DAKSHINA KANNADA
ಮಂಗಳೂರು: ಶಾಪಿಂಗ್ ಗೆ ಹೋದ ಬಾಲಕಿ ನಾಪತ್ತೆ- ಪತ್ತೆಗಾಗಿ ಮನವಿ..!
Published
1 year agoon
By
Adminಮಂಗಳೂರು ತಾಲೂಕು ಮುಕ್ಕ ಮಿತ್ರ ಪಟ್ನದ ಬಾಲಕಿ ಸ್ಫೂರ್ತಿ (17) ಎಂಬಾಕೆ ಜೂ. 8 ರಂದು ಶಾಪಿಂಗ್ ಮಾಡಿ ಬರುವುದಾಗಿ ಮನೆಯಿಂದ ಹೋದವಳು ವಾಪಸ್ ಬಾರದೆ ನಾಪತ್ತೆಯಾಗಿದ್ದಾಳೆ.
ಮಂಗಳೂರು: ಮಂಗಳೂರು ತಾಲೂಕು ಮುಕ್ಕ ಮಿತ್ರ ಪಟ್ನದ ಬಾಲಕಿ ಸ್ಫೂರ್ತಿ (17) ಎಂಬಾಕೆ ಜೂ. 8 ರಂದು ಶಾಪಿಂಗ್ ಮಾಡಿ ಬರುವುದಾಗಿ ಮನೆಯಿಂದ ಹೋದವಳು ವಾಪಸ್ ಬಾರದೆ ನಾಪತ್ತೆಯಾಗಿದ್ದಾಳೆ.
ಕಾಣೆಯಾದ ಬಾಲಕಿಯನ್ನು ವಿವಿಧ ಕಡೆ ಹುಡುಕಿದರೂ ಆಕೆ ಪತ್ತೆಯಾಗದ ಕಾರಣ ಇದೀಗ ಅಕೆಯ ತಾಯಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪುತ್ರಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.
ಕಾಣೆಯಾದ ಸ್ಫೂರ್ತಿ 5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾಳೆ.
ಬಿಳಿ ಬಣ್ಣದ ಟಿ ಶರ್ಟ್ ಮತ್ತು ಕಪ್ಪು ಬಣ್ಣದ ಜೀನ್ಸ್ ಪ್ಯಾಟ್ ಧರಿಸಿರುತ್ತಾಳೆ. ಬಲ ಕುತ್ತಿಗೆಯಲ್ಲಿ 3 ಇಂಚಿನ ಬಿಳಿ ಬಣ್ಣದ ಮಚ್ಚೆ ಇದೆ.
ಕುತ್ತಿಗೆಯಲ್ಲಿ ಚಿನ್ನದ ಸರ ಹಾಗೂ ಸಣ್ಣ ತಾಯಿತ ಇದೆ.
ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.
DAKSHINA KANNADA
ಸೊಸೈಟಿಯಿಂದ ಹಣ ಡ್ರಾ ಮಾಡಿ ನಾಪತ್ತೆಯಾಗಿದ್ದ ವ್ಯಕ್ತಿಯ ಶ*ವ ಪತ್ತೆ!
Published
4 hours agoon
06/12/2024By
NEWS DESK4ಪುತ್ತೂರು : ನಿನ್ನೆ(ಡಿ.5) ಸೊಸೈಟಿಯೊಂದರಿಂದ ಹಣ ಡ್ರಾ ಮಾಡಿ ತೆರಳಿದ್ದ ವ್ಯಕ್ತಿಯೊಬ್ಬರು ಶ*ವವಾಗಿ ಪತ್ತೆಯಾಗಿದ್ದಾರೆ. ಪುತ್ತೂರಿನ ಪಡ್ಡಾಯೂರು ಎಂಬಲ್ಲಿನ ನಿವಾಸಿಯಾಗಿರುವ ನಂದಕುಮಾರ್(61) ಎಂಬವರು ಅನುಮಾನಸ್ಪದವಾಗಿ ಸಾ*ವನ್ನಪ್ಪಿದ್ದಾರೆ.
