ ನಂಬರ್ ಹಂಚಿಕೊಂಡು ಮಾತನಾಡುತ್ತಿದ್ದರು ಎಂಬುದಾಗಿ ವಿಚಾರಣೆ ವೇಳೆ ಪೋಷಕರು ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಮತ್ತು ಆಕೆಯ ಮತ್ತೋರ್ವ ಅಪ್ರಾಪ್ತ ಸಹೋದರಿ ಇನ್‌ಸ್ಟಾಗ್ರಾಮ್‌ನಲ್ಲಿ 7 ಖಾತೆಗಳನ್ನು ತೆರೆದಿದ್ದು, 2 ಅಕೌಂಟ್‌ನಲ್ಲಿ ಸಕ್ರೀಯವಾಗಿದ್ದರು ಎಂಬುದ ಕೂಡಾ ಗೊತ್ತಾಗಿದೆ.

    ಬಾಲಕಿಯ ಜೊತೆ ಚಾಟಿಂಗ್ ಮಾಡಿ ಫೋನ್ ಕೂಡಾ ಮಾಡುತ್ತಿದ್ದ ಹುಡುಗ ಮನೆಯವರಿಗೆ ತಿಳಿಯದಂತೆ ಆಕೆಯನ್ನು ಕರೆದೊಯ್ದಿದ್ದಾನೆ. ಬಾಲಕಿ ನಾಪತ್ತೆ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಮನೆಯವರು ನೀಡಿದ ಮಾಹಿತಿ ಆದರಿಸಿ ಹುಡುಕಾಟ ನಡೆಸಿ ಬಾಲಕಿಯನ್ನು ಪತ್ತೆ ಹಚ್ಚಲಾಗಿದೆ. ಬಳಿಕ ವಿಚಾರಣೆ ನಡೆಸಿದ ಪೊಲೀಸರಿಗೆ ಬಾಲಕಿಯ ಅತ್ಯಾಚಾರ ನಡೆದಿರುವುದು ಆಕೆಯ ಹೇಳಿಕೆಯಿಂದ ಗೊತ್ತಾಗಿದೆ.

    ಇಬ್ಬರೂ ಅಪ್ರಾಪ್ತರಾಗಿದ್ದು , ಸಂತ್ರಸ್ತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಾಲಕನನ್ನು ಬಾಲ ನ್ಯಾಯ ಮಂಡಳಿಗೆ ಹಸ್ತಾಂತರ ಮಾಡಲಾಗಿದ್ದು, ಬಾಲಪರಾಧ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    Continue Reading

    LATEST NEWS

    ಚಿಕ್ಕಮಗಳೂರು : ಮುಂಡಗಾರು ಲತಾ ಸೇರಿ 6 ಮೋಸ್ಟ್ ವಾಂಟೆಡ್ ‘ನಕ್ಸಲರು’ ಶರಣಾಗತಿಗೆ ನಿರ್ಧಾರ!

    Published

    on

    ಚಿಕ್ಕಮಗಳೂರು: ಕಳೆದ ಕೆಲವು ದಿನಗಳ ಹಿಂದೆ ಚಿಕ್ಕಮಂಗಳೂರು ಭಾಗದಲ್ಲಿ ನಕ್ಷಲ್ ಚಟುವಟಿಕೆ ಹೆಚ್ಚಾಗಿದ್ದು, ಈ ವೇಳೆ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಿದ ಬಳಿಕ ಇದೀಗ 6 ನಕ್ಸಲರು ಚಿಕ್ಕಮಂಗಳೂರು ಜಿಲ್ಲಾಡಳಿತದ ಮುಂದೆ ಶರಣಾಗತಿಗೆ ನಿರ್ಧರಿಸಿದ್ದು, ಮುಂದಿನ ಮೂರು ದಿನಗಳಲ್ಲಿ ಆರು ನಕ್ಸಲರು ಶರಣಾಗೋ ಸಾಧ್ಯತೆ ಇದೆ ಎನ್ನಲಾಗಿದೆ.

    ಹೌದು ಚಿಕ್ಕಮಗಳೂರಿನ ಜಿಲ್ಲಾಡಳಿತದ ಮುಂದೆ ಶರಣಾಗತಿ ಆಗಲು ನಿರ್ಧಾರ ಮಾಡಿದ್ದಾರೆ. ಕರ್ನಾಟಕ, ಕೇರಳ, ಆಂಧ್ರಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲರು ಇದೀಗ ಶರಣಾಗತಿಗೆ ನಿರ್ಧಾರ ಮಾಡಿದ್ದಾರೆ. ಕರ್ನಾಟಕದ ನಕ್ಸಲ್ ತುಂಗಾ ದಳದ ನಕ್ಸಲ್ ನಾಯಕಿ ಮುಂಡಗಾರು ಲತಾ, ಸುಂದರಿ, ವನಜಾಕ್ಷಿ, ದಕ್ಷಿಣ ಭಾರತದ ಮೋಸ್ಟ ವಾಂಟೆಡ್ ನಕ್ಸಲ್ ಜೀಶ ಆಂಧ್ರಪ್ರದೇಶದ ಕೆ. ವಸಂತ್, ಮಾರಪ್ಪ ಅರೋಲಿ ಶರಣಾಗತಿಗೆ ನಿರ್ಧರಿಸಿದ್ದಾರೆ.

    ಈ ಬಗ್ಗೆ ಶಾಂತಿಗಾಗಿ ನಕ್ಸಲರು ನಾಗರೀಕ ವೇದಿಕೆಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ವೇದಿಕೆ ಸದಸ್ಯರು ಚರ್ಚಿಸಿದ್ದಾರೆ. ಮೂರು ದಿನಗಳಲ್ಲಿ ಆರು ನಕ್ಸಲರು ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೂರು ತಿಂಗಳಿನಿಂದ ಚಿಕ್ಕಮಂಗಳೂರು ಉಡುಪಿ ಭಾಗದಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿತ್ತು. ವಿಕ್ರಂ ಎನ್ಕೌಂಟರ್ ಬಳಿಕ ಸರ್ಕಾರ ನಕ್ಸಲರಿಗೆ ಶರಣಾಗತಿಗೆ ಆದ್ಯತೆ ನೀಡಿತ್ತು. ಹಾಗಾಗಿ ಇದೀಗ 6 ನಕ್ಸಲರು ತಾವಾಗಿಯೇ ಶರಣಾಗತಿಗೆ ನಿರ್ಧಾರ ಕೈಗೊಂಡಿದ್ದಾರೆ.

    Continue Reading

    LATEST NEWS

    Trending