Tuesday, May 30, 2023

ಮಂಗಳೂರು: ‘ಕೇರಳ ದಿ ಸ್ಟೋರಿ’ ವೀಕ್ಷಿಸಿದ ಡಾ. ಭರತ್ ಶೆಟ್ಟಿ

ಚುನಾವಣೆ ಮುಗಿದು ಆರಾಮ ಪಡೆಯುತ್ತಿದ್ದ  ಶಾಸಕ ಡಾ. ಭರತ್ ಶೆಟ್ಟಿ ವೈ  ಮಂಗಳೂರಿನ ಲಾಲ್ ಬಾಗ್ ನಲ್ಲಿರುವ ಭಾರತ್ ಸಿನಿಮಾದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಗುರುವಾರ ವೀಕ್ಷಿಸಿದ್ದಾರೆ.

ಮಂಗಳೂರು: ಚುನಾವಣೆ ಮುಗಿದು ಆರಾಮ ಪಡೆಯುತ್ತಿದ್ದ  ಶಾಸಕ ಡಾ. ಭರತ್ ಶೆಟ್ಟಿ ವೈ  ಮಂಗಳೂರಿನ ಲಾಲ್ ಬಾಗ್ ನಲ್ಲಿರುವ ಭಾರತ್ ಸಿನಿಮಾದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಗುರುವಾರ ವೀಕ್ಷಿಸಿದ್ದಾರೆ.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಭರತ್ ಶೆಟ್ಟಿ,  ಹಿಂದೂ ಸಮಾಜ ಜಾಗೃತವಾಗಿರಲು ಕೇರಳ ಸ್ಟೋರಿ ಒಂದು ಉತ್ತಮ ಸಿನಿಮವಾಗಿದೆ.

ನಮ್ಮ ಹಿಂದೂ ಸಂಪ್ರದಾಯ ಧಾರ್ಮಿಕ ನಂಬಿಕೆಗಳ ಮೇಲೆ ಯಾವ ರೀತಿ ಮುಸ್ಲಿಂ ಭಯೋತ್ಪಾದಕರು, ಮುಸ್ಲಿಂ ವತಿಯವಾದಿ ಸಂಘಟನೆಗಳು, ಮುಸ್ಲಿಂ ಮತಾಂದರು, ಪ್ರೀತಿ, ಪ್ರೇಮ ಹಾಗೂ ಆಮಿಷಗಳನ್ನು ಒಡ್ಡಿ ಹಿಂದೂ ಯುವತಿಯರನ್ನು ಮತಾಂತರಗೊಳಿಸಿ ಭಯೋತ್ಪಾದನೆಗೆ, ವೇಶ್ಯಾವಾಟಿಕೆಗೆ ದೂಡುತ್ತಿವೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಸರಕಾರ ಕಾನೂನು ಕ್ರಮ ಕೈಗೊಳ್ಳುತ್ತಿದ್ದರೂ, ಇದಕ್ಕೆ ಹಿಂದೂ ಸಮಾಜ ಜಾಗೃತರಾಗುದು ಅಗತ್ಯ ಎಂದರು.

ಇದರ ಜತೆಗೆ ಈ ಚಿತ್ರವನ್ನು ಬ್ಯಾನ್ ಮಾಡಿದ ಹಿಂದೂ ವಿರೋಧಿ ಸರಕಾರದ ನಡೆಯನ್ನು ಟೀಕಿಸಿದರು.

LEAVE A REPLY

Please enter your comment!
Please enter your name here

Hot Topics