ನಂದಕುಮಾರ್ ಪುತ್ತೂರು ವಿವೇಕನಾಂದ ಕಾಲೇಜಿನ ನಿವೃತ್ತ ಸಿಬ್ಬಂದಿಯಾಗಿದ್ದು, ಡಿಸೆಂಬರ್ 5 ರಂದು ಮನೆಯಿಂದ ಪುತ್ತೂರು ಪೇಟೆಗೆ ಹೋಗಿ ಬರುವುದಾಗಿ ಹೊರಟಿದ್ದರು. ಈ ವೇಳೆ ಸಂಬಂಧಿಯೊಬ್ಬರಿಗೆ ಹಣ ನೀಡುವ ಸಲುವಾಗಿ ಸೊಸೈಟಿಯಿಂದ 1.40 ಲಕ್ಷ ರೂ. ಹಣ ಡ್ರಾ ಮಾಡಿದ್ದರು ಎಂಬುದಾಗಿ ಮಾಹಿತಿ ಲಭ್ಯವಾಗಿದೆ.
ಇಂದು(ಡಿ.6) ಪುತ್ತೂರು ಸಾಲ್ಮರ ಸಮೀಪದ ರೋಟರಿಪುರ ಎಂಬಲ್ಲಿಯ ನೀರು ಹರಿಯುವ ತೋಡಿನಲ್ಲಿ ಇವರ ಮೃ*ತದೇಹ ಪತ್ತೆಯಾಗಿದೆ. ನಿನ್ನೆಯಿಂದ ನಾಪತ್ತೆಯಾಗಿದ್ದ ನಂದಕುಮಾರ್ ಎಲ್ಲಿ ಹೋಗಿದ್ದರು ಎಂಬ ಸುಳಿವು ಇರಲಿಲ್ಲ. ಆದ್ರೆ ಅವರು ಹಣ ಡ್ರಾ ಮಾಡಿಕೊಂಡಿರುವ ಮಾಹಿತಿ ಇತ್ತಾದ್ರೂ ಮೃ*ತದೇಹದ ಬಳಿ ಸಿಕ್ಕ ಚೀಲದಲ್ಲಿ ಯಾವುದೇ ಹಣ ಕಂಡು ಬಂದಿಲ್ಲ. ಹೀಗಾಗಿ ಹಣಕ್ಕಾಗಿ ನಂದಕುಮಾರ್ ಅವರನ್ನು ಕೊ*ಲೆ ಮಾಡಿ ಇಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ : Viral Video: ಜಾಯಿಂಟ್ ವೀಲ್ನಿಂದ ಹೊರಬಿದ್ದ ಬಾಲಕಿ; ರಕ್ಷಣಾ ಕಾರ್ಯಚರಣೆಯೇ ರೋಚಕ
ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
DAKSHINA KANNADA
ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಣ್ಣು ದಿನಾಚರಣೆ
Published
8 hours agoon
06/12/2024ಮಂಗಳೂರು : ವಿಶ್ವವಿದ್ಯಾನಿಲಯದ ಜೈವಿಕ ವಿಜ್ಞಾನ ವಿಭಾಗ ಮತ್ತು ಮಂಗಳೂರಿನ ಯು.ಆರ್ ಫೌಂಡೇಶನ್ ಸಹಯೋಗದೊಂದಿಗೆ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ ಮಂಗಳಗಂಗೋತ್ರಿಯ ಪ್ರೊ.ಯು.ಆರ್.ರಾವ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಯು.ಆರ್ ಫೌಂಡೇಶನ್ ನ ಅಧ್ಯಕ್ಷ ಎ.ಎಂ ಉಸ್ಮಾನ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಭಾರತವು ಕೃಷಿ ಆಧಾರಿತ ದೇಶವಾಗಿದೆ. ಮಣ್ಣಿನ ಫಲವತ್ತತೆ ಕಾಪಾಡುವ ಹೊಣೆಗಾರಿಕೆ ರೈತರ ಮೇಲೆ ಮಾತ್ರ ಹೊರಿಸುವಂತಿಲ್ಲ. ಬದಲಾಗಿ, ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ಮೂಲಕ, ಮನೆ ತೋಟಗಾರಿಕೆಯನ್ನು ಅಭ್ಯಾಸ ಮಾಡುವ ಮೂಲಕ ಮತ್ತು ಸಾವಯವ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಮೂಲಕ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದು ಹೇಳಿದರು.
ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಹರೀಶ್ ಶೆಣೈ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಜೈವಿಕ ವಿಜ್ಞಾನ ವಿಭಾಗದ ಅಧ್ಯಕ್ಷೆ ಪ್ರೊ.ತಾರಾವತಿ ಎನ್.ಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಣ್ಣಿನ ದಿನಾಚರಣೆಯ ಅಂಗವಾಗಿ ಮಣ್ಣು ಸಂರಕ್ಷಣೆ ಕುರಿತು ಚಿತ್ರಕಲಾ ಸ್ಪರ್ಧೆ ಮತ್ತು ಇದೇ ವಿಷಯದ ಕುರಿತು ಸ್ಲೋಗನ್ ಬರವಣಿಗೆ ಸ್ಪರ್ಧೆಯನ್ನು ಅಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
DAKSHINA KANNADA
ಇಂಟ್ರಸ್ಟಿಂಗ್ ಸ್ಟೋರಿ : ಥೈಲ್ಯಾಂಡ್ ಯುವತಿಯ ಕೈ ಹಿಡಿದ ಮಂಗಳೂರು ಹುಡುಗ !!
Published
8 hours agoon
06/12/2024ಮಂಗಳೂರು : ಥೈಲ್ಯಾಂಡ್ ಹಾಗೂ ಮಂಗಳೂರಿಗೆ ವೈವಾಹಿಕ ನಂಟು ಬೆಸೆದಿದೆ. ಥೈಲ್ಯಾಂಡ್ ನಲ್ಲಿ ಅರಳಿದ ಪ್ರೇಮಕಥೆ ಮಂಗಳೂರಿನಲ್ಲಿ ಸಪ್ತಪದಿ ತುಳಿಯೋ ಮೂಲಕ ಸುಂದರ ತಿರುವು ಪಡೆದಿದೆ. ಮಂಗಳೂರಿನ ಯುವಕ ಥೈಲ್ಯಾಂಡ್ ಯುವತಿಯ ಮುದ್ದಾದ ಪ್ರೇಮ ವಿವಾಹದ ಆಸಕ್ತದಾಯಕ ಕಥೆ ಇಲ್ಲಿದೆ.
‘ಸಪ್ತಪದಿ ಇದು ಸಪ್ತಪದಿ .ಇದು ಏಳು ಜನುಮಗಳ ಅನುಬಂ’ಧ ಎಂಬಂತೆ ಮಂಗಳೂರಿನಲ್ಲೊಂದು ವಿಶೇಷ ವಿವಾಹ ನಡೆದಿದೆ. ನಮ್ಮ ಬದುಕಿಗೆ ಯಾರು ಬಾಳ ಸಂಗಾತಿಯಾಗುತ್ತಾರೆ? ಹೃದಯ ಸುಪ್ಪತ್ತಿಗೆಯನ್ನ ಅಲಂಕರಿಸುತ್ತಾರೆ ಅನ್ನೋ ದೈವ ನಿರ್ಣಯವೇ ಸರಿ. ಇದಕ್ಕೆ ಸಾಕ್ಷಿಯಾಗಿದೆ ಇಂಡಿಯಾ -ಥೈಲ್ಯಾಂಡ್ ಲವ್ ಸ್ಟೋರಿ. ದೂರದ ಥೈಲ್ಯಾಂಡ್ ದೇಶಕ್ಕೂ ಭಾರತಕ್ಕೂ ಸಂಬಂಧ ಕೂಡಿ ಬಂದಿದೆ. ಥೈಲ್ಯಾಂಡ್ ಸುಂದರಿ ಅಪ್ಪಟ ಕನ್ನಡಿಗನಿಗೆ ಜೋಡಿಯಾಗುವ ಮೂಲಕ ತನ್ನ ಪ್ರೇಮಕಥೆಗೆ ಸುಂದರ ತಿರುವು ನೀಡಿದ್ದಾಳೆ.
ಅಪ್ಪಟ ಹಿಂದೂ ಸಂಪ್ರದಾಯದಂತೆ ಮದುವೆ :
ಕಡಲ ನಗರಿ ಮಂಗಳೂರು ಈ ವಿಶೇಷ ಜೋಡಿ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿದೆ. ಕಾಲಲ್ಲಿ ಕಾಲುಂಗುರ ಮೈ ಮೇಲೆ ಧಾರೆ ಸೀರೆ ಹಣೆಯಲ್ಲಿ ಕುಂಕುಮ ಕೊರಳಲ್ಲಿ ತಾಳಿ ನೋಡೋಕೆ ಥೇಟ್ ಭಾರತೀಯ ನಾರಿಯಂತೆ ಕಾಣಿಸುತ್ತಿರುವ ಈಕೆ ಥೈಲ್ಯಾಂಡ್ ದೇಶದ ಯುವತಿ ಮೊಂತಕಾನ್ ಸಸೂಕ್. ಆದರೆ ಈಗ ಈಕೆ ಮಂಗಳೂರಿನ ಸೊಸೆ. ಮಂಗಳೂರಿನ ಗೋರಿಗುಡ್ಡೆ ನಿವಾಸಿ ಪೃಥ್ವಿ ರಾಜ್ ಅಮೀನ್ ನೊಂದಿಗೆ ಈಕೆಯ ವಿವಾಹವಾಗಿದೆ ಅದೂ ಅಪ್ಪಟ ಭಾರತೀಯ ಸಂಪ್ರದಾಯದಂತೆ ಮಂಗಳೂರಿನ ಮಂಗಳದೇವಿ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಈ ವಿವಾಹ ಕಾರ್ಯಕ್ರಮ ಜರುಗಿದೆ. ಮಂಗಳಾದೇವಿಯ ಆಶೀರ್ವಾದ ಪಡೆದು ನವ ವಧು ವರರು ಹೊಸ ಬಾಳ ಪಯಣವನ್ನ ಆರಂಭಿಸಿದ್ದಾರೆ. ಇನ್ನು ಮುಂದೆ ಥೈಲ್ಯಾಂಡ್ ತ್ಯಜಿಸಿ ತನ್ನ ಪತಿಯೊಂದಿಗೆ ಭಾರತದಲ್ಲೇ ಮೊಂತಕಾನ್ ಸಸೂಕ್ ಸಂಸಾರ ನಡೆಸಲಿದ್ದಾರೆ .
ಮಂಗಳೂರಿನ ಪೃಥ್ವಿರಾಜ್ ಬೆಂಗಳೂರಿನಲ್ಲಿ ಐಟಿ ಉದ್ಯೋಗಿ ಕಳೆದ ಕೆಲ ತಿಂಗಳ ಹಿಂದೆ ಥೈಲ್ಯಾಂಡ್ ಗೆ ಭೇಟಿ ನೀಡಿದಾಗ ಐಟಿ ಉದ್ಯೋಗಿಯೇ ಆಗಿರುವ ಮೊಂತಕಾನ್ ಸಸೂಕ್ ಪರಿಚಯವಾಗಿದೆ .ಪ್ರೇಮಿಗಳ ದಿನದಂದು ಶುರುವಾದ ಈ ಪರಿಚಯ ಪ್ರೀತಿಗೆ ತಿರುಗಿದೆ.ಎರಡು ಮನಸ್ಸುಗಳು ಒಂದಾದ ಮೇಲೆ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ .ಮನೆಯವರಿಗೆ ಈ ವಿಚಾರ ತಿಳಿಸಿದ್ದಾರೆ .ಮೊದಲಿಗೆ ಒಲ್ಲೆ ಎಂದ ಪೃಥ್ವಿರಾಜ್ ಕುಟುಂಬಸ್ಥರು ಥೈಲ್ಯಾಂಡ್ ಸುಂದರಿಯ ಗುಣ ನಡೆತೆಗೆ ಫಿದಾ ಆಗಿದ್ದಾರೆ.ಮಂಗಳೂರಿನಲ್ಲಿ ಹುಡುಕಿದರೂ ಇಂತಹ ಹುಡುಗಿ ಸಿಗೋದಿಲ್ಲ ಎಂದು ತಮ್ಮ ಏಕೈಕ ಪುತ್ರನಿಗೆ ತಾನು ಪ್ರೀತಿಸಿದ ಯುವತಿಯೊಂದಿಗೆ ಧಾರೆಯೆರೆದಿದ್ದಾರೆ .ಹಸೆಮಣೆ ಏರಿದ ಈ ಸುಂದರ ಜೋಡಿಯನ್ನ ಕಣ್ತುಂಬಿಕೊಳ್ಳೋಕೆ ಸಂಬಂಧಿಕರು ಆಗಮಿದ್ದರು. ಥೈಲ್ಯಾಂಡ್ ನಲ್ಲಿ ಅರಳಿದ ಪ್ರೇಮ ಕಥೆ ಭಾರತದಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿಡುವ ಮೂಲಕ ಸುಂದರ ತಿರುವು ಪಡೆದ ಸರಳ ಪ್ರೇಮಕಥೆ ಇದು.